ನಮ್ಮ ಊರಿಲಿ ಕೆಲವು ಜೆನ ಇದ್ದವು, ಮಾತಿನ ಎಡೆಡೆಲಿ ಪಳಮ್ಮೆಗಳ ಸೇರುಸುತ್ತ ಕ್ರಮ ಅವಕ್ಕೆ.
ಪಳಮ್ಮೆ ಹೇಳಿರೆ ಎಂತರ ಗೊಂತಿದ್ದನ್ನೆ? ಏ°? ಹೇಳಿಕೆ / ಗಾದೆಗೊಕ್ಕೆ ಅಜ್ಜಂದ್ರ ಶೆಬ್ದ.
ಜೆನ ರಜ ಕುಶಾಲು ಆದರೆ ಅಂತೂ ಖಂಡಿತ ಪಳಮ್ಮೆಗೊ ಇದ್ದೇ ಇಕ್ಕು. ಬದುಕ್ಕಿ ಬೆಳದ ಪರಿಸರದ ಕೆಲವು ಆದರ್ಶ ಸಂಗತಿಗಳ ತಾತ್ಪರ್ಯಂಗಳ ಒಂದೇ ಗೆರೆಯಷ್ಟು ಸಣ್ಣ ಮಾಡಿ, ಒಂದು ಪಳಮ್ಮೆ ಮಾಡುದು. ಅನುಭವವ ಹೊಂದಿಗೊಂಡ ಆ ಪಳಮ್ಮೆಯ ಬೇಕಾದ ಸಂದರ್ಭಕ್ಕೆ ಬೇಕಾದ ಹಾಂಗೆ ಉಪಯೋಗುಸುದು ಅವರ ಮಾತಿಂಗೆ ತೂಕ ಕೊಡ್ತು. ’ಓಡಾರಿ ಕುಡು ಹಾಕಿದ ಹಾಂಗೆ’, ’ಹೊಳೆಲಿ ಹುಳಿ ತೊಳದ ಹಾಂಗೆ’, ಅದರ ಹಾಂಗೆ, ಇದರ ಹಾಂಗೆ ಹೇಳಿ ಎಡೆಡೆಲಿ ಸೇರುಸುವಗ ಎದುರಾಣವಂಗೆ ವಿಶಯವೂ ಮನನ ಆವುತ್ತು, ಭಾವನೆಯೂ ಶುದ್ದ ಆವುತ್ತು. ಕೆಲವೆಲ್ಲ ಕೇಳಿರೆ ಅಂತೂ ಎಂತವಂಗೂ ನೆಗೆ ತಡೆಯ, ಅಷ್ಟುದೇ ತಮಾಶೆ, ಹಗುರವಾಗಿ ಮನಮುಟ್ಟುವ ಹಾಂಗೆ ಇರ್ತು.
ತರವಾಡು ಮನೆ ಶಂಬಜ್ಜ, ಈಗ ಇಲ್ಲೆ ಅವು – ಸುಮಾರು ಪಳಮ್ಮೆಗಳ ಸೇರುಸುಗು ಮಾತಾಡುವಗ.
ಅಂಬಗ ಎಲ್ಲ ಎಂಗೊ ಬರೇ ಸಣ್ಣ ಇದಾ! ರಜ ರಜ ಅರ್ತ ಅಕ್ಕಷ್ಟೆ ಅಂಬಗ, ಆದರೆ ಈಗ Repliche orologi italia ಅದರ ಪುನಾ ಬೇರೆ ಆರಾರ ಬಾಯಿಲಿ ಕೇಳಿ ಅಪ್ಪಗ “ಓ! ಇದರ ಅರ್ತ ಹೀಂಗೆ!” ಹೇಳಿ ಗೊಂತಪ್ಪದು.
