Oppanna.com
ವಿದ್ವಾನಣ್ಣ
ಮೂಲತಃ ಸಾಗರ ಹೋಬಳಿಂದ ಬಂದ ಇವು, ಹವ್ಯಕದಷ್ಟೇ ಸಲೀಸಾಗಿ ಸಂಸ್ಕೃತಲ್ಲಿಯೂ ಮಾತಾಡುಗು!
ಸಂಸ್ಕೃತ, ಸಾಹಿತ್ಯ, ಕಾವ್ಯಂಗಳ ಗೋಕರ್ಣಲ್ಲೇ ಕಲ್ತು, ಮುಂದಕ್ಕೆ ಜ್ಯೋತಿಷ್ಯವ ತೆಂಕ್ಲಾಗಿ (ಕೇರಳಲ್ಲಿ) ಕಲ್ತದಡ. ಹಾಂಗಾಗಿ ರಜರಜ ಮಲೆಯಾಳವೂ ಅರಡಿಗೋ ಏನೋ! ಉಮ್ಮ!!
ನಮ್ಮ ಕ್ರಮ, ಕಟ್ಟುಪಾಡು, ಆಚಾರ, ವಿಚಾರಂಗಳ ಬಗ್ಗೆ ಸಮರ್ಥವಾಗಿ ಮಾತಾಡುವ ಶೈಲಿ-ಸಾಮರ್ಥ್ಯ ಇಪ್ಪ ವಿದ್ವಾನಣ್ಣಂಗೆ, ಮಹತ್ತರ ಜೆವಾಬ್ದಾರಿಗಳ ನಮ್ಮ ಗುರುಗೊ ಕೊಟ್ಟಿದವು.
ನಮ್ಮ ಗುರುಗಳದ್ದೇ ಆದ ವೆಬ್-ಸೈಟು ಇದ್ದಲ್ಲದೋ? ಹರೇರಾಮ.ಇನ್ (
http://hareraama.in) ಹೇಳ್ತದು, ಅದರ್ಲಿ ಮುಖ್ಯ
ಸಂಪಾದಕರಾಗಿಪ್ಪ ಜೆವಾಬ್ದಾರಿ ಅಡ!
ಮಠಂದಲೇ ಬತ್ತ ಧಾರ್ಮಿಕ ಮಾಸಿಕವಾದ
ಧರ್ಮಭಾರತಿಯ ಸಂಪಾದಕರಾಗಿಯೂ ಬಹಳಷ್ಟು ಕಾರ್ಯ ಅವರಿಂದ ಆವುತ್ತಾ ಇದ್ದಡ.
ಅದಲ್ಲದ್ದೇ ಮಠಲ್ಲಿ ಸಾಹಿತ್ಯಿಕವಾದ ಅಗತ್ಯತೆ ಎಲ್ಲೆಲ್ಲಿ ಬತ್ತೋ – ಅಲ್ಲಿಗೆ ಪ್ರಥಮವಾಗಿ ಗುರುಗೊಕ್ಕೆ ಕಾಂಬದು ಈ ವಿದ್ವಾನಣ್ಣನನ್ನೇ ಅಡ, ಎಡಪ್ಪಾಡಿಬಾವ ಹೇಳಿದ್ದು..!
ಮೊನ್ನೆ ನಮ್ಮ ಬೈಲಿಂಗೆ ಬಂದಿತ್ತಿದ್ದವು, ಮಾಷ್ಟ್ರುಮಾವನಲ್ಲಿಗೆ.
ಬೆಂಗುಳೂರಿಂದ ಮುನ್ನಾಣದಿನವೇ ಹೆರಟು, ಆ ದಿನ ಉದೆಕಾಲಕ್ಕೇ ಬೇಗ ಬಂದು ಎತ್ತಿಗೊಂಡಿದವು.
ಅವರ ಜೆಪತಪ ಸಂಧ್ಯಾವಂದನೆ ಆಗಿ ಕೂದಂಡಿಪ್ಪಗ – ಮೆಲ್ಲಂಗೆ ಹತ್ತರಾಣ ಕುರ್ಶಿಲಿ ಹೋಗಿ ಕೂದಂಡೆ,
ನಮಸ್ಕಾರ – ಹೇಳಿದೆ.
