Oppanna.com

ಗಿಳಿಬಾಗಿಲಿಂದ -ಅವ°/ಅದು ಪಾತಾಳ ಗರಡಿ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   06/11/2013    17 ಒಪ್ಪಂಗೊ

ಅವ° ಮಹಾ ಪಾತಾಳ ಗರಡಿ, ಅವನ ಬಾಯಿಗೆ ಬೀಳದ್ದಾಂಗೆ, ಕಣ್ಣಿಂಗೆ ಕಾಣದ್ದಾ೦ಗೆ, ಕೆಮಿಗೆ ಬೀಳದ್ದಾಂಗೆ,ಯಾವುದನ್ನೂ ಮಡುಗುಲೇ ಎಡಿಯಪ್ಪ ! ಎಲ್ಲಿಂದ ಹೇಗಾದರೂ ಆ ಸಂಗತಿಯ ಕಂಡು ಹಿಡಿಯದ್ದೆ ಬಿಡ°” ಅಥವಾ  “ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ”ಹೇಳಿ ಹೇಳುವ ಮಾತುಗ ನಮ್ಮ ಭಾಷೆಲಿ ಸಂದರ್ಭಕ್ಕನುಗುಣವಾಗಿ ಬಳಕೆ ಆವುತ್ತು . ಆನು ಈ ರೀತಿಯ ಮಾತಿನ ಸುಮಾರು ಸರ್ತಿ ಅಲ್ಲಿ ಇಲ್ಲಿ ಕೇಳಿದ್ದೆ .ನಿ೦ಗಳೂ ಕೇಳಿಪ್ಪಿ.
ಪಾತಾಳ ಗರಡಿ ಹೇಳ್ರೆ ಎಂತದು ? ಆನು ಸಣ್ಣಾದಿಪ್ಪಗ ಪಾತಾಳ ಗರಡಿಯ ನೋಡಿದ್ದೆ.ಪಾತಾಳ ಗರಡಿ ಹೇಳ್ರೆ ಒಂದು ಲೋಹದ ಸಾಧನ .ಬಾವಿಗೆ ಏನಾರೂ ಕೊಡ ಪಾನ, ಚೆಂಬು ,ಪಾತ್ರಂಗ ಬಿದ್ದರೆ ಪಾತಾಳ ಗರಡಿಯ ಬಾವಿಯ ಬಳ್ಳಿಗೆ ಇಳುಸಿ ಬಿದ್ದ ವಸ್ತುಗಳ ತೆಗೆತ್ತಾ ಇತ್ತಿದವು .ಅದರಲ್ಲಿ ಅನೇಕ ಬೇಕಾದ ಕಡೆಗೆ ಚಲಿಸುವ ,ಬೇರೆ ಬೇರೆ ಗಾತ್ರದ ಕೊಕ್ಕೆಗ ಇದ್ದು .ಆ ಕೊಕ್ಕೆಗೆ ಕೊಡಪಾನ/ ಪಾತ್ರಂಗಳ ಸಿಕ್ಕುಸಿ ಮೇಲೆ ಎಳದು ತೆಗೆತ್ತಾ ಇತ್ತಿದವು ಮೊದಲು; ಪಾತಾಳ ಗರಡಿಗೆ ಸಿಕ್ಕಿದ್ದಿಲ್ಲೇ ಹೇಳಿ ಆದ್ರೆ ಇನ್ನು ಆ ಕೊಡಪ್ಪಾನದ ಆಸೆ ಬಿಡಕ್ಕು ಇನ್ನದು ಸಿಕ್ಕ ಹೇಳುವ ಮಾತು ಪ್ರಚಲಿತ ಇತ್ತು .
