Oppanna.com

ಪೆಟ್ರೋಲಿಂಗೆ ಏರಿಯಪ್ಪಗ ನಮ್ಮವಕ್ಕೆ ಏರಿತ್ತೋ?

ಬರದೋರು :   ಪೆಂಗಣ್ಣ°    on   23/05/2012    18 ಒಪ್ಪಂಗೊ

ಪೆಂಗಣ್ಣ°

ಬುಲ್ಲೆಟ್ ಬಾವ: ಪೆಟ್ರೊಲು 82 ಮೈಲೇಜು 28
ಚೆನ್ನೈ ಬಾವ: ಇನ್ನು ಒಂದು ಟ್ರಿಪ್ಪು ನೆಡಕ್ಕೊಂಡೇ, ಇಲ್ಲದ್ರೆ ಅಸಲಾಗ
ದೊಡ್ಡಬಾವ: ಮತ್ತೆ ಹರತಾಳ.. ಸಂಬಳ ಏರಿದಸ್ಟೆ ಪೆಟ್ರೋಲಿಂಗೂ ಏರಿತ್ತು. ನೆಗಾಡೆಕ್ಕೋ? ಕೂಗೆಕ್ಕೋ?
ತೆಕ್ಕುಂಜ ಮಾವ: ಪೆಟ್ರೊಲು ಇಲ್ಲದ್ದೆ ಓಡುತ್ತರ ಕಂಡು ಹಿಡುದರಾತನ್ನೇ
ಮುಳಿಯ ಬಾವ: ವಾಲುವ ಬಸ್ಸೇ ಗೆತಿ.. ಅದಕ್ಕೂ ಹೆಚ್ಚಕ್ಕೊ?
ಚೆನ್ನೆಬೆಟ್ಟು: ಓಪೀಸು ಬಸ್ಸು ಎಲ್ಲಿ ನಿಂಬದಪ್ಪಾ..
ಪೆರ್ವದಣ್ಣ: ಓಯೀ ರಜಾ ನೀರು ಕಳುಗಿಕ್ಕಿ
ಸುಭಗ: ಇಂದು ತುಂಬಿಸಿದ್ದು ಮುಗಿವಲಪ್ಪಗ ಬೇಲೆನ್ಸು ಮಾಡುವ
ಮಾಮಸಮ: ಮನೆಲೇ ಕೂದು ಕೆಲ್ಸ ಮಾಡುದೋ?
ಅಭಾವ: ನಾವು ನೆಡಕ್ಕೊಂಡೇ ಹೋಪ
ಒಪ್ಪಣ್ಣ: ಎತ್ತಿನ ಗಾಡಿಲಿ ಬಪ್ಪವಕ್ಕೆ ಕೈ ಹಿಡಿವನೋ?
ಬೋಚ: ರೈಲು ಬಿಡುದೋ?
ನೆಗೆಗಾರ: ಇಮಾನು ಮೇಲೆ ಹೋಪನೋ?
ಶರ್ಮಪ್ಪಚ್ಚಿ: ವಾಚಿನ ಪ್ರತಿಫಲನಂದ ಓಡ್ಸುಲೆಡಿಗೋ?
ಡೈಮಂಡು: ಗೇಸಿಲಿ ಒಡ್ಸುವನೋ?
ಅಡ್ಕತ್ತಿಮಾರು ಮಾವ : ಬೆಟ್ರಿಲಿ ಓಡುಸುತ್ತದು ನಮ್ಮ ಗುಡ್ಡೆ ಹತ್ತುಗೊ?
ಬೊಳುಂಬು ಮಾವ : ಇನ್ನೊಂದು ನಾಟಕ ಬರವಲಕ್ಕೋ ?
ಆಚೆಕರೆಮಾಣಿ: ಕೆಂಪಾನೆಗೆ ಹೊಗೆ ಹಾಕೆಕಸ್ಟೇ..
ಪುಟ್ಟಭಾವ : ಅಂಬಗ ಆನಿನ್ನು ಅತ್ಲಾಗಿ ಬರೆಡದೊ?
ಈಚ ಭಾವ : ಪೆಟ್ರೋಲ್ ಬಿಟ್ಟು ಡೀಸಲಿನದ್ದರ ಹಿಡಿವನೊ?
ಅನುಪಮಕ್ಕ : ಕಾರು ಬಿಟ್ಟು ಸ್ಕೂಟಿಯೇ ಸಾಕೊ?
