ಒಂದು ಲೆಕ್ಕ ಹೇಳ್ತೆ …ಉತ್ತರ ಗೊಂತಾದರೆ ಹೇಳಿ ಆತೋ..ಏಯ್ಯ್..
3 ಜನ 3 ಬಾಡಿಗೆ ಮನೆಲಿ ಇರ್ತವಡ್ಡ ..
ಪ್ರತಿ ಒಬ್ಬಂಗೂ 25 ರುಪಾಯಿ ಬಾಡಿಗೆ…ಯಾವಾಗಲೂ ಬಾಡಿಗೆ ಕೊಡದ್ದ ಜನಂಗೋ…
ಹಾಂಗೆ…owner ಒಪ್ಪಣ್ಣನ ಕಳ್ಸುತ್ತ ಅಡ್ಡ ..ಎಲ್ಲೋರುದೆ ಸರಿಯಾಗಿ 25 ರುಪಾಯಿ ಬಾಡಿಗೆ ಕೊಡ್ತವು…
ಅದರ ಒಪ್ಪಣ್ಣ ಹೋಗಿ owner ಗೆ ಕೊಡ್ತ….
owner ಗೆ ಖುಷಿ ಆಗಿ 5 ರುಪಾಯಿ ವಾಪಾಸ್ ಒಪ್ಪಣ್ಣoಗೆ ಕೊಡ್ತ ..
ಒಪ್ಪಣ್ಣ ಭಾರೀ ಒಳ್ಳೆಯವ …ಹಂಗಾಗಿ ಒಂದೊಂದು ರುಪಾಯಿ ಎಲ್ಲೋರಿಂಗೂ ವಾಪಾಸ್ ಕೊಡ್ತ ..ಈಗ ಒಪ್ಪಣ್ಣ ನ ಕೈಲಿ 2 ರುಪಾಯಿ ಒಳುದತ್ತಲ್ಲ..ಅದರ 2 ರೂಪಾಯಿಗೆ ಕಡ್ಲೆ ತೆಗದು ತಿಂತ..
ಈಗ 24 ರುಪಾಯಿ 3 ಜನ ಕೊಟ್ಟ ಹಾಂಗೆ ಆತು..(ಎಂತಕೆ ಹೇಳಿರೆ UGG Stiefeletten günstig 25 ರುಪಾಯಿ ಲೆಕ್ಕದ ಬಾಡಿಗೆ
ಕೊಟ್ಟದರಲ್ಲಿ ಒಪ್ಪಣ್ಣ ವಾಪಾಸ್ 1 ರುಪಾಯಿ ಕೊಟ್ಟಿದ)
ಹಂಗಾರೆ 24×3 =72 ..ರುಪಾಯಿ ..ಆತು ..
2 ರುಪಾಯಿಗೆ ಒಪ್ಪಣ್ಣ ಕಡ್ಲೆ ತಿಂದ…ಅಷ್ಟಪ್ಪಗ 72+2 =74 ರುಪಾಯಿ ..ಆತು ..
ಒಳುದ 1 ರುಪಾಯಿ ಎಲ್ಲಿ ಹೋತು…?!!!!???
ಬರದೋರು : ಕಳಾಯಿ ಗೀತತ್ತೆ on 30/04/2010 20 ಒಪ್ಪಂಗೊ
20 thoughts on “ಲೆಕ್ಕಕ್ಕೆ ಉತ್ತರ ಹೇಳ್ತಿರೋ..”
Comments are closed.
Geethatte ellorannude manga maadittu. Adakke uttara gontiddu.
Idella mathematical trick ashte… There is no real answer for this…
In one angle – Divya’s calculation is currect….
U can modify the question to say that 3Rs is more. How?
Here we go….
Say Owner gives 5Rs back to oppanna.
One of the rented house person is Oppannas close friend, so he
gives him 1Rs back. That means he actually paid 24Rs.
Now other 2 paid 25Rs and 4Rs with oppanna.
25*2 + 24 + 4 = 78.
HOW????!!!!
Geethathe please dont say “Question is not answer for Question”
What i really want to tell is “This is just a mathematical trick”.
ಕೊಣಿವ ಜಾಗೆಲೆ ಕೊಣಿಯೆಕ್ಕನ್ನೆ ಅತ್ತೇ…. ಎಲ್ಲ ದಿಕ್ಕೆಲಿ ಕೊಣಿವಲೆ ಅವ್ತಾ????
