ಇದೊಂದು ನಮ್ಮ ಭಾಷೆಲಿಪ್ಪ ಭಾರಿ ಚೆಂದದ ನುಡಿಗಟ್ಟು .ಸಣ್ಣಾದಿಪ್ಪಗಳೇ ಒಂದೆರಡು ಸತ್ತಿ ಎಲ್ಲೋ ಕೇಳಿದ್ದು ನೆನಪಿದ್ದು .ಅದರ ಅರ್ಥ ಗಿರ್ಥ ಎಲ್ಲ ಅಷ್ಟಾಗಿ ಆಲೋಚನೆ ಮಾಡಿತ್ತಿಲ್ಲೆ.
ಇತ್ತಿಚೆಗಂಗೆ ಇದು ಎನಗೆ ಅಂಬಗಂಬಗ ನೆನಪಾವುತ್ತ ಇದ್ದು.ಉದಾಹರಣೆ ಹೇಳ್ತರೆ ಎನ್ನ ಬ್ಲಾಗ್ ಕಥೆಯನ್ನೇ ಹೇಳುಳಕ್ಕು.ಇದು ಈ ನುಡಿ ಗಟ್ಟಿಂಗೆ ಸೂಕ್ತ ಉದಾಹರಣೆ ಅಕ್ಕು ಹೇಳಿ ಅನ್ಸುತ್ತು ಎನಗೆ.
ಆರೋ ಎಲ್ಲ ಬ್ಲಾಗ್ ಬರವದು ನೋಡುವಾಗಮೊದಲೇ ಬರವ ತುಡಿತ ಇಪ್ಪ ಎನಗೂ ಬ್ಲಾಗ್ ಬರೆಯಕ್ಕು ಹೇಳಿ ಅನ್ಸಿತ್ತು.ಸರಿ ಹೇಳಿ ಒಂದು ಕಂಪ್ಯೂಟರ್ ತೆಗತ್ತು .ಕನ್ನಡ ಟೈಪಿಂಗ್ ಈಗ ಏನೂ ಕಷ್ಟದ ವಿಚಾರ ಅಲ್ಲನ್ನೇ! ಮಾಹಿತಿ ಸಂಗ್ರಹಂಗ ಮೊದಲೇ ಇತ್ತು.ಹಾಂಗಾಗಿ ಬರವಲೆ ಸುರುಮಾಡಿದೆ.
ನಂತರವೇ ಗೊಂತಾದ್ದು .ಇದರಲ್ಲಿ ಎಂತೆಲ್ಲ ಸಮಸ್ಯೆಗ ಇದ್ದು ಹೇಳಿ.ತುಂಬಾ ಜನಂಗ ಇದರ ನಕಲು ಮಾಡಿ ಅವರವರ ಹೆಸರಿಲಿ ಹಾಕಿಕೊಂಬಲೆ ಸುರುಮಾಡಿದವು.
ಸುರುವಿಂಗೆ ಫೋಟೋ ನಕಲು ಮಾಡಿಗೊಂಡು ಇತ್ತಿದವು.ಇದಕ್ಕೆ ಎಂತ ಮಾಡುದು ಹೇಳಿ ತಲೆಕೆಡಿಸಿಕೊಂಡು ಅಂತು ಇಂತೂ ವಾಟರ್ ಮಾರ್ಕ್ (ಫೋಟೋ ಮೇಲೆ ನಮ್ಮ ಹೆಸರು ) ಹಾಕುಲೆ ಸಹೃದಯಿ ಪದ್ಯಾಣ ರಾಮಚಂದ್ರಣ್ಣ ಅವರ ಕೈಂದ ಹೆಂಗೋ ಕಲ್ತೆ. ಇನ್ನು ತೊಂದರೆ ಇಲ್ಲೆ ಹೇಳಿ ಜ್ಹಾನ್ಸಿ ನೆಮ್ಮದಿಲಿ ಇತ್ತಿದೆ.