ಶೇಡಿಗುಮ್ಮೆ ಪುಳ್ಳಿ: ಆನೀಗ ಎಂತ ಮಾಡೆಕು?
ಕೊಳಚ್ಚಿಪ್ಪು ಭಾವ: ಡೋಲರಿಂಗೆ ಉಬ್ಬುವಾಗ ಎಣ್ಣಗೂ ಏರೆಡದೋ?
ಬೆಟ್ಟುಕಜೆ ಅನಂತಣ್ಣ : ಒಂದು ಜಂಬ್ರಂದಲೇ ಇನ್ನೊಂದು ಜಂಬ್ರಕ್ಕೆ ಹೋತಿಕ್ಕುದೋ?
ಯೆನಂಕೂಡ್ಳಣ್ಣ: ಆನಿಗಲೇ ಹೆರಟೆ ಪೆಟ್ರೊಲು ಪಂಪು ಹತ್ತರೆ ಪಟ ತೆಗವಲೆ
ಬಂಡಾಡಿ ಪುಳ್ಳಿ: ಎನಗೆಂತ ಮಾಡೇಡ, ಅದೆಲ್ಲ ಅವ್ವು ನೋಡಿಗೊಳ್ತವು.!
ಪುತ್ತೂರ ಪುಟ್ಟಕ್ಕ : ಎನಗೂ ಎಂತ ಆಗೇಡ . ಆನೂ ಹಿಂದೆ ಕೂಬವಳು.
ದೊಡ್ಡಜ್ಜನ ಪುಳ್ಳಿ: ಪೆಟ್ರೊಲಿಂಗೆ ಏರಿತ್ತು, ಹರತಾಳ ಇಕ್ಕು, ಪಿಕ್ನಿಕ್ ಪಿಕ್ಸು ಮಾಡುಲಕ್ಕು
ಒಪ್ಪಕ್ಕ: ಇನ್ನು ಕೋಲೇಜಿಂಗೆ ಹೇಂಗೆ ಹೋಪದಪ್ಪಾ..
ಬಂಡಾಡಿ ಅಜ್ಜಿ : ಮದಲಿಂಗೆ ಹೀಂಗೆಲ್ಲ ಇದ್ದತ್ತಿಲ್ಲೆಪ್ಪಾ
ದೀಪಿಕಾ : ಆನೊಂದು ಪದ್ಯ ಹೇಳೆಕಾ
ಶ್ರೀ ಅಕ್ಕಾ : ಅಲ್ಲ ಎಂತ ಸೊಕ್ಕು ಅವಕ್ಕೆ ಹೀಂಗೊಂದು
ಜಯಕ್ಕ: ಗೋ ಅರ್ಕಂದ ಕಾರು ಓಡುಸೆಲೆಡಿಯದೋ
ಸುವರ್ಣಿನಿ ಅಕ್ಕ: ಎಂಗಳ ಟ್ರಿಪ್ಪು ಎಲ್ಲಾ ಕ್ಯಾನ್ಸಲ್, ಇನ್ನು ಅಪ್ಪೆ ಮೆಡಿ ತಪ್ಪದು ಹೇಂಗೆ?
ಬಟ್ಟಮಾವ : ಶೋ ದೇವರೇ ಎಂತ ಸೆಕೆ ಇದು. ಎಂತ ಏರಿತ್ತೋ. ಒಂದು ಚೆಂಬು ನೀರುದೇ ಬೆಲ್ಲವುದೇ ಇತ್ತೆ ಕೊಂಡ ಮದಾಲು
ಪಂಜ ಚಿಕ್ಕಯ್ಯ: ಇಲ್ಲಿ ಬಂದರೆ ಆಳುಗೊ, ಅಲ್ಲಿ ಹೋದರೆ  ಪೆಟ್ರೊಲು, ನಾವಂತೂ ಲಗಾಡಿ
ದೊಡ್ಮನೆ ಭಾವ : ಹೇ ಹೀಗೂ ಆವ್ತನ ಅಪ್ಪೀ
ಶ್ಯಾಮಣ್ಣ : ನಿಲ್ಲು ನಿಲ್ಲು ಇದರ್ದೊಂದು ಕಾರ್ಟೂನ್ ಮಾಡಿಕ್ಕುತ್ತೆ
ಪೆರ್ಲದಣ್ಣ: ಸಾಡೇಸಾತು..
ಪೆದ್ದಣ್ಣ: ಇದೆಂತ್ಸರ? ನಾಕು ಹೋಳಿಗೆ ಇದ್ದರೆ ಹಾಕಿಕ್ಕಿ..

