- ಜೀವನಲ್ಲಿ ಮುಂದೆ ಬಪ್ಪಲೆ ಓಡುದರೊಟ್ಟಿಂಗೆ ಓದುದೂ ಮುಖ್ಯವೇ - July 9, 2014
- “ಯಕ್ಷತ್ರಿವೇಣಿ” - September 24, 2012
- ಬದಲಾಗದ್ದದು ಬದಲಾವಣೆ ಮಾಂತ್ರ ! - September 12, 2012
“ಕಾಣೆಯಾಗಿದ್ದಾರೆ”
ಸುವರ್ಣಿನೀ ಕೊಣಲೆ ಎಂಬ ಹೆಸರಿನ ನಮ್ಮ ಒಪ್ಪಣ್ಣನ ಬೈಲಿನ ಡಾಗುಟ್ರಕ್ಕ, ಜಂಬ್ರಂಗಳಲ್ಲಿ ಊಟ ಹೊಡದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬೋಸ ಭಾವನಿಗಾಗಿ ಮದ್ದಿನ ಗಿಡ ಪೊರ್ಪುವುದಕ್ಕಾಗಿ ಹೋದವರು ಬೈಲಿಗೆ ಹಿಂದಿರುಗಲಿಲ್ಲ. ಯಾರಾದರೂ ಕಮ್ಯುನಿಸ್ಟ್ ಸೊಪ್ಪು ಉರುಂಬುವವರನ್ನು ಕಂಡಲ್ಲಿ ಗುರಿಕ್ಕಾರರಿಗೆ ಕೂಡ್ಲೇ ತಿಳಿಸಬೇಕಾಗಿ ಬೈಲಿನವರು ಮಾಡಿಕೊಳ್ಳುವ ವಿನಂತಿಗಳು.
ಹೀಂಗಿದ್ದ ಒಂದು ಪ್ರಕಟಣೆ ಪೇಪರಿಲ್ಲಿಯೋ ಟೀವಿಲಿಯೋ ಬಪ್ಪನ್ನ ಮೊದಲು ಬೈಲಿಂಗೆ ಬಂದು ಎತ್ತಿಕ್ಕುದು ಸೂಕ್ತ ಹೇಳಿ ಕಂಡತ್ತು ! ಬೈಲಿಂಗೆ ಬಂದರೆ ಸಾಕ? ಎಂತಾರು ಶುದ್ದಿ ಹೇಳದ್ದರೆ ಹೇಂಗಪ್ಪದು? ಹಾಂಗಾರೆ ಎಂತ ಶುದ್ದಿ ಅಕ್ಕಪ್ಪಾ ಹೇಳಿ ಆಲೋಚನೆ ಮಾಡುವಗ ’ಕಾಣೆ ಆದವರ’ ಬಗ್ಗೆಯೇ ಬರದರೆ ಸರಿ ಹೇಳಿ ತೋರಿತ್ತು !!
ಸುಮಾರು ವರ್ಷ ಹಿಂದೆ ದೂರದರ್ಶನಲ್ಲಿ ’ಕಾಣೆಯಾದವರ ಬಗ್ಗೆ ಪ್ರಕಟಣೆಗಳು’ಹೇಳಿ ಬಂದುಗೊಂಡಿತ್ತು, ಈಗಳೂ ಇದ್ದೋ ಎಂತೋ..ಉಮ್ಮ ಗೊಂತಿಲ್ಲೆ. ಹಾಂಗೆ ಪ್ರಕಟಣೆ ಮಾಡಿರೆ ಜನಂಗೊಕ್ಕೆ ಗೊಂತಾವ್ತದ ಆರಾರು ಎಲ್ಲೆಲ್ಲಿಂದ ಕಾಣೆ ಆಯ್ದವು ಹೇಳಿ. ಎನಗೂ ಕೆಲವೆಲ್ಲ ಕಾಣೆ ಆದ ಹಾಂಗೆ ಕಂಡತ್ತು. ನಮ್ಮ ಬೈಲಿಲ್ಲಿಯೇ ಒಂದು ಪ್ರಕಟಣೆ ಮಾಡಿರೆ ಹೇಂಗೆ ಹೇಳಿ ಕಂಡತ್ತು. ಪ್ರಪಂಚಕ್ಕೆ ಬಿಬಿಸಿಯೇ ದೊಡ್ಡದಾಗಿಕ್ಕು, ನಮ್ಮ ಶುದ್ದಿಗೊಕ್ಕೆ ಬೈಲೇ ಚೆಂದ. ಇಲ್ಲಿ ಕಾಣೆ ಆದವರಪಟ್ಟಿಲಿ ನಿಂಗೊ ಆರನ್ನಾರೂ ಕಂಡರೆ ತಿಳುಶಿಕ್ಕಿ ಆತೋ….?
- ಉಡುಪಿ ಮಂಗಳೂರು ದಾರಿಯುದ್ದಕ್ಕೂ ಇತ್ತಿದ್ದ ಭತ್ತದ ಗೆದ್ದೆಗೊ ಕಾಣೆ ಆಯ್ದು, ಆರಾರು ಹೊತ್ತುಗೊಂಡೇ ಹೋದವೋ ಅಲ್ಲ ನುಂಗಿಹಾಕಿದವೋ ಹೇಳಿ ತನಿಖೆ ಆಯಕಷ್ಟೆ.
- ನಮ್ಮ ಬೆಂಗಳೂರಿಂದ ನಮ್ಮ ಕನ್ನಡವೇ ಕಾಣೆ! ಬಳ್ಳಾರಿಯ ಗಣಿಯೊಳ ಬಿದ್ದತ್ತೋ ಅಲ್ಲ ಕೊಳ್ಳೇಗಾಲದ ಕಾಡಿಲ್ಲಿ ಕಣ್ತಪ್ಪಿತ್ತೋ ಹೇಳಿ ತಿಳಿವಲೆ ಬೋಸ ಭಾವ ಹೆರಟಿದ ಹೇಳಿ ಶುದ್ದಿ.
- ಹಿಂದೊಂದು ಕಾಲಲ್ಲಿ ಪದ್ಯಹೇಳಿಯೊಂಡು[?] ಹೆಮ್ಮಕ್ಕಳ,ಕೂಸುಗಳ ಕೈಗೆ ಬಳೆ ಮಡುಗಿಯೊಂಡು ಊರೂರು ಸುತ್ತಿಗೊಂಡಿದ್ದ ಬಳೆಗಾರ ಅಂತೂ ಕಾಣೆಯಾದವರ ಪಟ್ಟಿಗೆ ಸೇರಿ ಸುಮಾರು ವರ್ಷವೇ ಕಳುತ್ತದ 🙁 ಕೈಂದ ಬಳೆಯೂ ಕಾಣೆ ಆಯ್ದು ಹೇಳ್ತದು ಇನ್ನೊಂದು ಶುದ್ದಿ.
- ಕೂಸುಗಳ ಮೋರೆಂದ ಕುಂಕುಮವೇ ಕಾಣೆ ಆಯ್ದು, ನಾಯಿ ನಕ್ಕಿದ್ದೋ ಅಲ್ಲ ಪೇಶನ್ನೋ [fashion] ಹೇಳಿ ಗೊಂತಾಯ್ದಿಲ್ಲೆ.
- ನಮ್ಮ ಊರಿನ ಮನೆಯ ಬಾಗಿಲ ಮುಂದಂದ ಆರೋ ರಂಗೋಲಿಯನ್ನೇ ಕಾಣೆ ಮಾಡಿದ್ದವಡ ! ರಂಗೋಲಿ ಅಡೀಂದ ಹೋಪ ಜಾಣಂಗೊಕ್ಕೆ ರಜ್ಜ ಬಂಙ ಆವ್ತಡ 🙁
- ಇರುಳಿನ ಉಡುಗೆ [ನೈಟಿ] ಹಗಲುದೇ ಶೋಭಿಸುಲೆ ಶುರು ಆದಪ್ಪಗಂದ ನಿತ್ಯಕ್ಕೆ ಸೀರೆ ಕಾಂಬದು ಇಲ್ಲೆ ಹೇಳಿ ಆಯ್ದೀಗ ! ಶಿಶುನಾಳ ಶರೀಫರ ಮಾತಿಲ್ಲಿ ಹೇಳ್ತರೆ ಸೀರೆಯಾ ನೈಟಿ ನುಂಗಿತ್ತಾ !! [ಶರೀಫರ ಕ್ಷಮೆ ಕೋರುತ್ತೆ]
- ರಜ್ಜ ಸೌಖ್ಯ ಇಲ್ಲದ್ದೆ ಅಪ್ಪಗಳೇ ಸಾಂಬಾರ ಮರಿಗೆಂದಲೂ ದೊಡ್ಡ ಮಾತ್ರೆ ಮರಿಗೆ ಹುಡುಕ್ಕುತ್ತ ಜನಂಗಳ ಕಾರ್ಬಾರಿಲ್ಲಿ ಕಷಾಯಂಗೊ ಇತ್ಯಾದಿ ಮನೆ ಮದ್ದುಗಳೇ ಕಾಣೆ ಆಯ್ದು ಹೇಳಿ ಬಂಡಾಡಿ ಅಜ್ಜಿಗೆ ಬೇಜಾರಾಯ್ದು, ಓ ಮೊನ್ನೆ ಡಾಗುಟ್ರಕ್ಕನ ಹತ್ತರೆ ಹೇಳಿಯೊಂಡಿತ್ತವು.
