- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಒಪ್ಪಣ್ಣನ ಬೈಲು ಹವ್ಯಕ ವೆಬ್-ಸೈಟ್ ಕಳುದ ಹನ್ನೊಂದು ವರ್ಷಂದ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಡ್ತಾ ಇದ್ದು. www.oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳ್ತ ಹೆಸರಿಲ್ಲಿ ಮಾನ್ಯತೆ ಹೊಂದಿದ ಸಂಸ್ಥೆ ಆಯಿದು. ಕಳುದ ಒಂಬತ್ತು ವರ್ಷಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಲೇ ಆಯೋಜನೆ ಅಪ್ಪ ವಿಷು ವಿಶೇಷ ಸ್ಪರ್ಧೆ ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ಕೊಟ್ಟಿದು.
ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ
“ವಿಷು ವಿಶೇಷ ಸ್ಪರ್ಧೆ – 2021” ಆಯೋಜಿಸಿದ್ದು.
ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…
ವಿಷು ವಿಶೇಷ ಸ್ಪರ್ಧೆ – 2021 ಸ್ಪರ್ಧಾ ವಿವರಂಗೊ:
ಪ್ರಬಂಧ:
ವಿಷಯ : “ಕೋವಿಡ್ ಕಾಲದ ನಂತರದ ಜೀವನಶೈಲಿ”
750 ಶಬ್ದಕ್ಕೆ ಸೀಮಿತಗೊಳಿಸಿ
ಕಥೆ :
ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಂಗೊ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಕ್ಕೆ ಸೀಮಿತಗೊಳಿಸಿ
ಕವಿತೆ:
ವಿಷಯ: ''ಕಳೆದೊಂದು ವರ್ಷ"
30 ಸಾಲುಗೊಕ್ಕೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ.
ಹಾಸ್ಯ ಬರಹ ಸ್ಪರ್ಧೆ:
ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗೊ ಬೇಡ)
500 ಶಬ್ದಕ್ಕೆ ಮಿತಿಗೊಳುಸಿ.
ನಿಯಮಂಗೊ:
ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಲಿಯೇ ಇರೇಕು.
ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆ ಬಿಂಬಿಸುವ ಬರಹಂಗೊಕ್ಕೆಆದ್ಯತೆ.
ಸ್ಪರ್ಧೆಯ ಯಾವುದೇ ಬರಹ / ವ್ಯಂಗ್ಯ ಚಿತ್ರ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
ಎಲ್ಲಾ ಬರಹ / ವ್ಯಂಗ್ಯಚಿತ್ರಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ದ್ದೇ ಆಗಿರ್ತು.
ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
ಪ್ರತಿ ವಿಭಾಗಲ್ಲಿಯೂ ಪ್ರಥಮ – ದ್ವಿತೀಯ ಎರಡು ಬಹುಮಾನಂಗೊ ಇರ್ತು. ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವೂ ಇರ್ತು.
ವಿಷು ವಿಶೇಷ ಸ್ಪರ್ಧೆ - 2020 ರಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ವಿಜೇತರು ಈ ಸರ್ತಿ ಅದೇ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಂಗಿಲ್ಲೆ.
ಸ್ಪರ್ಧೆಯ ಎಲ್ಲ ವಿಭಾಗಂಗಳಲ್ಲೂ ಒಬ್ಬಂಗೆ ಭಾಗವಹಿಸುಲೆ ಅವಕಾಶ ಇದ್ದು.
ಬಹುಮಾನ ವಿಜೇತರ ವಿವರಂಗಳ https://oppanna.com ಅಂತರ್ಜಾಲಲ್ಲಿ ಪ್ರಕಟಿಸುತ್ತು.
ಹಸ್ತಪ್ರತಿಗಳ ಕಳುಸುದಾದರೆ ಕಡ್ಡಾಯ A4 ಕಾಗತಲ್ಲಿ ಇರೇಕು.
ಭಾಗವಹಿಸಲೆ ಕೊನೆಯ ದಿನಾಂಕ: 30/04/2021 (ಕೊನೆಯ ದಿನಾಂಕವ ಮುಂದೂಡಿದ್ದು 15/05/2021 ರ ಒಳ ತಲಪುತ್ತ ಹಾಂಗೆ ಕಳುಸಿ)
ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಕಡ್ಡಾಯವಾಗಿ ಪ್ರತ್ಯೇಕ ಕಾಗದಲ್ಲಿಯೇ ಬರದು ಬರಹದ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
c/o “ಶ್ರೀಕರ ಅಸೋಸಿಯೇಟ್ಸ್”,
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ,
ಗಾಂಧಿ ನಗರ, ಸುಳ್ಯ – 574239.
ಮಿಂಚಂಚೆ ವಿಳಾಸ:
editor@oppanna.com
ಹೆಚ್ಚಿನ ಮಾಹಿತಿಗಾಗಿ :
9901200134, 9449806563, 8547245304, 9448271447, 9448472292
ಧನ್ಯವಾದಂಗೊ 🙏
ಆನು ನಿಂಗಳ ಬಳಗದ ಅಭಿಮಾನಿ.ಸಾಧನಗೆ ಶರಣು. ಕವನ,ಲೇಖನಬರವ ಮನಸ್ಸಾಯಿದು ಬೇಗ ಪೂರೈಸಿ ಮಿಂಚಂಚೆ ಮಾಡುವೆ .ಪಟ ಬೇಡಲ್ದಾ.
ಮಿಂಚಂಚೆಲಿ ಕಥೆ, ಬರಹ ಕಳುಸುತ್ತರೆ ಹೆಸರು, ವಿಳಾಸ ಎಲ್ಲ ಒಟ್ಟಿಂಗೆ ಕಳುಸುಲಕ್ಕು