ಅಜ್ಜಂದ್ರಿಂಗೆ ಕೆಲವು ಜೆನಕ್ಕೆ ಈ ಅಭ್ಯಾಸ ಇರ್ತು. ಅಜ್ಜಂದ್ರ ಒಟ್ಟಿಂಗೆ ತುಂಬ ಒಡನಾಡಿ ಗೊಂತಿಪ್ಪವಾದರೆ ಅವರ ಬಾಯಿಲೂ ಈ ಪಳಮ್ಮೆಗೊ ತಿರುಗುಲೆ ಸುರು ಆವುತ್ತು. ಒಪ್ಪಣ್ಣನ ಚೆಂಙಾಯಿಗಳಲ್ಲಿ ಸುಮಾರು ಜೆನಕ್ಕೆ ಆ ಬುದ್ದಿ ಇದ್ದು. ಕೇಳಿ ಕೇಳಿ ಒಪ್ಪಣ್ಣಂಗೂ ರಜ ರಜ ಶುರು ಆಯಿದೋ ಹೇಳಿ ಒಂದು ಕನುಪ್ಯೂಸು ಬಪ್ಪದು ಒಂದೊಂದರಿ! 😉
ಮುಳಿಯಾಲದಪ್ಪಚ್ಚಿಗಂತೂ ಈ ಅಬ್ಯಾಸ ಒಳ್ಳೆತ ಇದ್ದು. ಶುದ್ದಿ ಕೇಳುದರಿಂದಲೂ ಪಳಮ್ಮೆಗಳ ಕೇಳುಲೆ ಹೇಳಿಗೊಂಡೇ ಎಂಗೊ – ಮಕ್ಕೊ ಎಲ್ಲ ಕೂಪದಿದ್ದು ಅವರ ಸುತ್ತಕೆ. (ಅವಕ್ಕೆ ಗೊಂತಿಲ್ಲೆ ಎಂಗೊ ಎಂತಕೆ ಕೂಬದು ಹೇಳಿ. ನಿಂಗೊ ಇನ್ನು ಹೇಳಿಕ್ಕೆಡಿ, ಹಾಂ!) ನೆಗೆ ಮಾಡಿ ಮಾಡಿ ಸಾಕಾವುತ್ತು. ಅಜ್ಜಕಾನ ಬಾವ° ಅಂತೂ ಆ ಪಳಮ್ಮೆಗಳ ಕೇಳಿ ನೆಗೆ ಮಾಡ್ಳೆ ಸುರು ಮಾಡಿರೆ, ಅಪ್ಪಚ್ಚಿ ಹೆರಟು ಅರ್ದ ದಿನ ಆದರೂ ನೆಗೆ ಮಾಡಿಯೇ ಬಾಕಿ! ಆಚಕರೆ ಮಾಣಿ ಮಂಡಗೆ ಎರಡು ಕುಟ್ಟಿ ಹಾಕುವನ್ನಾರ ಇಕ್ಕದು.
ಮಿಂಚಿನಡ್ಕ ಬಾವ° ವಿಶಯ ವಿವರುಸುದೇ ಪಳಮ್ಮೆಂದ. ಅವು ಒಂದರಿ ಬದಿಯಡ್ಕಲ್ಲೋ ಮತ್ತೊ ಮಾತಾಡ್ಳೆ ಸಿಕ್ಕಿದವು ಹೇಳಿತ್ತು ಕಂಡ್ರೆ ಕನಿಷ್ಠ ನಾಲ್ಕಾರೂ ಹೊಸ ಪಳಮ್ಮೆಗೊ ಸಿಕ್ಕುಗು ನಿಂಗೊಗೆ.
ಏನೇ ಇರಳಿ, ಕೇಳಿದ್ದರ ಹೇಳಿರೆ, ಹೇಳಿದ್ದರ ಬರದರೆ ಏನೂ ಚೋದ್ಯ ಇಲ್ಲೆ. ಅಲ್ದೋ? ಏ°?
ಕೆಲವೆಲ್ಲ ತುಂಬ ಮೌಲ್ಯ ಇಪ್ಪ ವಿಷಯಂಗೊ ಆದ ಕಾರಣ ’ಶುದ್ದಿ’ಗಳಲ್ಲಿ ಹೇಳುಲೇ ಬೇಕು ಹೇಳಿ ಆತು ಒಪ್ಪಣ್ಣಂಗೆ. ಅದಾಗಲೇ ಒಂದು ಗಾದೆಯ ಬಗ್ಗೆ ಮಾತಾಡಿದ್ದು ನಾವು, ನೆಂಪಿದ್ದನ್ನೇ? ಏ°? ಹಾಂಗೇ, ಈ ಸರ್ತಿ ಶಂಬಜ್ಜ ಹೇಳಿಗೊಂಡಿದ್ದ ಒಂದು ಪಳಮ್ಮೆ.
