ನಮ್ಮ ಭಾಷೆಲಿ ಬಳಕೆಲಿ ಇಪ್ಪ ಒಂದು ಸಣ್ಣ ನುಡಿಗಟ್ಟು ಆದರೆ ಅರ್ಥ ಮಾತ್ರ ತುಂಬಾ ದೊಡ್ಡದು ಸಣ್ಣದಲ್ಲ.ಮೆಣಸು ತುಂಬಾ ಖಾರದ ವಸ್ತು.ಮೆಣಸಿನ ಖಾರಕ್ಕೆ ಎರುಗು, ಕುಳಿಂಪ,ನೆಳವು ಮೊದಲಾದ ಸಣ್ಣ ಜೀವಿಗ ಯಾವುದೂ ಮೆಣಸಿನ ಹತ್ತರಂಗೆ ಅಣೆತ್ತವಿಲ್ಲೆ.ಆದರೆ ಮೆಣಸಿನ ಸರಿ ಆಗಿ ಒಣಗಿಸಿ ಮಡುಗದ್ರೆ ,ಅಥವಾ ತಂದು ಮಡುಗಿ ತುಂಬಾ ದಿನ ಆಗಿ ಕುಂಬು ಆದರೆ ಅದರಲ್ಲಿ ಹುಳುಗ ಆವುತ್ತು .ಆ ಹುಳುಗ ಆ ಖಾರದ ಮೆಣಸನ್ನೇ ತಿಂದು ಬದುಕುತ್ತವು.ಅವಕ್ಕೆ ಮೆಣಸು ಎಂತ ಖಾರ ಅವುತ್ತಿಲ್ಲೆ.ಹಾಂಗಾಗಿಯೇ ಅವು ಅದರಲ್ಲಿ ಬದುಕುದು ಅನ್ನೇ .
ಆದರೆ ಇದರ ನುಡಿಗಟ್ಟಾಗಿ ಬಳಕೆ ಮಾಡುದು ಮಾತ್ರ ಮನುಷ್ಯರ ಸ್ವಾರ್ಥ ,ಮಾಡುವ ಅನ್ಯಾಯದ ಬಗ್ಗೆ ಹೇಳುವಗ .ಇದರ ಎರಡು ಸಂದರ್ಭಂಗಳಲ್ಲಿ ಬಳಕೆ ಮಾಡುತ್ತವು.
ಆರಾದರೂ ವಿಪರೀತ ಅನ್ಯಾಯ ಮಾಡುತ್ತಾ ಇದ್ದರೆ ಅನ್ಯಾಯಕ್ಕೊಳಗಾದೋರು ಅವಕ್ಕೆ ಹಾಳಾಗಿ ಹೋಗಲಿ ಹೇಳಿ ಶಾಪ ಹಾಕುತ್ತವು ಹರಕೆ ಹಾಕುತ್ತವು ,ಆದರೂ ಅವಕ್ಕೆ ಮಕ್ಕ ಮರಿಗ ಹೇಳಿ ಸಿರಿ ಸಂಪತ್ತು ತುಂಬಿಕೊಂಡು ಹೋಪದರ ನೋಡಿ ಅನ್ಯಾಯಕ್ಕೊಳಗಾದೋರು “ಅವು ಮೆಣಸಿಲಿಪ್ಪ ಹುಳುಗಳ ಹಾಂಗೆ.ಅವಕ್ಕೆ ಅರ ಶಾಪ,ಹರಕ್ಕೆ ಯಾವುದೂ ನಾಟುತ್ತಿಲ್ಲೆ ” ಹೇಳಿ ಹೇಳ್ತವು.
ಇನ್ನೊಂದು ಸಂದರ್ಭ ರಜ್ಜ ಬೇರೆ ರೀತಿದು .ನಮಗೆ ಏನಾರೂ ಅನ್ಯಾಯ ಆದರೆ ಅದರ ವಿರೋಧಿಸಿ ನಮ್ಮದು ನ್ಯಾಯ ಹೇಳಿ ತೋರ್ಸಿ ಕೊಡುಲೆ ಎಡಿಯದ್ದ ಸಂದರ್ಭಲ್ಲಿ ಯಾವುದಾದರೂ ಸ್ಥಳದ ದೇವರ ನಂಬಿ ನಾವು ” ನ್ಯಾಯ ಅನ್ಯಾಯ ಎಲ್ಲವನ್ನೂ ಆ ದೇವರು ನೋಡಿಗೊಳ್ತಾ” ಹೇಳಿ ನಂಬಿಕೆಲಿ ನೆಮ್ಮದಿ ಕಾಣುತ್ತು.
