Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಇದಾರು ಹೇಳ್ತ ಚೋದ್ಯಂಗಳ ಕೇಳ್ತದು ನಮ್ಮ ಬೈಲಿಲಿ ಎಲ್ಲೋರಿಂಗೂ ಅರಡಿಗು!
ಚೋದ್ಯಂಗಳ ಸಾಲಿಂಗೆ ಇದೊಂದು ಹೊಸ ಪ್ರಶ್ನೆ – ಇದೆಲ್ಲಿ?
ಇಲ್ಲಿ ಕೊಟ್ಟ ಪಟಲ್ಲಿ ಒಂದು ಹೋಟ್ಳಿದ್ದು. ಆ ಹೋಟ್ಳು ಎಲ್ಲಿಪ್ಪದು?
ಇದು ನಮ್ಮ ಬೈಲಕರೆ ಕೃಷ್ಣ ಭಾವನ ಹೋಟ್ಳು ಹೇಳಿ ಗ್ರೇಶಿಕ್ಕದ್ದೆ ನಮ್ಮ ಬೋಸಬಾವ!
– ಅದಲ್ಲ ಇದು.
ಸರಿ ಉತ್ತರ ಹೇಳಿದೋರಿಂಗೆ ಒಂದು ದೋಸೆಕಾಪಿ ಪ್ರೀ….!!! 🙂
ಸುಳುಹು(Clue):
- ಈ ಹೋಟ್ಳು ತೆಮುಳುನಾಡಿಲಿ ಇಲ್ಲೆ.
ಅದೆಲ್ಲ ಎಡಿಯ ದೋಸೆ ಎನಗೆ ಆನು ಮದಲೇ ಹೇಳಿದ್ದೆ ಅದು ಅಲ್ಲೇ ಹೇಳಿ.ಒಪ್ಪ೦ಗಳೊಟ್ಟಿ೦ಗೆ
ನಿಂಗೊ ಹೇಳುವದಕ್ಕೆ ಮೊದಲೇ ‘ಮಾರ್ಗದ ಕರೇಲಿಪ್ಪದು’ ಹೇಳಿ ಬಲ್ನಾಡು ಮಾಣಿ ಹೇಳಿದ್ದ°… ಅವಂಗೇ ಇಲ್ಲದ್ದಿಪ್ಪಗ ನಿಂಗೊಗೆ ಎಲ್ಲಿಂದ ದೋಸೆ…. 😀
ಒಪ್ಪಕುಞ್ಞಿಗೆ ಅರ್ಧ ದೋಸೆ ತಪ್ಪಿತ್ತು…
ಶುದ್ದಿಕ್ಕಾರಣ್ಣಾ…ಇದಾ, ಉತ್ತರವ ಆನುದೇ ಹೇಳಿದ್ದೆ… ಎನಗುದೇ ದೋಸೆ ಸಿಕ್ಕದ್ದೆ ಕಳಿಯ!
ಸಾದಾ.. ಮೈದಾ.. ಎಲ್ಲ ಆಗ, ಮೊಸಳೆಯೇ ಆಯೆಕ್ಕು!
(ಸಿಕ್ಕಿದ್ದರ ಅರ್ಧವ ಬೇಕಾರೆ ಒಪ್ಪಕುಞ್ಞಿಗೆ ಕೊಡುವೊ°…)
ತಮಿಳು ಬೋರ್ಡು ಕಾಂಬಗ ಬೆಂಗಳೂರಿಲ್ಲಿ ಇಪ್ಪದು ಹೇಳಿ ಗ್ರ್ಹಹಿಸಿತ್ತಿದ್ದೆ!!
ಇದು ಪೇರಿಸ್ಸಿಲಿ ಇಪ್ಪ ಕೃಷ್ಣ ಭವನ. ಪೂರ್ತಿ ವಿಳಾಸ ಇಲ್ಲಿದ್ದು:
Krishna Bhavan 24 Rue Cail, Paris, France 75010 0142057843
ಮೇಪು:
http://www.happycow.net/gmaps/get-map-direct.php?vid=9932
ಹೋಟ್ಲಿನ ಬೋರ್ಡು ಕಾಂಬಗ ಎಲ್ಲೋ ನೋಡಿದ ನೆಂಪಾವುತ್ತು.
