Oppanna
Oppanna.com

ಗಣೇಶ ಮಾವ°

ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು! ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು, ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!! ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು. ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು. ’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’. ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ! ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°. ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ. ಆತೋ?ಏ°?

ಪಂಚಗವ್ಯದ ಶುದ್ದಿ

ಗಣೇಶ ಮಾವ° 09/05/2010

ಪಂಚಗವ್ಯದ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲಂದ ನಮ್ಮ ಪೆರ್ಲದ ಆಯುರ್ವೇದದ ಡಾಕ್ಟ್ರು ಸುಮಾರು ಮಾಹಿತಿ ಕೊಟ್ಟವು. ಗೋಮಯ, ಗೋಮೂತ್ರ ಹಾಂಗೂ ಪಂಚಗವ್ಯಂಗಳ ಸತ್ಪ್ರಯೋಜನದ ವಿಚಾರ ಚರಕಸಂಹಿತೆಲಿ ಸುಮಾರು ವಿವರಣೆ ಇದ್ದು ಹೇಳಿ ಹೇಳಿದವು.. ‘ಆದರೆ ಇಪ್ಪತ್ತೊಂದನೇ ಶತಮಾನಲ್ಲಿಪ್ಪ ನಾವು, ಆದಿ ಕಾಲಂದ ಅಂತಹಾ ಬರಹಂಗಳ

ಇನ್ನೂ ಓದುತ್ತೀರ

ಅಜಿತನ ಬೇಸಗೆ ರಜೆ

ಗಣೇಶ ಮಾವ° 17/04/2010

ಅಜಿತನ ಪ್ರಾಯ ಈಗ ೧೩ ಕಳುದು ೧೪ ಆತಷ್ಟೇ... 7ನೇ ಕ್ಲಾಸು ಪರೀಕ್ಷೆ ಮುಗಿಸಿ ರಜೆಯ

ಇನ್ನೂ ಓದುತ್ತೀರ

ಜೆನಿವಾರ ಕಟ್ಟುತ್ತದು ಹೇಂಗೆ..?

ಗಣೇಶ ಮಾವ° 23/03/2010

ಭವ ರೋಗ ಹೇಳಿದರೆ  ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ  ಆರಿಂಗೂ ಎಡಿತ್ತಿಲ್ಲೆ.. ಆದರೂ

ಇನ್ನೂ ಓದುತ್ತೀರ

ಜೆಂಬಾರದ ಮನೆಯ ಶಬ್ದಮಾಲಿನ್ಯ..!

ಗಣೇಶ ಮಾವ° 12/02/2010

ನಮ್ಮ ಹತ್ತರಾಣವು ಹೇಳಿ ಗ್ರೇಶಿಗೊಂಬವರೊಟ್ಟಿಂಗೆ ಸಂತೋಷಂದ ಕಾಲ ಕಳವಲೆ - ಮದುವೆ, ಉಪ್ನಾಯನ ಹೇಳ್ತ ಜೆಂಬಾರಂಗೊ

ಇನ್ನೂ ಓದುತ್ತೀರ

ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

ಗಣೇಶ ಮಾವ° 02/02/2010

ಗುಲಾಬಿ ಹೂಗಿನ ನೋಡಿಯಪ್ಪಗ ಎಂತನಿಸುತ್ತು?? ಸಂತೋಷವೋ ? ನೋವೋ?? ಬಹಳ ಜನಕ್ಕೆ ಗುಲಾಬಿ ಹೂಗಿನ ಕಾಂಬಗ ಖುಷಿ ಅಕ್ಕು

ಇನ್ನೂ ಓದುತ್ತೀರ

ಭೋಜನ ಸ್ವೀಕಾರ ಮಂತ್ರ

ಗಣೇಶ ಮಾವ° 16/01/2010

ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು. ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×