ಸಣ್ಣದು, ಆದರೆ ಅರ್ತಗರ್ಭಿತ ಆಗಿ ಇಪ್ಪದು.
ನಿತ್ಯಜೀವನಲ್ಲಿ ನವಗೆ ಸುಮಾರು ನಮುನೆಯ ಜೆನಂಗೊ ಸಿಕ್ಕುತ್ತವು. ಕೆಲವು ಜೆನ ನಮ್ಮ ಅತ್ಯಂತ ಪ್ರೀತಿಲಿ ಮಾತಾಡುಸುತ್ತವು, ನಮ್ಮ ತುಂಬ ಆತ್ಮೀಯರ ಹಾಂಗೆ ನಡಕ್ಕೊಳ್ತವು. ಆದರೆ ಒಳಂದ ಅವರ ಚರ್ಯೆಯೇ ಬೇರೆ ಇರ್ತು. ಕಾರ್ಯಸಾಧನೆಗೆ ತಕ್ಕ ನಮ್ಮ ಒಟ್ಟಿಂಗೆ ಇರ್ತವು. ಎದುರು ಅವು ಮಾತಾಡಿದ್ದರ ನೋಡಿ ’ಓ! ಬಾರೀ ಒಳ್ಳೆ ಜೆನ!” ಹೇಳಿ ಗ್ರೇಶಿಗೊಂಡು ಅವರ ಚೆಂಙಾಯಿ ಸುರು ಮಾಡಿರೆ ಮುಂದೆ ಒಂದು ದಿನ ಬತ್ತಿ ಮಡುಗುತ್ತವು, ನಿಘಂಟೇ!.
ಇನ್ನು ಕೆಲವು ಜೆನಕ್ಕೆ, ಮಾತಾಡುವಗ ನೈಸು ಮಾತಾಡ್ಳೆ – ಈಗಾಣ ಕಾಲದವರ ಹಾಂಗೆ – ಅರಡಿಯ, ಎಂತ ಇದ್ದರೂ ನೇರಾನೇರ. ಅಕ್ಕಾರೆ ಅಕ್ಕು, ಆಗದ್ರೆ ಆಗ- ಖಡಾಖಡಿ! ಸುಮ್ಮನೆ ಎದುರಂದ ಒಂದು ನಮುನೆ, ಬೆನ್ನ ಹಿಂದಂದ ಇನ್ನೊಂದು ನಮುನೆ – ಚೆಚೆ, ಎಡಿಯಲೇ ಎಡಿಯ ಅವಕ್ಕೆ!
ಈ ನೇರ ಮಾತುಗಳಲ್ಲಿ ಎಷ್ಟೋ ಒಳ್ಳೆಯ ವಿಶಯ ಬಕ್ಕು, ನಮ್ಮ ಬಗ್ಗೆ ಕಾಳಜಿಲಿ ಹೇಳಿದ ಮಾತುಗೊ ತುಂಬ ಇಕ್ಕು, ಆದರೆ ಅದರ ಹೇಳ್ತ ರೀತಿ ರಜಾ ಒರಟು ನಮುನೆಲಿ ಇರ್ತು. ಈಗಾಣ ಎಷ್ಟೋ ಜೆನಕ್ಕೆ ಈ ನೇರತ್ವ ಹಿಡಿಶುತ್ತಿಲ್ಲೆ. ರಜ ಕಡ್ಪಕ್ಕೆ ಮಾತಾಡಿದ ಕೂಡ್ಲೆ “ಅವು ಜೆನ ಆಗ ಮಾರಾಯ°!” ಹೇಳಿ ನಿರ್ದಾರ ಮಾಡಿ ಬಿಡ್ತವು.