ನಿಂಗಳದ್ದೂ ಇದ್ದರೆ ಸೇರ್ಸಿಕ್ಕಿ..

18 thoughts on “ಪೆಟ್ರೋಲಿಂಗೆ ಏರಿಯಪ್ಪಗ ನಮ್ಮವಕ್ಕೆ ಏರಿತ್ತೋ?

  1. ಮನ್ನೆ ಎಂಗಳ ಪೈಕಿಯವು ಬೇಟ್ರಿ ಸ್ಕೂಟರಿಲಿ ಒಂದು ಜೆಂಬ್ರಕ್ಕೆ ಹೋದವಡ . ಅವು ವಾಪಾಸು ಬಪ್ಪಗ ಅರ್ಧ ದಾರಿಗೆ ಎತ್ತುಗ ಬೇಟ್ರಿ ಕಾಲಿ ಆತಡ . ಮತ್ತೆ ಎಂತ ಮಾಡಿದವು ಹೇಳಿ ಗೊಂತಿಲ್ಲೆ…………………

    ಅವು ದೊಡ್ಡ ಕೇನು ಹಿಡ್ಕೊಂಡು ತಿರುಗುದು ಆರೋ…. ಕಂಡಿದವಡ!!!!!!!!!!!!!!!!!

  2. ಎಂತ ಏರಿರೂ ಬೈಲಿನವರ ಸಮತೋಲನಕ್ಕೆ ಕರಕ್ಕೊಂಡು ಬಪ್ಪ ಪೆಂಗಣ್ಣ೦ಗೆ ಅದೆಷ್ಟು ಅಭಿನಂದನೆ ಹೇಳಿರೂ ಸಾಲ…

    “ಪೆಟ್ರೋಲ್ ಬೆಲೆಯೇರಿಕೆ… ಹರತಾಳ… ಶ್ರೀ ರಾಮ ಜಯ ರಾಮ ಜಯ ಜಯ ರಾಮ…”

  3. ಕಲ್ಮಕಾರು ಪ್ರಸಾದಣ್ಣ ಹೇಳಿದ್ದಕ್ಕೆ ಎನ್ನ ವೋಟು.ಆನು ಅದೇ ಆಲೋಚನೆಲಿ ಇದ್ದೆ..ಹೇಂಗೆ?ನಿಂಗಳ ಅಭಿಪ್ರಾಯ?

