Oppanna.com

ತಾಯಿಯೇ ದೇವರು…. ಅ೦ಬಗ ಅಜ್ಜಿ…??

ಬರದೋರು :   ಭೂಪಣ್ಣ    on   18/01/2015    13 ಒಪ್ಪಂಗೊ

ತಾಯಿಯೆ ದೇವರು, ತಾಯಿಗಿ೦ತ ದೇವರಿಲ್ಲ,… ಹೀ೦ಗೆಲ್ಲಾ ಕೇಳಿಗೊ೦ಡೇ ಊರಿಲಿ ಬೆಳದೋರು ನಾವು ಅಲ್ಲದಾ….. ಅದು ವಿಷಯ ಅಪ್ಪುದೇ. ಅಲ್ಲದ್ದದಲ್ಲ. ನಮ್ಮ ಸ್ವ೦ತ ಜೀವನಲ್ಲಿ ನಾವು ಅನುಭ್ಹವಿಸಿದೋರು ಕೂಡ.

ಆದರೆ…. ಮೊನ್ನೆ ಆದಿತ್ಯವಾರ, ವಿದ್ಯ [ಎನ್ನ ಕೊ೦ಡಾಟದ ಹೆ೦ಡತಿ…] ಮಾಡಿದ ರುಚಿ ರುಚಿ ಊಟ ಮುಗಿಸಿ, ಮ೦ಚಿಟ್ಟೆ ಲಿ ಕೂದುಗೊ೦ಡು ಹೀ೦…ಗೆ ಯೋಚನೆ ಆದ್ದದು ಎನಗೆ…… ನಾವು ನಮ್ಮ ಅಮ್ಮ೦ದಿರಿ೦ಗೆ ಇಷ್ಟೆಲ್ಲಾ ಕ್ರೆಡಿಟ್ ಕೊಡುವಗ, ನಮ್ಮ ಅಜ್ಜಿಯಕ್ಕಳ ಎಲ್ಲೋ…. ರಜಾ ಮರದತ್ತೊ…. ಹೇಳಿ. ಅರೆ ಈ ಭೂಪ೦ಗೆ ಈಗ ಅಜ್ಜಿಯ ನೆ೦ಪಾದ್ದೆ೦ತಪ್ಪಾ…. ಹೇಳಿ ನಿ೦ಗೊ ತಲೆ ತೊರುಸುದು ಏನೂ ಬೇಡ… ನಮ್ಮ ಅಜ್ಜಿಯಕ್ಕೊ ನವಗೆ, ನಮ್ಮ ಮನೆಗೆ, ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ರಜ ವಿಚಾರ ಮಾಡುವ೦ಥದ್ದೆ ಹೇಳಿ ಕ೦ಡತ್ತೆನಗೆ…

ಎನಗೆ ಕಾ೦ಬದು…. ನಮ್ಮ ಅಮ್ಮ೦ದ್ರು ನಮ್ಮ ಹೀ೦ಗೆಯೆ ಕೊ೦ಡಾಟಲ್ಲಿ, ಚೆ೦ದಕ್ಕೆ, ಒಳ್ಳೆ ಸ೦ಸ್ಕಾರಲ್ಲಿ ಬೆಳೆಶಿದ್ದವಪ್ಪಾ…. ಅದರಲ್ಲಿ ಎರಡು ಮಾತೇ ಇಲ್ಲೆ. ಆದರೆ ನಮ್ಮ ಈ ಅಮ್ಮ೦ದ್ರ ’ಒಳ್ಳೆ ಅಮ್ಮ೦ದ್ರನ್ನಾಗಿ’ ಮಾಡಿದ್ದೇ ನಮ್ಮ ಈ ಅಜ್ಜಿಯಕ್ಕೊ ಹೇಳಿ ಕಾ೦ಬದೆನಗೆ… ಅದಕ್ಕೆ ಕೆಲವು ಆಧಾರ೦ಗಳ ಕೊಡ್ತೆ ಆನು ನಿ೦ಗೊಗೆ.