- ಮಲ್ಲಿಗೆ ಕೊಯ್ದು ಮಾಲೆ ಕಟ್ಟಿ ಮಗಳಿಂಗೆ ಸೂಡುಸುಲೇ ಹೇಳಿ ಬಪ್ಪಗ ಕೂಸಿನ ಜಡೆಯೇ ಕಾಣೆ ಅಡ ! ಉದ್ದಕ್ಕೆ ಅಲ್ಲದ್ದರೂ ಸಣ್ಣ ಮಾಲೆ ಸೂಡೂವಷ್ಟಾರೂ ಇದ್ದಿದ್ದರೆ ಆವ್ತಿತು, ಹಿಂದಂದ ನೋಡುವಗ ಮಾಣಿಯೋ ಕೂಸೋ ಹೇಳುವ ಸಂಶಯ ಬಾರದ್ದ ಹಾಂಗೆ ಹೇಳಿ ನೆಗೆಮಾಣಿ ಹೇಳಿದ.
[ಕಾಣೆ ಆದವರ ಪಟ್ಟಿ ಇನ್ನೂ ಉದ್ದ ಇದ್ದು, ಆದರೆ ಎಲ್ಲವನ್ನೂ ಒಟ್ಟಿಂಗೇ ಕೊಟ್ಟರೆ ಹುಡುಕ್ಕುವವಕ್ಕೆ ಬಂಙ ! ]
ಕಾಣೆ ಆದವರ ಬಗ್ಗೆ ಮಾಹಿತಿ ಕೊಟ್ಟವಕ್ಕೆ ಮಳೆಗಾಲಲ್ಲಿ ಕೂದೊಂಡು ತಿಂಬಲೆ ನಾಲ್ಕು ಪುಳಿಂಕಟೆಯನ್ನೂ ನಾಲ್ಕು ಸಾಂತಾಣಿಯನ್ನೂ ಕೊಡ್ಸುಲೆ ಗುರಿಕ್ಕಾರ್ರ ಹತ್ತರೆ ಶಿಫಾರಸು ಮಾಡ್ಲಕ್ಕು 🙂
ಈ ಪಟ್ಟಿಲಿ ಇಪ್ಪ ಎಲ್ಲವೂ ಪೂರ ಹೇಳಿ ಕಾಣೆ ಆಗದ್ದರೂ ಹೆಚ್ಚಿಂದು ಭಾಗಶಃ ಕಾಣೆ ಆಯ್ದು . ಕಾಲಕ್ಕೆ ತಕ್ಕ ಕೋಲ ಹೇಳಿದ ಹಾಂಗೆ ನಡೆತ್ತಾ ಇದ್ದು. ಆದರೆ ಎಲ್ಲದಕ್ಕೂ ಅದೇ ಮಾತು ಅನ್ವಯ ಆವ್ತಿಲ್ಲೆ. ಕೆಲವು ಸರ್ತಿ ಕೆಲವೆಲ್ಲ ಕಾಣೆಯಾದವರ ಪಟ್ಟಿಗೆ ಸೇರದ್ದ ಹಾಂಗೆ ನಾವು ನೋಡೆಕಾವ್ತು….ಅಲ್ಲದ್ದರೆ ನಾಳೆ ನಮ್ಮ ಅಸ್ತಿತ್ವವೇ ಕಾಣೆ ಅಪ್ಪ ಪರಿಸ್ಥಿತಿಗೆ ನಾವೇ ಕಾರಣ ಆವ್ತು !! ಎಲ್ಲರೂ ಕೈ ಜೋಡುಸುವ…ಆರೂ ಕಾಣೆ ಆಗದ್ದ ಹಾಂಗೆ ನೋಡಿಗೊಂಬ 🙂
-ನಿಂಗಳ
ಸುವರ್ಣಿನೀ ಕೊಣಲೆ.
ಅಕ್ಕನ ಆರು ದಿನುಗೇಳಿದ್ದು ಈಗ? ಅರ್ಧಲ್ಲೇ ಬಿಟ್ಟಿಕ್ಕಿ ಹೋಯಿದವು. ತೋಟಕ್ಕೆ ನೀರು ಚೇಪುವ ಚಿಲ್ಲಿ ಇಲ್ಲೆ. ಚೊಟ್ಟೆ, ಚೊಟ್ಟೆ ಮರಿಗೆ ಇಲ್ಲೆ. ನೀರು ಚೇಪುವ ದಂಬೆ ಇಲ್ಲೆ. ಮೀವಲೆ ಹೋದರೆ ಸೀಗೆ ಹೊಡಿ, ಭಾಗೆ ಹೊಡಿ ಇಲ್ಲೆ. ವಸ್ತ್ರ ತೊಳವಲೆ ನರುವಳ ಹೊಡಿ ಇಲ್ಲೆ.ಎಲೆ ತಿಂಬಲೆ ಎಲೆ ತಟ್ಟೆಯ ಮಡುಗಿದ್ದವಿಲ್ಲೆ. ಬೆಲ್ಲನೀರು ಆಸರಿಂಗೆಯಂತೂ ಕೊಟ್ಟಿದವೇಇಲ್ಲೆ. ಕೊಟ್ಟಗೆಗೆ ಹೋಪಾಗ ಒನಕೆ ಇಲ್ಲೆ. ಬೀಸುವ ಕಲ್ಲೂ ಇಲ್ಲೆ. ಅಜ್ಜಿಯ ಕೆಂಪು ಮಡಿ ಎಲ್ಲಿ ಮಡುಗಿದ್ದು ಈ ಕೂಸು ಗೊಂತಿಲ್ಲೆ.ಾಜ್ಜಿಗೆ ಮಡಿ ಸುತ್ತದ್ದೆ ಉದಯರಾಗ. ಜೋಗುಳ ಪದ,ಆರತಿ ಎತ್ತುವ ಹಾಡು ಹೇಳುವ ಕ್ರಮ ಇಲ್ಲೆ.
ಇದರ ಎಲ್ಲಾ ಹುಡುಕಿ ಕೊಡೊದು ಬಿಟ್ಟು ಈ ಅಕ್ಕ ಎಲ್ಲಿ ಪುನಹ ಕಾಣೆ ಆತು ಗೊಂತಾವಿತ್ತಿಲ್ಲೆ. ಒಂದರಿ ಆರಾದರೂ
ಹುಡುಕಿ.
ಜೀವನ ಕ್ರಮದ ಸಹಜ ಬದಲಾವಣೆಯೇ ಕಾರಣ ಆಗಿ..
ಅಗತ್ಯ ಇಲ್ಲದ್ದ ,ಅಥವಾ ಇಲ್ಲೇ ಹೇಳಿ ಕೆಲವು ಜನ ಗ್ರೇಶಿದ ಸಂಗತಿಗಳ ಕಾಣದ್ದೆ ಅಪ್ಪದು ಒಂದು ಸಾಮಾನ್ಯ ಸಂಗತಿ..
ಮನುಷ್ಯನೇ ಕಾಣೆ ಅಪ್ಪ ಈ ಲೋಕಲ್ಲಿ ಮನುಷ್ಯರು ಕಂಡುಕೊಂಡ ಕ್ರಮಂಗೊ ಇಲ್ಲದ್ದೆ ಅಪ್ಪದು ಚೋದ್ಯವೇ ಅಲ್ಲ ಬಿಡಿ.
ಯಾವುದೇ ವಸ್ತು ಅಥವಾ ಕ್ರಮಂಗೊ ಉಪಯೋಗ ಇಲ್ಲದ್ದ್ರೆ ಕಾಣೆಯಾಗಿಯೋ…ಇಡುಕ್ಕಿ ಹೋಪದೋ
ಆದರೆ ಅದರಲ್ಲೆಂತ ಆಶ್ಚರ್ಯ..??
ಆದರೆ ಅದರ ಲೇಖನ ಮಾಡಿದ್ದು ಒಳ್ಳೇದಾಯಿದು..
ಚೆಂದದ ಕಲ್ಪನೆ / ಬರಹ..