{ಈ ಹೋಟ್ಳು ತಮುಳುನಾಡಿಲಿ ಇಲ್ಲೆ}
ಮತ್ತೆಂತಗೆ ತಮಿಳಿಲಿ ಗೀಚಿದ್ದು… 😉
ಇದು ಕೆನಡ ಅಲ್ಲದೋ ?
ಇದು ಫ್ರಾನ್ಸಿನ ಪೇರಿಸ್ಸು ಹೇಳುವಲ್ಲಿಪ್ಪ Krishna Bhavana ಅಲ್ಲದೋ….?
ಫ್ರಾನ್ಸಿಲ್ಲಿ ಮೆಡ್ರಾಸು ಹೋಟ್ಲುಗೊ ತುಂಬಾ ಇದ್ದು ಹೇಳಿ ಏವದೋ ಪ್ರವಾಸ ಕಥನಲ್ಲಿ ಓದಿದ ನೆಂಪು.
ಹಾಂಗಾಗಿ ಆ ಪಟಲ್ಲಿ ಇಪ್ಪ “Emporter” ಹೇಳ್ತ ಶಬ್ಧವ ಗೂಗುಲಿಲ್ಲಿ ಹುಡುಕ್ಕಿದೆ. ಅದು ಫ್ರೆಂಚು ಭಾಶೆಲಿ “To take” ಹೇಳಿ ಅರ್ಥ ಅಡ. ಹಾಂಗೆ ಅದು ಪೇರಿಸ್ಸು ಹೇಳಿ ಗತ್ತಿ ಆತು.
ಪಟ ತೆಗದ (ಬೈಲಿಂಗೆ ತೋರುಸಿದ) ಶುದ್ಧಿಕ್ಕಾರಂಗೆ ಧನ್ಯವಾದ….
ಅದಿರಳಿ…, ಮಸಾಲೆ ದೋಸೆ ಏವಗ ಕೊಡ್ತಿ ಶುದ್ಧಿಕ್ಕಾರಣ್ಣ…? 😉
{ಗತ್ತಿ ಆತು}
ಇದರ “ಗಟ್ಟಿ ಆತು” ಹೇಳಿ ಓದಿಗೊಳ್ಳಿ…. 😉
ಕೇಚಣ್ಣಾ, ನಿನಗೆ ಮಸಾಲೆ ದೋಸೆ ಸಿಕ್ಕಿಯಪ್ಪಗ ಆ ಲೆಕ್ಕಲ್ಲಿ ಎನಗೆ ಒಂದು ‘ಪೇರಿಸ್ಸು’ ಕೊಡೆಕು ಆತೊ? ಅದು ಕಾಂಬಲೂ ತಿಂಬಲೂ ಚಿತ್ತುಪ್ಪುಳಿ ಎಸಳಿನ ಹಾಂಗೆ- ರಜ ಹುಳಿ, ರಜ ಸೀವು- ಲಾಯ್ಕ ಆವ್ತು
ಅಪ್ಪೊ….? “ಪೇರಿಸ್ಸು” ಹೇಳುವ ಒಂದು ವಸ್ತುವೂ ಇದ್ದೊ….?
ನಿಜಕ್ಕಾದರೂ ಎನಗೊಂತಿಲ್ಲೆ ಆತಾ….?!
ಅದಿರಳಿ….. “ಪೇರಿಸ್ಸು” ಕೊಡುವ ವಿಶಯ ಗುರಿಕ್ಕಾರಣ್ಣ ಎನಗೆ ಮಸಾಲೆ ದೋಸೆ ಕೊಟ್ಟ ಮತ್ತೆಯೇ….. 😉 😉
ಯೆಬ್ಬೆ! ಪೇರಿಸ್ಸು ಹೇಳಿರೆ ಎಂತರ ಹೇಳಿ ಗೊಂತಿಲ್ಯೊ..? ಹಾಂಗಾರೆ ಕೇಚಣ್ಣ- ನೀನು ಬರೀ ಬೋಚಣ್ಣ!
parry’s ಹೇಳ್ತ ಕಂಪೆನಿಯ ಅತಿ ಜನಪ್ರಿಯ ಮಿಟಾಯಿ ಅದು. ಆನು ಸಣ್ಣಾಗಿಪ್ಪಗ 5 ಪೈಸೆಗೆ 10 ಸಿಕ್ಕಿಂಡಿತ್ತು. ಈಗ ಒಂದಕ್ಕೆ ನಾಕಾಣೆ.