ಕಾಂಬಲೆ ಚೆಂದ ಇಪ್ಪ ಮಾಣಿಯ ಮನಸ್ಸಿಲಿ ಎಂತಾ ಕೆಟ್ಟ ಕೆಟ್ಟ ಆಲೋಚನೆಗೊ ಇರ್ತೋ ಏನೋ! ಸುರ್ಪ ಚೆಂದ ಇಲ್ಲದ್ದ ಎಷ್ಟೋ ವಿಶಾಲ ಹೃದಯಿ ಮನುಷ್ಯರು ನಮ್ಮ ಮಧ್ಯಲ್ಲಿ ಇದ್ದವು. ಚೀಪೆ ಬೆಲ್ಲ ತುಂಬ ತಿಂದರೆ ಹಲ್ಲು ಹುಳು ತಿಂತಡ. ಬರೇ ಕೈಕ್ಕೆ ಹಾಗಲಕಾಯಿ ಮೈಗೆ ತುಂಬ ಒಳ್ಳೆದಡ, ಚೂರಿಬೈಲು ಡಾಗ್ಟ್ರು ಹೇಳಿಗೊಂಡು ಇತ್ತಿದ್ದವು ಮೊನ್ನೆ.
ಯೇವದೇ ಒಂದು ವಿಶಯ, ನಾವು ಕಂಡ ಹಾಂಗೇ ಇರೆಕ್ಕು ಹೇಳಿ ಏನೂ ಇಲ್ಲೆ, ಬದಲಾಗಿ ಅದರ ಒಳಾಣ ವ್ಯವಸ್ಥೆ ಬೇರೆಯೇ ಇಕ್ಕು. ಎದುರಂದ ಒಳ್ಳೆದರ ಹಾಂಗೆ ಕಂಡದು ಪರಾಂಬರಿಸಿ ನೋಡಿ ಅಪ್ಪಗ ತಂಬ ಹುಳ್ಕು ಇಪ್ಪಂತದ್ದು ಆಗಿಕ್ಕು. ಅಲ್ಲದೋ?
ಪ್ರಾಣಿಗೊಕ್ಕೆ ಹಲ್ಲು (ದಂತ) ಇಪ್ಪದು ಎಂತಾರು ಅಗಿವಲೋ, ಮಾಂಸ ತುಂಡುಸಲೋ, ಎದುರಾಳಿಗೊಕ್ಕೆ ಕಚ್ಚಲೋ, ಮೆಲುಕು ಹಾಕಲೋ ಎಂತಾರು. ಮನುಷ್ಯರಿಂಗೆ ಮತ್ತೂ ಕೆಲವು ಇದ್ದು – ಪಟ ತೆಗವಗ ನೆಗೆ ಮಾಡ್ಳೋ, ರಸ್ಕಿನ ಒಕ್ಕಲೋ, ಪಾಪದವರ ಕಾಡುಸುಲೋ, ಉದಿಯಪ್ಪಗ ಬ್ರೆಶ್ಶಿಲಿ ತಿಕ್ಕಲೋ (ಹಾಂಗೇಳಿರೆ ಎಂತರ – ಹೇಳಿ ಆಚಕರೆ ಮಾಣಿ ಕೇಳಿಗೊಂಡಿತ್ತಿದ್ದ° ಮೊನ್ನೆ!)- ಹೀಂಗೆ ಸುಮಾರು ನಮುನೆ ಇದ್ದು.
ಆನೆ ಇದ್ದಲ್ದೋ, ಅದರ ವ್ಯಕ್ತಿತ್ವಲ್ಲಿ ’ದಂತ’ಕ್ಕೆ ವಿಶೇಷ ಸ್ಥಾನ. ಆದರೆ ಆನೆಯ ಆ ದಂತ ಈ ಏವದಕ್ಕೂ ಅಲ್ಲ. ಬದಲಾಗಿ ಬೇರೆಯೇ ಕೆಲವು ಉಪಯೋಗಕ್ಕೆ ಇಪ್ಪದು. ವೈರಿಗಳ ಸೊಂಡ್ಳಿಲಿ ಹಿಡ್ಕೊಂಡು ಕುತ್ತಲೋ, ಮರ ಎಳವಲೋ, ಇತ್ಯಾದಿಗೊಕ್ಕೆ ಬೇಕಪ್ಪದು ಅಷ್ಟೆ. ಅಗಿವ ಹಲ್ಲು ಬೇರೆಯೇ ಇದ್ದು, ಬಾಯಿಯ ಒಳದಿಕ್ಕೆ. ಒಳುದ ಪ್ರಾಣಿಗಳ ಹಾಂಗೇ, ಸಣ್ಣದು.
ಈ ದಂತವ ಕಂಡ ಕೂಡ್ಳೆ ತುಂಬ ಕ್ರೂರ ಪ್ರಾಣಿ ಹೇಳಿ ಅನಿಸುಗು. ಆದರೆ ಒರ್ಮೈಸಿದರೆ ಎಷ್ಟು ಸಾಧು ಪ್ರಾಣಿ ಅದು!