ಸುವರ್ಣಿನಿ ಅಕ್ಕೋ,
ನಿಂಗೋ ಒಂದು ಊರಿಂದ ಇನ್ನೊಂದು ಊರಿಂಗೆ ಎತ್ತಿ ಒತ್ತರೆ ಆಗಿ ಬೈಲಿಂಗೆ ಎತ್ತಿದಿ ಅನ್ನೆ!! ಸಮಾಧಾನ ಆತು!! ಈ ಡಾಗುಟ್ರಕ್ಕೋ ಇಲ್ಲದ್ದೆ ಬೈಲು ರಜ್ಜ ಕಂಗಾಲು ಆವುತ್ತು. ಒಂದು ಡಾಗುಟ್ರಕ್ಕ° ಬಂತು. ಇನ್ನೊಂದು ಕಾಣೆ ಆದೋರ ಪಟ್ಟಿಗೆಯೋ!!! 😉
ಕಾಣೆ ಆದ್ದದರಲ್ಲಿ ಬೈಲಿನ ಪಟದ ಪುಟ ಮೊದಾಲು ಸೇರ್ಸಿಕ್ಕಿ ಆತೋ!!! ಅದು ಎಲ್ಲಿ ಕಾಣೆ ಆಯಿದು ಹೇಳಿ ಸುಮಾರು ಹುಡುಕ್ಕಿ ಸಿಕ್ಕಿದ್ದಿಲ್ಲೆ ಎನಗೆ!! ವರ್ಷ ಒಂದಾತು ಹೊಸ ಪಟಂಗ ಬಾರದ್ದೆ!! ಬಪ್ಪ ತಿಂಗಳಿಂಗೆ ವಾರ್ಷಿಕೋತ್ಸವ ಮಾಡ್ಲೆ ಇದ್ದು ಹೇಳಿದ್ದ° ಶ್ರೀಶಣ್ಣ !! 😉
ನೆಗೆ ಮಾಣಿ ಪಟ ಎಲ್ಲ ಕಾಣೆ ಮಾಡಿದ್ದ° ಹೇಳಿದ° ಒಪ್ಪಣ್ಣ!! ಪತ್ತಾಯಲ್ಲಿ ಮಡಗಿದ್ದದಡ. ಪತ್ತಾಯಕ್ಕೆ ಒರಳೆ ಬಂತೋ!! ಈಗ ಇಲ್ಲೆಡ್ಡ. ಅದು ಮಾಂತ್ರ ಅಲ್ಲ ಪತ್ತಾಯಲ್ಲಿ ಮಡಗಿದ್ದದು ಸುಮಾರು ಒಳ್ಳೆ ಒಳ್ಳೆ ಮಾಹಿತಿಗೋ ಕಾಣೆ ಆಯಿದು ಹೇಳಿ ಗುರಿಕ್ಕಾರ್ರು ರಜ್ಜ ಸಮಯ ಮದಲು ಹೇಳಿಗೊಂಡಿತ್ತಿದ್ದವಡ್ಡ…. 🙁 🙁
ಬೈಲಿಲಿ ಶಾಂತತ್ತೆ ಆಟಿಲಿ ಆದರೂ ಪುರುಸೋತ್ತು ಮಾಡಿ ಬತ್ತವೋ ನೋಡೆಕ್ಕಷ್ಟೇ!!
ನಮ್ಮ ಮನೆಗಳಲ್ಲಿ ಹಿರಿಯರಿಂದ ಬಂದದು ಸುಮಾರು ಕಾಣೆ ಆಯಿದು. ನಾವೆಲ್ಲ ಒಂದರಿ ಸರಿಯಾಗಿ ನೋಡಿ ಮಡಿಕ್ಕೊಂಡರೆ ಇನ್ನು ಕಾಣೆ ಅಪ್ಪದು ತಪ್ಪುಗು. ಸುವರ್ಣಿನಿ ಅಕ್ಕೋ, ಎಲ್ಲೋರೂ ಒಂದರಿ ಆಲೋಚನೆ ಮಾಡ್ಲೆ ಅಪ್ಪ ಹಾಂಗೆ ವಿಷಯ ಕೊಟ್ಟಿ ಧನ್ಯವಾದಂಗ.
ಶ್ರೀ ಅಕ್ಕ, ಎನಗೂ ನಿಂಗಳೆಲ್ಲರಿಂದ ದೂರ ಹೋಗಿ , ಕಾಣೆ ಆಗಿ ಬೇಜಾರಾಯ್ದು 🙁 ಬೈಲಿಂದ ಕಾಣೆ ಅಪ್ಪದು ತಾತ್ಕಾಲಿಕ ಅಷ್ಟೇ !! ಎಲ್ಲಿ ಹೋದರೂ , ನವಗೆ ನಮ್ಮ ಬೈಲೇ ಲಾಯ್ಕ ಅಲ್ಲದಾ? ಊರಿಡೀ ತಿರುಗಿ ಬಂದು ನಮ್ಮ ಮನೆಗೆ ಬಂದು ಎತ್ತಿದ ಹಾಂಗೆ..
ಅಕ್ಕ ಪರಿಕಲ್ಪನೆ ತುಂಬಾ ಚೆನ್ನಾಗಿದ್ದು.. ನಂಗೆ ಇಸ್ತವಾಗದ್ದು ಹುಡುಗಿಯರ ಮುಖದಮೆಲಿನ ಕುಂಕುಮ ಕಾಣೆಯಾಗದ್ದು.. ಆದ್ರೆ ಇನ್ನೂ ಒಂದಿದ್ದು.. ಜಡೆನೂ ಅದರ ಜೊತೆಗೆ ನಾಪತ್ತೆ ಆಜು….
ಹಂಗೆ ನೋಡ್ತಾ ಹೋದ್ರೆ ನಮ್ಮ ಅಚ್ಚು ಮೆಚ್ಚಿನ ಹಕ್ಕಿ, ಗುಬ್ಬಕ್ಕ ಪಾಪ ಎಲ್ಲಿಗೆ ಹೋತೆನ?
ಹೀಂಗೆ ಬರೆತೆ ಹೋದ್ರೆ ತುಂಬಾ ಇದ್ದು..
ಗಣೇಶ್ ಉಪಾಧ್ಯ
‘ಕಿರುಮಾಣೀ.. ಹೊನ್ನ ಮೇಲೊಪ್ಪ ಕಿರುಗೆಜ್ಜೇ..
ಸರ್ಪ ತೀಙಾಣಿ ಸರ್ಪನ್ನಾಭರಣ..
ತೊಟ್ಲಿಂಗೇ ಬಂದಾವು ಹನ್ನೆರಡಾರೊಳಗೇ..
ಘಮ್ಮೂ ಘೈಲೆಂಬಾ ಕೀಲನ್ನೇ ಕೊಟ್ಟೂ..’
ಎನ್ನ ಬಾಲ್ಯಲ್ಲಿ ಎಂಗಳ ಮನೆಲಿ ಇದ್ದಿದ್ದ ಹೊನ್ನಕ್ಕಜ್ಜಿ (ಎನ್ನ ಅಪ್ಪನ ಸೋದರತ್ತೆ) ಹೇಳಿಂಡಿದ್ದಿದ್ದ ತೊಟ್ಳಹಾಡಿಲ್ಲಿ ಎನಗೆ ಈಗ ನೆಂಪಿಪ್ಪ ಕೆಲವು ಸಾಲುಗೊ ಇದು.
ಹೀಂಗಿದ್ದ ಹಾಡುಗೊ, ಹಾಡುವ ಅಜ್ಜಿಯಕ್ಕೊ, ಹಾಡಿಸಿಗೊಂಬ ಮಕ್ಕೊ, ಉದ್ದಾಕೆ ಉಚ್ಚಾಲು ಬಿಡುವಗ ‘ಕ್ರಿಯೋಂ ಕ್ರಿಯೋಂ’ ಲಯಬದ್ಧ ಶಬ್ದಮಾಡಿಂಡು ಇದ್ದಿದ್ದ ತೊಟ್ಲುಗೊ ಎಲ್ಲವೂ ಈಗ ಕಾಣೆ.. ಕಾಣೆ..
‘ಭಾವ,ಈಗಾಣ ಮಕ್ಕೊಗೆ ಹೀಂಗಿಪ್ಪ ಆಭರಣಂಗೊ ಬಿಡಿ; ನೇರ್ಪಕೆ ಒಂದು ನೇವಳ ಇಕ್ಕೊ?’ ಕೇಳಿ ಕಿಸಕ್ಕನೆ ನೆಗೆ ಮಾಡಿದವು ಮನ್ನೆ ಚೆನ್ನೈ ಭಾವ. ಅದೂ ಅಪ್ಪಾದ ವಿಷಯವೇ!
(ಹೇಳಿದಾಂಗೆ, ಈ ತೀಙಾಣಿ/ಸರ್ಪನ್ನಾಭರಣ ಹೇಳಿರೆ ಏವ ನಮೂನೆ ಆಭರಣ; ಏವ ಅಂಗಕ್ಕೆ ಹಾಕಲೆ ಇಪ್ಪದು ಹೇಳಿ ಎನಗೂ ಗೊಂತಿಲ್ಲೆ. ಆರಾರು ಗೊಂತಿಪ್ಪವು ಬೈಲಿಂಗೆ ತಿಳುಸಿರೆ ಒಳ್ಳೆದು)
ಅಪರೂಪಕ್ಕೆ ಬಂದರೂ ಒಳ್ಳೆಯ ಶುದ್ದಿಯನ್ನೇ ಕೊಟ್ಟಿದಿ ಸುವರ್ಣಿನಿಯಕ್ಕಾ.. ಅಭಿನಂದನೆಗೊ.
