ಇತ್ತೀಚೆಗೆಂಗೆ ಒಂದು ಮದುವೆಗೆ ಹೋಗಿತ್ತಿದೆ.ಅಲ್ಲಿ ಎನ್ನ ಹಳೆಯ ಎನ್ನ ಫ್ರೆಂಡ್ ಮಾತಾಡುಲೆ ಸಿಕ್ಕಿತ್ತು.ಅದು ತುಂಬಾ ಸ್ನೇಹ ಮಯಿ ,ಬಾಯಿ ತುಂಬಾ ಮಾತಾಡಿಗೊಂಡು ಲವಲಿವಿಕೆಲಿ ಓಡಾಡಿಗೊಂಡು ಇಪ್ಪ ಜೆನ ಅದು .ಅಂದು ಎಂತಕೋ ತುಂಬಾ ಚಪ್ಪೆ ಇತ್ತು .ಸಾಮಾನ್ಯಕ್ಕೆಲ್ಲ ಯಾವುದೇ ಸಮಸ್ಯೆಗೂ ತಲೆಕೆಡಿಸಿಕೊಂಬ ಜೆನ ಅಲ್ಲ ಅದು .ಹಾಂಗಾಗಿ ಎಂತ ಹೇಳಿ ?ಕೇಳಿದೆ .
ಅಷ್ಟಪ್ಪಗ ಅದು ಹೇಳಿತ್ತು .ಎಂಗೊಗು ಪಕ್ಕದ ಜಾಗವ ತೆಕ್ಕೊಂಡು ಹೊಸತಾಗಿ ಬಂದ ಜೆನಂಗಳದ್ದು ರಜ್ಜ ಜಾಗೆಯ ತಕರಾರು .ಸುಮ್ಮನೆ ಸುಮಾರು ಮಾರ್ಗ ಹತ್ರೆ ಇಪ್ಪ ಎಂಗಳ ಜಾಗೆಯ ಹತ್ತು ಸೆ೦ಟ್ಸ್ ಅವರದ್ದು ಹೇಳಿ ಗಲಾಟೆ ಮಾಡುತ್ತಾ ಇದ್ದವು .ಅದು ದೊಡ್ಡ ವಿಷಯ ಅಲ್ಲ,ಅವರ ಸುಲಭಲ್ಲಿ ಬಾಯಿ ಮುಚ್ಚುಸುಲೆ ಎಡಿತ್ತಿತ್ತು.ಆದರೆ ಆಚಮನೆ ರಾಜಣ್ಣ “ಬಡ್ದು ಕತ್ತಿಲಿ ಬಡುದ°”
.ಅವಕ್ಕೆ ಮನೆಗೆ ಹೋಪ ದಾರಿ ಎಂಗ ಕೊಡಕ್ಕು ಅಥವಾ ಆಚ ಮನೆ ರಾಜಣ್ಣ ಕೊಡಕ್ಕು.ಇಷ್ಟರ ವರೆಗೆ ಎಂಗಳ ಜಾಗೆಲಿ ಹೋಗಿಕೊಂಡು ಇದ್ದದು .ಮಾರ್ಗ ಹತ್ರಣ ಜಾಗೆ ಅವರದ್ದು ಹೇಳಿ ಬೇಲಿ ಹಾಕಿದ್ದಕ್ಕೆ ಎಂಗ ಅಂಬಗ ದಾರಿ ಹೋಪಲೆ ಬಿಡೆಯ° ಹೇಳಿ” ಹೇಳಿದೆಯ° .
ಎಂಗೊಗು ಆಚ ಮನೆ ರಾಜಣ್ಣ ನೋರಿಂಗೂ ತುಂಬಾ ಒಳ್ಳೆದಿದ್ದು .ಅವು ಗೆಂಡ ಹೆಂಡತಿ ಇಬ್ರೂ ಕೆಲಸಕ್ಕೆ ಹೋಪ ಕಾರಣ ಅವು ಬಪ್ಪಲ್ಲಿಯವರೆಗೆ ಅವರ ಇಬ್ರು ಮಕ್ಕಳೂ ಎಂಗಳ ಮಕ್ಕಳ ಒಟ್ಟಿಂಗೆ ಎಂಗಳ ಮನೆ ಮಕ್ಕಳ ಹಾಂಗೆ ಬೆಳದ್ದು..ಹೊತ್ತಪ್ಪಗ ಕಾಪಿ ತಿಂಡಿ ಎಂಗಳಲ್ಲಿಯೇ ಆನು ಕೊಟ್ಟು ಗೊಂಡು ಇದ್ದದು.ಎಷ್ಟೋ ಸರ್ತಿ ಅವು ಕೆಲಸಂದ ಬಪ್ಪಗ ತಡವು ಆದರೆ ಅವರ ಮಕ್ಕ ಎರಡುದೆ ಎಂಗಳಲ್ಲಿ ಉಂಡು ಒರಗಿಕೊಂಡು ಇತ್ತಿದವು .