ಆದರೆ “ಅವ°/ಅದು ಪಾತಾಳ ಗರಡಿ” ಹೇಳುವ ರೂಪಕ ನಮ್ಮ ಭಾಷೆಲಿ ವಿಶಿಷ್ಟವಾಗಿ ಬಳಕೆ ಆವುತ್ತು . ಪಾತಾಳ ಗರಡಿ ಹೆಂಗಾದರೂ ಮಾಡಿ ಬಾವಿಗೆ ಕೆರೆಗೆ ಬಿದ್ದ ಕೊಡಪಾನ ,ಪಾತ್ರಂಗಳ ತನ್ನ ಕೊಕ್ಕೆಗೆ ಸಿಕ್ಕುಸಿ ಹೆರ ತೆಗದು ಮೇಲೆ ತತ್ತು .ಹಾಂಗಾಗಿ ಪಾತಾಳ ಗರಡಿಯ ರೀತಿಲಿ ಹೆಂಗಾರೂ ಮಾಡಿ ಇನ್ನೊಬ್ಬರ ವಿಚಾರವ ಪತ್ತೆ ಹಚ್ಚಿ ತೆಗವ ಸ್ವಭಾವದೊರಿನ್ಗೆ ಕೋಳ್ಯೂರು ಕಡೇಲಿ ನಮ್ಮ ಭಾಷೆಲಿ ಕಡೆ ಪಾತಾಳ ಗರಡಿ ಹೇಳಿ ಹೇಳ್ತವು .”ಅವ°/ಅದು ಪಾತಾಳ ಗರಡಿ ಅವನ/ಅದರ ಹಿಡಿಪ್ಪಿಂದ ತಪ್ಪಿಸಿಕೊಂಬಲೆ ಎಡಿಯಪ್ಪ” ಹೇಳುವ ಮಾತುದೆ ಬಳಕೆಲಿ ಇದ್ದು .”ಆವ° /ಅದು ಪಾತಾಳ ಗರಡಿ” ಹೇಳುದು ಒಂದು ರೀತಿ ದೂಷಣೆ /ಬೈಗಳು .ಆದರೆ ಪಾತಾಳ ಗರಡಿ ನಿಜವಾಗಿಯೂ ಒಂದು ಬಹು ಉಪಯುಕ್ತ ಸಾಧನ ,ಆದರೆ ನುಡಿಗಟ್ಟಾಗಿ ಬಳಸುವಗ ಪಾತಾಳ ಗರಡಿ ಹೇಳುದು ಬೈಗಳಾಗಿ /ದೂಷಣೆಯ ಮಾತಾಗಿ ಬದಲಾವುತ್ತು.
ಅವ° ಪಾತಾಳ ಗರಡಿ ,ಎಲ್ಲಿಂದಾದರೂ ಹೇಂಗಾದರೂ ಅವ° ವಿಷಯ ಪತ್ತೆ ಮಾಡದ್ದೆ ಬಿಡ° ಹೇಳುವಗ “ಅವ° ಮಹಾ ಪಾತಾಳ ಗರಡಿ” ಹೇಳುವಲ್ಲಿ ತುಸು ದೂಷಣೆ ಒಟ್ಟಿ೦ಗೆ “ಅವ° ತುಂಬಾ ಚಾಣಾಕ್ಷ ,ಕುಶಾಗ್ರಮತಿ” ಹೇಳುವ ಭಾವದೆ ಇದ್ದು, ಅದೇ ರೀತಿ “ಅದಕ್ಕೆ ಬೇಡದ್ದ ವಿಚಾರ ಇಲ್ಲೆ ,ಮತ್ತೆ ಮತ್ತೆ ತೊಳಚ್ಚಿ ತೊಳಚ್ಚಿ ತಲೆ ತಿಂತು ,ಅದು ಮಹಾ ಪಾತಾಳ ಗರಡಿ ,ಅದರತ್ತರೆ ಯಾವುದೂ ಗುಟ್ಟು ಮಾಡುಲೆ ಎಡಿಯ”ಹೇಳಿ ಹೇಳುವ ಮಾತಿಲಿ ಅದು ಬೇರೆಯೋರ ವಿಷಯಲ್ಲಿ ಅನಗತ್ಯ ಆಸಕ್ತಿ ವಹಿಸುತ್ತು, ಅನಗತ್ಯವಾಗಿ ಬೇರೆಯೋರ ವಿಷಯವ ಒಕ್ಕಿ ಹೆರ ತೆಗೆತ್ತು ,ಅದು ರಜ ಅಜಕ್ಕೆಯ ಹೆಮ್ಮಕ್ಕ ಹೇಳುವ ಭಾವದೆ ಕಾಣುತ್ತು .ಇಂತಹ ಅನೇಕ ನುಡಿಗಟ್ಟುಗ ನಮ್ಮಲ್ಲಿ ಬಳಕೆಲಿ ಇದ್ದು .ಎನಗೆ ನೆನಪಾದ ಪಾತಾಳ ಗರಡಿ ಬಗ್ಗೆ ಇಲ್ಲಿ ಬರದ್ದೆ .ನಿಂಗಳ ಅಭಿಪ್ರಾಯ ತಿಳುಸಿ.