ಓ ಮೊನ್ನೆ ಕೇರಳಕ್ಕೆ ಹೋಗಿಪ್ಪಗ, ಭತ್ತದ ಗೆದ್ದೆಲಿ ನೇಜಿ ನೆಡ್ತ ಒಂದು ಅಜ್ಜಿ [ಸಣ್ಣ ಪ್ರಾಯದವ್ವು ಈ ಕೆಲಸಕ್ಕೆ ಹೋಪದೇ ಕಾಣ್ತಿಲ್ಲೆ !!] ಮಲಯಾಳಲ್ಲಿ ನೇಜಿ ನೆಡುವ ಪದ್ಯ ಹೇಳುದು ಕೇಳಿತ್ತು, ನಮ್ಮ ಊರಿಲ್ಲಿ ಕೇಳ್ತೇ ಇಲ್ಲೆ ಅಲ್ಲದಾ?
ಬಿತ್ತಿಂಗೆ ಮಡುಗಿದ ಸೊರೆ ಬುರುಡೆ ಕಾಣೆ… ಕೆಲವು ಹಣ್ಣುಗಳಲ್ಲಿ ಬಿತ್ತೂ ಕಾಣೆ
ಸತ್ಯ….
ಆರು ಕಾಣೆ ಆದ್ದು?
ಕಾಣೆ ಆದವರ ಪಟ್ಟಿ ಸುಮಾರು ಉದ್ದ ಇದ್ದು ಅಣ್ಣಾ…..
ಹದಿನೈದು ದಿನಕ್ಕೆ ಮಗಳ ಮನಗೆ ಹೋಗಿ ಬಪ್ಪಗ ಶರ್ಮಪ್ಪಚ್ಚಿಯ ಉಪ್ಪಿನಕಾಯಿ ಬರಣಿ ಕಾಣೆಡ. ಅಡ್ಕತ್ತಿಮಾರು ಮಾವನ ಚಿಮಿಣಿ ದೀಪ, ಲಾಟಾನ್ ಎಲ್ಲಿ ಹೋತು ಹೇಳಿಯೇ ಗೊಂತಿಲ್ಲೇಡ. ಮಳೆಗಾಲಲ್ಲಿ ಬಟ್ಯನ ಕಿಡಿಂಜಲು ಕಾಣೆಯಾಗಿ ಕೆಲಸ ಬಿಟ್ಟಿಕ್ಕಿ ಹೋಪಗ ಮುಂಡಿ ಸೊಪ್ಪು ಸಾನ ಕಾಣುತ್ತಿಲ್ಲೆಡ. ಬಟ್ಟಮಾವನ ಚರ್ಮದ ಮೆಟ್ಟು ಕಂಬಳಿಬೆಟ್ಟು ಸಟ್ಟುಮುಡಿಗೆ ಹೋದಲ್ಲಿ ಕಾಣೆಯಾದ್ದು ಇನ್ನೂ ಮರದ್ದವಿಲ್ಲೆ. ಮಗ್ಗದ ಸೀರೆ ಅಗ್ಗ ಆದರೂ ಶ್ರೀ ಅಕ್ಕಂಗೆ ಮಾತ್ರ ಮರವಲೇ ಎಡಿತ್ತಿಲ್ಲೆಡ. ಫ್ರಿಡ್ಜ್ ಬಂದ ಮತ್ತೆ ಹೂಜಿ ಕಾಣುತ್ತಿಲ್ಲೆ ಹೇಳಿ ಈಗಳೂ ಹೇಳುತ್ತವು ಕೆದೂರ ಡಾಕುಟ್ರು. ಗಂಟಗೊಂದರಿ ನ್ಡೈ ನ್ಡೈ ಬಡುಕ್ಕೊಂಡಿದ್ದ ವಾಲ್ ಕ್ಲೋಕ್ ಈಗ ಬತ್ತಿಲ್ಯೊ ಕೇಳ್ತವು ಬಂಡಾಡಿ ಅಜ್ಜಿ. ಹೊಸ್ತಿಲ್ಲಿದ್ದರಲ್ಲದೋ ಉದಿಯಪ್ಪಗ ಎದ್ದು ಹೊಸ್ತಿಲಿಂಗೆ ಹೊಡಾಡುವದು, ರಂಗೋಲಿ ಹಾಕುವದು ಹೇಳ್ತವು ಜಯಶ್ರೀ ಅಕ್ಕ. ಇತ್ತೀಚಗೆ ದೀಪಾವಳಿಗೆ ಬಲೀಂದ್ರ ಎಲ್ಲೋರ ಮನಗೆ ಬಂದೊಂಬಲೆ ಎಡಿತ್ತಿಲ್ಲೆಡ. ಬುಗುರಿ ಇಲ್ಲದ್ದ ಮತ್ತೆ ಬುಗುರಿ ಆಡುತ್ತೇಂಗೆ, ಕುದುರೆಮುಖ ಬಿಟ್ಟಮತ್ತೆ ಕಲ್ಲುಜಿಬ್ಲಿ ಆಡಿದ್ದೇ ಇಲ್ಲೆ ಹೇಳಿ ದೀಪಿಕಾ ಕಂಪ್ಲೈಂಟು. ಅಜ್ಜಿಯ ಪೈಸೆ ಸಂಚಿ, ಮಾಸ್ಟ್ರು ಮಾವನ ಎಲೆ ಸಂಚಿ ಹುಡಿಕ್ಯೋಂಡು ಹೋದ ಪುಚ್ಚೆಪ್ಪಾಡಿ ಮಹೇಶಣ್ಣನ ಆರಾರು ಕಂಡಿದ್ದೀರೋ?. ಅದೆಲ್ಲಾ ಬಿಡಿ.., ಇಲ್ಲೇ ಅಡ್ಡಾಡಿಗೊಂಡಿದ್ದ ಬಾಲಿಶ್ ಬಾಲಣ್ಣ , ಸಂಸ್ಕೃತ ಸಂಶೋಧನಗೆ ಇಳುದ ಡಾ॥ ಮಹೇಶಣ್ಣನೂ ಕಾಣೆ. ಪಲ್ಲೆಕ್ಕಾಯಿ ಆರಿಂಗಾರು ಸಿಕ್ಕಿರೆ ಬಂಡಾಡಿ ಅನುಅಕ್ಕಂಗೆ ಬೇಕಡ – ನೆಲಕ್ಕಲ್ಲಿ ಉದ್ದಿ ಬೆಶಿಮಾಡಿ ಪೋಕನೇಟು ಮಕ್ಕಳ ಕಾಲಿಂಗೆ ತಾಗುಸಲೋ, ಬಣ್ಣ ಹಚ್ಚಿ ಕಿಟಿಕಿಲಿ ಮಡುಗಲೋ. ಧ್ವನಿ ರೆಕಾರ್ಡ್ಗಗೊ , ರೆಕಾರ್ಡ್ ಪ್ಲೇಯರ್ ಇದ್ದರೆ ಮುಳಿಯ ಭಾವಂಗೆ ಇರಲಿ ಹೇಳಿದ್ದವು. ಹಾಳೆಲಿ ಕೂರ್ಸಿ ಎಳೆತ್ತ ಆಟ ಇದ್ದರೆ ಚೈತು ಬತ್ತಡ.
ಕಾಣೆ ಆದ ಕೆಲವೊಂದರ ಬಗ್ಗೆ ಮಾತಾಡೂವಗ ಹಳೇ ನೆನಪುಗೊ ಮೆಲ್ಲಂಗೆ ಮನಸ್ಸಿಲ್ಲಿ ಹಾದು ಹೋವ್ತು …. ಬೇಸಗೆ ರಜೆಲಿ ಊರಿಂಗೆ ಹೋಗಿಯೊಂಡಿದ್ದಿಪ್ಪಗ ಆಡಿಗೊಂಡಿದ್ದ ಆಟಂಗೊ.. ಗಾಳಿಗೆ ಬೀಳುವ ಕಾಟು ಮಾವಿನ ಹಣ್ಣು ಹೆರ್ಕುಲೆ ಕಾದು ಕೂಬದು !! ಹಪ್ಪಳ ಒಣಗ್ಸುಲೆ ಮಕ್ಕಳ ಕೂರ್ಸಿರೆ ಅಲ್ಲಿಂದ ಹಪ್ಪಳವೂ ಕಾಣೆ ಮಕ್ಕಳೂ ಕಾಣೆ !!! ಇದೆಲ್ಲವೂ ಈಗ ಕಾಂಬಲೆ ಸಿಕ್ಕುತ್ತೇ ಇಲ್ಲೆಯಾ ಏನ ಊರಿಲ್ಲಿ ಅಲ್ಲದಾ?
