Oppanna.com

ಇದಾರು – 13

ಬರದೋರು :   ಶುದ್ದಿಕ್ಕಾರ°    on   26/05/2011    20 ಒಪ್ಪಂಗೊ

ಓ ಮೊನ್ನೆ ಕೆಂಪು ಮುಂಡಾಸು, ಬಾಯಿಲಿ ಎಲೆಹಾಕಿಯೊಂಡು ವಸ್ತ್ರ ಒಗದವು ಆರು ಹೇಳಿದ್ದಿ.

ಜಾಲ್ಸೂರು – ಮುಳ್ಳೇರಿಯ ಹೊಡಂಗೆ ಹೆರಟಪ್ಪಗ ಹೇಳಿ ಬಹುಮಾನ ಕೊಡ್ಸುವೊ°

ಈಗ ಇನ್ನೊಂದು ಪ್ರಶ್ನೆ.

ಕಳಕಳ ಅಂಗಿ ಹಾಕಿಯೊಂಡು ಸಿನೆಮಾ ಶೈಲಿಲಿ “ಆಗುಂಬೆಯಾ … ಪ್ರೇಮ ಸಂಜೆಯಾ…  ಮರೆಯಲಾರೆ ನಾನು ಎಂದಿಗೂ… ” ಹೇಳಿ ಹಾಡಿಯೊಂಡಿಪ್ಪ ಈ ಜೆನ ಆರು ಹೇಳಿ ನೋಡಾ°!

ನಿಂಗಳ ವಿವೇಕ, ವಿವೇಚನೆಗಳ ಉಪಯೋಗ್ಸಿಕೊಂಡು ಉತ್ತರ ಹೇಳಿ.

ಸರಿ ಉತ್ತರ ಹೇಳಿದವಕ್ಕೆ “ಉತ್ತರ ಕುಮಾರನ ಪೌರುಷ” ಪುಸ್ತಕ ಸಿಕ್ಕುತ್ತಡ

20 thoughts on “ಇದಾರು – 13

  1. ರಘುವಣ್ಣ—
    “ಉತ್ತರ ಕುಮಾರನ ಪೌರುಷ” ಪುಸ್ತಕದ ಪರಿಚಯ ಹೇಳ್ತೆ ಹೇಳಿ ತೆಕ್ಕು೦ಜ ಕುಮಾರ ಮಾವ೦ದು ಮತ್ತೆ ಸುದ್ದಿ ಇಲ್ಲೆನ್ನೇ.. ಎ೦ತ ವಿಷಯ?
    ಚಳಿಗೆ ಬನ್ಯಾನು ಹಾಕೊದೇಕಪ್ಪ?
    ಆರಾತು ಈ ಭಾವನೆಗಳ-ಚಿತ್ರಲ್ಲಿ ಇಪ್ಪೋರು? ಇದೆಲ್ಯಾತು?
    ಈ ಪ್ರಶ್ನೆಗೊಕ್ಕೆ ಉತ್ತರ ಕೊಟ್ಟಿಕ್ಕಿ 🙂

    1. ಹ್ಮ್,ಇದು ಆನೂ ತೆಕ್ಕು೦ಜ ಕುಮಾರ ಮಾವನೂ ಇಪ್ಪತ್ತು ವರುಷ ಹಿ೦ದೆ ಬೊ೦ಬಾಯಿಯ ಹತ್ತರೆ ‘ಮಾತೆರನ್’ ಹೇಳುವ ಗುಡ್ಡೆಗೆ ಪ್ರವಾಸ ಹೋಗಿಪ್ಪಗ ತೆಗದ ಪಟ ಹೇಳಿಯಪ್ಪಗ ಪ್ರಕರಣ ಮುಗಾತನ್ನೆ..

        1. ಅಲ್ಯಾಣ ಹವೆಗೆ ಮಾತೆ’ರನ್’ ಮಾಡುಗೊ ಹೇಳಿ ಸ೦ಶಯ.

      1. ಅದಾ, ಅದಾ, ಆನು ಗ್ರೇಶಿದ್ದು ಸರಿ ಆತಂಬಗ. ಸುರುವಿಂಗೆ ಒಪ್ಪ ಕೊಟ್ಟವ, ಮುಳಿಯ ರಘು ಭಾವ. ಅವ ಕರಿ ಬನಿಯನು ಹಾಕಿಯೊಂಡು, ಸರಿ ಗೊಂತಾವುತ್ತು. ಮತ್ತೆ ಎಡದಿಂದ ಬಲಕ್ಕೆ ಹೇಳಿ ವಿವರ ಒಂದಾರಿ ಕೊಟ್ಟಿಕ್ಕು ಭಾವಯ್ಯ.

