Oppanna
Oppanna.com

ಪುತ್ತೂರುಬಾವ

ಪುತ್ತೂರುಬಾವನ ಗುರ್ತ ಮಾಡ್ಳೆ ಕಷ್ಟ ಏನಿಲ್ಲೆ! ಈಗ ಇಪ್ಪದು ಅಷ್ಟು ದೂರದ ಅಮೇರಿಕಲ್ಲಿ ಆದರೂ ಅವರ ಮೂಲ ಪುತ್ತೂರು. ಮಯೂರ ಟಾಕೀಸಿನ ಒರಿಂಕಿನ ಮಾರ್ಗಲ್ಲಿ ಹೋಗಿ, ಉರುಳಾಂಡಿಲಿ ಗುಡ್ಡೆಹತ್ತಿ ಇಳುದರೆ ಪೊಟ್ಟುಬಾವಿಯ ಕರೆಲಿ ಇಪ್ಪದೇ ಇವರ ಮನೆ! ಬಾಳೆಕಾನದ ಬಾಳೆಸೆಸಿ ಬಗ್ಗಿರೆ ಇವರ ಒಳಚ್ಚಲಿಂಗೇ ಬೀಳುದು! ಅರೆವಾಶಿ ಬಾಳೆಗೊನೆ ಇದೇ ಪುತ್ತೂರುಬಾವಂಗೆ ಸಿಕ್ಕಿಗೊಂಡಿತ್ತು! ಇದೇ ಕಾರಣಕ್ಕೆ ಅವಕ್ಕೆ ಯೇವತ್ತುದೇ ಜಗಳ ಆಯ್ಕೊಂಡಿತ್ತಿದ್ದು, ಮದಲಿಂಗೆ . (ಇಬ್ರಮನೆಲಿಯೂ ಬೈದಕಾರಣ ಒಬ್ಬ° ಅಮೇರಿಕಕ್ಕುದೇ, ಇನ್ನೊಂದು ಹಾಸನಕ್ಕುದೇ ಪದುರಾಡು!, ಅದು ಬಿಡಿ!) ಅಮೇರಿಕಕ್ಕೆ ಎತ್ತುವ ಮದಲು ಹತ್ತೂರು ಕಂಡಿದವು. ಸುರೂವಿಂಗೆ ಪುತ್ತೂರು, ಮತ್ತೆ ಕಲುಮಡ್ಕ, ಮತ್ತೆ ಮಾಡಾವು, ಅದಾಗಿ ಮಯಿಸೂರು, ಅದರ ಸುತ್ತುಮುತ್ತ ಹಲವಾರು ಊರುಗೊ ;-) , ಅದಾಗಿ ಬೆಂಗುಳೂರು- ಮತ್ತೂ ಯೇವದೇವದೋ ಊರುಗೊ! – ಈಗ ಅಮೇರಿಕ, ಮಾಷ್ಟ್ರುಮಾವನ ಮಗನ ಊರು!! (ಮಯಿಸೂರಿಲಿಪ್ಪಗ ಕೊಳಚ್ಚಿಪ್ಪು ಬಾವ ಕೆಲಾವುಸರ್ತಿ ಕಾಂಬಲೆ ಹೋಗಿಯೊಂಡಿತ್ತಿದ್ದನಾಡ! ) ಅದೆಲ್ಲ ಇರಳಿ, ಓ ಮೊನ್ನೆಪುತ್ತೂರತ್ತೆಮನಗೆ ಹೋಗಿಪ್ಪಗ ಈ ಪುತ್ತೂರುಬಾವಂಗೆ ಪೋನು ಮಾಡಿತ್ತಿದ್ದವು. ಬಾವ° ತೆರಕ್ಕಿಲಿದ್ದರುದೇ ಒಂದು ಗಳಿಗೆ ಮಾತಾಡ್ಳೆ ಸಿಕ್ಕಿದವು – ಅವಕ್ಕೆ ಒಳ್ಳೆತ ಮಾತಾಡೆಕ್ಕಿದಾ.. ಸುಮಾರು ಊರು ಅರಡಿಗು, ಸುಮಾರು ಸಂಗತಿಗೊ ಅರಡಿಗು, ಸುಮಾರು ಪುಸ್ತಕ ಅರಡಿಗು, ಸುಮಾರು ಸಿನೆಮಂಗೊ ಅರಡಿಗು, ಸುಮಾರು ಬಾಶೆ ಅರಡಿಗು! ಇವೆಲ್ಲದರನ್ನುದೇ ಸೇರುಸಿ ಶುದ್ದಿ ಬರವಲೆಡಿಗೋ ಹೇಳಿ ಒಪ್ಪಣ್ಣ ಕೇಳಿಯಪ್ಪಗ ಸಂತೋಷಲ್ಲಿ ಅಕ್ಕು – ಹೇದವು. ಕೊಳಚ್ಚಿಪ್ಪು ಬಾವಂದು ಚಿಪ್ಪಿನ ಒಳಾಣ ಮುತ್ತುಗೊ ಆದರೆ ಪುತ್ತೂರು ಬಾವಂದು ಹತ್ತೂರ ಮುತ್ತುಗೊ. ದೂರದ ಅಮೇರಿಕಲ್ಲಿ ನೆಡಿರುಳು ನೋಡಿಗೊಂಡು ಬರದು ಕೊಡ್ತದು ನೋಡಿರೆ ಸಂತೋಷ ಅಪ್ಪದು! ಆಗಲಿ, ಅವಕ್ಕೆ ಇಷ್ಟಬಂದ ವಿಶಯಂಗಳ ಮೇಲೆ ಶುದ್ದಿಗಳ ಚೆಂದಲ್ಲಿ ಹೇಳ್ತವು, ಆತಾ? ಪುತ್ತೂರುಬಾವನ ಶುದ್ದಿಗಳ ಓದುವ, ನಮ್ಮ ನಮ್ಮ ಅನಿಸಿಕೆಗಳ ಹಂಚಿಗೊಂಬ, ಹತ್ತೂರ ಮುತ್ತುಗಳ ತಿಳುಕ್ಕೊಂಬ. ಆಗದೋ? ಏ°?