ಅದಾ, ಸುವರ್ಣಿನಿಅಕ್ಕ ಬಂದವು. ಇನ್ನು ಹೆದರಿಕೆ ಇಲ್ಲೆ – ಮಳಗೆ ಜ್ವರ ಬಂದರುದೇ.
ಕಾಣೆಯಾದ ಪಟ್ಟಿಲಿ ಎನ್ನ ಸ್ಲೇಟು ಸೇರುಸುವನಾ? 🙂
ಹೋದರೆ ಹೋಗಲಿ, ಹುಡ್ಕುದು ಬೇಡ. ಅಲ್ಲದಾ?
ನಿನ್ನ ಸ್ಲೇಟು ಕಾಣೆ ಆದರೆ ಹುಡ್ಕುದು ಖಂಡಿತಾ ಬೇಡ ಮಾಣಿ….. ಹೊಸತ್ತು ತಂದರಾತು 🙂
[ಸುವರ್ಣಿನಿ ಎಲ್ಲಿ ಕಾಣೆ ಅಯಿದು ಹೇಳಿ ಒಂದು ಸಂಶಯ ಬಂದದು ಅಪ್ಪು.
ಬೈಲಿಲ್ಲಿ ಹಾಂಗೆ ಇನ್ನೂ ಕೆಲವು ಜೆನಂಗೊ ಅಂಬಗಂಬಗ ಕಾಣೆ ಆವ್ತಾ ಇದ್ದವು.]
ಶುದ್ದಿ ಲಾಯಿಕ ಆಯಿದು.
ಪ್ರಾಣಿ ಪಕ್ಷಿಗಳೂ ಕಾಣೆ ಆದ ಲಿಸ್ಟಿಲ್ಲಿ ಇದ್ದವು. ಮೊಬೈಲ್ ಬಂದ ನಂತ್ರ ಗುಬ್ಬಚ್ಚಿಗೊ ಕಾಣೆ ಆಯಿದವು.
ಧನ್ಯವಾದ….. 🙂
ಅಪ್ಪು, ಸುಮಾರು ವಸ್ತುಗಳೂ ಜೀವಿಗಳೂ ಕಾಣೆ ಆವ್ತಾ ಇಪ್ಪದಪ್ಪು.. ಅದರೊಟಿಂಗೆ ಮಾನವತೆಯೂ ಕೆಲವು ಕಡೆ ಕಾಣೆ ಆವ್ತಾ ಇದ್ದು ಹೇಳಿ ದುಃಖವೂ ಆವ್ತು..
ಓಹ್,,ಕಾಣೆ ಶುದ್ದಿ ಫಷ್ಟು ಆಯಿದು.
ಧನ್ಯವಾದ….. 🙂
ಲೇಖನ ಪಷ್ಟಾಯಿದು.
ಧನ್ಯವಾದ…..
ಇದಾ …, ಕಾಣೆಯಾದ ಪಟ್ಟಿಲಿ ಕುಂಬಳೆ – ಸುಳ್ಯ ಸಿ.ಪಿ.ಸಿ. ಬಸ್ಸು ಮತ್ತು ಕಾಸರಗೋಡು ಪುತ್ತೂರು ಕೆ.ಬಿ.ಟಿ ಬಸ್ಸು ಸೇರ್ಸದ್ದರೆ ಪೆರ್ವ ಗಣೇಶಣ್ಣ ಹೆಜ್ಜೆ ತೆಳಿಗೆ ಉಪ್ಪಾಕಿ ಕುಡಿವಲೆಲ್ಲೆಡ!
{ಪೆರ್ವ ಗಣೇಶಣ್ಣ ಹೆಜ್ಜೆ ತೆಳಿಗೆ ಉಪ್ಪಾಕಿ ಕುಡಿವಲೆಲ್ಲೆಡ}
ಹ್ಮ್.. ಉಪ್ಪಾಕದ್ದೆ ಕುಡಿವಲಕ್ಕನ್ನೆ… ಚೂರು ಉಪ್ಪಿನಕಾಯಿ ಎಸರುದೆ, ಮಜ್ಜಿಗೆಯುದೆ ಹೆಜ್ಜೆ ತೆಳಿಯೊಟ್ಟಿ೦ಗೆ ಸೇರಿಸಿ ಕುಡುದರಾತಿಲ್ಯಾ… ಲಲ್ಲಲಾ….
ಕಾಣೆ ಆದ್ದು ಹೋದ ಹಾಂಗೆ ಇನ್ನು ತಿರುಗಿ ಬಕ್ಕಾ ??ನಮ್ಮ ಸಂಸ್ಕ್ರುತಿಯೇ ಕಾಣೆ ಆಉತ್ತಾ ಇದ್ದು.. ಮೊದಲು ಮಳೆ ಸುರು ಆದ ಕೂಡಲೆ ಗೆದ್ದೆ ಹೂಡುವ ಗೌಜಿ ಎತ್ತುಗ,ಗೋಣಂಗಳ ಕಟ್ಟಿ ಹೂಡುವ ಜನಂಗ ತರ ತರದ ಸ್ವರಂಗಳ ಹೆರದುಸುದು ಊರಿಂಗೆ ಇಡೀ ಕೇಳುಗು ಇಂದು ಅದು ಕಾಣೆ ಆಗಿ ಕೇವಲ ಟಿಲ್ಲರ್ ,ಟ್ರಕ್ಟರ್ ಗಳ ಸ್ವರ,ಹೊಗೆ ಮಾಂತ್ರ ಕೇಳುತ್ತಸ್ತ್ತೆ..ಮೊದಲು ಹೂಡುವಗ ಆ ಗೆದ್ದೆಗಳಲ್ಲಿ ಎಸ್ಟ್ಟು ನಮುನೆ ಹಕ್ಕಿಗ ಬಂದು ಹುಳು,ಹುಪ್ಪಟೆ ಗಳ ಹೆರ್ಕ್ಕುಗು ?ಇಂದು ಅದು ಕಾಣೆ ಆತಾ ಮತ್ತೆ ಗೆದ್ದೆಗಳಲ್ಲಿ ನೇಜಿ ನೆಡುವ ಗೌಜಿಯೆ ಅದರ ವರ್ಣಿಸುಲೆ ಎಡಿಯ ಒಂದು ಗೆದ್ದೆಲಿ ಓಬೇಲೆ ಹೇಳಿ ಪಾಡ್ದನಂಗ ಕೇಳಗೊ ಇನ್ನೊಂದು ಗೆದ್ದೆಲಿ ಎದುರು ಕಥೆ ಹೇಳಿ ಅವರ ಪಾಂಡಿತ್ಯ ತೋರುಸುಗು ದಾರಿಲಿ ನೆಡಕ್ಕೊನ್ಡು ಹೋಪೋರು ಕೂಡಾ ಕಣ್ಣು ಬಿಟ್ಟು ನೋಡುಗು ಅಂತೂ ಅಲ್ಲಿ ಹಬ್ಬದ ವಾತಾವರಣ ಕೆಲಸ ಮಾಡುಲೆ ಬಾರೀ ಉಮೇದು ಎಲ್ಲಾ ಇಕ್ಕು ಆದರೆ ಇಂದು ಬರೀ ಒಣ ಹರಟೆ ಎಲ್ಲ ಯಾಂತ್ರೀಕ್ರುತ ಅಂತೂ ಹರಕ್ಕೆ ಸಲ್ಲುಸುದು ಆ ವೈಭವ ಎಲ್ಲಾ ಕಾಣೆ ಆಇದು..ಗೆದ್ದೆ ನೆಟ್ಟು ಆತಾ ಮತ್ತೆ ಕೆಪ್ಪಗಳ ತರ ತರದ ಸಂಗೀತ ,ಹಕ್ಕಿಗಳ ಗಾಯನ ಒಂದೂ ಹೇಳಿ ಸುಖ ಇಲ್ಲೆ ಈಗೆಲ್ಲಾ ಅದು ಬರೀ ಕಲ್ಪ್ಪನೆ ಅಸ್ಟ್ಟೆ..ಒಂದು ಗೆದ್ದೆಲಿ ಒಂದು ಜೋಡೆತ್ತು ಆದರೆ ಇನ್ನೊದರಲ್ಲಿ2 ಮತ್ತೊನ್ದರಲ್ಲಿ 4 ಜೋಡು ಅವು ನಡವ ಗಾಂಭೀರ್ಯವ ,ಅದರ ಚೆಂದವ ಅದರ ವರ್ಣಿಸುಲೆ ಎಡಿಯ..