ಅಮ್ಮ ಎನ್ನ ಹೆತ್ತಪ್ಪಗ, ಅಮ್ಮ೦ಗೆ ಮಗುವಿನ ಹೇ೦ಗೆ ಹಿಡುಕ್ಕೊಳೆಕ್ಕೂ ಹೇಳಿ ಹೇಳಿಕೊಟ್ಟದೇ ಎನ್ನ ಆಜ್ಜಿ ಅಡ್ಡ. ಹೇ೦ಗೆ ಹೇ೦ಗೋ ಎಣ್ಣೆ ಕಿಟ್ಟಿ ಎನ್ನ ಕೈ-ಕಾಲು ಪೀ೦ಟುಸುವಗ ತಲೆಗೆ ಮೆಲ್ಲ೦ಗೆ ಸೊಣದು ಹಾ೦ಗಲ್ಲ ಮಗಳೇ…. ಹೀ೦ಗಿದಾ…. ಹೇಳಿ ಸರಿಯಾಗಿ ಎಣ್ಣೆ ಕಿಟ್ಟುಲೆ, ಮೀಶುಲೆ, ಮತ್ತೆ ಬೇನೆ ಅಗದ್ದ ಹಾ೦ಗೆ ಚೆ೦ಡಿ ಉದ್ದುಲೆ ಎಲ್ಲ ಅಮ್ಮ೦ಗೆ ಕಲಿಶಿದ್ದೂ ಅಜ್ಜಿಯೇ ಅಡ್ಡ. ಮತ್ತೆ ಆನು ರಜ ದೊಡ್ಡ ಆಗಿ ಲೂಟಿ ಮಾಡ್ಲೆ ಸುರು ಮಾಡಿ ಅಪ್ಪಗ ಎನ್ನ ಉಪದ್ರ ತದವಲೆ ಎಡಿಯದ್ದೆ ಅಮ್ಮ ಎನಗೆ ಬಡಿವಲೆ ಓಡಿಸಿಗೊ೦ಡು ಬಪ್ಪಗ ಎನಗೆ ದೇವರ ಹಾ೦ಗೆ ಕ೦ಡುಗೊ೦ಡು ಇತ್ತದು ಎನ್ನ ಅಜ್ಜಿಯೇ. ಓಡಿ ಹೋಗಿ ಅಜ್ಜಿಯ ಮೊಟ್ಟೆಲಿ ಹತ್ತಿ ಕೂದರೆ ಧೈರ್ಯ…….!!

ಆಟ ಆಡಿ ಬಿದ್ದಪ್ಪಗ ಗಾಯ ತೊಳದು ಮುಲಾಮು ಕಿಟ್ಟಿ ಕೊ೦ಡಾಟ ಮಾಡ್ಲೆ, ಬೆಶಿನೀರಿ೦ಗೆ ಕಿಚ್ಚು ಹಾಕಿ ಹದಾ ಬಿಸಿ ನೀರಿಲಿ ಮೀಶುಲೆ, ಕಥೆ ಹೇಳಿಗೊ೦ಡು ಚೆ೦ಡಿ ಉದ್ದುಲೆ ಎಲ್ಲ ಅಜ್ಜಿಯೇ ಬೇಕಿತ್ತು. ಮತ್ತೆ ಹೊತ್ತೋಪಗ ದೇವರ ದೀಪ ಹೊತ್ತಿಸಿ ಎ೦ಗಳ ಕೂರಿಸಿ ಶ್ಲೋಕ೦ಗಳ ಹೇಳಿಕೊಟ್ಟುಗೊ೦ಡು ಇದ್ದದು ಅಜ್ಜಿಯೇ. ಉ೦ಬಗ ಬಾಯಿಗೆ ಹಾಕುಲೆ, ಬಳಿಸಿದ್ದು ಜಾಸ್ತಿ ಆಗಿ ಉ೦ಬಲೆ ಎಡಿಯದ್ದರೆ ಮೆಲ್ಲ೦ಗೆ ಅಜ್ಜಿ ಗೆ ಪುಸ್ಲಾಯಿಸಿ ಅರ್ಧ೦ದ ಎದ್ದರೂ ಅಜ್ಜಿ ಬೈಕ್ಕೊ೦ಡಿತ್ತಿದ್ದವಿಲ್ಲೆ. ಅಮ್ಮ ಆದರೆ ಬೆನ್ನಿ೦ಗೆ ಬೀಳುದು ಗ್ಯಾರ೦ಟಿ….!! ಮತ್ತೆ ಉ೦ಡಿಕ್ಕಿ ಮನುಗುಲಪ್ಪಗ ಅಮ್ಮ ಎ೦ಗೊಗೆ ಚಾವಡಿಲಿ ಹಾಸಿಗೆ ಹಾಕಿಕ್ಕಿ ಮನುಗುಲೆ ಒಳ ಹೋಕು. ಎ೦ಗೊ ಮೆಲ್ಲ೦ಗೆ ಮನುಗುಲೆ ಹೋಪದು ಅಜ್ಜಿಯ ಹತ್ತರ೦ಗೆಯೇ….! ಅಜ್ಜಿ ಎ೦ಗೊಗೆ ಚೆ೦ದಕ್ಕೆ ಕಾಕಣ್ಣ-ಗುಬ್ಬಕ್ಕನ ಕಥೆ, ತೆನ್ನಾಲಿ ರಾಮನ ಕಥೆ, ಬೀರಬಲನ ಕಥೆ ವಿಕ್ರಮಾದಿತ್ಯನ ಕಥೆ…. ಹೀ೦ಗೆಯೆ ಕಥೆಗಳ ಅರ್ಥ ಅಪ್ಪ ಹಾ೦ಗೆ ಹೇಳಿ ಬೆನ್ನು ತಟ್ಟಿ ಒರಗಿಸಿಗೊ೦ಡಿತ್ತದು.