ಕೈಲಿ ಎಂತದೋ ಪುಸ್ತಕ ಹಿಡ್ಕೊಂಡು ಓದಿಗೊಂಡಿತ್ತವು ಪಕ್ಕನೆ ಮೋರೆ ನೋಡಿ ಚೆಂದಕೆ ಒಂದು ಬಾಬೆನೆಗೆಮಾಡಿದವು; ಪುರುಸೋತಿಲಿ ಇದ್ದ ಕಾರಣ ರಜ ಮಾತಾಡ್ಳುದೇ ಸಿಕ್ಕಿದವು!
ಮಾತಾಡಿಗೊಂಡು ಹೋಪಗ ಮೆಲ್ಲಂಗೆ ಕೇಳಿತ್ತು ನಾವು:
ವಿದ್ವಾನಣ್ಣ, ಬೈಲಿಂಗೆ ಶುದ್ದಿ ಹೇಳ್ತಿರೋ? – ಹೇಳಿ.
ಎನಗೆ ಕುಂಬ್ಳೆಸೀಮೆಯ ಭಾಶೆ ಅಷ್ಟಾಗಿ ಬತ್ತಿಲ್ಲೆ, ರಜರಜ ಸಾಗರ ಹೊಡೆಯ ಭಾಶೆಯೂ ಸೇರಿಹೋವುತ್ತು! – ಹೇಳಿದವು, ಶುದ್ಧಕುಂಬ್ಳೆಭಾಷೆಲಿ!!
ಸಾರ ಇಲ್ಲೆ, ಎಲ್ಲಾ ಭಾಶೆಯೂ ಇಲ್ಲಿ ಬಂದಿರಳಿ ಹೇಳ್ತದು ಬೈಲಿನ ಹಾರಯಿಕೆ – ಹೇಳಿ ಒಪ್ಪುಸಿತ್ತು ಅವರ.
ಅಂತೂ ಒಪ್ಪಿದವು, ತುಂಬಾ ಕೊಶಿ ಆತು ನವಗೆ. :-)
ವಿದ್ವಾನಣ್ಣ ಬೈಲಿಂಗೆ ಬಂದು ಶುದ್ದಿ ಹೇಳ್ತರೆ ಅದು ಬೈಲಿನ ವಿದ್ವತ್ತನ್ನೇ ಜಾಸ್ತಿ ಮಾಡ್ತು ಹೇಳ್ತದು ಸಮಷ್ಟಿಯ ಅಭಿಪ್ರಾಯ.
ಈಗಾಗಲೇ ಸಂಸ್ಕೃತದ ವಿದ್ವಾಂಸರು ಇಪ್ಪ ಬೈಲಿಂಗೆ ವಿದ್ವಾನಣ್ಣ ಬಂದರೆ ಕಿರೀಟಕ್ಕೆ ಹವಳ ಮಡಗಿದ ಹಾಂಗೆ!
ನಮ್ಮವೇ ಆದ, ನಮ್ಮ ಬೈಲಿನವೇ ಆದ ವಿದ್ವಾನಣ್ಣನ ಶುದ್ದಿಗಳ ಓದಿ ಅರ್ತ ಮಾಡಿಗೊಂಬ°.
ಅರ್ತ ಆದರೆ ಶುದ್ದಿಗೊಕ್ಕೆ ಒಪ್ಪ ಕೊಟ್ಟು ಇನ್ನಾಣ ಶುದ್ದಿ ಬರವಲೆ ಪ್ರೋತ್ಸಾಹ ಮಾಡುವೊ°.
ಅವರ ಮನೆಮಾತಿನ ನಾವು ಕಲ್ತು, ನಮ್ಮ ಮನೆಮಾತಿನ ಶೆಬ್ದಂಗಳ ಅವಕ್ಕೆ ತಿಳುಸುವೊ°..