ಒನ್ದು ಗೆದ್ದೆ ಕರೇಲಿ ಹೊಪಗ ಒಂದು ಜಾತಿ ಬತ್ತದ ಪರಿಮಳ ಇನ್ನೋಂದು ಗೆದ್ದೆಲಿ ಮತ್ತೊನ್ದು ಪರಿಮ್ಮಳ ನಮ್ಮ ಮನಸ್ಸು ಶರೀರ ಎಲ್ಲಾ ಹಗುರ ಅಕ್ಕು ಆದರೆ ಈಗ ಎಲ್ಲಿ ಅದು ಎಲ್ಲಾ ಕಾಣೆ…ಭತ್ತದ ಜಾತಿಗಳಾ ಹೇಳಿ ಎಂತ ಸುಖ ಒಂದು ಗೆದ್ದೆಲಿ ಕಯಮ್ಮೆ ಇನ್ನೊಂದರಲ್ಲಿ ರಾಜ ಕಯಮ್ಮೆ ಮತ್ತ್ಂದರಲ್ಲಿ ಪರಿಮ್ಮಳದ ರಾಜ ಗಂಧಸಾಲೆ ಮತ್ತೋಂದರಲ್ಲಿ ಇನ್ನೋಂದು ಹೀಂಗೆ ಒಂದು ಬೆಣ್ತೆಕ್ಕಿಗೆ ಇನ್ನೋಂದು ಕೊಶಿಅಕ್ಕಿಗೆ ಇನ್ನೊಂದು ಎದುರು ಬೆಣ್ತೆಕ್ಕಿಗೆ ಒಂದು ಕಡವಲೆ ಇನ್ನೊಂದು ಉಂಬ ಅಕ್ಕಿ ಮತ್ತೊಂದು ಹಳತ್ತಿಂಗೆ ..ಈಗ ಎಂತ ಇದ್ದು ಒಂದೇ ಸರಕಾರಂದ ಸಿಕ್ಕಿದ ವಿಶ ಬೀಜಂಗ ಅತ್ಲಾಗಿ ಬೆಣ್ತೆಕ್ಕಿಯೂ ಅಲ್ಲ ಇತ್ಲಾಗಿ ಕೊಶಿ ಅಕ್ಕಿಯೂ ಅಲ್ಲ ಪರಿಮ್ಮಳವ ಅದು ಇಲ್ಲಾ ಲೇ ಇಲ್ಲೆ ಅದಕ್ಕೆ ಬಿದುವ ವಿಶದ್ದೆ ಅದರ ವಾಸನೆ ಸಕಲ ಚರಾಚರಂಗಳ ಕೊಲ್ಲುವ ಕಾರ್ಕೊಟಕ ಮದ್ದೆ ಅದಕ್ಕೆ ಬಿದುದು ಆ ಅಕ್ಕಿಯ ಉಂಡು ಹೆಸರು ಕೇಳದ್ದ ರೊಗ ಹಿಡುಶಿ ತಿರುಗಿ ಒಂದು ದಿನ ಒಂದು ದಿನ ನಾವೂ ಕಾಣೆ…. ಡಾಗುಟ್ರಕ್ಕೋ ಬರದ್ದು ಬಾರೀ ಲಾಯಿಕ ಆಇದು..
ಓ ಮೊನ್ನೆ ಕೇರಳಕ್ಕೆ ಹೋಗಿಪ್ಪಗ, ಭತ್ತದ ಗೆದ್ದೆಲಿ ನೇಜಿ ನೆಡ್ತ ಒಂದು ಅಜ್ಜಿ [ಸಣ್ಣ ಪ್ರಾಯದವ್ವು ಈ ಕೆಲಸಕ್ಕೆ ಹೋಪದೇ ಕಾಣ್ತಿಲ್ಲೆ !!] ಮಲಯಾಳಲ್ಲಿ ನೇಜಿ ನೆಡುವ ಪದ್ಯ ಹೇಳುದು ಕೇಳಿತ್ತು,
ನಿಂಗಳ ಮಾತು ನೂರಕ್ಕೆ ನೂರು ಸತ್ಯ, ಕಾನೆ ಅಪ್ಪ ಈ ಮಾಯೆಯೊಳ ಮುಂದೊಂದು ದಿನ ನಾವೇ ಮಾಯ !
prasthutha kalakke takka lekhana, laykayidu…. 🙂
ಅಕ್ಕ, ಧನ್ಯವಾದ 🙂
ಎದಾ.. ಎನ್ನ ಎರಡು ಹಲ್ಲು ಕಾಣೆ ಆಯಿದು ಹುಡುಕ್ಕಿ ಕೊಟ್ಟವಕ್ಕೆ, 🙂
ಒ೦ದು …. ಬಹುಮಾನ.. 😉
ಬಹುಮಾನ ಎಂತರ ಹೇಳಿ ಮೊದಲು ಹೇಳಿರೆ, ಹುಡ್ಕೆಕಾ ಬೇಡದಾ ಹೇಳಿ ತೀರ್ಮಾನ ಮಾಡ್ಲಕ್ಕು…. !!
ಬೋಸ ಎಂರತ ಕೊಡುಗು … ಎಲ್ಯಾರು ಜೆಂಬ್ರಲ್ಲಿ ಕಿಸೆಲಿ ಹಾಕಿಗೊಂಡ ಕಸಂಟು ಲಾಡೋ .. ಹೋಳಿಗೆಯೋ ಇಕ್ಕು …
ಇದಾ ಭಾವ..
ನಿ೦ಗೊ ಹುಡುಕ್ಕಿ ಕೊಡಿ.. ಮತ್ತೆ ನೋಡೊ..
ಲಾಡೋ ಮತ್ತೊ೦ದೊ..
ಕಿಸೆಲಿ ಎ೦ತ ಸಿಕ್ಕುತ್ತು ಅದು.. 😉
ಬಾಳು ಹಿಡ್ಕೊಂಡು ಒಂಡು ಭಂಡಾರಿಯೂ ನಿಂಗಳ ಹುಡ್ಕಿಗೋಂಡು ಹೆರಟದು ಕಾಣೆ ಆಯಿದಡ..ಅಪ್ಪೊ.ಅದನ್ನೂ ಹುಡ್ಕಿದರೆ ಸಿಕ್ಕುಗೋ ಪ್ರೈಸು..?
ಯಬೋ..!!..
ಅಪ್ಪೋ..!!
ನಿ೦ಗೊ ಹುಡ್ಕುದೂ ಬೇಡ,ಅ೦ಬಗ ಅದು ಸಿಕ್ಕುದು ಬೇಡ.. 😉
ಬಹುಶ್ಯಾ ಅದು ಈ ಆಟಿ ಮಳೆಗೆ ಸಾರಡಿ ತೋಡಿಲ್ಲಿ ಕೊಚ್ಚೆ೦ಡು ಹೋಯೊದೋ ಹೇಳಿ.. ಉಮ್ಮಪ್ಪಾ..!! 🙂
ಲಾಯಕಾಯಿದು ಅಕ್ಕೋ…!!
ಬೊಟ್ಟು ಬಳೆ ಮಾತ್ರ ಅಲ್ಲ ಅಕ್ಕೋ.. ಗೆಜ್ಜೆಯೂ ಕಾಣೆ ಆಯಿದು..
ಟಿಕ್ಕಿ-ಜುಟ್ಟು, ಈಗೀಗ ಜೆಪ – ಜುಟ್ಟು ಜನಿವಾರವೂ..
ಅದೂ ಅಪ್ಪು…
😉
ಚೆನ್ನೆ ಮಣೆ, ಲಗೋರಿ, ಕುಟ್ಟಿ ದೊಣ್ಣೆ ಎಲ್ಲ ನೆ೦ಪಾತು ಲೇಖನ ಓದ್ಯಪ್ಪಗ 🙂
ಹ೦ಚಿನ ಮನೆ ಕಮ್ಮಿ ಆಯ್ದೀಗ! ಹುಮ್ ಮಳೆ ನೀರು ಸೋರುವ ತಲೆ ಬೆಶಿ ಇಲ್ಲೆ ಈಗಾಣ ಮನೆಗಳಲ್ಲಿ.
ಗೆದ್ದೆ, ತೋಟ ಕಮ್ಮಿ ಆವ್ತಾ ಇದ್ದೆ.
ಕಾಕತ ಹಾಕುಲೆ ಆನು ಪೋಶ್ಟು ಆಪೀಸಿ೦ಗೆ ಯೇವಾಗಪ್ಪ ಹೋದ್ದು 🙂 ಈಗೆಲ್ಲ ಈ-ಮೈಲು.
ಮತ್ತೆ ಮಾಣ್ಯ೦ಗೊಕ್ಕೆ ಕೂಸುಗೊ ಕಮ್ಮಿ !
ಉತ್ತಮ ಲೇಖನ ಆತ :). ಪಟ್ಟಿ ಮು೦ದುವರಿಯಲಿ.
🙂 🙂
ವಿವೇಕ ಭಾವ –
ಸ್ಟಾಂಪು ಅಂಟುಸಲೆ ‘ಗೋಂದು’ ?!