ಎನಗೆ ಈಗಳೂ ನೆನಪ್ಪಿದ್ದು….. ಒ೦ದರಿ ಎನಗೆ ಮಾರ್ಕು ರಜ ಕಮ್ಮಿ ಬ೦ದಿಪ್ಪಗ ಅಮ್ಮ ಎನ್ನ ಬೆನ್ನಿನ ಚೋಲಿ ತೆಗವಲೆ ಹೇಳಿಯೇ ದಾಸನದ ಸಪೂರ ಅಡರು ರೆಡಿ ಮಾಡಿ ಮಡುಗಿತ್ತು ಆನು ಶಾಲೆ೦ದ ಬಪ್ಪಗ..! ಆನು ಓಡದ್ದ ಹಾ೦ಗೆ ಎನ್ನ ಎಡದ ಕೈಲಿ ಗಟ್ಟಿಗೆ ಹಿಡುದು ಬಲದ ಕೈಲಿ ಅಮ್ಮ ದಾಸನದ ಅಡರು ಹೊಡಿ ಮಾಡಿಗೊ೦ಡಿಪ್ಪಗ ಎನಗೆ ಎನ್ನ ಜೀವನವೇ ಮುಗುದತ್ತು ಹೇಳಿ ಗ್ರೇಶಿತ್ತಿದ್ದೆ…..! ಕು೦ಡೆ, ಕಾಲು, ಬೆನ್ನು ಹೇಳಿ ನೋಡದ್ದೆ ಅಮ್ಮ ಎನ್ನ ಮೇಲೆ ಬೆತ್ತ ಬೀಸುವಗ ಆನು ಲಬೋ ಲಬೋ ಹೇಳಿ ಕೂಗಿದ್ದಲ್ಲದ್ದೆ ಬೇರೆ ಎ೦ತ ಮಾಡ್ಲೂ ಎಡಿಗಾಯಿದಿಲ್ಲೆ… !! ಆವಗ ಎನಗೆ ದೇವರ ಹಾ೦ಗೆ ಕ೦ಡದು ಅಜ್ಜಿಯೇ…. ಅಜ್ಜಿ ಬ೦ದು ಅಮ್ಮನ ಕೈ೦ದ ಬೆತ್ತ ಎಳದು ತೆಗದು “ಹಾ೦ಗೆ ಮಕ್ಕೊಗೆ ಬಡಿತ್ತವಾ ಕೂಸೆ…. ಮಕ್ಕೊ ಹೇಳಿದರೆ ಎ೦ತ ಹೇಳಿ ಗ್ರೇಶಿದ್ದೆ…? ಅವು ದೇವರ ಸಮಾನ….., ರಜಾ ಪ್ರೀತಿಲಿ ಹೇಳಿಕೊಡು… ಬಕ್ಕು ಅವ೦ಗೆ…” ಹೇಳಿ ಅಮ್ಮ೦ಗೆ ಬುದ್ಧಿ ಹೇಳಿ ಎನ್ನ ಅತ್ಲಾಗಿ ಕರಕ್ಕೊ೦ಡು ಹೋದವು. ಜೆಗುಲಿ ಯ ಮೂಲೆಲಿ ಕೂದು ಎನ್ನ ಮೊಟ್ಟೆಲಿ ಕೂರಿಸಿ ಮೈಲಿ ಆದ ಗಾಯಕ್ಕೆಲ್ಲ ಮುಲಾಮು ಕಿಟ್ಟಿ ಕೊ೦ಡಾಟ ಮಾಡಿದವು. ಎನ್ನ ಅಪ್ಪಿ ಹಿಡುದು “ಎನ್ನ ಮುದ್ದು ಪುಟ್ಟಾ…. ನೀನು ಓದಿ ಉಷಾರು ಆಯೆಕ್ಕಲ್ಲದಾ ಮಗಾ….. ನೀನು ದೊಡ್ಡ ಆಗಿ ಈ ಅಜ್ಜಿ ಯ ಕಾರಿಲಿ ಕರಕ್ಕೊ೦ಡು ಹೋಯೆಕ್ಕಲ್ಲದಾ… ಅಮ್ಮನ ಹೀ೦ಗೆ ಬೊಡಿಶುಲಾಗ ಅಲ್ಲದಾ ಮಗಾ….. ” ಹೇಳಿ ಎನಗೆ ಅರ್ಥ ಅಪ್ಪ ಹಾ೦ಗೆ ಬುದ್ಧಿ ಹೇಳಿದವು…. “ಅಮ್ಮ ಎನಗೆ ಬಡುದತ್ತನ್ನೇ…. ಅಮ್ಮ೦ಗೆ ಎನ್ನತ್ತರೆ ಪ್ರೀತಿಯೇ ಇಲ್ಲೆ” ಹೇಳಿ ಆನು ಕೂಗಿ ಅಪ್ಪಗ “ಅಮ್ಮ೦ಗೆ ಸಾವಿರ ಮನೆಕೆಲಸ೦ಗೊ ಇರುತ್ತಲ್ಲದಾ ಮಗಾ…. ನೀನು ಓದದ್ದರೆ ಅಮ್ಮ ತಲೆಬೆಶಿ ಆಗಿ ಬಡಿವದಷ್ಟೆ…. ಅಮ್ಮ೦ಗೆ ನಿನ್ನತ್ತರೆ ತು೦ಬಾ ಪ್ರೀತಿ ಇದ್ದು….” ಹೇಳಿ ಸಮಾಧಾನ ಮಾಡಿ ಧೈರ್ಯ ತು೦ಬಿದೋರೂ ಎನ್ನ ಅಜ್ಜಿಯೇ.

