Oppanna.com

ನಮ್ಮ ಭಾಷೆಲಿ ಮಲೆಯಾಳ

ಬರದೋರು :   ಗೋಪಾಲಣ್ಣ    on   17/04/2012    19 ಒಪ್ಪಂಗೊ

ಗೋಪಾಲಣ್ಣ

ಕೇರಳ ನಮ್ಮ ನೆರೆ ರಾಜ್ಯ,ಈಗ ಕಾಸರಗೋಡು ಕೇರಳದ ಭಾಗವೇ ಆದ್ದರಿಂದ ನಮ್ಮದೇ ರಾಜ್ಯ ಹೇಳುಲಕ್ಕು.ಮಲೆಯಾಳ,ಕನ್ನಡ,ತುಳು ಸೋದರ ಭಾಷೆಗೊ.ನಮ್ಮ ಭಾಷೆ[ಹವ್ಯಕ] ಕನ್ನಡ ಜನ್ಯ,ಆದರೆ ತುಳು-ಮಲೆಯಾಳ ಭಾಷೆಗಳ ಪ್ರಭಾವ ಅದರ ಮೇಲೆ ಆಯಿದು.ಬಹುಶಃ ನಮ್ಮ ಅಜ್ಜಂದ್ರು ಸುಮಾರು ಜೆನ ಮಲೆಯಾಳದ ಊರುಗೊಕ್ಕೆ ಶಾಂತಿ ಮಾಡುಲೆ[ದೇವಸ್ಥಾನದ ಪೂಜಾಕಾರ್ಯಕ್ಕೆ]ಹೋದ ಕಾರಣ,ನಮಗೆ ಮಲೆಯಾಳದ ಸಂಪರ್ಕ ಆತು.ಈಗಲೂ ಹಾಂಗೆ ಹೋದವರ ವಂಶಸ್ಥರು ತೆಂಕಲಾಗಿ ಬಾಕಿ ಆದವು,ಶುದ್ಧ ಮಲೆಯಾಳಿಗಳೇ ಆಗಿ ಹೋಯಿದವು.ಆದರೂ ಅವು ತುಂಬಾ ಜೆನ ಅವರ ಮೂಲವ ಮರೆದ್ದವಿಲ್ಲೆ.ನಮ್ಮ ಊರಿಂಗೆ ಬಂದು ನಮ್ಮ [ಅವರ ಪೂರ್ವಜರ]ದೈವ ದೇವರುಗೊಕ್ಕೆ ಭಕ್ತಿಪೂರ್ವಕ ಕೊಡುತ್ತದರ ಕೊಟ್ಟು,ಪ್ರಸಾದ ತೆಕ್ಕೊಂಡು ಹೋವುತ್ತವು.ಅವರ ನಿಜವಾಗಿ ಮೆಚ್ಚಲೇ ಬೇಕು.
ಈಗ,ನಮ್ಮ ಭಾಷೆಲಿ ಇಪ್ಪ ಮಲೆಯಾಳ ಶಬ್ದಂಗಳ ಪಟ್ಟಿ ಮಾಡುವೊ.[ಮುಖ್ಯವಾಗಿ ಕುಂಬಳೆ ಸೀಮೆಲಿ ಇಪ್ಪ ಭಾಷೆಲಿ]

  1. ನಿನಗೆ ಆನು ಹೇದ್ದದು ಕೇಟತ್ತೊ[-ಕೇಟ್ಟೊ=ಕೇಳಿತ್ತೊ]
  2. ದಾರಿಲಿಡೀ ಕಸ್ತಲೆ,ಮಿನ್ನಂಪುಳು ಮಾತ್ರ ಕಂಡೊಂಡಿತ್ತು[ಮಿನ್ನಂಪುಳು=ಮಿಂಚುಹುಳು]
  3. ಮದುವೆ ಭಾರೀ ಗೌಜಿ,ಹೋಳಿಗೆಯ ನಾಕು ನಾಕು ಸರ್ತಿ ಬೆಲಕ್ಕಿದವು[ಬೆಲಕ್ಕು=ವಿಳಿಕ್ಕ್ ಆಗಿಕ್ಕೊ ತೋರುತ್ತು,ಬೇಕೊ ಬೇಕೊ ಹೇಳಿ ಎಲ್ಲರ ಹತ್ರೆಯೂ ಕೇಳಿ ಬಡಿಸಿದವು,ವಿಚಾರಣೆ ಮಾಡಿದವು ಹೇಳಿ ತಾತ್ಪರ್ಯ]
  4. ಅಯ್ಯೋ,ಹಪ್ಪಳ ಮಾಡೆಕಾರೆ ಸುಮಾರು ಹೊತ್ತು ಮೆನಕ್ಕೆಡೆಡದೊ[ಮೆನಕ್ಕೆಟ್ಟ್=ತುಂಬಾ ಹೊತ್ತು ಒಂದೇಕೆಲಸಲ್ಲಿ ಸಮಯ ವ್ಯಯಿಸಿ ,ಶ್ರಮ ಪಡುದು]
  5. ಮಾಣಿ ಸುಮಾರು ಹೊತ್ತು ಕೂಗಿದ,ಈಗ ತೆಳಿವಾಡು ಆತು[ತೆಳುತ್ತ್=ತಿಳಿಯಾಯಿತು,ಸಮಾಧಾನ ಆಯಿತು,ಹಳೆ ಕನ್ನಡಲ್ಲೂ ಈ ಪ್ರಯೋಗ ಇದ್ದು ತೋರುತ್ತು,ಮಲೆಯಾಳ ಆಡು ಭಾಷೆಲಿ ಈ ಪ್ರಯೋಗ ಇದ್ದು]
  6. ಕೋಪ ಬಂದಪ್ಪಗ ಪಾತ್ರೆ ಎಲ್ಲಾ ಬಲುಗಿ ಇಡುಕ್ಕಿದ.[ವಲಿಕ್ಕ್=ಎಳೆವದು]
  7. ಬಸ್ಸಿಂಗೆ ಕಾಸರಗೋಡು ಬಸ್ ಸ್ಟಾಂಡಿಲಿ ಅರ್ಧ ಗಂಟೆ ಮೆನಕ್ಕಾಡು ಇದ್ದು[ಇಲ್ಲಿ ಮೆನಕ್ಕಾಡು ಹೇಳುದು ವಿರಾಮ ಹೇಳುವ ಅರ್ಥಲ್ಲಿ,ಗಮನಿಸಿ]
  8. ಅವ ಒಬ್ಬ ಚೂಡ[ಚೂಡ್=ಬಿಸಿ,ಹುಚ್ಚಿಂಗೆ ಪರ್ಯಾಯವಾಗಿ ಇಲ್ಲಿ ಪ್ರಯೋಗ ಆಯಿದು]