ನಾಕಾಣೆಯ ಚಾಲ್ತಿ೦ದ ಹಿ೦ತೆಗೆತ್ತವಾಡ.. ಅಪ್ಪೋ? ಅಥದಾ ಈಗಾಗಳೇ ಹಿ೦ತೆಗೆದಾಯಿದೋ?
ನಾಕಾಣೆಯೊ?
ನಾಕಾಣೆ ನಾಕಾಣೆ ನನ್ನ ದೇವರಾಣೆ..
ಅದು ೧೦೦% ತಮಿಳಂಗಳ ಸಸ್ಯಾಹಾರಿ ಹೋಟ್ಳು ಆದಿಕ್ಕು……………
ಅದು ಅಲ್ಲೆ ಅದ ಮದಲೇ ಇದ್ದಿದ್ದಲ್ಲೆ.ಗೊ೦ತಾತಾನೆ?ಗೊತಾಗಿಯೂ ಗೊ೦ತಾಯಿದಿಲ್ಲೇ ಹೇಳಿರೆ ಗೊ೦ತಾದ್ದದೂ ಗೊ೦ತಾಗದ್ದೆ ಹೋಕು ಗೊ೦ತಾರತೊ?ಒಪ್ಪ೦ಗಳೊಟ್ಟಿ೦ಗೆ
ಆ ಕನ್ನಾಟಿಲಿ ಎಂತದೋ ಬರಕ್ಕಂಡಿದ್ದನ್ನೆ, ಅದು ಏವ ಭಾಷೆಲಿಪ್ಪದು ಹೇಳಿರೆ ಇದು ಎಲ್ಲಿಪ್ಪದೂಳಿ ಆನು ಹೇಳುವೆ.
[ಆ ಹೋಟ್ಳು ಎಲ್ಲಿಪ್ಪದು?]
ಹಿ ಹಿ, ಕೇಳ್ಲೆಂತ ಇದ್ದು ಭಾವ! ಅದು ಮಾರ್ಗದ ಕರೇಲಿಪ್ಪದು.. 😉
ಅದಾ, ಮಾಣಿಗೆ ಗೊತಾತದ… ಕೃಷ್ಣ ಭಾವನ ಹೋಟ್ಳು ಮಾರ್ಗದ ಕರೇಲಿಪ್ಪದು ಹೇಳಿ,
ಎನಗೆ ಇದು ಗೊ೦ತೇ ಇಲ್ಲೆ… 😉
ಕಾ೦ಬಗ ಎಲ್ಲಿಯೊ ಹೆರದೇಶಲ್ಲಿ ಇಪ್ಪ ಹಾ೦ಗೆ ಕಾಣುತ್ತು,ಮಲೇಷಿಯಾವೊ ಮಣ್ಣು??
ಉಮ್ಮಪ್ಪ ಕಾಂಬಗ ತಮಿಳುನಾಡಿಲಿ ಇಪ್ಪ ಹಾಂಗೆ ಕಾಣುತ್ತು ಚ್ಚೈವ ಉಣವಗಮ್ ಹೆದು ಇದ್ದು
ಓ ಇದು, ನಮ್ಮ ಕೃಷ್ಣ ಭಾವನ ಹೋಟ್ಳು ಅಲ್ಲದೊ?? ಒ೦ದು ಪ್ಲೇಟು ಮಸಾಲೆ ದೋಸ ತಿ೦ಬಲಾವುತ್ತಿತ್ತೊ ಎನೋ… 🙁
ಎಲ್ಲಾ ಸರಿ, ಇದು ಏವ ಭಾಷೆಯಪ್ಪಾ “vegetarien 100%”.. 😉
ಅಲ್ಲಿಗೆ ನೆಗೆಗಾರ ಹಿ೦ಗ್ಲೀಶು ಹೇಳಿಕೊಟ್ಟಿದನೋ ಹೇಳಿ.. 😉 ಉಮ್ಮಪ್ಪ…. 🙁
ಅದು ತಮಿಳೊಂ
ಅಸ್ಸಲು ಬೋಚ ಹೇಳ್ತವಿಲ್ಲೆಯೋ?ಹಾ೦ಗೆ ಅದಾ…