ಈಗ ಆಚ ಮನೆ ರಾಜಣ್ಣ ಅವಕ್ಕೆ ಹೋಪಲೆ ದಾರಿ ಬಿಟ್ಟಿದ°. .ಅ ಮಾರ್ಗದ ಹತ್ರಣ ಜಾಗೆ ಬಗ್ಗೆ ಎಂಗಳತ್ರೆ ರೆಕಾರ್ಡ್ ಗಟ್ಟಿ ಇದ್ದು .ಆದರೆ ಎಂಗಳ ಜಾಗೆ ಎಂಗಳದ್ದು ಹೇಳಿ ಸಾಧಿಸಕ್ಕಾದರೆ ಇನ್ನು ಕೋರ್ಟ್ ಗೆ ಹೋಗಿ ಆಯಕ್ಕು.ಆಚ ಮನೆ ರಾಜಣ್ಣನ್ಗೆ ಆ ಜಾಗೆ ಎಂಗಳದ್ದು ಹೇಳಿ ಗೊಂತಿದ್ದು ಆದರೂ ಎಂಗ ಕೋರ್ಟು ಕಚೇರಿ ಅಲವಾಂಗೆ ಮಾಡಿದ° .ಪಕ್ಕದ ಜಾಗೆ ತೆಕ್ಕೊಂಡೋರು ಹೊಣದ್ದರಂದ ಹೆಚ್ಚು ಬೇಜಾರು ಆದ್ದು ಎಂಗೊಗೆ ಆಚ ಮನೆ ರಾಜಣ್ಣ ಮಾಡಿದ ವಿಶ್ವಾಸ ದ್ರೋಹ “ಹೇಳಿ ಹೇಳಿತ್ತು .
ಅವ ಎಂಥಕೆ ಹಾಂಗೆ ಮಾಡಿದ್ದು ?ಹೇಳಿ ಆನು ಕೇಳಿದೆ .”ಆನು ಇಬ್ರ ಕಡೆಲಿ ಇಲ್ಲೆ,ಎನಗೆ ಇಬ್ರೂ ಅಕ್ಕ ಪಕ್ಕದೋರು ,ಹೋಪಲೆ ದಾರಿ ಕೇಳುವಾಗ ಇಲ್ಲೆ ಹೇಳಿ ಹೇಂಗೆ ಹೇಳುದು ?ಹೇಳುತ್ತ°” ಹೇಳಿ ಹೇಳಿತ್ತು .
ಅಪ್ಪು !ಅದರ ಪರಿಸ್ಥಿತಿ ಎನಗೆ ಅರ್ಥ ಆತು .ಆರೋ ಮಾಡುವ ದ್ರೋಹಂದ ನಮ್ಮ ಆತ್ಮೀಯರು ಹೇಳಿ ಇಪ್ಪೋರು ಮಾಡುವ ವಿಶ್ವಾಸ ದ್ರೋಹ ತುಂಬಾ ಪೆಟ್ಟು ಕೊಡುತ್ತು.!ಅದರಂದ ಚೇತರಿಸಿ ಕೊಳ್ಳಕ್ಕಾದರೆ ತುಂಬಾ ಸಮಯ ಹಿಡಿತ್ತು.
ಹರಿತದ ಕತ್ತಿಲಿ ಕಡುದರೆ ಗಾಯ ಆವುತ್ತು .ಗಾಯ ಗುಣ ಆದರೆ ಅಲ್ಲಿಗೆ ಬೇನೆದೆ ಹೋವುತ್ತು.ಆದರೆ ಬಡ್ದು ಕತ್ತಿಲಿ ಬಡುದರೆ ಹೆರಂದ ಗಾಯ ಕಾಣುತ್ತಿಲ್ಲೆ,ಆದರೆ ಅಪ್ಪ ಬೇನೆ ತುಂಬಾ ಹೆಚ್ಚು ಮತ್ತು ಅದು ತುಂಬಾ ಸಮಯ ಒಳಿತ್ತು ಕೂಡಾ .