ಓ ಅಲ್ಲೆ ಮೂಕುತ್ತಿ ಕಾಣೆಯಾಯ್ದಡಡೋಯಿ. ಪಡಿಗೆ ದಂಬೆ ಸುಭಗಣ್ಣನ ಪತ್ತಾಯಲ್ಲಿ ಇದ್ದಡ. ದೊಡ್ಡಭಾವ ಶಾಲಗೆ ಹೋಗಿ ಬಪ್ಪಗ ಚೊಟ್ಟೆ ಕಾಣೆಡ. ಶ್ರೀ ಅಕ್ಕ ಇಸಿಮುಚ್ಚಾಲು, ಅಶನದಳಗೆ ಚೆರಿಗೆ ಎಲ್ಲಿ ಹಾಕಿದ್ದವೋಪ. ಪೋಲೀಸು ಬೂಟೀಸ್ ಟೊಪ್ಪಿ ಚಡ್ಡಿ ಹಳೆ ಸಿನೇಮಲ್ಲಿ ಕಾಣುತ್ತಪ್ಪೋ. ಗುಂಟಲ್ಲಿ ಸೊಪ್ಪು ಕೊಚ್ಚಲೆ ಕಡ್ಪಕತ್ತಿಯೇ ಬೇಕು. ದಾರಂದಲ್ಲಿ ಮಡುಗಲೆ ಎಂತೂ ಇರ್ತಿಲ್ಲೆ ಈಗ ಅಲ್ಲದೋ. ಬಾಗಿಲಿಂಗೆ ಚಿಲಕ ಹಾಕಲೆ ಇಲ್ಲೆ, ಬೋಳ್ಟು ಈಗ. ಹೊಳಿಮಣೆ ಆರು ಕೊಂಡು ಹೋದ್ದೇಳಿ ಗೊಂತಾಯ್ದಿಲ್ಲೆ ಇನ್ನೂ. ‘ಸಿಕ್ಕ’ ಇದ್ದೋ ಕೇಳಿರೆ ಸಿಕ್ಕ ಈಗ. ಪೇಟೆ ಮನೆಲಿ ಹೊಸ್ತಿಲು ಕಾಣೆಡ. ಕಲ್ಲನ ಕೊಟ್ಟಗ್ಗೆ ಹೋವ್ತವು ಆರಿದ್ದವೀಗ ಅಲ್ಲದೋ. ಹಲಸಿನ ಚಿಳ್ಳೆಲಿ ಉಂಬಲೆ ಕೇಜಿ ಮಾವಂಗೆ ಗೊಂತಿದ್ದಡ. ಬಿಗಿಲು ಊದುದು ಬಿಟ್ಟು ವಿಸಿಲ್ ಊದುತ್ತವಡ ಈಗ. ನೊಗ ಕಟ್ಟಲೆ ಎತ್ತು ಗೋಣನ್ಗೊ ಇಲ್ಲೆ ಈಗ. ಗಿರಿಗಿಟಿ ಆಡುತ್ತ ಮಕ್ಕೊ ಎಲ್ಲಿದ್ದವಲ್ಲದೋ ಈಗ. ನೋಡ್ವೋ ., ಹುಡುಕ್ಕುವೋ ಎಂತೆಲ್ಲ ಇನ್ನೂ ಕಾಣೆಮಾಡಿದ್ದವು ಇವ್ವು. ಹು..
ಇಲ್ಲಿಯಾಣ ಪಟ್ಟಿಲಿ ಇಪ್ಪ ಸುಮಾರು ಎನಗೆ ಗೊಂತೇ ಇಲ್ಲೆ !! ಕಾಣೆ ಆಗಿ ಸುಮಾರು ವರ್ಷಂಗಳೇ ಕಳತ್ತಾ ಹೇಳಿ !! ಇಸಿಮುಚ್ಚಾಲು,ಚೊಟ್ಟೆ,ಸಿಕ್ಕ,ಹಲಸಿನ ಚಿಳ್ಳೆ !!!
ಮು೦ಡು,ವೇಷ್ಟಿಗಳೂ ಸೇರುಲಕ್ಕು,ಈ ಪಟ್ಟಿಗೆ,ಅಲ್ಲದೋ?ಇ೦ದು ಕನಿಷ್ಟ ನಮ್ಮ ಜೆ೦ಬ್ರ೦ಗಳಲ್ಲಿ ಇದೂ ಕಾ೦ಬಲೆ ಸಿಕ್ಕುತ್ತಿಲ್ಲೆನ್ನೆ.
ಕಳುದ ವಾರ ಒ೦ದು ದಿನ,ಎನಗೆ ಹಿತ ಅಪ್ಪ ಜುಬ್ಬಾ ಹಾಕಿ ಆಫೀಸಿ೦ಗೆ ಬ೦ದಪ್ಪಗ ಎನ್ನನ್ನೇ ವಿಚಿತ್ರವಾಗಿ ನೋಡಿದವು,ಸುಮಾರು ಜೆನ.ವಿದೇಶಿ ಟೀ ಶರ್ಟು ಹಾಕಿರೆ ನೆಡೆತ್ತು,ಸ್ವದೇಶಿ ಜುಬ್ಬಾ ಎ೦ತಗೆ ಆಗ ಹೇಳಿ ಕೇಳಿಯಪ್ಪಗ ಅನುಮೋದನೆಯೂ ಸಿಕ್ಕಿತ್ತು.
ಪ್ರತಿದಿನ ಕಾಣೆಯಾದವರ ಪಟ್ಟಿ ಕಡಮ್ಮೆ ಆದಷ್ಟು ನಮ್ಮ ಸ೦ಸ್ಕೃತಿ ಒಳಿಗು.
ಅಪ್ರೂಪಲ್ಲಿ ಬ೦ದ ಡಾಗುಟ್ರಕ್ಕ ತ೦ದ ಶುದ್ದಿ ನೋಡಿ ಸ೦ತೊಷ ಆತು.
ಅಪ್ಪು, ಹೀಂಗೇ ಒಂದೊಂದೇ ಕಾಣೆ ಆವ್ತಾ ಹೋದರೆ ಮುಂದೊಂದು ದಿನ ನಾವೂ ಕಾಣೆ ನಮ್ಮೋರೂ ಕಾಣೆ ! ಸಂಸ್ಕೃತಿಯೂ ಕಾಣೆ ಸಂಸ್ಕಾರವೂ ಕಾಣೆ !
ಎಲ್ಲಾ ಮಾಯಾ, ಎಲ್ಲಾ ಮಾಯಾ ಹೇಳ್ತ ಪದ್ಯ ನೆಂಪಾವ್ತಾ ಇದ್ದಾನೆ.
ಕಾಣೆ ಆದವರ ಪಟ್ಟಿಗೆ ಸೇರಿಸ್ಲೆ ಇಪ್ಪದು : ಜೆಂಬರಲಿ ಉಂಬಗ ಮೊದಲೆಲ್ಲ ಹೇಳ್ತಿದ್ದ ಚೂರ್ಣಿಕೆ.
ಚೂರ್ಣಿಕೆಗೊ ಕಮ್ಮಿ ಆದ್ದಪ್ಪು…. ಮತ್ತೆ ಶುರು ಮಾಡ್ಲಕ್ಕು !! ಆದರೆ ಹಂತಿಲಿ ಕೂದು ಉಂಬ ಕ್ರಮವೇ ಕಾಣೆ ಆದರೆ ಎಂತ ಮಾಡುದು?
ಸುದರಿಕೆ ಮಾಡುವ ಮಕ್ಕೊ ಎಲ್ಲಿಗೆ ಹೊದವಪ್ಪಾ?
ಲೇಖನ ಭಾರೀ ಲಾಯ್ಕಾಯ್ದು…..ಎನ್ನನ್ನುದೇ ಕಾಣೆ ಆಯ್ದ ಹೇಳಿ ಹೇಳೆಕ್ಕಾರೆ ಮೊದಲೆ ಬೈಲಿಂಗೆ ಎತ್ತಿದ್ದೆ…!!!!
ಧನ್ಯವಾದ…!
ಆಕಾಶವಾಣಿಯ ವಾರ್ತೆಗಳ ಹಾಂಗೆ ಬಂದ “ಕಾಣೆಯಾಗಿದ್ದಾರೆ” ಸುದ್ದಿ ಶೋಕ್ (shock ಅಲ್ಲ ಆತೊ ?) ಆಯಿದು. ವ್ಯಂಗ್ಯ ಮಾಡುವುದರ ಮೂಲಕ ಒಂದು ಎಲ್ಲೋರೂ ಆಲೋಚನೆ ಮಾಡೆಕಾದ ಒಂದು ವಿಷಯವ ಕೊಣಲೆ ಅಕ್ಕ ಚರ್ಚೆಗೆ ಕೊಟ್ಟಿದು. ಕಾಣೆ ಆವ್ತ ಇಪ್ಪದರ ಪಟ್ಟಿಗೆ ಸೇರದ್ದ ಹಾಂಗೆ ನೋಡೆಳೆಕಾದ್ದ್ದು ನಮ್ಮೆಲ್ಲೋರ ಕರ್ತವ್ಯ , ನಿಜವಾಗಿಯೂ ಅಪ್ಪು.