  4. ನಮ್ಮ ದೇಶದ ಆಮದು ಹೆಚ್ಚಿದ್ದು,ರಫ್ತು ಕಮ್ಮಿ ಆಯಿದು,ಸ್ವಾಭಾವಿಕವಾಗಿ ಡೋಲರಿನ ಬೇಡಿಕೆ ಹೆಚ್ಚಾತು.
    ರಫ್ತು ಹೆಚ್ಚಾಯೆಕ್ಕಾರೆ ಯೂರೋಪು ಇತ್ಯಾದಿ ದೇಶ೦ಗಳ ಹಣಕಾಸು ಪರಿಸ್ಥಿತಿ ಸರಿ ಆಯೆಕ್ಕು.ಎಲ್ಲಾ ಚಕ್ರವ್ಯೂಹದ ಹಾ೦ಗಿದ್ದು,ಸ್ಥಿತಿ.
    ಕೃಷಿಲಿಯೂ ನಮ್ಮ ಸ್ವಾವಲ೦ಬನ ಕಮ್ಮಿ ಆಯಿದು,ಸ್ವದೇಶಿ ಚಿ೦ತನೆ ಎ೦ತಕೆ ಬೇಕು ಹೇಳಿ ಈಗ ಅರ್ಥ ಮಾಡಿಗೊ೦ಬ ಹಾ೦ಗಾತು.
    ಪೆಟ್ರೋಲು, ವಿದೇಶ೦ದ ಆಮದು ಅಪ್ಪ ಎಲ್ಲಾ ಅಡಿಗೆ ಎಣ್ಣೆ.. ಇತ್ಯಾದಿಗಳ ಬಳಕೆ ಕಮ್ಮಿ ಮಾಡೊದು ತನ್ನ ಕರ್ತವ್ಯ ಹೇಳಿ ಭಾರತದ ಪ್ರತಿಯೊಬ್ಬ ಪ್ರಜೆಯೂ ತಿಳುಕ್ಕೊಳ್ಳೆಕ್ಕಾದ ವಿಷಯ.

  5. ಎ೦ತಾ ರೇಟು ಏರಾಟಪ್ಪಾ?
    ಆನು ಬೇಟ್ರಿ ಸ್ಕೂಟರ್ V60 Ampere,ತೆಕ್ಕೊ೦ಡಿದೆ. ೧೦ ಪೈಸೆ/ಕಿ.ಮೀ. ತಲೆ ಬಿಸಿ ಇಲ್ಲೆ.
    ಕಾರು ಡೀಸಿಲ್. ಯಾವಾಗ ಏರುಸುತ್ತವೋ ಗೊ೦ತಿಲ್ಲೆ.

  6. ರೇಟು ಏರಿದ ತಲೆಬೆಶಿ ಎಡೆಲಿ ಬೈಲಿನವರ ಪ್ರತಿಕ್ರಿಯೆಗೊ ಲಾಯಕಿತ್ತು. ಇಂಟರ್ ವ್ಯೂ ಮಾಡಿದ ಪೆಂಗಣ್ಣಂಗೆ ಧನ್ಯವಾದಂಗೊ. ಬಂಡಾಡಿಪುಳ್ಳಿ, ಪುಟ್ಟಕ್ಕ, ಜಯಶ್ರೀಯವರ ಪ್ರತಿಕ್ರಿಯೆಗೊ ಎನಗೆ ಬಾಳಾ ಹಿಡುಸಿತ್ತು.

  7. ಎಡಿಗ್ಗರೆ ಒಂದು ಬೈಕು ತೆಗವ ಹೇಳಿ ಇತ್ತಿದ್ದೆ ರಜ್ಜ ಸಮಯ ಬಿಟ್ಟು ಇನ್ನು ಸೈಕಲೇ ಅಕ್ಕಓ ಹೇಳಿ ಅಲೋಚನೆ ಮಾಡಿದೆ..ಅದರಲ್ಲಿಯೂ ಅಟೋಮೆಟಿಕ್ ಇದ್ದ್ಡ..ಅದುವೇ ಅಕ್ಕಪ್ಪ ನವಗೆ..

