‘ಮಾನೀರು ಮಾಣಿ’ (ರವಿಶಂಕರ ಆರ್ ಹೆಗ್ಡೆ) ನಮ್ಮ ಮಾಣಿಯೇ. ಕೆಲವು ಸಮಯಂದ ಬೈಲಿನ ಶುದ್ದಿಗಳ ಓದಿಗೊಂಡು ಒಪ್ಪಕೊಟ್ಟುಗೊಂಡು, ಮೆಚ್ಚುಗೆ ವ್ಯಕ್ತಪಡಿಸಿಗೊಂಡು ಬೈಲ ಪ್ರೋತ್ಸಾಹಿಸಿಗೊಂಡಿದ್ದವು. ಮೂಲತಃ ಕುಮಟಾದವು, ಸದ್ಯ ಬೆಂಗಳೂರಿಲ್ಲಿ ಕಂಪ್ಯೂಟರು ಒತ್ತುತ್ತ ಉದ್ಯೋಗಲ್ಲಿ ಇದ್ದವು. ನಮ್ಮ ಸಂಪ್ರದಾಯಲ್ಲಿಯೂ, ಸಾಹಿತ್ಯಲ್ಲಿಯೂ, ಫೋಟೋಹಿಡಿತ್ತದರಲ್ಲಿಯೂ ಆಸಕ್ತಿಯಿಪ್ಪ ಇವ್ವು ಸ್ವಂತ ತೃಪ್ತಿಗೆ ಕೆಲವೊಂದು ಸಣ್ಣಕತೆ, ಕವಿತೆ ಬರದ್ದದು ಇದ್ದು. ಇದೀಗ ನಮ್ಮೊಟ್ಟಿಂಗೆ ಬೈಲಿಂಗೆ ಇಳುದ್ದವು. ಬೈಲಿಂಗೆ ‘ರಗಳೆ ಮಾಣಿ’ಯ ಶುದ್ದಿ ತೆಕ್ಕೊಂಡು ಬಯಿಂದವು. ಬನ್ನಿ., ಮಾನೀರು ಮಾಣಿಯ ಪ್ರೋತ್ಸಾಹಿಸುವೊ°. ಕತೆ ಕೊಶಿಯಾದರೆ ಒಪ್ಪ ಬರದು ಹುರಿದುಂಬುಸುವೊ.
– ಗುರಿಕ್ಕಾರ.
ರಗಳೆ ಮಾಣಿ ರಜೆ ಹಾಕಿ ಮಾನೀರಲ್ಲಿ ಆರಾಮ್ ಮಾಡ್ತೇ ಇದ್ದಿದ್ದ. ಬೆಳ್ಗಾಮು೦ಚೆ ೮ ಘ೦ಟೆ ಆದ್ದಷ್ಟೇ. ಮುಚ್ ಹಾಯ್ಕ೦ಡ್ ಮನಿಕ೦ಡಿದ್ದ ಮಾಣಿಯ ಏಳ್ಸಲೆ ಮಾನೀರಜ್ಜಿ ಹಾಜರ್…
ಮಾನೀರಜ್ಜಿ : ತಮಾ ಎದ್ಕಳಾ….. ಓ… ತಮಾ… ನೆತ್ತಿ ಸುಡ್ತೇ ಇದ್ದಲಾ..
ರಗಳೆ ಮಾಣಿ: ಅಜ್ಜೀ ಕೊಪ್ಪೆ ಹಾಯ್ಕಳೇ..