ಧನ್ಯವಾದಂಗೊ ಬೊಳುಂಬು ಮಾವ… ಆಕಾಶವಾಣಿಯೋ? ಅದುವೇ ಕಾಣೆ ಆವ್ತೋ ಎಂತೋ!!
ಕಡವ ಕಲ್ಲು ಮಾಂತ್ರ ಇದ್ದು, ಕಂಜಿ ಕಾಣೆ ಆಯಿದು…!
ಕಾಣೆ ಆದವರ ಹುಡ್ಕುಲೆ ಹೆರಟವು ಕಾಣೆ ಆಯಿದವಡ..!
ಈ ಪಟ್ಟಿ ಲಾಯಿಕಾಯಿದು ಹೇಳಿ ಒಪ್ಪ..!
ಧನ್ಯವಾದಂಗೊ…
ಪಾರು ಅಕ್ಕ ಹುಡಿಕ್ಕ್ಯೊಂಡಿದ್ದ ದಳಿಲಿ ನೇಲ್ಸಿದ ಲಾಡಿ, ಜೌರಿ, ದಾರಂದಲ್ಲಿ ಮಡುಗಿದ ಬೊಟ್ಟಿನ ಕರಡಿಗೆ ಸಿಕ್ಕಿತ್ತೋ ಕುಮಾರಣ್ಣ!
ಪಾರು ಇದೆಲ್ಲಾ ಸಾಮಾನುಗಳ ಎಲ್ಲಿ ಹೇಮಾರ್ಸಿ ಮಡುಗುತ್ತದು ಹೇಳಿ ಪತ್ತೆ ಆಯಿದಿಲ್ಲೆ ಭಾವ…
ಓಹ್ ಅಪ್ಪನ್ನೇ. ಶುದ್ದಿಯಂತೂ ಭಾರೀ ಒಪ್ಪ ಆಯ್ದು. ಕಾಣೆಯಾದವರ ಇಡೀ ಪಟ್ಟಿ ಖಂಡಿತಾ ಅಗತ್ಯ ಇನ್ನೀಗ ಬೈಲಿಲಿ. ಅವರವರ ಪಟ್ಟಿ ಗುರಿಕ್ಕಾರಿಂಗೆ ತಲುಪಿಸಿದರೆ ಅಂತಿಮ ಪ್ರಕಟಣೆ ಗುರಿಕ್ಕಾರ್ರು ಮಾಡುತ್ತವಡ. ಐಡಿಯಾ ಲಾಯಕ್ಕಯ್ದು ಹೇಳಿ ಇತ್ಲಾಗಿಂದ ಒಪ್ಪ.
ಧನ್ಯವಾದಂಗೊ..ಅಪ್ಪು, ಲಿಸ್ಟು ಸುಮಾರು ಉದ್ದವೇ ಇದ್ದು….
ಅರ್ರೇ… ವಾಹ್.. ಲಾಯ್ಕಾಯಿದು.
ಕೊಣಲೆ ಡಾಗುಟ್ರಕ್ಕ ಕಾಣೆ ಆಯಿದವು ಹೇಳಿ ಪ್ರಕಟಣೆ ಎಲ್ಲ ಕೊಟ್ಟು ಸಿಕ್ಕದ್ದೆ ಕೈಬಿಟ್ಟು ಇ೦ಟರ್ ಪೋಲ್-೦ಗೆ ಕೊಡ್ಳಪ್ಪಗಾದರು ಬ೦ದಿರನ್ನೆ. ಒಳ್ಳೇದಾತು.
ಶುದ್ದಿ ಒಳ್ಳೇದಾಯಿದು. ಒಪ್ಪ೦ಗೊ.
ಬಾರದ್ದೆ ಹೇಂಗೆ ಇಪ್ಪದು? ಬೈಲಿಂಗೆ ಬಾರದ್ದೆ ಇಪ್ಪಲೆ ಬಂಙವೇ..
ಧನ್ಯವಾದಂಗೊ 🙂
ಬೋಸಣ್ಣ, ಅಜ್ಜ೦ದ್ರು ಮೊದಲಾಣ ಕಾಲಲ್ಲಿ ನಾಲ್ಕಾಣೆಗೆ ಭರ್ಜರಿ ಊಟ ಹೊಡಕ್ಕೊ೦ಡಿತ್ತೊವಡ್ಡ ವುಡ್ ಲ್ಯಾ೦ಡ್ಸ್ ಹೋಟೆಲ್ಲಿಲಿ!
ಲಾಯ್ಕ ಆಯಿದು ಆತೊ ಅಕ್ಕ.
ಗೆ೦ಟ
ಧನ್ಯವಾದ 🙂
ನಾಲ್ಕಾಣೆಯೇ ಕಾಣೆ ಆಯ್ದು….ಇನ್ನು ನಾಲ್ಕಾಣೆಯ ಊಟ ಕಾಣೆ ಆದ್ದದು ವಿಶೇಷವೋ !!
ಆ ನಾಲ್ಕಾಣೆಯ ಊಟ ಇಪ್ಪ ವುಡ್ ಲ್ಯಾ೦ಡ್ಸ್ ಹೋಟೆಲಿನ ದಾರಿ ಎಲ್ಲೆ ಆಗಿ.. 😉
ನಾಲ್ಕು ಆಣೆ ಇಲ್ಲದ್ರೆ ಎ೦ತಾತು, 😛
50 ಪೈಸೆ ಪಾವಲಿಲ್ಲಿ ಎರಡು ಸತ್ತಿ ತಿ೦ದಿಕ್ಕಿ ಬತ್ತೆ… ಆಗದೋ?? 😀
ಕಾಣೆ ಆದ್ದದರ ಮತ್ತೆ ಹುಡುಕ್ಕೆಕ್ಕಾದ್ದು ಈಗ ಅಗತ್ಯ. ಲಾಯ್ಕ ಆಯಿದು ಅಕ್ಕ.
ಧನ್ಯವಾದ 🙂
ಹಳೆ ಕ್ರಮಲ್ಲಿ ತೀರ್ಥರೂಪರಿಂದ ಬೇಡುವ ಆಶೀರ್ವಾದಂಗೊ ಹೇಳುವ ಒಕ್ಕಣೆಲಿ ಕಾಗದ ಬರವ ಕ್ರಮವಂತೂ ಸರಿಯಾಗಿ ಕಾಣೆಯಾಯಿದೋ ಹೇಳಿ ಅಲ್ಲದಾ?
ಕಾಗದ ಬರವ್ದು ಹೇಳ್ತ ಕ್ರಮ ಒಂದಾನೊಂದು ಕಾಲಲ್ಲಿ ಇತ್ತು ಹೇಳುದೇ ಮರತ್ತು ಹೋಪ ಹಾಂಗೆ ಆಯ್ದು ಈಗ. ’ತೀರ್ಥರೂಪ’, ’ತೀರ್ಥರೂಪ ಸಮಾನರು’ ಹೀಂಗೆಲ್ಲ ಹೇಳಿರೆ ಆರು ಹೇಳಿ ಈಗಾಣವಕ್ಕೆ ಗೊಂತೇ ಇರ !!
ಅಪ್ಪು, ಅದುದೇ ಕಾಣೆ ಆಯ್ದು..ಹಾಂಗಾಗಿಯೇ ಅದನ್ನೇ ಕೊಡ್ಲಕ್ಕು ಹೇಳಿ ಗ್ರೇಶಿದ್ದು, ಕೊಡ್ಲಪ್ಪಗ ’ಅದು ಕಾಣೆ ಆಯ್ದು” ಹೇಳಿ ಹೇಳ್ಲಕ್ಕದಾ !! 😛
[ಕಾಣೆ ಆದವರ ಬಗ್ಗೆ ಮಾಹಿತಿ ಕೊಟ್ಟವಕ್ಕೆ ಮಳೆಗಾಲಲ್ಲಿ ಕೂದೊಂಡೂ ತಿಂಬಲೆ ನಾಲ್ಕು ಪುಳಿಂಕಟೆಯನ್ನೂ ನಾಲ್ಕು ಸಾಂತಾಣಿಯನ್ನೂ ಕೊಡ್ಸುಲೆ ಗುರಿಕ್ಕಾರ್ರ ಹತ್ತರೆ ಶಿಫಾರಸು ಮಾಡ್ಲಕ್ಕು ]
ಪುಳಿಂಕಟೆ ಮತ್ತು ಸಾಂತಾಣಿ ಎರಡೂ ಕಾಣೆ ಆದವರ ಪಟ್ಟಿಗೇ ಸೇರುಸೆಕ್ಕಾ ಹೇಳಿ ಎನಗೊಂದು ಸಂಶಯ..
ಲೇಖನ ಪಷ್ಟಾಯಿದು….