  8. ಏ ಪೆಂಗಣ್ಣ.. ಪೆಟ್ರೋಲಿಂಗೆ ರೇಟು ಏರಿ… ಇಲ್ಲಿ ವರಕ್ಕಿಲ್ಲದ್ದ ಹಾಂಗೆ ಆಯ್ದು. ಬೈಕು ರಜ ದೂಡಿಗೊಂಡು ಆದರೂ ಹೋಪ ಹೇಳಿರೆ ನಮ್ಮದರ ದೂಡ್ಲೂ ಎಡಿತ್ತಿಲೆ ಇದಾ.. 😉

  9. ಗಾಳಿಲಿ ಓಡುತ್ತ ಕಾರು ತತ್ತವಡ ಟಾಟಾ ಕಂಪೆನಿಯವು..ಅಪ್ಪೋ.?

  10. ಒಟ್ಟಾರೆ ಮೇಗ೦ದ ಹೇಳಿ ಗುಣ ಇಲ್ಲೆ. ಹೀ೦ಗುದೆ ಕ್ರಯ ಜಾಸ್ತಿ ಮಾಡಿರೆ ಬದುಕ್ಕುವದು ಹೇ೦ಗಪ್ಪಾ.. 🙁
    ಯಾವಗ ಇದರ ದರ ನಿರ್ಣಯದ ಅಧಿಕಾರವ ಆಯಾಯ ಕ೦ಪೆನಿಗೊಕ್ಕೆ ಕೊಟ್ಟವೋ, ಅ೦ಬಗಳೇ ಗ್ರಾಚಾರ ವಕ್ಕರಿಸಿದ್ದು. ಕಷ್ಟಾ ಕಷ್ಟ..
    ನವಗೆ ಈ ವಿಷಯಲ್ಲಿ ಎ೦ತ ಮಾಡ್ಳೆ ಎಡಿಗು ಹೇಳಿ ನಾವು ಆಲೋಚನೆ ಮಾಡಿರೆ೦ತ!? ಆದಷ್ಟು ನಾವು ಒಬ್ಬೊಬ್ಬನುದೆ ಸ್ವ೦ತ ವಾಹನ ಉಪಯೋಗಿಸದ್ದೆ, ಒ೦ದು ನಮುನೆ ನಿವೃತ್ತಿ ಇದ್ದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಉಪಯೋಗ ಮಾಡೆಕು. ನಾವು ವಾಹನ ತೆಕ್ಕೊ೦ಡು ಹೋವ್ತು ಹೇಳಿಯೇ ಆದರೆ, ಎಡಿಗಾದಷ್ಟು ಆ ರೂಟಿಲ್ಲಿ ಹೋವ್ತ ಗುರ್ತ ಪರಿಚಯದವರ ಒಟ್ಟಿ೦ಗೆ ಕರಕ್ಕ೦ಡು ಹೋಯೆಕು. ಹೀ೦ಗೆಲ್ಲ ಮಾಡುವದರಿ೦ದಾಗಿ ಪ್ರತ್ಯಕ್ಷವಾಗಿ ದೊಡ್ಡ ಗುಣ ಇಲ್ಲದ್ರುದೆ, ದೂರಗಾಮಿ ಪರಿಣಾಮ ಖ೦ಡಿತ ಇಕ್ಕು. ನಾವು ಪ್ರತಿಯೊಬ್ಬನುದೆ ಜವಾಬ್ದಾರಿಯುತ ನಾಗರಿಕ ಆಗಿಯೇ ಆಯೆಕಷ್ಟೆ.

    1. ಏ ಪೆರ್ವದಣ್ಣ , ಆ ಎಣ್ಣೆಯ ರೇಟು ಹಾಂಗೊಂದು ಏರುತ್ತದು ಡಾಲರ್ ಉಬ್ಬುತ್ಸು ಹೊಂದಿಗೊಂಡಡಾ.. ಅಪ್ಪೊ? ಅಂಬಗ ಆ ಡಾಲರಿನ ಹಾಂಗೊಂದು ಉಬ್ಬುಸುತ್ತ ಜೆನ ಯೇವುದದು?. ಅದರನ್ನೇ ಹಿಡುದು ಕಟ್ಟಿ ಹಾಕಿ ಕಂಟ್ರೋಲ್ ಮಾಡುತ್ಸು ಬಿಟ್ಟು ಇವು ಇಲ್ಲಿ ಬಾಕಿದ್ದೋರ ಎದುರು ಸ್ಟ್ರೈಕ್ ಹರತಾಳ ಮಾಡಿಗೊಂಡು ಬಾಕಿದ್ದೋರಿಂಗೆ ಪೀಡೆ ಕೊಡುತ್ಸೆಂತಕ್ಕಪ್ಪ!