        1. ಬೊಳು೦ಬು ಮಾವಾ,
          ಬಣ್ಣ ಬಣ್ಣದ ಅ೦ಗಿಲಿ ಮಿ೦ಚೊದು ತೆಕ್ಕು೦ಜ ಕುಮಾರ.ಬೆಳಿ ಬನಿಯನ್ನಿಲಿಪ್ಪವ ಹಾಸನದ ತೇಜಮೂರ್ತಿ,ಅ೦ಗಿ ಪೇ೦ಟಿಲಿ ಪಟ ತೆಗವವನ ಹೆದರ್ಸಿದ್ದು ಮೂಲ್ಕಿಯ ಸತ್ಯೇ೦ದ್ರ ಕಾಮತ್.ಇವು ಇಬ್ರೂ ಎನ್ನ ಇ೦ಜಿನಿಯರಿ೦ಗ್ ಕ್ಲಾಸ್ ಮೇಟುಗೊ.

  2. ನೀನೇ ಹೇಳಿಕ್ಕು ಶುದ್ದಿಕ್ಕಾರಾ.

  3. ಇದು ಆರು ಅನಿಲ ಕಪೂರನೋ? ಚೆ೦ದದ ನೆಗೆ! ಇದೆಲ್ಲಿ ತೆಗದ ಚಿತ್ರ? ಸುಳ್ಯದ ಗುಡ್ಡೆ ಕೊಡಿಲಿಯೊ? ಆರು ತೆಗದ್ದು?

    ಬೊಳು೦ಬು ಮಾವ ನಿ೦ಗಳ ಗುಮಾನಿ ಎ೦ತ? “ಅವ್ವು” “ಇವ”ಕ್ಕೆ ಎ೦ತಾಯೆಕ್ಕು? ಅಣ್ಣ ತಮ್ಮ೦ದ್ರೊ ಹೇ೦ಗೆ? ಏ?…

    ಆರಾತಿದು? ಹುಫ್….
    ಗೆ೦ಟ

  4. ಗಿರಿಕನ್ಯೆ ರಾಜಕುಮಾರನ ಹಾಂಗೆ ಕರಿ ಬನಿಯನು ಹಾಕಿ, ಇಬ್ಬರ ತೆಕ್ಕೆಗೆ ಹಾಕೆಂಡು ನೆಗೆ ಮಾಡಿದವಂಗುದೆ, ಸುರೂವಿಂಗೆ ಒಪ್ಪ ಕೊಟ್ಟವುಂಗುದೆ ಎಂತಾರು ಸಂಬಂಧ ಇದ್ದೊ ಹೇಳ್ತ ಗುಮಾನಿ ಎನ್ನದು.

  5. ಎನಗೆ ಆರನ್ನೂ ಗುರ್ತ ಸಿಕ್ಕುತ್ತಿಲ್ಲೆಪ್ಪ!
    ಈ ಪಟ ತೆಗದ್ದು ಎಲ್ಲಿ? ‘ಕುಮಾರ’ ಪರ್ವತಲ್ಲಿಯೋ? ಉಮ್ಮಪ್ಪ! ಆಚವ ಬರೀ ಚಡ್ಡಿ ಬನೀನಿಲ್ಲಿ ಇಪ್ಪದು ಕಾಂಬಗ ಭೂಕಂಪ ಅಪ್ಪಲ್ಲಿಂದ ಹೆದರಿ ಓಡಿಂಡು ಬಂದದೋ ಹೇಳಿ ತೋರ್ತು. (ಆದರೂ ಮುಳಿ ಮೀಸೆ ಎಡೇಲಿ ಸಣ್ಣಕೆ ನೆಗೆ ಇದ್ದಪ್ಪ)

  6. ಎನಗೆ “ಆಗುಂಬೆಯ ಪ್ರೇಮ ಸಂಜೆಯ” ಪದ್ಯ ಹೇಳಿದವನ ಗುರ್ತ ಇಲ್ಲೆ. ಆದರೆ ಮನ್ನೆ ಕುಲುಮನಾಲಿಗೆ ಹೋಗಿ “ಪ್ರೇಮಕಾಶ್ಮೀರ” ಹಾಡಿದ ಮಾಷ್ಟ್ರುಮಾವನ ಸಣ್ಣ ಮಗನ ಗುರ್ತ ಇದ್ದು. 🙂

  7. ಉಮ್ಮಪ್ಪ, ಆದರೆ ಆ ನೀಲಿ ಬನಿಯನ್ನು ಬರೀ ಚಡ್ಡಿ (ಎಬೀ) ಹಾಯ್ಕೊಂಡಿಪ್ಪ ಮನುಷ್ಯಂಗೆ ಚಳಿ ಆವ್ತಿಲ್ಯ ? ಪಟ ತೆಗವಲಾಪ್ಪಗ ಓಡಿ ಬಂದು ಕೂಡ ಹಾಂಗಿದ್ದು, ತಲೆ ಚೆಂಡಿಯೂ ಉದ್ದಿದ್ದವಿಲ್ಲೆ.