ಅದಕ್ಕೇ ಶಂಬಜ್ಜನ ಗಾದೆ ಇಪ್ಪದು, ಆನೆಯ ಕಾಂಬ ಹಲ್ಲುದೇ, ತಿಂಬ ಹಲ್ಲುದೇ ಬೇರೆ ಬೇರೆ ಹೇಳಿಗೊಂಡು. . . .
ಹೆರ ಕಾಂಬ ದಂತವ ಕಂಡಕೂಡ್ಳೆ ’ಇದು ಹೀಂಗೇ’ ಹೇಳಿ ನಿರ್ಧಾರ ಮಾಡುದು ತಪ್ಪು ಹೇಳಿ ಲೆಕ್ಕ.
ಎದುರಂದ ತೋರುಸಿಗೊಂಬದು ಬೇರೆಯೇ ವೆಕ್ತಿತ್ವ, ಒಳಂದ ಬೇರೆಯೇ ನಡವಳಿಕೆಗೊ ಇಪ್ಪ ಜೆನಂಗಳ ಕಾಂಬಗ ಈ ಗಾದೆ ನೆಂಪಾಗಲಿ ಆತೋ?
ಸುಮ್ಮನೆ ವರ್ಡ್ಸ್ ವರ್ತು, ಅರಿಶ್ಟಾಟಲ್ಲು ಹೇಳಿಗೊಂಡು ಲಾಗ ಹಾಕುವ ಮೊದಲು ನಮ್ಮಲ್ಲೇ ರೂಡಿಲಿ ಇಪ್ಪ ನಮ್ಮದೇ ಜೀವನ ಪದ್ಧತಿಯ ಎಷ್ಟೋ ಶಂಬಜ್ಜನವರ ಪಳಮ್ಮೆಗಳ ಕೇಳಿ ಮನನ ಮಾಡಿರೆ ಜೀವಮಾನ ಚೆಂದಲ್ಲಿ ಕಳವಲೆ ಸಾಕು.
ಏ°? ಎಂತಹೇಳ್ತಿ?
ಒಂದೊಪ್ಪ: ಈ ನಮುನೆಯ ಶುದ್ದಿಗೊ ಸುಮಾರು ಇದ್ದು ಹೇಳುಲೆ. ಒಂದೊಂದೆ ಆಗಿ ಮಾತಾಡುವೊ°, ’ಓಡಾರಿ ಕುಡು ಹಾಕಿದ ಹಾಂಗೆ’’ ಅಪ್ಪದು ಬೇಡ, ಅಲ್ದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
Oppanna website mathra super iddatha…..
oppannana ella lekanavude layakka batta iddu.
palammegla suddi layikka ayidu.. innondari palammegaladde 1 list madire hengakku bhava!!!
Appu engaLa "Hariyolme" ajjande maathina naduve thumba gaadegaLa sersikonditthavu. Adaralli thumba artha thumbirthu. HeLuva vishaya gaade mulaka heLire innu manadattu aavthallada?
Utthama lEkhana OppaNNa.
palammegokkuu olle artha idduuuu, aadre kelulu, artha madkoble taalme beeku ashtee aldooooooooooooo
ಮಾತಾಡುವಾಗ ಪಳಮ್ಮೆಗಳ ಸೇರ್ಸಿದರೆ ಚೆಂದ , ಆದರೆ ಅದರ ಬಗ್ಗೆ ಗೊಂತಿಲ್ಲದ್ರೆ
ಆನೆ ಲದ್ದಿ ಹಾಕಿತ್ತು ಹೇಳಿ ಆಮೆ ಲದ್ದಿ ಹಾಕಿದ ಹಾಂಗೆ ಆಗದೋ ಹೇಳಿ ?