ಪಾತಾಳ ಗರಡಿ ( ವೆ೦ಕಟೇಶ ಭಾವನ ಸ೦ಗ್ರಹ)
ಪಾತಾಳ ಗರಡಿ ( ವೆ೦ಕಟೇಶ ಭಾವನ ಸ೦ಗ್ರಹ)

17 thoughts on “ಗಿಳಿಬಾಗಿಲಿಂದ -ಅವ°/ಅದು ಪಾತಾಳ ಗರಡಿ

  1. ವೆ೦ಕಟೇಶಣ್ಣ, ವನಜಕ್ಕ೦ಗೂ ಧನ್ಯವಾದ ತಿಳಿಶಿಕ್ಕಿ.

  2. ವಾಹ್! ಪಾತಾಳ ಗರಡಿದೆ, ನುಡಿಗಟ್ಟಿನ ಬಗ್ಗೆ ಲೇಖನದೆ ಕಾ೦ಬಗ ಡಿ. ವಿ.ಜಿ ಯವರ ”ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು”…. ಹೇಳುವಾ೦ಗೆ ಆತು.
    ವೆ೦ಕಟೇಶಣ್ಣ೦ಗೂ, ಲಕ್ಶ್ಮಿಯಕ್ಕ೦ಗೂ ಧನ್ಯವಾದ. ಇಷ್ಟು ಕೊಳಿಕ್ಕೆ ಇಕ್ಕು ಹೇಳಿ ಎನ್ನ ಕಲ್ಪನೆಗೆ ಬ೦ದಿತ್ತಿಲ್ಲೆ.

  3. ವನಜಕ್ಕನ ಮನೆಲಿಪ್ಪ (ವನದುರ್ಗ ದೇವಾಲಯದ ಹತ್ತರೆ ,ಸುಬ್ರಹ್ಮಣ್ಯ )ಪಾತಾಳ ಗರಡಿಯ ಚೆಂದದ ಫೋಟೋಗಳ ತೆಗದು ಕಳುಸಿ ಕೊಟ್ಟ ವೆಂಕಟೇಶಣ್ಣ ಗೆ ಮನಃ ಪೂರ್ವಕ ಕೃತಜ್ಞತೆಗೆ

  4. ಎಂಗಳ ಪಕ್ಕದ ಮನೆಲಿ ಒಂದು ಪಾತಾಳ ಗರಡಿ ಇದ್ದು, ಆನು ಸುಮಾರು ಮೂವತ್ತು ವರುಷಂದ ನೋಡುತ್ತಾ ಇದ್ದೆ, ಸುಮಾರು ಸರ್ತಿ ಕೊಡಪ್ಪಾನವ ಕಷ್ಟ ಇಲ್ಲದ್ದೆ ಬಾವಿಂದ ತೆಗದ್ದೆ.