ಹಾಂಗೆ ಆರೋ ದ್ರೋಹ ಮಾಡ್ರೆ ಅವರತ್ರೆ ಕೋಪ, ದ್ವೇಷ ಮಾತ್ರ ಬತ್ತು ,ಆದರೆ ನಂಬಿದೋರು ವಿಶ್ವಾಸ ದ್ರೋಹ ಮಾಡಿ ನಮ್ಮ ವಿರೋಧಿಗಳ ಒಟ್ಟಿಂಗೆ ಕೈ ಜೋಡಿಸಿದರೆ, ಕೋಪಂದ ಹೆಚ್ಚು ಮನಸಿಂಗೆ ಪೆಟ್ಟು ಆವುತ್ತು .ಆ ಬೇನೆ ತುಂಬಾ ಸಮಯ ಒಳಿತ್ತು .ಇಂಥ ಸಂದರ್ಭಲ್ಲಿ ಬಡ್ದು ಕತ್ತಿಲಿ ಬಡುದ ಹೇಳುವ ಮಾತಿನ ಬಳಕೆ ಮಾಡುತ್ತವು.ಇದಕ್ಕೆ ಸಂವಾದಿಯಾಗಿ ಬೆನ್ನಿಂಗೆ ಕತ್ತಿ ಹಾಕಿದ° ಹೇಳುವ ಮಾತುದೆ ಬಳಕೆಲಿ ಇದ್ದು .
ಕನ್ನಡಲ್ಲಿ ಕಂಬಳಿಯಲ್ಲಿ ಸುತ್ತಿ ಹೊಡೆಯುವುದು ಹೇಳುವ ಮಾತು ಮೇಲ್ನೋಟಕ್ಕೆ ಇದಕ್ಕೆ ಸಮಾನ ಹೇಳುವ ಹಾಂಗೆ ಅನ್ಸುತ್ತು .ಆದರೆ ಇದಕ್ಕೂ ಅದಕ್ಕೂ ಭಾವಲ್ಲಿ ತುಂಬಾ ವ್ಯತ್ಯಾಸ ಇದ್ದು .ಬಡ್ದು ಕತ್ತಿಲಿ ಬಡುದ° ಹೇಳುದು ವಿಶ್ವಾಸ ದ್ರೋಹ ಮಾಡಿದ ಹೇಳುವ ಅರ್ಥವ ಸೂಚಿಸುತ್ತು.ಕಂಬಳಿಲಿ ಸುತ್ತಿ ಬಡಿವದು ಹೇಳ್ರೆ ಮಾಡಕ್ಕಾದ್ದರ ನೇರವಾಗಿ ಮಾಡದ್ದೆ ಉಪಾಯವಾಗಿ ಮಾಡಿದ ಹೇಳುವ ಅರ್ಥ ಬತ್ತು ಹೇಳಿ ಎನಗೆ ಅನ್ಸುತ್ತು .
ಈ ಬಗ್ಗೆ ತಿಳುದೋರು ತಿಳುಸಿ
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಅರ್ಥಪೂರ್ಣ ನುಡಿಗಟ್ಟು.
ಸಮರ್ಪಕವಾಗಿ ವಿವರಣೆ ಕೊಟ್ಟದಕ್ಕೆ ಧನ್ಯವಾದಂಗೊ ಲಕ್ಷ್ಮಿಯಕ್ಕಾ..
ಓದಿ ಪ್ರೋತ್ಸಾಹಿಸುವ ನಿಂಗೊಗೆ ಎಲ್ಲರಿಂಗೂ ಕೃತಜ್ಞತೆಗ
ಎಂಗಳ ಮನೆ ಹತ್ತರೂ ಹೀಂಗಿಪ್ಪ ಒಂದು ಜಾಗೆ ತಕರಾರು ಆಯಿದು.ಈಗ ಅವಕ್ಕೆ ಅತ್ತಿತ್ತೆ ಹೋಕುರಕ್ಕೆ ಇಲ್ಲೆ.ಹೆಮ್ಮಕ್ಕೊ
ಮಾತಾಡುತ್ತವು.
ಅಪ್ಪು ನಮ್ಮಲ್ಲಿ ತುಂಬಾ ಕಡೆ ಇದು ಇದ್ದು