  8. ಅಪ್ಪು ಆ ಮನುಷ್ಯ ಎ೦ತರ ನೋಡಿ ನೆಗೆ ಮಾಡ್ತಾ ಇದ್ದೊವಪ್ಪ! ಒಳುದೊವ್ವೆಲ್ಲ ಗ೦ಭೀರವದನರಾಗಿ ಕೂದೊ೦ಡಿಪ್ಪಗ 🙂
    ಆರೋ ಸಿನೆಮಾ ಹೀರೋವಿನ ಹಾ೦ಗಿದ್ದನ್ನೆ, ಅ೦ಗಿ ಭಾರೀ ಲಾಯಕ್ಕ ಇದ್ದು.

    ನೀಲಿ “ಅ೦ಗಿ” ಜೆನವ ನಿಮಿಶಾ೦ಭಾ ದೇವಸ್ಥಾನದ ಹತ್ರೆ ನೋಡಿದಾ೦ಗಾವ್ತನ್ನೆ! ಓಡಿಗೊ೦ಡಿತ್ತಿದ್ದೊವ್ವು ಪಾರ್ಕಿಲಿ.

    ಬೆಳಿ ಅ೦ಗಿ ಜೆನ ಮೂಲ್ಕಿ ಹತ್ರೆ ಆನೂ ನೋಡಿದ್ದೆನೋಳಿ 😀

    ಎಡತ್ತಿ೦ದ ಎರಡನೆಯವ್ವು ವಿಷ್ಣುವರ್ಧನನ ಅಭಿಮಾನಿ ಇರೆಕ್ಕು! ಕಡಗ ಇದ್ದು 😛

    ಉಮ್ಮ ಗೊ೦ತಾತಿಲ್ಲೆ ಆರಪ್ಪಾ ಇವ್ವೆಲ್ಲ 😛

  9. ಓ ಆಚ ಎಡತ್ತಿಲಿ ಕೂದುಗೊ೦ಡಿಪ್ಪವು… 😀
    ಬೋಡಿ ಬಿಲುಡರ್(body builder) ನಾ ಎಲ್ಲಿಯೊ ಕ೦ಡಾಗೆ ಆವುತ್ತು… 😛
    ಏವ ಸಿನುಮಲ್ಲಿಯೊ, ಆಟಲ್ಲಿಯೊ.. ಉಮ್ಮಪ್ಪ.. ಮರದತ್ತು… 🙂
    ಅಷ್ಟು ಗೋಷ್ಟಿ ಆವುತ್ತಿಲ್ಲೆ.. 😉

    1. ಆಟಲ್ಲಿಯೋ… ಬಹುಶಃ ಕೊಡೆಯಾಲಲ್ಲಿ “ಮುಳಿ”ಗುಡ್ಡೆ ಹತ್ತರೆ ಆದ ಆಟಲ್ಲಿ ನೋಡಿದ್ದದ..
      ಕಳಕಳ ಅಂಗಿಯವನ ಆರು , ಎಂತ ಹೇಳಿ ಯೋಚನೆಲಿ “ತೇಕು”ಮುಳ್ಕು ಆದ್ದದೆ …

  10. ಬೇಕಾರೆ ಆನು “ಉತ್ತರ ಕುಮಾರನ ಪೌರುಷ” ಪುಸ್ತಕದ ಪರಿಚಯ ಹೇಳುವೆ.. ಈ ಜೆನ ಆರು ಹೇಳೆಕ್ಕಾರೆ ಕ್ಲೂ ಕೊಡೆಕ್ಕು.
    ನೀಲಿ ಬನಿಯನ್ನಿಲಿ ಇಪ್ಪ ಜೆನವೆ ಎಲ್ಲೋ ನೊಡಿದ ಹಾಂಗೆ ಆವುತ್ತು ಮಾರಾಯೆರೆ…! ನೆಂಪಾವುತಿಲ್ಲೆ.

  11. ಸ್ವಾಮಿಯೆ !
    ಎನಗೆ ಆ ಬೆಳಿ ಅ೦ಗಿಯವನ ಮೂಲ್ಕಿ ಹೊಡೆಲಿ ಎಲ್ಲಿಯೋ ನೋಡಿದ ಹಾ೦ಗಾವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×