    1. ನಮಸ್ತೆ ವೆಂಕಟೇಶಣ್ಣ,
      ನಿಂಗಳ ಪಕ್ಕದ ಮನೆಲಿ ಪಾತಾಳ ಗರಡಿ ಇಪ್ಪದು ಕೇಳಿ ಭಾರಿ ಕೊಶಿ ಆತು ಎನಗೆ.ಅದರ ಒಂದು ಫೋಟೋ ತೆಗದು ಕಳುಸಿಕೊಡ್ತೀರ ?ಈ ಬರಹವ ಸುಮಾರು ಸಮಯ ಮೊದಲು ಆನು ಎನ್ನ ಹವ್ಯಕ ಬ್ಲಾಗ್ ಗಿಲಿಬಾಗಿಲು ಲಿ ಹಾಕಿತ್ತಿದೆ.ಅಂಬಗ ಇದರ ಓದಿದೋರು ತುಂಬಾ ಜನಂಗ ಎನ್ನತ್ತರೆ ಇದರ ಫೋಟೋ ಇದ್ದ ಹೇಳಿ ಕೇಳಿ ಅದರ ನೋಡುವ ಕುತೂಹಲ ತೋರ್ಸಿದ್ದವು .ನಿಂಗ ಅದರ ಫೋಟೋ ತೆಗದು ಕಲ್ಸಿರೆ ಎಲ್ಲರಿಂಗು ನೋಡುಲೆ ಆವುತ್ತು

      1. ಒಂದು ಫಟ ಅಡಿಗೆ ಸತ್ಯಣ್ಣಂಗೂ ಬೇಕಡ. ಅಂಬಗ ತೆಗವಾಗ ಒಂದು ಹೆಚ್ಚಿಗೆಯೇ ತೆಗವದು ಒಳ್ಳೆದು ಹೇಯ್ದ° ರಂಗಣ್ಣ

  5. ಪಾತಾಳಗರಡಿಯ ಬಗ್ಗೆ ಅರಡಿಯದ್ದವಕ್ಕೆ ಅರಡಿತ್ತ ಹಾಂಗೆ ಮಾಡಿದ ಲಕ್ಷ್ಮಿ ಅಕ್ಕಂಗೆ ವಂದನೆಗೊ. ವಿಭಿನ್ನವಾದ ವಿಚಾರಂಗಳ ಬೈಲಿಂಗೆ ಕೊಡ್ತಾ ಇಪ್ಪದಕ್ಕೆ ಧನ್ಯವಾದಂಗೊ.

  6. ಪಾತಾಳಗರಡಿ ಮಹಾಭಾರತ ಕಾಲದ ನ೦ತ್ರಾಣದ್ದು ಹೇಳಿ ಕಾಣುತ್ತು.
    ಆ ಕಾಲಲ್ಲಿ ದರ್ಬೇಯನ್ನೆ ಒ೦ದರ ಹಿ೦ದೆ ಒ೦ದರ ಪ್ರಯೋಗಿಸಿ,ಬಾವಿಗೆ
    ಗುರ್ಮೆಗೆ ಬಿದ್ದ ಕೊಡಪಾನ ಚೆ೦ಡು ತೆಗವ ಕ್ರಮ ಇತ್ತಡ.
    ಮತ್ತೆ ಇದರಲ್ಲಿ ಪಳಗಿದವು,ಪಾರ೦ಗತರೂ ಕಮ್ಮಿ ಆದ ಕಾರಣ,
    ಬಿದ್ದ ಕಡ್ಯವ ತೆಗವಲೆ ಈ ಗರಡಿ ಉಪಯೋಗ ಆಗಿರೆಕ್ಕು.
    ಈಗ ರಾಟೆ ಅಲ್ಲದ್ದೇ, ಬಾವಿಯೇ ಇಲ್ಲದಿಪ್ಪಗ
    ಕೋ.ಚೆನ್ನಿಗರಿ೦ಗೆ ಈ ತಲೆ ಕೊರವ ವಿಸ್ಯ೦ಗಳೇ ನಾಸ್ತಿ.