ಭಾರೀ ಒಳ್ಳೆ ಜನ ಹೇಳಿ ಗ್ರೇಶಿಗೊಂಡು ನಿನ್ನ ಪ್ರೆಂಡ್ಶಿಪ್ಪು ಮಾಡಿದ್ದು ಒಪ್ಪಣ್ಣೋ, ನೀನು ಎನಗೆ ಹೀಂಗೆ ಅನ್ಯಾಯ ಮಾಡುತ್ತೆ ಹೇಳಿ ಆನು ಗ್ರೇಶಿದ್ದಿಲ್ಲೆ. ನೀನು ಸಾಬೂನು ಹೇಂಗಿರ್ತು ಹೇಳಿ ಕೇಳಿದ್ದರ ಆನು ಆರತ್ರಾರೂ ಹೇಳಿದ್ದನ? ಮೊನ್ನೆ ಮೊನ್ನೆ ಅಶ್ಟೆ ಪೇಶ್ಟು ನೋಡಿ ಹಲ್ಲು ಕಿರುದ್ದರ ಆನು ಆರತ್ರಾರೂ ಹೇಳಿದ್ದನ? ಎಂತಕೆ ಹೀಂಗೆ ಮಾಡಿದೆ?
’ಏನೇ ಇರಳಿ, ಇಪ್ಪದರ ಇಪ್ಪ ಹಾಂಗೇ ಬರದರೆ ಚೋದ್ಯ ಇಲ್ಲೆ ಅಲ್ಲದೋ?’
ಎಂತ ಹೇಳ್ತೆ? …. 🙂
modalanoru anubavisidde allada ee palammega yella……….
modalanoru anubavisidde allada ee palammega yella……….
pammealga yella nija jeevanalli anubavisidda allada……. modalanooru
ಚಿಕ್ಕ ಚೊಕ್ಕ ಶುದ್ದಿ….ಲಾಯ್ಕಾಯಿದು…
"ಸುಮ್ಮನೆ ವರ್ಡ್ಸ್ ವರ್ತು, ಅರಿಶ್ಟಾಟಲ್ಲು ಹೇಳಿಗೊಂಡು ಲಾಗ ಹಾಕುವ ಮೊದಲು ನಮ್ಮಲ್ಲೇ ರೂಡಿಲಿ ಇಪ್ಪ ನಮ್ಮದೇ ಜೀವನ ಪದ್ಧತಿಯ ಎಷ್ಟೋ ಶಂಬಜ್ಜನವರ ಪಳಮ್ಮೆಗಳ ಕೇಳಿ ಮನನ ಮಾಡಿರೆ ಜೀವಮಾನ ಚೆಂದಲ್ಲಿ ಕಳವಲೆ ಸಾಕು." ನೂರಕ್ಕೆ ನೂರು ಸತ್ಯವಾದ ಮಾತು…
ಇನ್ನೂ ಬರಳಿ ಪಳಮ್ಮೆಗಳ ಶುದ್ದಿ…
enta oppannana gadago heratadu ajjandra hange.esto jena olleyavu irtavu kettavu irtavu.adare beli ippadu ellavu halu khandita alla.ganesha mava helida hange aarannaru friend ship madekkare aalochane madekku.illadre "umili muchhida kendada hange" batti madugire gontaga aata bhatta mava.kelitta heliddu
ಪಳಮ್ಮೆಗ ಸುಮಾರು ಅಜ್ಜನ್ದ್ರಿನ್ಗೆ ಗೊಂತಿಕ್ಕಷ್ಟೇ,ಈಗಣ ಜವ್ವನಿಗರು ಕಂಪ್ಯೂಟರ್ ಒತ್ತಿಗೊಂದು ಕೂಪಗ ಒಪ್ಪಣ್ಣ ನ ಹಾಂಗೆ ಹೇಳಿದರೆ ಹಿಂದೆ ನಮ್ಮ ಅಜ್ಜನ್ದ್ರು ಹೇಳಿದ್ದು ಫೋರುವರ್ಡು ಆವುತ್ತು.ಹಾಂ,ಹೇಳಿದ ಹಾಂಗೆ ಆಚಕೆರೆ ಮಾಣಿ ನೇರ್ಪ ಇದ್ದನೋ?ಇದ್ದರೆ ಬೆನ್ನಿಂಗೆ ಒಪ್ಪಣ್ಣ ಹಾಳೆ ಕಟ್ಟಿಗೊಮ್ಬದು ಒಳ್ಳೇದು ಹೇಳಿ ಕಾಣ್ತು.
