ಓ ಮೊನ್ನೆ ರಜೆಲಿ ಊರಿಂಗೆ ಅಮ್ಮನ ಮನೆಗೆ ವಾರಣಾಸಿಗೆ ಹೋಗಿತ್ತಿದೆ.ಇರುಳು ಆನುದೇ ಅಮ್ಮಂದೆ ಮಾತಾಡುತ್ತಾ ಇತ್ತಿದೆಯ°, ಟಿವಿ ಕೋಣೆಲಿ ಕೂದು.ಅಲ್ಲಿಯೇ ಎಡತ್ತಿ೦ಗೆ ಕೆದೆ ಇದ್ದು, ಒಂದೆರಡು ದನಂಗ ಕಂಜಿಗ ಇದ್ದವು.ಎಂಗ° ಎಂತದೋ ಮಾತಾಡಿಗೊಂಡು ಇಪ್ಪಗ ಕೆದೆಂದ ಏನೋ ಶಬ್ದ ಕೇಳಿತ್ತು.ದನಗ ಸೊಯಿಮ್ಪುದು ನಾಯಿ ಗುರ್ ಗುರ್ ಮಾಡಿದ ಹಾಂಗೆ.ಎಂತದು ಅದು ಹೇಳಿ ಕೇಳಿದೆ ಆನು ಅಮ್ಮನತ್ತರೆ.ಅಮ್ಮ ಹೇಳಿದ “ಅಲ್ಲಿ ಸುಂದರಿ (ಎಂಗಳ ಮನೆಯ ಹೆಣ್ಣು ನಾಯಿ >ಬೊಗ್ಗಿ ) ಬೈಪ್ಪಣೆಗೆ ಹೋಗಿ ದನಗಳ ಹತ್ತರೆ ಹೊಣವದು.ಅದರ ಕಟ್ಟದ್ದರೆ ಎಡಿಯ.ಇವರ ಬೊಬ್ಬೆಲಿ ನಮಗೆ ಒರಗುಲೆ ಎಡಿಯ ಹೇಳಿ”.. “ಸುಂದರಿ ಸುಂದರಿ” ಹೇಳಿ ನಾಯಿಯ ದೆನಿಗೇಳಿದ.
ಅದು ಎಂತ ಮಾಡ್ರೂ ಬಂತಿಲ್ಲೆ.ಮತ್ತೆ ಅಮ್ಮ ಬಿಸ್ಕುಟ್ ತೆಕ್ಕೊಂಡು ಹೋಗಿ ತೋರ್ಸಿ ಕೊರಳಿಂಗೆ ಸಂಕೋಲೆ ಹಾಕಿ ಎಳಕ್ಕೊಂಡು ಬಂದು ಕಟ್ಟಿದ.ದೆನಿಗೇಳಿದರೂ ಬಾರದ್ದೆ ಇರಕ್ಕಾದರೆ “ಸುಂದರಿಗೆ ಅಲ್ಲೆಂತ ಕೆಲಸ ಬೈಪ್ಪಣೆಲಿ ಈಗ?ಅಲ್ಲೆಂತ ಇದ್ದು ಅದಕ್ಕೆ ತಿಂಬ ವಸ್ತು ?” ಹೇಳಿ ಆನು ಅಮ್ಮನ ಹತ್ತರೆ ಕೇಳಿದೆ.ಬೇಸಗೆ ಹಲ್ಸಿನ ಹಣ್ಣು ಅಪ್ಪ ಸಮಯಲ್ಲಿ ಆದರೆ ದನಗೊಕ್ಕೆ ಹಣ್ಣಿನ ರೆಚ್ಚೆ ಹಾಕಿರೆ ಅದರ ಪರಿಮಳಕ್ಕೆ ನಾಯಿಗ ಹೋಗಿ ದನಗಳ ತಿನ್ನದ್ದ ಹಾಂಗೆ ಬೊಗಳೊದು, ಜಗಳ ಮಾಡುದು ಗೊಂತಿತ್ತು ಎನಗೆ,ಈಗ ಎಂತ ಇದಕ್ಕೆ ಅಲ್ಲಿ ಕೆಲಸ ಹೇಳಿ ಗೊಂತಾತಿಲ್ಲೆ.
ಅದಕ್ಕೆ ಅಮ್ಮ “ಇದಕ್ಕೆಂತ(ನಾಯಿಗೆ ) ಕೆಲಸ ಅಲ್ಲಿ! ಅಂತೆ ಹೋಗಿ ಅವರ(ದನಂಗಳ ) ಹುಲ್ಲು ತಿನ್ನದ್ದ ಹಾಂಗೆ ಹೊಣವದು.ಮತ್ತೆ ಅಂತೆ ಹೇಳುದ? ಬೈಪ್ಪಣೆ ನಾಯಿ ಹಾಂಗೆ ಹೇಳಿ” ಹೇಳಿದ.