ಹೀಂಗೆ ನಿಂಗೊಗೆ ನೆಂಪಾದ್ದರ ಬರೆಯಿ,ಪಟ್ಟಿಯ ಬೆಳೆಸುವೊ..

19 thoughts on “ನಮ್ಮ ಭಾಷೆಲಿ ಮಲೆಯಾಳ

  1. ನಿಮ್ಮ ಅನಿಸಿಕೆಗೆ ಧನ್ಯವಾದ.

  2. story concept super. but study saladu…, kanhangadina kadeya havyaka bashe kelekku…!!! bashe bashegala samyogadindale basheya belavanige. gopalanna nimma hudukatakke abhinandane. munduvaresi…dakhaleekarisi…

  3. ಗೋಪಾಲಣ್ಣನ ಸುದ್ದಿ ಲಾಯಕಾಯಿದು. ನಮ್ಮ ಭಾಷೆಲಿ ( ಹೆಚ್ಚು ಸಿಕ್ಕುವದು ಕು೦ಬಳೆ ಸೀಮೆಲಿ ಅಲ್ಲದಾ?) ಮಲೆಯಾಳ + ತುಳು ಭಾಷೆಯ ಶಬ್ದ೦ಗೊ ಬೇಕಾಷ್ಟು ಸೇರ್ಯೊ೦ಡಿದಣ್ಣ. ಇದರ ಸರಿಯಾಗಿ ಬೆಣಚ್ಚಿ೦ಗೆ ತ೦ದು, ಗುರ್ತ ಮಾಡ್ತ ಕೆಲಸಕ್ಕೆ ನಿ೦ಗೊ ಇಳ್ದದು ನೋಡಿ ಕೊಶಿಯಾತು.ಬಿಡದ್ದೆ ಮು೦ದುವರ್ಸಿ.ಇದರ ಎದಕ್ಕಿಲ್ಲಿ ಒರು ಸ೦ಶಯ೦ —
    ಮಿನ್ನ೦ಪುಳು , ಮೆನಕ್ಕಡು ಈ ಎರದರ ಮೂಲದ ಬಗಗೆ ಇನ್ನೂದೆ ಚಿ೦ತನೆ ಮಾಡೆಕೋ? ಹೇದು.” ಮಿನುಗು’ ಇದು ದ್ರಾವಿಡ ಮೂಲದ್ದು. ಹುಳು (ಪುಳು>ಹುಳು)ವಿ೦ಗೆ ಮಲೆಯಾಳಲ್ಲಿ ‘ ಪುದು ‘ ಹೇಳುತ್ತವು. ಈ ಎರಡು ಶಬ್ದ೦ಗೊ ತುಳುವಿಲ್ಲಿಯೂ ಕಾ೦ಬಲೆ ಸಿಕ್ಕುತ್ತನ್ನೆ. ಬೆಲಕ್ಕು,ಶಬ್ದವುದೆ ತುಳುವಿಲ್ಲಿರೆಕಲ್ಲದೊ?
    ಅವನ್ ಎ೦ದೆ ಸ೦ಚಿಯೆ ವಲ್ಚೆಡ್ತು.( ವಲಿಚು>ಬಲಿಚು ಆಗಿ ಅದರಿ೦ದ “ಬಲುಗು” ಹೇಳುವ ರೂಪ ಬಪ್ಪಲೆಡೆಯಿದ್ದು.)
    ಎ೦ಗಳ ನೆರೆಕರೆ ತರವಾಡಿಲ್ಲಿ ಪ್ರಶ್ನೆ ಸುರುವಾಗಿ, ನಾಳೆಯಾಣ “ತೆಳಿವಾಡು” ರಾಶಿಗೆ ಸುರುವಡ.
    ಇಲ್ಲಿ ತೆಳಿವಾಡು ಹೇಳುವ ಶಬ್ದ ಸಮಾಧಾನ, ಪರಿಹಾರ ಹೇಳುವ ಅರ್ಥಲ್ಲಿ, ನಮ್ಮ ಆಡುಭಾಷೆಲಿ ಪ್ರಯೋಗ ಆಗ್ಯೊ೦ದಿದ್ದು ಹೇಳ್ಲಕ್ಕಲ್ಲದೋ?
    ಅಣ್ಣಾ, ಎನಗನ್ಸುವದರ ಬರದ್ದೆ.ಇದು ನಿರ್ಣಯ ಏನೂ ಅಲ್ಲ.ಈ ವಿಷಯ೦ಗೊ ಎಲ್ಲ ಹೇ೦ಗೆ ಹೇದರೆ ಹಾಲಿ೦ದ ತುಪ್ಪ ತೆಗದಾ೦ಗೆ! ಒಟ್ಟಾರೆ ” ಶೇಷ೦ ವಿದ್ವದ್ಭಿಃ ಚಿ೦ತನೀಯ೦.”ನಿ೦ಗಳ ಈ ಸತ್ಕಾರ್ಯಕ್ಕೆ ಧನ್ಯವಾದ. ಮತ್ತೆ ಕಾ೦ಬೊ; ನಮಸ್ತೇ….