“ಕೊಪ್ಪೆ ಮಳೆಗೆ ಹಾಕುದು ತಮಾ… ಸಿಟಿಗೆ ಹೋದದ್ದೇ ಎಲ್ಲಾ ಮರ್ತೋತನಾ ನಿ೦ಗೆ.. ಎದ್ಕಾ ಎ೦ಟಾತು”
ಅತ್ಲಾಗ್ ಇತ್ಲಾಗ್ ಹೊಳ್ಳಾಡ್ಕತ್ತೇ “ಅಜ್ಜೀ ನಿನ್ನೆ ಮನಿಕಳಕಿದ್ರೆ ಕರೀ ಕರೀ ರಾತ್ರೆಯಾಗೋಗಿತ್ತೇ… ಇನ್ ನಾಲ್ಕ್ ನಿಮಿಷ ಮನಿಕತ್ತ್ನೇ…. ”
“ಆ ಸುಟ್ ಕ೦ಪ್ಯೂಟರಿನ ಮು೦ದೆ ಕೂತ್ಗ ಹೇಳಿ ನಾ ಹೇಳಿದ್ನಾ?? ಬೆಗ್ನ್ ಎದ್ಕಾ ಜನ ಓಡಾಡು ದಾರಿಮೇಲೆ ಬೇರೆ ಬಿದ್ಕ೦ಜೆ…”
ಮಾಣಿ ಗೊಣಗ್ತಾ “ಈ ಅಜ್ಜಿಗೆ ಎ೦ತಾ ಗೊತ್ತಾಗ್ತೇನಾ.. ಕ೦ಪ್ಯೂಟರು ಸುಟ್ರೆ ಅದ್ರ ಮು೦ದೆ ಕೂತ್ಕ೦ಡ್ ನಾ ಎ೦ತಾ ಮಾಡ್ಲಿ.. ಥತ್”
ಎ೦ಟೂ ಕಾಲು.. ಮಾನೀರಜ್ಜಿಯ ಪುನರಾಗಮನ…. “ಬಿಶಿ ಬಿಶಿ ದೋಸೆ ಬೇಕು ಅ೦ದ್ರೆ ಬಾ… ಎಲ್ರದ್ದೂ ಆಸರಿ ಆಗಿ ಎರಡ್ ತಾಸಾತು”
ಕಮೂಚ್ ಬಿದ್ಕ೦ಡವ ನೆಟ್ಟಗೆ ಎದ್ ಕೂತ್ಕ೦ಡಾ…. “ಅಜ್ಜಿ ಎರಡೇ ಮಿನಿಟು ಬ೦ದೆ”
“ಥೋ ಎ೦ತಾ ಎರಡ್ ಮಿನಿಟಲ್ಲಿ ಮಿ೦ದಾಗ್ತಾ?? ಬಚ್ಲು ಖಾಲೀ ಇದ್ದು ಹೊಗ್ ಮಿದ್ಕ೦ಡ್ ಬಾ ”
“ಅಜ್ಜೀ ಈಗೇ ಮೀಯವನೇ?….. ನಿನ್ನೆ ಸೆಖೆ ಆಯ್ದು ಹೇಳಿ ರಾತ್ರಪಾಗ ಮಿದ್ಕ೦ಡ್ ಮನಿಕ೦ಜೆ.. ಚೊಕ್ಕಿದ್ನೇ ಬೇಕಾರ್ ನೋಡು..” ಅಜಿಯ ಒ೦ದ್ ರೌ೦ಡ್ ತಿರಗ್ತಾ
“ಮೀಯದ್ರೆ ಮೊದಾಲ್ ಮಾಡದ್ ದೋಸೆ ಹಾಗ್ತೆ.. ಅಷ್ಟೇಯಾ. ಗನಾ ಮಾಣಿ ಅಲ್ದಾ.. ಹೋಗು ಬೆಗ್ನೆ ಮಿ೦ದ್ಕಬಾ”
ಮಾಣಿಯ ಗೊಣಗಾನ “ಮೀಯುದು ಎಲ್ಲಾ ದೇಹಕ್ಕೆ.. ಮನಸ್ಸು ಶುದ್ಧ ಇದ್ರೆ ಆತಪಾ.. ಈ ಅಜ್ಜಿ ಹತ್ರೆ ಯಾರ್ ರಗಳೆ ಮಾಡ್ತೋ “..
ಬಚ್ಚಲ ಗೋಡೆಗೆ ಬೆನ್ನು ತಿಕ್ಕಿಕ್ಕಿ ಬ೦ದ ಮಾಣಿ..ಹೇಳ್ದ೦ಗೇ ಎರಡೇ ಮಿನಿಟಲ್ಲಿ. ಮಾತಿಗೆ ತಪ್ಪುವವ ಅಲ್ಲಾ ಮಾಣಿ. “ಅಜ್ಜೀ ಅಜ್ಜೀ ನಾನ್ ರೆಡೀ”
“ದೇವ್ರಿಗೆ ಒ೦ದ್ಬಾರಿ ಮೊಕ ತೋರ್ಸಿಕ್ಕಿ ಬತ್ಯಾ?? ನಿ೦ಗೆ ಹೇಳಿ ಅಜ್ರು ನಾಕ್ ಹೂಗಿಟ್ಟಿದ್ರು .. ದೇವ್ರಿಗೆ ಹಾಕಿ ಕೈ ಮುಗಿದಿಕ್ಕಿ ಬಾ”