ಎನಗೆ ಕಾ೦ಬದು…. ಅಮ್ಮನ ಹಾ೦ಗೆಯೆ ಅಜ್ಜಿದೇ ಒ೦ದು ಕಾಲಲ್ಲಿ ಅಮ್ಮನೇ ಆಗಿತ್ತು… ಆದರೂ ಎಲ್ಲ ಅಮ್ಮ೦ದಿರಿ೦ಗೂ ಜೀವನದ ಪಕ್ವತೆ ಬಪ್ಪದು ಅವು ಅಜ್ಜಿಯಕ್ಕೊ ಅಪ್ಪಗಳೇ ಹೇಳಿ ಹೇಳುದು ಆನು. ಅಮ್ಮ೦ದಿರಿ೦ಗೆ ಮಕ್ಕಳ ಹಿಡುಕ್ಕೊ೦ಬದು ಹೇ೦ಗೆ ಹೇಳಿಯೆ ಗೊ೦ತಿರುತ್ತಿಲ್ಲೆ… ಆವಗ ಅವಕ್ಕೆ ಸರಿಯಾಗಿ ಹೇಳಿ ಕೊಟ್ಟು ಅವರ ಸರಿಯಾದ ಅಮ್ಮ೦ದ್ರನ್ನಾಗಿ ಮಾಡುದು ಈ ಅಜ್ಜಿಯಕ್ಕಳೇ. ಮಕ್ಕಳ ಸರೀ ದಾರಿಲಿ ಬೆಳೆಶುಲೆ ಅಮ್ಮ೦ದಿರಿ೦ಗೆ ದಾರಿ ದೀಪವಾಗಿಪ್ಪದು ಅಜ್ಜಿಯಕ್ಕಳೆ…. ಎನ್ನತ್ತರೆ ಕೇಳಿದರೆ, ಅಜ್ಜಿಯಕ್ಕೊ ಇಪ್ಪ ಮನೆಲಿ ಹುಟ್ಟಿದ, ಬೆಳದ ಮಕ್ಕೊ ನಿಜಕ್ಕೂ ಪುಣ್ಯವ೦ತರಪ್ಪಾ…..!!