ಓ ಅಪ್ಪು ಗಿಳಿಬಾಗಿಲಿಂಗೆ ಬರವಲೆ ಒಂದುನಮ್ಮ ಭಾಷೆಲಿ ಬಳಕೆಲಿ ಇಪ್ಪ ಚೆಂದದ ನುಡಿಕಟ್ಟು ಸಿಕ್ಕಿತ್ತು ಹೇಳಿ ಭಾರಿ ಕೊಷಿ ಆತು! ಆರಾದರೂ ಅವೂ ಉಪಯೋಗಿಸಿಕೊಳ್ಳದ್ದೆ ಬೇರೆಯೋರಿನ್ಗೂ ಉಪಯೋಗ ಮಾಡುಲೆ ಬಿಡದ್ದೆ ಇಪ್ಪೋರ ಬಗ್ಗೆ ಕೋಳ್ಯೂರು ಕಡೆ ಹವ್ಯಕ ಭಾಷೆಲಿ ಬೈಪ್ಪಣೆ ನಾಯಿ ಹಾಂಗೆ ಮಾಡಿದ° ,ಅವ° !ಆವ° ಬೈಪ್ಪಣೆ ನಾಯಿ, ಅವನೂ ತಿನ್ನ ಬೇರೆಯೋರಿಂಗೂ ಬಿಡ° ಹೇಳಿ ಬಳಕೆ ಇದ್ದು.
ಬೈಪ್ಪಣೆಲಿ ನಾಯಿಗೊಕ್ಕೆ ಬೆಳುಲು ,ಹುಲ್ಲು ಯಾವದೂ ತಿ೦ಬಲೇ ಎಡಿತ್ತಿಲ್ಲೆ;ಅವಕ್ಕೆ ಅದು ಬೇಡ !ರೆಚ್ಚೆ ಹಾಕಿದರೂ ನಾಯಿಗೊಕ್ಕೆ ತಿಂಬಲೆ ಎಡಿತ್ತಿಲ್ಲೆ.ಆದರೂ ಅಂತೆ ಕೆಲವು ನಾಯಿಗ ಬೈಪ್ಪಣೆಗೆ ಹೋಗಿ ದನಗಳತ್ತರೆ ಓರುತ್ತವು,ಅವಕ್ಕೆ ಬೌರಿಗೊಂಡು ಕಚ್ಚುಲೆ ಹೊಯಿಕೊಂಡು ಅವರನ್ನು ಹುಲ್ಲು ತಿಂಬಲೆ ಬಿಡ್ತವಿಲ್ಲೆ .
ಭೂಮಿಯ ಆಸ್ತಿಯ ಅಥವಾ ಇನ್ನೆನನ್ನಾದ್ರೂ ತಾನೂ ಅನುಭವಿಸದ್ದೆ ಬೇರೆಯೋರಿ೦ಗೂ ಅನುಭವಿಸುಲೆ ಬಿಡದ್ದೆ ಇಪ್ಪ ವ್ಯಕ್ತಿಗಳ ಬಗ್ಗೆ ಹೇಳುವಾಗ ಉಪಯೋಗಿಸುವ ಬಹಳ ಪರಿಣಾಮಕಾರೀ ವಿಶಿಷ್ಟ ನುಡಿಗಟ್ಟು ಇದು.ಇದು “ಬೈಪ್ಪಣೆ ನಾಯಿ ಲೆಕ್ಕೋ” ಹೇಳಿ ತುಳುವಿಲಿ ಬಳಕೆ ಇದ್ದು.ಕನ್ನಡಲ್ಲಿಯೂ ಇದ್ದ ?ಹವ್ಯಕಲ್ಲಿ ಬೇರೆ ಕಡೆ ಇದ್ದ ?ಇದಕ್ಕೆ ಸಮಾನಾಂತರವಾಗಿ ಬೇರೆ ನುಡಿಗಟ್ಟುಗ ಏನಾರು ಇದ್ದ ?ತಾನು ತಿನ್ನ ಪರರಿಗೂ ಬಿಡ ಹೇಳುವ ಮಾತು ಕನ್ನಡಲ್ಲಿ ಇದ್ದು ಅಲ್ಲದ ?ತಿಳುದೋರು ಹೇಳ್ರೆ ಎಲ್ಲೋರಿಂಗು ಗೊಂತಾವುತ್ತು ಎಲ್ಲೋರಿಂಗು ಉಪಕಾರ ಆವುತ್ತು ಒಟ್ಟಿಂಗೆ ಎನಗುದೆ.
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
😀
ಇದು ಒಂಥರ “ಆಮ್ ಆದ್ಮಿ ಪಾರ್ಟಿ” ಯ ಹಾಂಗಿಪ್ಪದು. ತಾನೂ ತಿನ್ನ, ಬೇರೆಯೋರಿಂಗೂ ಬಿಡ. ವಿಷಯ ಲಾಯ್ಕ ಆಯಿದು. ಹರೇ ರಾಮ.