ಕೆಲವು ಸರ್ತಿ ನಮ್ಮ ನಂಬಿಕೆಯೇ ಹಾರಿ ಹೋಪ ವಿಚಾರಂಗ ನಡೆತ್ತು.ನಾವು ನಂಬಿದ ದೇವರ ತಾಣಗಳಲ್ಲಿಯೇ ,ದೇವರೇ ಸೇವೆ ಮಾಡುವೋರೆ ಮಿತಿ ಮೀರಿದ ಅನ್ಯಾಯ ಮಾಡುವಗ; ಬೇರೆಯೋರ ನ್ಯಾಯಾನ್ಯಾಯವ ನೋಡುವ ದೇವರಿಂಗೆ ಅವನ ಸೇವೆ ಮಾಡುವೋರು ಮಾಡುವ ಅನ್ಯಾಯ ಕಾಣುತ್ತಿಲ್ಲೆಯ,ಅವಕ್ಕೆಂತ ದೋಷವೂ ಕಾಣುತ್ತಿಲ್ಲೆಯ ಹೇಳಿ ಸಂಶಯ ಅವುತ್ತು.
ಇಂಥ ವಿಷಯಂಗಳ ಬಗ್ಗೆ ಮಾತಾಡುವಾಗ ಅವು ಮೆಣಸಿಲಿಪ್ಪ ಹುಳುಗ.ಅವಕ್ಕೆ ಸುಲಭಕ್ಕೆ ಖಾರ ತಾಗುತ್ತಿಲ್ಲೆ ಹೇಳಿ ಹೇಳುತ್ತವು.
ಕೋಳ್ಯೂರು ಪರಿಸರಲ್ಲಿ ನಮ್ಮ ಭಾಷೆಲಿ ಈ ನುಡಿಗಟ್ಟು ಬಳಕೆಲಿ ಇದ್ದು .ಬೇರೆ ಕಡೆಲಿಯೂ ಇಕ್ಕು ಅಲ್ಲದ.ಅದೇ ರೀತಿ ಇದಕ್ಕೆ ಸಮಾನಾರ್ಥಕವಾಗಿ ಬಳಕೆ ಅಪ್ಪ ಮಾತುಗ ನುಡಿಗಟ್ಟುಗಳು ಇಕ್ಕು ಅಲ್ಲದ ? ಗೊಂತಿಪ್ಪೋರು ತಿಳುಸಿ.
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಮೆಣಸಿಲಿಪ್ಪ ಹುಳು – ಅರ್ಥೈಸಿದ್ದಕ್ಕೆ ಧನ್ಯವಾದ ಲಕ್ಷ್ಮಿ ಅಕ್ಕ.
ಎಂಗಳಲ್ಲಿ ಇಂತಹ ಜೆನಂಗೊಕ್ಕೆ “ಗೊಬ್ಬರದ ಹುಳು” ಹೇಳ್ತವು. ಹೊಲಸು ತಿಂದು ಬದ್ಕುವವಕ್ಕೆ, ಯಾವುದೇ ಪಾಪ, ಶಾಪ ನಾಟುತ್ತುಲ್ಲೆಡ.
ಎಂಗಳ ಹೊಡೆಲಿ ಈ ನುಡಿಗಟ್ಟು ಅಷ್ಟಾಗಿ ಚಾಲ್ತಿಲಿ ಇಲ್ಲೆ.ಮದ್ದಿಂಗೆ ಉಪಯೋಗ ಅಪ್ಪ ತೊಳಶಿಗೂ ರೋಗ ಬತ್ತು.ಹಾಂಗೇ ಮೆಣಸು ಕುಂಬಪ್ಪಗ ಹುಳುಗಳ ಅಟ್ಟಹಾಸ ಮೆರೆತ್ತು.
ಮೆಣಸಿನ ಹುಳುಗೊ !!! ಎಂತಾ ವಿಚಿತ್ರ !!
ಮೆಣಸಿನ ಖಾರವನ್ನೇ ತಿಂಬ ಹುಳಕ್ಕೆ ಮೆಣಸಿನ ಖಾರ ನಾಟುಗ? ಹ್ಮ್..ಇಂತಹಾ ನುಡಿಗಟ್ಟಿಂಗೆ ಅರ್ಥವೈಶಾಲ್ಯ ಜಾಸ್ತಿ. ಇಂತದ್ದು ತುಂಬಾ ಇಕ್ಕು ಅಲ್ಲದಾ..