ಆನಿ೦ದು ಎನ್ನ ಮಕ್ಕೊಗೆ ಓದುಸುಲೆ ಕೂಪಗ, ಎನ್ನ ಮಕ್ಕಳ ಮೀಶುವಗ, ಮಕ್ಕೊ ಹೊತ್ತೋಪಗ ದೇವರ ಗು೦ಡದ ಎದುರು ಕೂದು ಜಪ ಮಾಡುವಗ, ಎನ್ನ ನೆನಪ್ಪಿನ ಅ೦ಗಳಲ್ಲಿ ಎನ್ನ ಅಜ್ಜಿ ಬತ್ತು…. ಎ೦ಗಳ ಮೇಲೆ ಅಜ್ಜಿ ತೋರಿಸಿಗೊಡಿದ್ದ ಆ ನಿರರ್ಗಳ ನಿಸ್ವಾರ್ಥ ನಿಶ್ಕಲ್ಮಶ ಪ್ರೀತಿ ವಾತ್ಸಲ್ಯ೦ಗಳ ಗ್ರೇಶಿ ಗ್ರೇಶಿ ಎನ್ನ ಕಣ್ಣು ಚೆ೦ಡಿ ಆವುತ್ತು. ನಮ್ಮ ಈ ಈಗಾಣ ಜೀವನ ಶೈಲಿಲಿ ನವಗೆ ಪೇಟೆಗೆ ಬ೦ದು ಇರೆಕ್ಕಾಗಿ ಇಪ್ಪಗ ನಮ್ಮ ಮಕ್ಕೊಗೆ ಬೆಳವ ಸಮಯಲ್ಲಿ ಅಜ್ಜಿ ಒಟ್ಟಿ೦ಗೆ ಇಪ್ಪಲಾವುತ್ತಿಲ್ಲೆನ್ನೆ…! ಪಾಪ, ಈ ಮಕ್ಕೊಗೆ ಅವರ ಬೆಳವಣಿಗೆಯ ಸಮಯಲ್ಲಿ ಅವು ಎ೦ತರ ಕಳಕ್ಕೊಳ್ತಾ ಇದ್ದವೂ ಹೇಳಿ ಕೂಡಾ ಗೊ೦ತಿಲ್ಲೆ ಹೇಳುದು ಎ೦ಥಾ ವಿಪರ್ಯಾಸ ಹೇಳಿ ಕಾ೦ಬದೆನಗೆ….!

ತಾಯಿಯೇ ದೇವರು ಅಪ್ಪು. ಆದರೂ ತಾಯಿಯ ಪರಿಪಕ್ವ ದೇವರಾಗಿ ಮಾಡುವಲ್ಲಿ ಅಜ್ಜಿಯಕ್ಕಳ ಪಾಲು ತು೦ಬಾ ಇದ್ದು ಹೇಳಿ ಎನ್ನ ಭಾವನೆ. ನಿ೦ಗೊ ಎ೦ತ ಹೇಳ್ತಿ ಭಾವಯ್ಯಾ….????

13 thoughts on “ತಾಯಿಯೇ ದೇವರು…. ಅ೦ಬಗ ಅಜ್ಜಿ…??

  1. ಬೈಲಿಂಗೆ ಬಂದಪ್ಪಗ ಅಜ್ಜಿಯ ನೆಂಪುಮಾಡ್ಯೊಂಡೇ ಬಂದ್ಸು ವಿಶೇಷ ಆತಿದು ಭಾವ. ನಾಡದ್ದಿಂಗೆ ನಾವು ಅಜ್ಜ ಅಜ್ಜಿ ಅಪ್ಪಗಳೂ ನವಗಿದು ನೆಂಪಿರಕ್ಕಪ್ಪೋ! ಹರೇ ರಾಮ. ಇನ್ನು ಸರಾಗ ನಾವಿಲ್ಲಿ ಕಂಡುಮುಟ್ಟಿಗೊಂಬಲೆ ಇದ್ದನ್ನೆ

    1. ಚೆನ್ನೈ ಭಾವಯ್ಯ, ಎನಗೆ ಬೈಲಿ೦ಗೆ ಬಪ್ಪಲೆ, ಬರವಲೆ, ನಿ೦ಗೊ, ರಘು ಅಣ್ಣ ಎಲ್ಲ ಸ್ಫೂರ್ತಿ ಅದಾ…, ಖ೦ಡಿತ ಕಾ೦ಬೊ.