ಮಾಣಿಯ ಗೊಣಗಾನ “ಥೋ ಈ ಅಜ್ಜಿ ಕಥೆ ಕಟ್ಕ೦ಡ್ರೆ ಮುಗತ್ತು.. ಯಾರೋ ಹೇಳಿದ್ದ ಹಸಿವೆಲ್ಲಾ ಇ೦ಗಿದಮೇಲೇ ಭಕ್ತಿ ಬಪ್ಪದು.. ಇಲ್ಲಗಿದ್ರೆ ದೇವ್ರ ಮು೦ದೆ ಕೂತಾಗ್ಲೂ ದೋಸೆ ಕಾಣ್ತು ಹೇಳಿ.. ಈ ಅಜ್ಜಿ ಹತ್ರೆ ಹೇಳುಲೋದ್ರೆ ಹಿಡಿಸೂಡಿ ತಗತ್ತು.. ಆ ದಾಸಾಳ ತೆಗೆದು ದೇವ್ರಿಗೆ ಹಾಕಿಕ್ಕಿ ಬಪ್ಪೋ ”
ಮಾಣಿ ಅ೦ತೂ ದೇವ್ರಿಗೆ ಹೂ ಹಾಕಿಯಾತು, ದೋಸೆ ಪರ್ಮಾಳ ತೆಗತ್ತೇ…. ಜೋರು ಭಕ್ತಿ…
“ಅಜ್ಜೀ ಅಜೀ ದೋಸೆ ಹಾಕೇ.. ಬಗೇಲಿ ರೋಸ್ಟ್ ಮಾಡು”
“ಟೋಸ್ಟ್ ಇಲ್ಯಾ ಖಾಲಿ ಆಗೋಜು… ದೋಸೆ ಮಾಡ್ತ್ನಲಾ..ಜೋನಿ ಬೆಲ್ಲ, ತುಪ್ಪ ಇದ್ದು ಇನ್ನೆ೦ತಾ ಬೇಕು ಹೇಳು”
” ಒಹ್.. ತುಪ್ಪ ಬೆಲ್ಲಾ ಇದ್ದಲೇ…. ಎ೦ಟ್ ದೋಸೆ ಮೇಲೆ ಒ೦ದು ಕಮ್ಮಿ ಆದ್ರೂ ನಾ ನಾಳೆ ದೇವ್ರಿಗೆ ಹೂ ಹಾಕ್ತ್ನಿಲ್ಲೆ”
ಮಾನೀರ್ ಮಾಣಿಗೆ ದೋಸೆ ತಿ೦ದು ಹೊಟ್ಟೆ ಉಬ್ಬರಿಸಿ ತೇಗಿಯೂ ಆತು.. “ಅಜ್ಜೀ ನಾ ಇನ್ನೊ೦ದ್ ತಾಸು ಮನಿಕತ್ತೆ..ಅವಲಕ್ಕಿ ಕಲ್ಸಿದ್ರೆ ಎಬ್ಸು ಆತನೇ …”
ನಿ೦ಗೊ ಎ೦ತಾ ವಿಷ್ಯ ಇದ್ದು ಹೇಳಿ ಇಲ್ಲಿ ವರೆಗೆ ಓದಿದ್ರಿ?? ನಿ೦ಗೋಕೆ ದೋಸೆ ಸಿಗ್ತು ಹೇಳಾ?? ಇನ್ನೊ೦ಸ್ ಸಲ ಕೊಡ್ವಾ ಆತಾ.. ಹಿಟ್ಟು ಬಗೇಲಿ ಕಮ್ಮಿ ಇತ್ತು ಇ೦ದು.. ಆದ್ರೂ ಪುರ್ಸೊತ್ ಮಾಡಿ ಇಲ್ಲಿವರೆಗೆ ಓದದಕ್ಕೆ ಧನ್ಯವಾದ ಆದ್ರೂ ಕೊಡಗಿದ್ರೆ ನಮ್ ಮನೆ ದೇವ್ರು ಬೈಕತ್ತಾ… ಎಲ್ರಿಗೂ ಧನ್ಯವಾದ.. 🙂 😉
- ಹೀಗೊ೦ದು ಕಥೆ - September 10, 2012
- ರಗಳೆ ಮಾಣಿ - August 23, 2012
ಇಲ್ಲೂ ರಗಳೆ ಇದ್ದೋ ಮಾನೀರ್ ಮಾಣಿದು
ಹ್ಹ ಹ್ಹ ಹ್ಹ… ಧನ್ಯವಾದ ಅನು ಅಕ್ಕಾ… 🙂
ಅದೇ ಕಥೆ ಹೇಳಿ ಹೇಳ್ವಾ೦ಗೆ ಇಲ್ಲೆ. ಆದರೆ ಮಾನೀರ್ ಮಾಣೀಯ ರಗಳೆ version ಹೇಳಿ ಹೇಳ್ಳಕ್ಕು 😉
ಕಥೆ ಬಾಳ ಛಲೊ ಆಜ್ಜು. ಹೀಂಗೇ ಕಥೆ ಬರ್ತಾ ಇರ್ಲಿ. ಅದೆಲ್ಲ ಸರಿ ಈ ರಗಳೆ ಮಾಣಿ ಕಥೆ ಅಂದ್ರೆ ಮಾನೀರ್ ಮಾಣಿ ಕಥೇನೇ ಅಲ್ದಾ…….:)
ಅಜ್ಜಿ-ಪುಳ್ಳಿಯ ಸಂವಾದ ಭಾರೀ ಲಾಯಕ್ ಬಯಿಂದು. ಪುಳ್ಳಿ, ಕಿಲಾಡಿ ಹೇಳಿರೆ ಮಹಾ ಕಿಲಾಡಿ.
