Oppanna
Oppanna.com

ಗಣೇಶ ಮಾವ°

ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು! ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು, ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!! ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು. ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು. ’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’. ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ! ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°. ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ. ಆತೋ?ಏ°?

ವೈದ್ಯೋ ನಾರಾಯಣೋ ಹರಿ:

ಗಣೇಶ ಮಾವ° 24/10/2010

    “ವೈದ್ಯೋ ನಾರಾಯಣೋ ಹರಿ:” ಹೇಳಿರೆ ವೈದ್ಯರು ದೈವ ಸಮಾನರು ಹೇಳಿ ಹೇಳುವ ಅರ್ಥವ ಸೂಚಿಸುತ್ತು,ಇದು ಪೂರ್ವ ಕಾಲದ ವಾಕ್ಯ.ಪೂರ್ವ ಕಾಲಲ್ಲಿ ವೈದ್ಯರು ಪ್ರತಿಫಲಾಪೇಕ್ಷೆ ಇಲ್ಲದ್ದೆ ರಾಜಾಶ್ರಯದ ಮೂಲಕ ಜನ ಸೇವೆ ಮಾಡಿಗೊಂಡಿತ್ತವು.ಹಾಂಗಾಗಿ ಎಷ್ಟೇ ಪಾಪದವಂಗೂ ವೈದ್ಯನಲ್ಲಿಗೆ ಹೋಪಲೆ ಎಡಿಗಾಯಿಗೊಂಡಿತ್ತು..ಈ ಮೂಲಕ

ಇನ್ನೂ ಓದುತ್ತೀರ

ಪಿತೃಪಕ್ಷ -ಮಹಾಲಯ ಅಮಾವಾಸ್ಯೆ.

ಗಣೇಶ ಮಾವ° 07/10/2010

ಸಾಮಾನ್ಯವಾಗಿ ನಮ್ಮಲ್ಲಿ ಪಿತೃಗ ತೀರಿ ಹೋದ ದಿನವ ತಿಥಿ (ಶ್ರಾದ್ಧ) ಹೇಳಿ ಮಾಡುತ್ತವು . ಒಂದು ವೇಳೆ

ಇನ್ನೂ ಓದುತ್ತೀರ

ಸಾಂಬ್ರಾಣಿ

ಗಣೇಶ ಮಾವ° 02/10/2010

ಮಳೆಗಾಲಲ್ಲಿ ನಮ್ಮ ಜಾಲ ಕರೇಲಿಯೇ ಇಪ್ಪಂತಹ ಮದ್ದಿನ ಗುಣದ ಗೆಡುಗಳ ಹುಡ್ಕಿ ಅಡಿಗೆ ಮಾಡುದು

ಇನ್ನೂ ಓದುತ್ತೀರ

ಋಣತ್ರಯ

ಗಣೇಶ ಮಾವ° 24/09/2010

 ಮಾತೃಋಣ,ಪಿತೃಋಣ,ಋಷಿಋಣ  ಈ ಮೂರು ಋಣಂಗಳ ಋಣತ್ರಯ ಹೇಳಿ ಹೇಳ್ತವು. ಋಣ ಹೇಳಿರೆ ಸಾಲ.ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಋಣತ್ರಯಂದ

ಇನ್ನೂ ಓದುತ್ತೀರ

ರಾಮಾಯಣ ಕಾಲದ ಸ್ಮಾರಕ

ಗಣೇಶ ಮಾವ° 18/09/2010

ಇದು ಶ್ರೀ ರಾಮಾಯಣ ನಡದ್ದು ಹೇಳುವದಕ್ಕೆ  ಸಾಕ್ಷಿಯಾಗಿಪ್ಪ  ಒಳುದ  ಸ್ಮಾರಕ ಪಳೆಯುಳಿಕೆಗ. ಈ ಪ್ರದೇಶಂಗ  ಈಗ ಶ್ರೀಲ೦ಕಾದ ಆಡಳಿತಲ್ಲಿ

ಇನ್ನೂ ಓದುತ್ತೀರ

ವಿಶೇಷ ಸಾರಿಗೆ ವ್ಯವಸ್ಥೆ

ಗಣೇಶ ಮಾವ° 15/09/2010

ಆನು ಓ ಮೊನ್ನೆ ಗೋಕರ್ಣಕ್ಕೆ  ಹೋಗಿತ್ತೆ. ಅಲ್ಲಿಂದ ಬಪ್ಪಗ ಒಂದು ವಿಶೇಷ ಸಾರಿಗೆ ವ್ಯವಸ್ಥೆ,ಎನ್ನ ಕಣ್ಣಿಂಗೆ ಕಂಡತ್ತು.

ಇನ್ನೂ ಓದುತ್ತೀರ

ಗಣೇಶ ಚತುರ್ಥಿಯ ಶುಭಾಶಯಂಗ

ಗಣೇಶ ಮಾವ° 11/09/2010

ನಮ್ಮ ಬೈಲಿನ ಎಲ್ಲೋರಿಂಗೂ ಗಣೇಶ ಚತುರ್ಥಿಯ ಶುಭಾಶಯಂಗ ಗಣಪತಿ ದೇವರು ಎಲ್ಲೋರಿಂಗೂ ಆಯುರಾರೋಗ್ಯ ಐಶ್ವರ್ಯ

ಇನ್ನೂ ಓದುತ್ತೀರ

ಕಾಗದ ಬರವ ಹವ್ಯಾಸ

ಗಣೇಶ ಮಾವ° 07/09/2010

ನಮ್ಮ ಹತ್ತರಾಣವಕ್ಕೆ ಇ-ಮೇಲ್‌  ಕಳ್ಸುವಾಗ  ಎನಗೆ ಅಪ್ಪ  ಪ್ರಶ್ನೆ ಎಂತ ಹೇಳಿರೆ  ಎಲ್ಲಿ ಹೋತು ಆ ನಮ್ಮ  ಕಾಗದ  ಬರವ

ಇನ್ನೂ ಓದುತ್ತೀರ

ಮುಕುಂದಾಷ್ಟಕಮ್

ಗಣೇಶ ಮಾವ° 01/09/2010

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ | ವಟಸ್ಯ ಪತ್ರಸ್ಯ ಪುಟೇಶಯಾನಂ ಬಾಲಂ ಮುಕುಂದಂ ಮನಸಾ

ಇನ್ನೂ ಓದುತ್ತೀರ

ಸುಖಿನೋ ಭವಂತು

ಗಣೇಶ ಮಾವ° 24/08/2010

  ಅಬ್ಬ!!ಸುಮಾರು ದಿಕ್ಕೆ ಜೆನಿವಾರ ಹಾಕ್ಸಲೆ ಇತ್ತು.. ಉದಿಯಪ್ಪಗಳೇ ಹೋಯಿದೆ..ಮಳೆ ಬೇರೆ.ಸಾರಡಿ ತೋಡು ದಾಂಟಿ ಗೆದ್ದೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×