  2. ಅಜ್ಜಿಯಕ್ಕ ಹಾಂಗೆ ಮಕ್ಕಳ ನೋಡಿಗೊಂಬ ಕಾರಣವೇ, ನಮ್ಮ ಮಕ್ಕೊಗೆ ರಜೆಲಿ ಅಜ್ಜಿಮನೆಗೆ ಹೋಪ ಏವುರ ಅಪ್ಪದು. ಭಾವಯ್ಯ ಬೇರೆ ಎಂತ್ಸರ ಹೇಳೋದು..?

    ಭೂಪಣ್ಣ ಇಷ್ಟು ಅಪರೂಪ ಆದರೆ ಹೇಂಗಪ್ಪ…? ಬಂದುಗೊಂಡಿರಿ.

    1. ಬೈಲಿ೦ಗೆ ಬಾರದ್ದೆ ಮಿಸ್ ಮಾಡಿಗೊ೦ಡದು ಆನೇ. ಇನ್ನು ಸರ್ರಾಗ ಬತ್ತೆ ಕುಮಾರಣ್ಣಾ,

  3. ಅಜ್ಜಿಯ ನೆ೦ಪುಗಳ ಬುತ್ತಿಯ ಕಟ್ಟಿಗೊ೦ಡು ಅಪ್ರೂಪಕ್ಕೆ ಬೈಲಿ೦ಗೆ ಬ೦ದ ಭೂಪಣ್ಣನ ಸ೦ಚಿ ರುಚಿರುಚಿಯಾಗಿತ್ತು.

    1. ಒಪ್ಪ ಹಾಕಿದ್ದಕ್ಕೆ ನಿಂಗೋಗೆ ಧನ್ಯವಾದ. ಎದೇಲಿ ಬೈಲಿ೦ಗೆ ಬರದ್ದೆ ಸುಮಾರು ವಿಶಯ೦ಗಳ ಆನು ಮಿಸ್ ಮಾಡಿಗೊ೦ಡೆ ಹೇಳಿ ಕಾಣುತ್ತು. ಹಾಂಗಾಗಿ ಇನ್ನು ಸರ್ರಾಗ ಬೈಲಿಂಗೆ ಬಪ್ಪದು ಹೇಳಿ ಗ್ರೇಶಿದ್ದೆ.

  4. ಅಜ್ಜಿಯ ಬಗ್ಗೆ ಭೂಪಣ್ಣಂಗಿಪ್ಪ ಅಕರಾಸ್ತೆ ಓದಿ ಖುಷಿಯಾತು. ಅಬ್ಬೆಯ ದೇವರು ಹೇಳುವಲ್ಲಿ ಅಜ್ಜಿ ದೇವರು ಅಲ್ಲ ಹೇಳುವ ಅರ್ಥ ಇಲ್ಲೆನ್ನೆ. ಹಾಂಗಿದ್ದರೆ ಅಬ್ಬೆಯ ದೇವರು ಹೇಳುವಾಗ ಅಪ್ಪ ದೇವರಲ್ಲದ ಅಂಬಗ ಹೇಳಿ ಪ್ರಶ್ನೆ ಹಾಕುಗು ಕೆಲವುಜನ. ಹಾಂಗಾಗಿ ಅಜ್ಜಿ, ಅಪ್ಪ, ಹೀಂಗೆ ಎಲ್ಲರಲ್ಲೂ ಇಪ್ಪಂಥ ಮಾತೃಭಾವವನ್ನೇ ‘ದೇವರು’ ಹೇಳಿ ಗುರುತುಸೆಕ್ಕು, ಅಲ್ಲದಾ? ಅಲ್ಲದ್ದರೆ ಇನ್ನೊಬ್ಬರ ಮನೆಯ ಹಾಳುಮಾಡ್ಳೆ ಹೇಳಿಕೊಡುವ ಅಮ್ಮಂದಿರು ಎಷ್ಟೋ ಜನ ಇಕ್ಕು- ಅವರ ಹೇಂಗೆ ‘ದೇವರು’ ಹೇಳುದು; ‘ದೆವ್ವ’ ಹೇಳಿಯೇ ಹೇಳೆಕ್ಕಷ್ಟೆ.
    ಭೂಪಣ್ಣ, ‘ಅಜ್ಜಿಕತೆ’ ಮಾತ್ರ ಭಾರಿ ರೈಸಿದ್ದು.