ಹಮ್ ಅದೂ ಅಪ್ಪು….
idu ninna katheye idda hangiddu…. elliyadaroo mangloorili tiruguva uduri hodikku… darili sama madi hudki nodu….
ಅದೇ ಕೊಣಿವಲೆ ಎಡಿಯದ್ದವು ನೆಲ ಸರಿ ಇಲ್ಲೆ ಹೇಳಿದವಡ್ಡ…;) 😉
Geetha atte…
lekka ella sari iddu….badige ge ippavu 24 rupaayi kottahange aatu… aadare owner oppanna kotta 75 Rs li 5 Rs vapas kotta karana lekka raja dada bada aada hange kambadu atte… lekka hakuvaga badige rupaayi matra lekka hakidare sala oppanna tinda kadle ya kharchnnude lekka hakekku atte…
Actually 25*3= 75
But 75 -5 =70
hangagi badige kottadu 70/3 =23.3333 ra hange aatu
matte 1 Rs vapas kottakarana 23.333+1=24.3333 aatu
24.333*3 =72.99999 ==73
so 75-73= 2RS which is equal to 2Rs in which oppana ate kadle !!!!
eega lekka sari aata atte..!!!!?????
ಇದು ಲೆಕ್ಕ ಸರಿಯೇ…
ಒಂದು ರೀತಿಲಿ ಮಾಡಿದ್ದು…
70 ಕ್ಕೆ ಭಾಗಿಸಿ ಮಾಡಿದ್ದು ..ಎಡಿಗಾರೆ 24ಕ್ಕೆ ಗುಣಿಸಿ ಸರಿ ಮಾಡು…
ಭಾಗಿಸುದು ಗುಣಿಸುದರ… ವಿರುದ್ಧ ಹೇಳ್ತವು ..ಭಾಗಿಸಿ ಲೆಕ್ಕ ಸರಿ ಮಾಡ್ಲೆ ಏಡಿಗಾರೆ 24 ಕ್ಕೆ ಗುಣಿಸಿ ಸರಿ ಮಾಡಿ ನೋಡ..:P
ಆಆಆಆಆಆಆಆ…….
ಲೆಕ್ಕ ಹೇಳಿರೆ ಆವಳಿಗೆ ಬತ್ತು, ಮದಲಿಂದಲೇ ಹಾಂಗೆ!
ಎಷ್ಟು ಪೈಸೆ ಬೇಕಾರು ಒಳಿಯಲಿ, ಚೋಕುಲೇಟು ಸಿಕ್ಕಿರೆ ಸಮ!
ಒಪ್ಪಣ್ಣ ಕಡ್ಲೆ ತಿಂದದರ ಮಾತ್ರ ಹೇಳಿದ್ದ. ಒಂದು ರೂಪಾಯಿಯ ಚಾಕ್ಲೇಟ್ ತಿಂದದರ ಹೇಳದ್ದೇ ಇಷ್ಟು ತೊಂದರೆ ಆದ್ದು ಇದ
ಹಳೆಮನೆ ಶರ್ಮಪ್ಪಚ್ಚಿ ಲೆಕ್ಕಲ್ಲಿ ಭಾರಿ ಉಶಾರಿ ಇದ್ದೊವು ಹೇಳಿ ಗೊತಾತದ.೨೫ ರುಪಾಯಿಗೆ ಬಾಡಿಗೆ ರೂಮು ಎಲ್ಲಿದ್ದು ಹೇಳಿ ಹೇಳಿದರೆ ಉಪಕಾರ ಆವುತ್ತಿತ್ತನ್ನೆ !! ಲೆಕ್ಕ ಲಾಯಿಕಿದ್ದು. ಅಜಕ್ಕಳ
25 ರೂಪಾಯಿಗೆ ಅಲ್ಲದ್ರೂ 25$ ಗೆ ಮನೆ ಸಿಕ್ಕುಗನ್ನೇ…:P
ಒಂದು ರುಪಾಯಿ ಒಳುದರುದೆ ಒಪ್ಪಣ್ಣ ಒಂದು ಚಾಕ್ಲೇಟು ಜಾಸ್ತಿ ತಿಂತಿತ, 🙂
sorry..ಒಪ್ಪಣ್ಣ … 🙁
ಏ ಅತ್ತೆ ಹೇಳಿ ಆಯೆಕ್ಕದು .. 😉
ಏ ಒಪ್ಪಣ್ಣ,
ಒಳುದ 1 ರುಪಾಯಿ ಎಂತ ಆತು ಹೇಳಿ ಎನಗೆ ಗೊಂತಿಲ್ಲೆಪ್ಪ… 😉
1 ರುಪಾಯಿ ಎಂತ ಮಾಡಿದೆ ಹೇಳಿ ಒಪ್ಪಣ್ಣನ ಹತ್ರೆಯೇ ಕೇಳೆಕ್ಕಷ್ಟೇ… 😉
24 ರೂಪಾಯಿ ಹಾಂಗೆ 3 ಜನ ಕೊಟ್ಟದು ಒಟ್ಟು 72 ರೂ.