      1. ಅಪ್ಪು ಚೆನ್ನೈ ಭಾವ, ಅಲ್ಲದ್ದರೂ ಆರು ಈ ಉಬ್ಬುಸುತ್ತ ಜೆನ ? ಅದರ ಕಟ್ಟಿ ಹಾಕುದು ಹೇಂಗಪ್ಪಾ ? ಬೋಚ ಭಾವಂಗೆ ಎಂತಾರು ಕೆಣಿ ಗೊಂತಿಕ್ಕೋ ?

      2. ಯೇ ಚೆನ್ನೈ ಭಾವಾ.. ಡೋಲರು ಉಬ್ಬಿರೆ ಖ೦ಡಿತ ಕಚ್ಚಾ ಎಣ್ಣೆಯ ದರಲ್ಲಿ ವ್ಯತ್ಯಾಸ ಬಕ್ಕು. ಆದರೆ ಈ ಸರ್ತಿ ಡೋಲರು ಉಬ್ಬಿದ್ದ್ದದೆಯೋ ಹೇಳಿ ಸ೦ಶಯ ಇದ್ದು. ಏಕೆ ಹೇಳಿರೆ ಡೋಲರಿನ ವಿನಿಮಯ ದರಲ್ಲಿ ನಮ್ಮ ರುಪಾಯಿಯ ಬೆಲೆ ಮಾ೦ತ್ರ ಇಷ್ಟುದೆ ಇಳುದ್ದದು. ಬಾ೦ಗ್ಲಾದೇಶ, ಫಿಲಿಪ್ಪೈನ್ಸ್, ಪಾಕಿಸ್ತಾನ, ಶ್ರೀಲ೦ಕಾ, ಇನ್ನುದೆ ಹಲವು ದೇಶ೦ಗಳ ದುಡ್ಡಿನ ವಿನಿಮಯದರಲ್ಲಿ ಈಗ ಸದ್ಯ ದೊಡ್ಡ ವ್ಯತ್ಯಾಸ ಬಯಿ೦ದಿಲ್ಲೆ. ಆದ ಕಾರಣ, ಡೋಲರಿನ ಶಕ್ತಿ ಹೆಚ್ಚಿದ್ದು ಹೇಳುವದರಿ೦ದಲುದೆ, ನಮ್ಮ ರುಪಾಯಿಯ ಶಕ್ತಿ ಕುಗ್ಗಿದ್ದು ಹೇಳುವದು ಸರಿ ಹೇಳಿ ಎನ್ನ ಅಭಿಪ್ರಾಯ.
        ಇದಕ್ಕುದೆ ಬೇರೆಯವರ ಹೇಳುವದರ ಮೊದಲು, ನಮ್ಮ ಹತ್ರೆ ಇಪ್ಪ ಕಾರಣ೦ಗಳುದೆ ಹಲವಿದ್ದು. ಮಾಡ್ತ ಕೆಲಸಕ್ಕೆ ಕೂಲಿ ಜಾಸ್ತಿ ಆಯಿದು. ಒ೦ದು ಕಿಲೊ ಅಕ್ಕಿಗೆ ೨೦ ಹೇಳಿರುದೆ ೩೦ ಹೇಳಿರುದೆ ೫೦ ರುಪಾಯಿ ಹೇಳಿರುದೆ ತೆಕ್ಕೊ೦ಡು ಹೋಪಲೆ ಜೆನ೦ಗೊ ರೆಡಿ ಇದ್ದವು. ಜಾಗೆಗೆ ಒ೦ದು ಸೆ೦ಟ್ಸಿ೦ಗೆ ೧ ಲಕ್ಶ ಇಪ್ಪದು ಇನ್ನು ೬ ತಿ೦ಗಳು ಕಳಿವಗ ೨ ಲಕ್ಷ ಆತು ಹೇಳಿರೆ ಅದರ ಅರ್ಥ ಎ೦ತರ? ನಮ್ಮ ಪೈಸೆಯ ಮೂಲ್ಯ ಅಷ್ಟುದೆ ಚ್ಯುತಿ ಆತು ಹೇಳಿ ಅಲ್ಲದಾ? ಇದೇ ರೀತಿ ಮೂಲ್ಯ ಚ್ಯುತಿ ಇತರ ದೇಶ೦ಗಳ ದುಡ್ಡಿಲ್ಲಿಯುದೆ ಬತ್ತು, ಆದರೆ ಅದರ ವೇಗ ನಮ್ಮದರಕ್ಕಿ೦ತ ಕಮ್ಮಿ ಅಪ್ಪಗ ಹೀ೦ಗಿರ್ತ ತೊ೦ದರೆಗೊ ಪ್ರತ್ಯಕ್ಷವಾಗಿ ಕಾಣ್ತು.
        ಉತ್ಪಾದನೆ (productivity) ಜಾಸ್ತಿ ಆದರೆ ಒ೦ದುವೇಳೆ ಇದಕ್ಕೆ ಪರಿಹಾರ ಅಪ್ಪಲೂ ಸಾಕು. ಈ ವಿಷಯಲ್ಲಿ ಎನಗೆ ಏನೇನೂ ಜ್ನ್ಹಾನ ಇಲ್ಲೆ. ಆನು ಪ್ರಾಮಾಣಿಕವಾಗಿ ಯೋಚಿಸಿಯಪ್ಪಗ ಸಿಕ್ಕಿದ ವಿಷಯ೦ಗಳ ನಿ೦ಗಳೊಟ್ಟಿ೦ಗೆ ಹ೦ಚಿದ್ದಷ್ಟೆ. ಆರಾರು ಸರಿಯಾಗಿ ಗೊ೦ತಿಪ್ಪವರ ಹತ್ರೆ ಕೇಳಿರೆ ಚೆ೦ದಕೆ ಹೇಳಿ ಕೊಡುಗಾಯ್ಕು..