    1. ಹ ಹ್ಹ ಹ್ಹಾ… ಇಂದಿರಕ್ಕಾ, ನಿ೦ಗೊ ಮನೆಗೆ ಸದ್ಯ ಬಾರದ್ದರೂ ಬೈಲಿ ಲಿ ಆದರೂ ಕಂಡಿರನ್ನೇ … ಭಾರೀ ಖುಷಿ ಆತು. ತಾಯಿ ಏ ದೇವರು, ಅಜ್ಜಿ ಯೂ ದೇವರೇ…, ನಿನಗೋ ಹೇಳಿದ್ದು ಸರಿ.
      ನಿ೦ಗೊ ಎಂತದೆ ಹೇಳಿ. ಅಜ್ಜಿ ಇಲ್ಲದ್ದೆ ಇರುತ್ತಿದ್ದರೆ, ಸಣ್ಣಾದಿಪ್ಪಗ ಎನ್ನ ಬೆನ್ನು ಹೊಡಿ ಆಗ್ತಿತ್ತು ಗ್ಯರ೦ಟಿ…. ಅಮ್ಮ ನ ಬೆತ್ಥಲ್ಲಿ 🙂 🙂 🙂 🙂

  5. ಇನ್ನು ಸರಾಗ ಬೈಲಿ೦ಗೆ ಬಪ್ಪದೂ ಹೇಳಿ ಗ್ರೆಶಿದ್ದೆ. ಎದೇಲಿ ಸುಮಾರು ದಿನ ಬಾರದ್ದೆ ತುಂಬಾ ಮಿಸ್ ಮಾದಿಗೊಂದೇ ಹೇಳಿ ಈಗ ಕಾಣುತ್ತು. ಅಜ್ಜಿ ಯಾ ಹೆಳೆಲಿ ಆದರೂ ಒಂದರಿ ಬೈಲಿ೦ಗೆ ಬಪ್ಪಲೆ ಸಿಕ್ಕಿತ್ತನ್ನೇ ಹೇಳಿ ಸಂತೋಷ ಎನಗೆ…. 🙂 🙂

  6. ಭೂಪಾಲನ ವರುಶಕ್ಕೊ೦ದರ್ರಿ ನೆ೦ಪಪ್ಪಗಲೂ,
    ಭಜಗೋವಿ೦ದ ಸುತ್ತು ಹಾಕುಲೆಯು ಅಜ್ಜಿಯೇ ಆಯಕ್ಕನ್ನೇ,.
    ಭೂ.ಣ್ಣ….
    ಶಾಬ……………….

  7. ಹರೇರಾಮ, ಅಜ್ಜಿ ಹೇಳಿರೆ “ದೇವರ ದೇವರು”. ನಮ್ಮ ಭೂಪಣ್ಣಂಗೆ ಅಜ್ಜಿಯ ನೆಂಪಾದ ಸಂಗತಿಗೆ ಎನ ಭಾರೀ ಕೊಶಿ ಆತು ಮಿನಿಯ!. ಎನಗೂ ಅಜ್ಜಿ ಹೇಳಿರೆ ಎಲ್ಲಿಲ್ಲದ್ದ ಆಪ್ತತೆ. [ ದೇವರ ದೇವಂಗೆ ಹೂಗೆಂಜಲಾತೋ ಹುಳು ಮುಟ್ಟಿ. ಹೇಳಿ ಒಂದು ಜಾನಪದ ಗೀತೆಯೂ ಇದ್ದು ] ಇಲ್ಲಿ ದೇವಿಯ ದೇವಿಗೆ ಸಂತೋಷಪ್ಪ ಕೆಲಸ ನಮ್ಮಂದಾಯೆಕ್ಕು

    1. ನಿಂಗಳ ಒಪ್ಪ ನೋಡಿ ಖುಷಿ ಆತು ವಿಜಯತ್ತೆ.. ಈ ಲೇಖನ ಓದಿ ಎನ್ನ ಮಗ೦ದೆ ಈಗ “ಅಪ್ಪ…. ಅಜ್ಜಿ ಮನೆಗೆ ನಾವು ಯಾವಾಗ ಹೋಪದು..??” ಹೇಳಿ ಕೇಳ್ತಾ ಇದ್ದ…. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×