Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಸಣ್ಣ ಸಂಗತಿ

ಗೋಪಾಲಣ್ಣ 13/02/2018

ಶಂಭಣ್ಣನ ಮಗಳಿಂಗೆ ಮದುವೆ ಅಡ..ಊರಿಲಿ ಸುದ್ದಿ. ಅವನ ಹತ್ತರೆ ಎಂತ ಇದ್ದು?ಹಣವೊ? ಜಾಗೆಯೊ?ವಿದ್ಯೆಯೊ? ಎಂತದೂ ಇಲ್ಲೆ. ಜಾಗೆ ಮುಕ್ಕಾಲೆಕ್ರೆ ತೋಟ.ವಿದ್ಯೆ ಕಮ್ಮಿ.ಮಂತ್ರ ಕಲಿವಲೆ ಹೋದರೂ ಬಾಯಿಪಾಠ ಬಾರ.ಮತ್ತೆ ಪರಿಕರ್ಮಿ ಆಗಿ ಕೆಲಸ ಮಾಡಿದ.ಹಾಂಗೆ ಹೇಳಿ ಅವ ಬೋದಾಳ ಅಲ್ಲ.ಅವನ ಕೆಲಸಲ್ಲಿ ಚುರುಕಿತ್ತಿದ್ದ.ಮದುವೆ

ಇನ್ನೂ ಓದುತ್ತೀರ

ದೇಶಸೇವೆ

ಗೋಪಾಲಣ್ಣ 15/08/2017

ದೇಶಸೇವೆ ಮಾಡುದೇ ನಮ್ಮ ಧ್ಯೇಯ ನಾವು ಮಕ್ಕೊ ಈ ಭಾರತಮಾತೆಯ|| ನಮ್ಮ ಭಾರತ ಬಹು ಒಪ್ಪ

ಇನ್ನೂ ಓದುತ್ತೀರ

ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಗೋಪಾಲಣ್ಣ 15/08/2017

ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟರ ಪ್ರಸಂಗ ರಚನೆಯ ಬಗ್ಗೆ ಸಮಗ್ರ ಮಾಹಿತಿಯ ಆನು ಕಳೆದ ವರ್ಷ

ಇನ್ನೂ ಓದುತ್ತೀರ

ಆಶುಕವಿ ವಾಸುದೇವ ಭಟ್ಟರಿಂಗೆ ಸಪ್ತತಿ ಸಂಭ್ರಮ

ಗೋಪಾಲಣ್ಣ 27/05/2016

೧೯೬೩ರ ಒಂದು ದಿನ. ಕುಂಬಳೆ ಸರಕಾರಿ ಪ್ರೌಢಶಾಲೆಲಿ ಕನ್ನಡ ಪಂಡಿತ ನೆಕ್ರಾಜೆ ಜಗನ್ನಾಥ ಶೆಟ್ಟಿ ಪಾಠಮಾಡಿಕೊಂಡಿತ್ತಿದ್ದವು.

ಇನ್ನೂ ಓದುತ್ತೀರ

ಸರಸ್ವತಿ ಶಂಕರ್ ಗೆ ಕಾಕೋಳು ಸರೋಜಮ್ಮ ಪ್ರಶಸ್ತಿ

ಗೋಪಾಲಣ್ಣ 06/03/2016

ಬೆಂಗಳೂರಿನ ಜಯನಗರಲ್ಲಿ ಇಪ್ಪ ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ ” ಹಸಿರು

ಇನ್ನೂ ಓದುತ್ತೀರ

ಸಂಸ್ಮರಣೆ , ಪುಸ್ತಕ ಬಿಡುಗಡೆ, ತಾಳಮದ್ದಳೆ

ಗೋಪಾಲಣ್ಣ 22/11/2015

ಎನ್ನ ಅಪ್ಪ ಶೇಡಿಗುಮ್ಮೆ ಕೃಷ್ಣ ಭಟ್ಟರು [ಜನನ-೧೨-೧೦-೧೯೨೫; ನಿಧನ -೧೬-೦೭-೧೯೮೨] ಹವ್ಯಾಸಿ ಯಕ್ಷಗಾನ ಭಾಗವತರಾಗಿ ಕುಂಬಳೆ

ಇನ್ನೂ ಓದುತ್ತೀರ

ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್

ಗೋಪಾಲಣ್ಣ 29/05/2015

ಈ ವರ್ಷ ಮಾರ್ಚಿಯ ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆಲಿ ಮೂಡ ಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ

ಇನ್ನೂ ಓದುತ್ತೀರ

ಕಾಯಿ -ಬೆಲ್ಲ -ಅಕ್ಕಿ

ಗೋಪಾಲಣ್ಣ 13/07/2014

ಭಾರೀ ಗಾಳಿ -ಮಳೆ ! ಚುಬ್ಬಣ್ಣನ ತೋಟಲ್ಲಿ ತೆಂಗಿನಮರ-ರಜಾ ಹಳೆ ಮರವೇ -ಮುರಿದು ಬಿದ್ದತ್ತು .

ಇನ್ನೂ ಓದುತ್ತೀರ

ಮಳೆಗಾಲದ ವೇಷ

ಗೋಪಾಲಣ್ಣ 22/06/2014

ಪತ್ತನಾಜೆಯು ಕಳ್ತು ಮಳೆಗಾಲ ಬಂತು ಮುತ್ತಿತ್ತು ಮುಗಿಲಲ್ಲಿ ಬಾನು ಕಪ್ಪಾತು ಕಪ್ಪರವು ಕಟ್ಟಿತ್ತು ಕಣ್ ಕಾಣ

ಇನ್ನೂ ಓದುತ್ತೀರ

ಅಜ್ಜಿ-ಪುಳ್ಳಿ ಸಂಭಾಷಣೆ

ಗೋಪಾಲಣ್ಣ 16/03/2014

ರಾಧಮ್ಮ[ಅಜ್ಜಿ,ಸುಮಾರು ಎಪ್ಪತ್ತು ವರ್ಷ] ರಾಮಾ..ರಾಮಾ.. ನಾರಾಯಣ…[ಆಕಳಿಸಿ ಬಾಯಿ ಮುಚ್ಚುತ್ತವು] ಕಿಟ್ಟ[ಪುಳ್ಳಿ,ಸುಮಾರು ಹನ್ನೆರಡು ವರ್ಷ]ಃ-ಅಜ್ಜಿ,ಅಜ್ಜಿ,ಒಂದು ದೇಶಲ್ಲಿ ರಾಮ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×