ಆದರಲ್ಲಿ ಒಪ್ಪಣ್ಣ owner ಗೆ ಕೊಟ್ಟದು 70 ರೂಪಾಯಿ (75 ಕೊಟ್ಟಪ್ಪಗ 5 ವಾಪಾಸ್ ಬಂತಲ್ಲದ)
ಕಡ್ಲೆಗೆ ಕೊಟ್ಟದು 2 ರೂಪಾಯಿ. ಅಲ್ಲಿಗೆ 72ಕ್ಕೆ 72 ಸಮ ಆತಲ್ಲದ?
ಒಂದು ರೂಪಾಯಿ ಎಲ್ಲಿದ್ದು?
ಇನ್ನೊಂದು ರೀತಿ
ಒಟ್ಟು collection: 75 ರೂ.
Owner ಗೆ ಕೊಟ್ಟದು: 75-5= 70 ರೂ
ಬಾಡಿಗೆಯವಕ್ಕೆ ವಾಪಾಸ್ ಕೊಟ್ಟದು: 1X3= 3
ಕಡ್ಲೆಗೆ ಕೊಟ್ಟದು: 2 ರೂ
Total= 70+3+2=75
ಅಲ್ಲ ಅಪ್ಪಚ್ಚಿ ..
24X3 =72 ಮತ್ತೆ ಖರ್ಚು 72+2=74 ..ಈಗ ಒಟ್ಟು 75 ಕ್ಕೆ ಏಕೆ ಸರಿ ಅವ್ತಿಲ್ಲೆ 1 ಒಳಿವದು ಏಕೆ …!!!
ಇದೇ ಲೆಕ್ಕವ ಸರಿ ಮಾಡಿ ಹೇಳಿ…ಅಪ್ಪಚ್ಚಿ…
ಗೀತಕ್ಕ:
ಒಟ್ಟು ಖರ್ಚು ಆದ್ದೇ 72 ರೂಪಾಯಿ ಅಲ್ಲದೋ? ಅದಕ್ಕೆ 2 ಸೇರುಸುವದು ಎಂತಕೆ?
ಅದರಲ್ಲಿ 70 ಬಾಡಿಗೆಗೆ, 2 ಕಡ್ಲೆಗೆ.
ಅಲ್ಲ ಬಾಡಿಗೆ 70 ಅಲ್ಲ ..ಅದು 72 ಅಯೆಕ್ಕು ..24×3=72
2 ಕಡ್ಲೆ …ಅದುದೆ ಖರ್ಚು ..72+2 ಹಂಗಾಗಿ ..
ಗೀತಕ್ಕ,
ಜಮಾ ಮತ್ತೆ ಖರ್ಚಿನ ಲೆಕ್ಕ ಬರೆವಾಗ ಹೇಂಗೆ ಹೊಂದುಸುವದು ಹೇಳಿ ಗೊಂತಾದರೆ ಕಷ್ಟ ಆಗ. ಬೇಂಕಿನ ಗೋಪಾಲ ಮಾವ ಇದಕ್ಕೆ ಸರಿಯಾದ ಜೆನ.
ಲೆಕ್ಕ ಹಾಕುವಗ ಒಂದೋ ಒಪ್ಪಣ್ಣನ ಸೈಡಿಂದ ನೋಡೆಕ್ಕು, ಇಲ್ಲದ್ದರೆ ಬಾಡಿಗೆದಾರರ ಸೈಡಿಂದ ನೋಡೆಕ್ಕು. ಎರಡನ್ನೂ ಮಿಕ್ಸ್ ಮಾಡ್ಲೆ ಆಗ.