ಮುಂದಣ ಸರದಿ ಲೇಖನಂಗಳ ಕಾಪಿ ಮಾಡಿ ಹಾಕುಲೆ ಸುರು ಮಾಡಿದವು .ಈಗ ಅದಕ್ಕೂನಕಲು ಮಾಡುಲೆ ಎಡಿಯದ್ದ ಹಾಂಗೆ ಮಾಡುಲೆ ಸಹೃದಯಿ ರಾಘವೇಂದ್ರ ನಾವಡ
ಹೇಳಿ ಕೊಟ್ಟವು ಅದನ್ನು ಹೆಂಗೋ ಎನ್ನ ಬ್ಲಾಗ್ ಗೆ ಅನ್ವಯ ಅಪ್ಪ ಹಾಂಗೆ ಮಾಡಿದೆ ಅದು ಸಮ.ಮತ್ತೆ ಈಗಾಗಲೇ ನಕಲು ಮಾಡಿದೋರ ಪತ್ತೆ ಮಾಡುದು ಹೇಂಗೆ?
ಅದೂ ಒಂದು ಉಪಾಯ ಗೊಂತಾತು,ಎನ್ನ ಲೇಖನಲ್ಲಿಪ್ಪ ಒಂದು ಮುಖ್ಯ ಪದ ಅಥವಾ ವಾಕ್ಯವ ಗೂಗಲ್ ಗೆ ಹಾಕಿ ಹುಡುಕಿ ಅಪ್ಪಗ ಅದು ಎಲ್ಲೆಲ್ಲ ಇದ್ದು ಹೇಳಿ ಗೊಂತಾವುತ್ತು .ಅದರ ಹಿಂದಂದ ಹೋಗಿ ಎನ್ನ ಲೇಖನಂಗ ಎಲ್ಲೆಲ್ಲ ಆರಾರು ನಕಲು ಮಾಡಿದ್ದವು ಹೇಳಿ ನೋಡಿ ಅವಕ್ಕವಕ್ಕೆ ಸಂದೇಶ ಕಳುಸಿದೆ ಅದು ಎನ್ನ ಬರಹ ಹೇಳಿ ಆಧಾರ ಸಾಕ್ಷಿ ಕೊಟ್ಟು !
ಫೇಸ್ ಬುಕ್ ಲಿ ಈ ಬಗ್ಗೆ ಸೂಚನೆಯೂ ಕೊಟ್ಟೆ !
ನಾವು ಹಸೆ ಕೆಲ ಹೊಕ್ರೆ ರಂಗೋಲಿ ಕೆಳ ಹೊಕ್ಕುವ ಜನಂಗ ಇರ್ತವು .ಬರವ ಉತ್ಸಾಹ ,ಮಾಹಿತಿ ಇದ್ದರೆ ಸಾಲ ,ಅದರ ಹೊರ ಜಗತ್ತಿಂಗೆ ತಿಳಿಸಿಯೂ ನಮ್ಮ್ಮದಾಗಿ ಮಡಿಕ್ಕೊಂಬಲೆ ಸುಮಾರು ಕಷ್ಟ ಇದ್ದು ಹೇಳಿ ಈಗ ಗೊಂತಾತು !
ಇದರೆಲ್ಲರ ಜಂಜಾಟ ನೋಡುವಾಗ ನೆನಪಾದ ನುಡಿಗಟ್ಟು “ಕಂಜಿ ಹಾಕಿರೆ ಸಾಲ ನಕ್ಕುಲೂ ಅರಡಿಯಕ್ಕು” ಹೇಳಿ.ದನಗ ಕಂಜಿ ಹಾಕಿ ಬಿಟ್ರೆ ಅವರ ಜವಾಬ್ದಾರಿ ಮುಗುತ್ತಿಲ್ಲೆ.ನಂತರ ಕಂಜಿಯ ಮೈ ನಕ್ಕಿ ನಕ್ಕಿ ಅದಕ್ಕೆ ಬಲ ಬಪ್ಪ ಹಾಂಗೆ ಕೂಡಾ ಮಾಡಕ್ಕು .ಮುಂದೆ ಆ ಕಂಜಿ ಅದರ ಕಾಲ ಮೇಲೆ ನಿಂಬಲ್ಲಿಯವರೆಗೆ ಅದರ ಜವಾಬ್ದಾರಿ ದನದ್ದೇ ಅದನ್ನು ಅದು ನಿಭಾಯಿಸಕ್ಕು .ಹಾಂಗೆ ನಾವುದೇ ಒಂದು ಕೆಲಸ ಸುರು ಮಾಡಿರೆ ಸಾಲ ,ಅದರ ಪೂರ್ತಿ ಜವಾಬ್ದಾರಿ ಆಗು ಹೋಗುಗಳ ನೋಡಿಗೊಂಬ ಸಾಮರ್ಥ್ಯವೂ ನಮ್ಮ್ಮಲ್ಲಿ ಇರೆಕ್ಕು ಹಾಂಗಾರೆ ಮಾತ್ರ ಅಂತ ಕೆಲಸಕ್ಕೆ ಕೈ ಹಾಕೆಕ್ಕು ಹೇಳುವ ನೀತಿಯ ಈ ನುಡಿಗಟ್ಟು ಹೇಳುತ್ತು ಹೇಳಿ ಎನಗೆ ಅನ್ಸುತ್ತು .