  7. ಹೆಸರೇ ಹೇಳುವ ಹಾಂಗೆ ಬಾವಿ ಎಷ್ಟು ಆಳ ಇದ್ದರುದೆ [ ಪಾತಾಳದಷ್ಟು] ಬಿದ್ದ ವಸ್ತುವಿನ ಅದು ಹುಡ್ಕಿ ತೆಗೆತ್ತು. ಈಗಾಣ ಹಿಪ್ನಾಟಿಸಂ, ಮಂಪರುಪರೀಕ್ಷೆಗಳುದೆ ಒಂದು ರೀತಿಲಿ ಪಾತಾಳಗರಡಿಯೇ ಅಲ್ಲದಾ- ಸುಪ್ತಮನಸಿನಾಳಲ್ಲಿಪ್ಪದರ ಹೆಕ್ಕಿ ತೆಗವದಲ್ಲದಾ? ಪಾತಾಳಕ್ಕೆ ಇಣ್ಕಿ ನೋಡಿದ್ದು ಲಾಯ್ಕಾಯಿದು ಲಕ್ಷ್ಮಿಅಕ್ಕ.

  8. ಈ ಪಾತಳ ಗರಡಿ ಹೇಳುವ ಉಪಕರಣದ ಬಗ್ಗೆ ಆನು ಕೇಳುದು ಇದೇ ಮೊದಲು . ಹಾಂಗಾಗಿ ಇಲ್ಲಿ ಓದಿದ್ದು ಸಾಲದ್ದೆ ,ಪಾತಳ ಗರಡಿಯ ಹಾಂಗೆ ಯಜಮಾನ್ರತ್ತರೆ ಅದರ ಬಗ್ಗೆ ತನಿಖೆಯೂ ಮಾಡಿದ್ದಾತು . ಹೀಂಗಿಪ್ಪ ಸಾಮಾನುಗೊ ಇನ್ನು ಮುಂದೆ ಹೇಂಗೊ ಕಾಂಬಲೆ ಸಿಕ್ಕ . ಲಕ್ಷ್ಮಿಯಕ್ಕ , ಹಾಂಗಾಗಿ ನಿಂಗಳಲ್ಲಿ ಅದು ಇದ್ದರೆ ಆ ಪಾತಾಳ ಗರಡಿಯ ಫೋಟೋ ಹಾಕಿದರೆ ಎನ್ನ ಹಾಂಗಿಪ್ಪ ಕೇಳದ್ದೋರಿಂಗೆ , ನೋಡದ್ದೊರಿಂಗೆ ಎಲ್ಲೋರಿಂಗೂ ಭಾಷೆಯೊಟ್ಟಿಂಗೆ ಅದಕ್ಕೆ ಕಾರಣವಾದ ಸಾಧನ ದ ಬಗ್ಗೆಯೂ ಗೊಂತಕ್ಕು .

  9. ಲಕ್ಷ್ಮಿ ಅಕ್ಕನ “ಗಿಳಿ ಬಾಗಿಲಿಂದ” ಬಪ್ಪ ಶುದ್ದಿಗೊ ಸಂಗ್ರಹ ಯೋಗ್ಯ. ಇನ್ನಷ್ಟು ಅಪರೂಪದ ನುಡಿಗಟ್ಟುಗೊ ಬತ್ತಾ ಇರಲಿ.

  10. ಪಾತಾಳಗರಡಿ ಹೇದು ಹೇಳೋದು ಕೇಟಿದಷ್ಟೇ. ಎಂತ್ಸರದು ಹೇಳ್ಸು ಈಗಷ್ಟೇ ಗೊಂತಾತು. ಲಾಯಕ ಆಯ್ದು ಶುದ್ದಿ

  11. ಅವ/ಅದು ಒಕ್ಲೆ ಭಾರೀ ಉಶಾರಿ ಹೇದು ಹೇಳ್ತವು.ಇದರಲ್ಲಿ ಒಂದು ರೀತಿಯ ತಾತ್ಸಾರ ಭಾವನೆ ಕಾಣ್ತು.

  12. ಲಾಯ್ಕ ಆಯಿದು.ಪಾತಾಳ ಗರಡಿ ಬುದ್ಧಿ ಇಲ್ಲದ್ದರೆ ಪೋಲೀಸರಿಂಗೆ ಆರೋಪಿಗಳ ಹಿಡಿವಲೆ ಎಡಿಯ. ಸಂಶೋಧಕರಿಂಗೂ ಬೇಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×