    1. ಧನ್ಯವಾದ. ಇಂತಾ ವಿಷಯ ಚರ್ಚಿಸಿ ಅಪ್ಪಾಗ ಹೊಸ ವಿಷಯ ಹೊಳೆತ್ತು.

  4. ಗೋಪಾಲಣ್ಣನ ಸುದ್ದಿ ಲಾಯಕ ಇದ್ದು,ಅದರಲ್ಲಿ ೩ರಲ್ಲಿ ಬೆಲಕ್ಕು ಮಲಯಾಳದ ವಿಳಂಬು/ಬಳಂಬು ಶಬ್ದಂದ ಬಂದದಾಗಿಕ್ಕೋ? ವಿಳಿಕ್ಕ್ ಹೇಳಿದರೆ ದಿನಿಗೋಳ್ದ್ಸು ಹೇಳಿ ಅರ್ಥ

    1. ತಿರಪೊರಪಾಟ್ಟ್=ತೆರೆ ಪೊರಪಾಡು[ಇದು ಕಥಕಳಿ ಮತ್ತೆ ಯಕ್ಷಗಾನಲ್ಲಿ ಉಪಯೋಗ ಅಪ್ಪ ಶಬ್ದ.]ಬರೆದ್ದದು ನೋಡಿ ಖುಶಿ ಆತು.

  5. ಓದಿ ಖುಷಿ ಆತು… ಹೀಂಗಿದ್ದ ಶಬ್ದಂಗೋ ಎಷ್ಟುದೆ ಇದ್ದು… ಪಟ್ಟಿ ಮಾಡುಲೆ ಈಗ ನೆನಪಾವುತ್ತಾ ಇಲ್ಲೇ…

  6. ನಮ್ಮ ಭಾಷೆಲಿ ಹೀಂಗೆ ಸುಮಾರು ಪ್ರಯೋಗಂಗೊ ಸಿಕ್ಕುತ್ತು , ಮಲಯಾಳ ಭಾಷೆಯ ಪ್ರಭಾವ ಇಪ್ಪ ಪದಂಗೊ. ಈ ಶುದ್ದಿ ಲಾಯ್ಕಾಯ್ದು…

  7. ಇಲ್ಲೆ ಕೂಡಿ ಇದು ಬರದ್ಸು ನಲ್ಲದಾಯ್ದು.

  8. ಕೆಲಸಕ್ಕೆ ಕೊಯಂಗುವದು,
    ಕನ್ನಿಕೊಟ್ಟಗೆಲಿ ಅಡಿಗೆ ಮಾಡುತ್ತದು,
    ಮೋನು ಹೇಳಿ ಮಗನ ದಿನಿಗೇಳುತ್ತದು,
    ಚೊರೆ ಮಾಡುತ್ತದು, ಚದಿ ಮಾಡ್ತದು
    ಎಲ್ಲವುದೆ ಈ ಕಣಕ್ಕಿಲ್ಲೇ ಬತ್ತು ಅಲ್ಲದೊ ಗೋಪಾಲಣ್ಣ ? ಇನ್ನು ಕೆಲವು ಶಬ್ದಂಗೊ ನೆಂಪಾವ್ತಿಲ್ಲೆ.

  9. ತೋಳೆ =ಜೆರಳೆ
    ಮೋಳು =ಮಗಳು
    ಕೇರ್ಪು = ಎ೦ಚು
    ಚೆರ್ಪು = ಚಪ್ಪಲಿ
    …..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×