ನಿಂಗ ಎಲ್ಲ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಸುರು ಮಾಡಿದ ಕೆಲಸಂಗಳ ಯಾವುದೇ ವಿಘ್ನಂಗೊ ಬಂದರೂ ಅದರ ಎದುರಿಸಿಗೊಂಡು ಕೊಡಿ ಎತ್ತುಸಲೂ ಗೊಂತಿರೆಕು ಅಲ್ಲದಾ.
ಭಾಷಾಪ್ರಭೇದಗಳಲ್ಲಿ ಸಾಕಷ್ಟು ಹಿಡಿತ ಇಪ್ಪ ಲಕ್ಷ್ಮಿ ಅಕ್ಕನ ಜ್ಞಾನದ ಹರಹು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಚಾರ. ಅವರ ಲೇಖನ೦ಗಳಲ್ಲಿ, ಪುಸ್ತಕಗಳಲ್ಲಿ- ನಮ್ಮಲ್ಲಿ ಸುಮಾರು ಜನಕ್ಕೆ ಗೊ೦ತಿಲ್ಲದ್ದ ವಿಚಾರ೦ಗಳ ತಿಳುಕ್ಕೊ೦ಬ ಅವಕಾಶ ಇದ್ದು.ಈ ಪುಟಲ್ಲಿಯೇ ಬ೦ದ ಹವ್ಯಕ ನುಡಿಗಟ್ಟು ಪದಗಳ ಬಗೆಗಿನ ಲೇಖನ೦ಗಳ ಮರವಲೆ ಸಾಧ್ಯವೇ ಇಲ್ಲೆ.ಲಕ್ಷ್ಮಿಅಕ್ಕ೦ಗೆ ಮು೦ದಾಣ ಬರವಣಿಗೆಗೆ ಶುಭಾಶಯ೦ಗೊ;ಉತ್ತಮ ಮಾಹಿತಿಪೂರ್ಣ ಲೇಖನ೦ಗೊಕ್ಕೆ ಕೃತಜ್ಞತೆಗೊ… 🙂
ಲಕ್ಷ್ಮಿ ಹೇಳಿದ ನುಡಿಗಟ್ಟು ಸರಿ. ಬ್ಲಾಗಿಲ್ಲಿಯೂ ಏನೆಲ್ಲ ಕಳ್ಳವಂಟಿಕೆ ನೆಡೆತ್ತು?.ಕೃತಿಚೌರ್ಯ ಇಲ್ಲಿಯೂ ಇದ್ದಂಬಗ!.ಒಟ್ಟಾರೆ ಎಲ್ಲೆಲ್ಲ ಮೌಲ್ಯಯುತವಾದ ವಸ್ತು ಇದ್ದೊ ಅಲ್ಲೆಲ್ಲ ಕಳ್ಳರೂ ಇದ್ದವಲ್ಲೊ?.ಅದರ ಹುಡುಕ್ಕುವ ದಾರಿಯೂ ಇದ್ದು ಹೇಳಿ ಗೊಂತಪ್ಪಗ ಒಂದು ಮಾತು ನೆಂಪಾವುತ್ತು ’ಮುಂಗಿ ಹೇತರೂ ಅದು ಮೇಲೆ ಬಾರದ್ದಿರ’ ಹೇಳ್ತವಲ್ಲೊ?.