ಒಪ್ಪಣ್ಣ ಹೇಳಿದ್ದು ಒಂದಂತೂ ಸತ್ಯ.ನವಗೆ ಅದರ ಒಳ್ಳೇತ ಅನುಭವ ಆಯಿದು ………ಅದೇ…
ಬಾರೀ ಒಳ್ಳೆ ಜೆನ!" ಹೇಳಿ ಗ್ರೇಶಿಗೊಂಡು ಅವರ ಚೆಂಙಾಯಿ ಸುರು ಮಾಡಿರೆ ಮುಂದೆ ಒಂದು ದಿನ ಬತ್ತಿ ಮಡುಗುತ್ತವು, ನಿಘಂಟೇ!
ಈ ಪಳಮ್ಮೆಗಳ ಬಗ್ಗೆ ಒಂದು ಬುಕ್ಕು ಇದ್ದು . ಅರ್ತಿಕಜೆ ಶ್ರೀಕೃಷ್ಣ ಭಟ್ಟರು ಬರದ್ದು ಹೇಳಿ ಕಾಣ್ತು. ಓದುಲೇ ಹೆರ್ತಾರೆ ತಲೆ ತಿರುಗುವಷ್ಟು ಗಾದೆಗೋ ಸಿಕ್ಕುತ್ತು. ಲಾಯ್ಕಾಯಿದು ಬರದ್ದು. ಆಚೆಕರೆ ಮಾಣಿಗೆ ಬ್ರೆಶ್ಶು ಕಂಡು ಗೊಂತಿಲ್ಲೇ ಹೇಳುದು ನಿನಗೆ ಹೆಂಗೆ ಗೊಂತಾತು? ಒಳ್ಳೆತ ರೀತಿಲಿ ನೋಡಿದ್ದೇ ಒಪ್ಪಣ್ಣ.
ಅಂದಹಾಂಗೆ ಒಪ್ಪಣ್ಣನ ಪ್ರೇರಣೆಲಿ ಹವ್ಯಕ ಸಾಹಿತ್ಯದ ಲಘು ಬರಹಂಗೋ ವ್ಯಾಪಕವಾಗಿ ಬೆಳೆತ್ತಾ ಇಪ್ಪದು, ಜೊತೆಗೆ ಆಚಕರೆ ಮಾಣಿ, ಚರ್ಮುರಿ ಮಾಣಿ ಸೇರಿಗೊಂದಿಪ್ಪದು ಖುಷಿ ಅವ್ತು. ವಿಷಯ ಎಂತ ಹೇಳಿರೆ ಬ್ಲಾಗು ಬರೆವವವರ ಪ್ರಪಂಚಲ್ಲಿ ನಿಂಗಳ ವಿನಃ ಇನ್ಯಾರು ಹೆಜ್ಜೆ ಹವ್ಯಕಲ್ಲಿ ಬರೆವ ಸಾಹಸಕ್ಕೆ, ಜೆತೆಗೆ ಪೇನ್ಸುಗೊ ಇಪ್ಪವು ಯಾರೂ ಈವರೆಗೆ ಇಲ್ಲೇ..!
ಲಾಯ್ಕ ಆಯ್ದು …
ವಿಷಯ ಎಂತ ಗೊಂತಿದ್ದ ? ಇದರ ಅಪ್ಪಂಗೆ ಓದಿ ಹೇಳಿದೆ … ಆದರೆ heading "ಹಲ್ಲು" ಹೇಳುದರ ಬದಲು "ಹುಲ್ಲು" ಹೇಳಿಯೇ ಓದಿದ್ದು .. 🙁 ಇದೆನ್ತದಪ್ಪ ಹೇಳಿ ಆತು… ಅರ್ತವೆ ಆಯ್ದಿಲ್ಲೆ…. ಮತ್ತೆ ಗೊಂತಾತು ಅದು ಹಲ್ಲು ಹೇಳಿ …. 🙁
ಒಪ್ಪಣ್ಣನ್ಗೆ ಮಾತಾಡುವಾಗ ಪಳಮ್ಮೆ ಸೇರ್ಸುವ ಅಭ್ಯಾಸ ಒಳ್ಳೆತ ಇದ್ದು ….
ಒಪ್ಪಕ್ಕಂಗೆ ಎಂತಾರು ಟೋನ್ಟು ಕೊಡ್ಲೆ ನೆಮ್ಪಾವ್ತು ಅಲ್ಲದ ?