ಬಾಯಿ ಬಾರದ್ದ ಸಿನೆಮಾ…

ಪುತ್ತೂರುಬಾವ 13/03/2011

ಮೂಕಿ ಸಿನೆಮ… ಭಾಷೆ ಉಪಯೋಗ ಮಾಡದ್ದೆ ಮನುಷ್ಯರ ಮಧ್ಯೆ ಇಪ್ಪ ಭಾವನೆಗಳ ತೋರುಸಿಗೊ೦ಬದು ಅಷ್ಟು ಸುಲಭ ಅಲ್ಲ. ನಮ್ಮ್ಲಲ್ಲಿ ಎಷ್ಟು ಜೆನಕ್ಕೆ ಮೂಕಿ ಸಿನೆಮಾ ನೋಡಿದ ನೆ೦ಪಿದ್ದು? ಕಮಲಹಾಸನ್ನಿನ ಪುಷ್ಪಕ್ ಹೇಳ್ತ ಒ೦ದು ಸಿನೆಮ ಬ೦ದಿತ್ತು ಸುಮಾರು ಸಮಯ ಹಿ೦ದೆ. ಆದರೆ ಆನು

ಇನ್ನೂ ಓದುತ್ತೀರ

ಕಾಪಿಯ ಬಗ್ಗೆ…

ಪುತ್ತೂರುಬಾವ 10/08/2010

ಒಹ್ ದೇವರೇ.. ಆನು ಇಲ್ಲಿಗೆ ಲಾಗ ಹಾಕಿ ಎರಡು ತಿ೦ಗಳಾತೋ….. ಆಪೀಸಿಲಿ ಕೆಲಸ ಜಾಸ್ತಿ ಆಗಿ

ಇನ್ನೂ ಓದುತ್ತೀರ

ನಿ೦ಗೊಗೆ ಪುರಾಣ ಗೊ೦ತಿದ್ದೊ?

ಪುತ್ತೂರುಬಾವ 06/06/2010

ಇದು ಎನ್ನ ಫ಼್ರೆ೦ಡು ಒಬ್ಬ ಕಳ್ಸಿದ ಮಿ೦ಚ೦ಚೆ. ಉದಿಯಪ್ಪಗ ಎದ್ದ ಕೂಡ್ಲೆ ೮೦% ಜೆನ ಚಾಯ

ಇನ್ನೂ ಓದುತ್ತೀರ

ಮೂರು ಮುತ್ತು.. ಸ೦ಚಿಕೆ ಮೂರು..

ಪುತ್ತೂರುಬಾವ 06/06/2010

ಕಳದ ವಾರ ಎನಗೆ ಉತ್ತರ೦ಗಳ ಕೊಡ್ಲೆ ಆಯಿದಿಲ್ಲೆ. ಆನು ಎನ್ನ ಕೆಲವು ಫ಼್ರೆ೦ಡ್ಸುಗಳ ಒಟ್ಟಿ೦ಗೆ ಅಮೆರಿಕದ

ಇನ್ನೂ ಓದುತ್ತೀರ

ಮೂರು ಮುತ್ತು.. ಸ೦ಚಿಕೆ ಎರಡು..

ಪುತ್ತೂರುಬಾವ 23/05/2010

ಕಳ್ದ ಸರ್ತಿಯಾಣ ಪ್ರಶ್ನೆಗೊಕ್ಕೆ ಉತ್ತರ ಇಲ್ಲಿದ್ದು.. ೧. ರಾವಣನ ಮೂರ್ತಿ. ರಾವಣನ ಕೆಲವು ವ೦ಶಜರು ಇಲ್ಲಿ

ಇನ್ನೂ ಓದುತ್ತೀರ

ಮೂರು ಮುತ್ತು..

ಪುತ್ತೂರುಬಾವ 17/05/2010

ಇದು ಹೊಸ ವಿಭಾಗ..ಒಪ್ಪಣ್ಣ ರಸಪ್ರಶ್ನೆಶುರು ಆವುತ್ತು ಹೇಳಿ ಹೇಳಿತ್ತಿದ್ದ ಅಲ್ಲದಾ? ಇದೊ.. ಈ ವಾರ೦ದ ಶುರು

ಇನ್ನೂ ಓದುತ್ತೀರ

ಮನಮುಟ್ಟುವ ಎರಡು ಸಿನೆಮಂಗೊ

ಪುತ್ತೂರುಬಾವ 13/05/2010

ಮೊನ್ನೆ ಶನಿವಾರ (ನಾವು ಸೋಪ್ಟ್-ವೇರು ಅಲ್ಲದೋ? ಸಮಯ ಸಿಕ್ಕುದು ವೀಕೆ೦ಡು ಮಾ೦ತ್ರ ಇದಾ) ಸುಮ್ಮನೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×