ಉದಿಯಪ್ಪಾಗ ಏಳುವಗಳೇ ಎನ್ನಪ್ಪಚ್ಚಿ “ಕರಾಗ್ರೇ ವಸತೇ…..ಪಂಚ ಕನ್ಯಾ ಸ್ಮರೇ ನಿತ್ಯಮ್..” ಹೇಳಿಯೊಂಡೇ ಏಳುಗು.
ಅವಕ್ಕೆಲ್ಲ ಮದುವೆ ಆಯಿದು, ಹಾಂಗಿಪ್ಪಾಗ ಅವು ಕನ್ಯೆಯರಪ್ಪದು ಹೇಂಗಪ್ಪ ಹೇಳಿ ಮೊನ್ನೆ ಮೊನ್ನೆ ಯೋಚನೆ ಬಂತು.
ಗುರಿಕ್ಕಾರ್ರ ಹಾಂಗೇ ನಮ್ಮ ಗುರುವೊಬ್ಬ° ಇದ್ದ°. ಅವನ ಹತ್ತರೆ ಕೇಳಿರೆ ಅವ° ಹೇಳಿದ್ದು ಸತ್ಯವೋ ಅಲ್ಲದೋ ಹೇಳಿ ಅರಡಿಯ, ನವಗೆ ಸಂಸ್ಕೃತ ಲಿಥುವೆನಿಯನ್ ಭಾಷೆಯ ಮೂಲ ಹೇಳ್ತದು ಬಿಟ್ರೆ ಬೇರೆನೂ ಅರಡಿಯ.
ಅವರ ಪ್ರಕಾರ ಅದು “ಪಂಚಕನ್ಯಾ ಅಲ್ಲ.ಅದು ಪಂಚಕ ನಾಮ” ಹೇಳಿ ಆಯೆಕ್ಕಾದ್ದು ಹೇಳಿ.
ಆರಾದರೂ ಗೊಂತಿದ್ದವು ಹೇಳುವಿರೋ?
Latest posts by ಕೇಜಿಮಾವ° (see all)
- ಉಡುಗೊರೆ - February 3, 2013
- ಈ ಮರ್ಯಾದಿ ನವಗೆ ಬೇಕೋ - January 31, 2013
- ಹೇಂಗೆ? - September 30, 2012
ಪಾವಗಡ ಪ್ರಕಾಶ್ ರಾವ್ ಒಮ್ಮೆ ಇದಕ್ಕೆ ಚಂದನದಲ್ಲಿ ಉತ್ತರ ಕೊಟ್ಟಿದ್ದ.ಯಾರೂ ಕನ್ಯೆಯರೂ ಅಲ್ಲ , ಮತ್ತೆ ಸೀತೆ ಮತ್ತು ಮಂಡೋದರಿಯನ್ನ ಬಿಟ್ಟರೆ , ಉಳಿದವರು ಒಬ್ಬನೇ ಗಂಡಿಗೆ ನಿಷ್ಟರಾದವರಲ್ಲ.ಹಾಗಾಗಿ ಇದರ ಮೂಲ ಸಂಶಯಾಸ್ಪದ ಅಂತ ಹೇಳಿದ್ದಂಗೆ ನೆನಪು.
ಈ ಶ್ಲೋಕದ ಮೂಲ ಎಲ್ಲಿ ,ಯಾವ ಗ್ರಂಥ ಹೇಳಿ ನೋಡೆಕ್ಕು.
ಎನಗುದೆ ಈ ಸಂಶಯ ತುಂಬ ಕಾಲಂದ ಇತ್ತಿದ್ದು. ಆನುದೆ ಸಿಕ್ಕಿದವರ ಹತ್ತರೆಲ್ಲ ಕೇಳಿಯೊಂಡಿತ್ತಿದ್ದೆ. ಕಡೆಂಗೆ ಎನ್ನ ಸಮವಯಸ್ಕ ವಿದ್ವಾಂಸ ಒಬ್ಬ ಹೇಳಿದ, ಅದು ‘ಪಂಚಕಂ ನಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಂ’ ಹೇಳಿ ಆಯೆಕು ಹೇಳಿ. ಇಲ್ಲಿ ‘ನಾ’ ಹೇಳಿರೆ ‘ನರ=ಮನುಷ್ಯ’ ಹೇಳಿ ಅರ್ಥ ಆವುತ್ತಡ. ಛಂದಸ್ಸಿಂಗೂ ಏನೂ ತೊಂದರೆ ಬತ್ತಿಲ್ಲೆ ಹೇಳಿಯಪ್ಪಗ ಎನಗೂ ಅಪ್ಪು ಹೇಳಿ ಕಂಡತ್ತು. ಏನಾದರೂ ತಪ್ಪಿದ್ದರೆ ತಿಳುದವು ತಿದ್ದೆಕು.
ಹೀಂಗೆ ಹೇಳುದು ಕಂಡಿದೆ.
ಕನ್ಯಾ ಹೇಳಿರೆ ಮದುವೆ ಆಗದ್ದವು ಹೇಳಿ ಈಗ ಪ್ರಸಿದ್ಧವಾದದ್ದು.ಆದರೆ ವಸಿಷ್ಠಮೊದಲಾದವು ಮದುವೆ ಆಗಿಯೂ ಬ್ರಹ್ಮಚಾರಿ ಹೇಳುವ ಕತೆ ಇದ್ದಲ್ಲದೊ?ಅದೇ ರೀತಿ ಎಂತಾದರೂ ವಿವರಣೆ ಇಕ್ಕೋ ಹೇಳಿ?
ವಸಿಷ್ಟರ ಆ ಕಥೆಯ ಹೇಳುವಿರಾ?