  11. ಹೋ… ಹು! ಮೆಣಸು ತಿಂದರು ಇಷ್ಟು ಖಾರ ಆಗದೋಳಿ. ಏರಿದ್ದು ಹೇಳಿರೆ ಏರಿದ್ದದೇ ಇದು. ಪೆಟ್ರೋಲ್ ಬಂಕಿಲ್ಲಿ ಇಂದು ಹೊತ್ತಪಗಳೇ ವಾಹನಂಗೊ ಸಾಲುಗಟ್ಟಿ ನಿಂದಿದು ಇಲ್ಲಿ. ಪೆಟ್ರೋಲಿಂಗೆ ಏರುತ್ತ ಮರುಳಿನೊಟ್ಟಿಂಗೆ ಟಾಂಕಿ ತುಂಬುಸುತ್ತ ಗೌಜಿಯೂ ಇನ್ನೊಂದಿಕ್ಕೆ. ಟಾಂಕಿ ಮುಗುದಪ್ಪಗ ಮತ್ತೆ?…!!
    ಈ ಗೌಜಿ ಎಡಕ್ಕಿಲಿ ಬೈಲಿಲಿ ಓಡಿ ಹೋಗಿ ಪೆಂಗಣ್ಣ ಬೈನಿನೋರ ಪ್ರತಿಕ್ರಿಯೆ ಸಂಗ್ರಹಿಸಿದ್ದು ಲಾಯ್ಕ ಆಯ್ದೀಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×