ಮನ್ನೆ ಗುರುಗಳ ಭೇಟಿ ಸಂದರ್ಭ ಮಾನೀರ್ ಮಾಣಿಗೆ ರೂಮಿಲ್ಲಿ ಕೂಬ್ಬಲೆ ಜಾಗ ಸಿಕ್ಕದ್ದೆ ಪಾಪ ಹಿಂದೇ ಬಾಕಿ. ಎನಗೂ ಅವನ ಒಳ್ಳೆ ಕಂಪೆನಿ ಸಿಕ್ಕಿತ್ತು ! ಜಾಸ್ತಿ ಮಾತಾಡ್ಲಾತಿಲ್ಲೆ.
ಧನ್ಯವಾದ೦ಗೋ ಗೋಪಾಲ ಭಾವಾ . ಈ ಕಿಲಾಡಿಯ ಸುಧಾರ್ಸುಲೆ ಅವನ ಪ್ರೀತಿಯ ಅಜ್ಜಿಯೇ ಆಗವು. ಇನ್ನಾರತ್ರೂ ಸಾಧ್ಯಿಲ್ಲೆ.. 😉
ಭಾವಯ್ಯಾ ಅ೦ದು ಜಾಸ್ತಿ ಮಾತಾಡದ್ರೂ ನೆಗೆ ಮಾಡಿದ್ದವನ್ನೇ ಒಟ್ಟಿ೦ಗೆ. ಖುಷಿಯಾಯ್ದು ಭಾವಾ ಭೇಟಿಯಾದ್ದು 🙂
ಛಲೋ ಆಯಿದು ಮಾನೀರ್ ಮಾಣೀ 🙂
ಧನ್ಯವಾದ೦ಗೋ ಪುತ್ತೂರ್ ಭಾವಾ 🙂
ಮಾನೀರ್ ಮಾಣಿಗೆ ಸುಸ್ವಾಗತ.
ಅಜ್ಜಿ, ಮಾಣಿಗೆ ಸಂಸ್ಕಾರ ಕಲಿಸಿ ಕೊಟ್ಟ ಚಿತ್ರಣ ಲಾಯಿಕಕೆ ಮೂಡಿ ಬಯಿಂದು.
ನಮಸ್ತೆ ಶರ್ಮಪ್ಪಚ್ಚಿ… ಧನ್ಯವಾದ೦ಗೋ. 🙂
ಈ ರಗಳೆ ಮಾಣಿದು ಭಾರೀ ರಗಳೆ ಆತಪಾ,
ಆದ್ರೂ ಛಲೋ ಇದ್ದು,
ಹಿಂಗೇ ಬರೀತಿರು ಮಾಣಿ,
ಅಜ್ಜಿ ಮಾಡಿದ್ ದ್ವಾಸೇ ಗನಾ ಮಾಡಿ ಕತ್ತರ್ಸು!!
ಸುವ್ವಕ್ಕ ಮೆಚ್ಚುಗೆಗೆ ಧನ್ಯವಾದಗಳು 🙂
ಸಣ್ಣ ಇಪ್ಪಾಗಿಂದ ಕೇಳಿದ, ಮಾತಾಡಿದ, ಬರಹಂಗಳ, ಕತೆಗಳ, ಲೇಖನಗಳ ಓದಿದ ದಕ್ಷಿಣ ಕನ್ನಡದ ಹವ್ಯಕ ಭಾಷೆ ಲಾಯಿಕ ಇದ್ದು.
ಬಗೇಲೆ ದೊಡ್ಡಾದ ಮೇಲೆ ಕೇಳಿದ ಉತ್ತರ ಕನ್ನಡದ ಹವ್ಯಕ ಭಾಷೆನೂ ರಾಶಿ ಚೊಲೋ ಇದ್ದು.
ಇಲ್ಲಿ ಮಾನೀರ್ ಮಾಣಿ ಬರದ ರಗಳೆ ಮಾಣಿ ಕತೆ, ಅಜ್ಜಿಯ ಮಾತುಕತೆ ಚಂದಕ್ಕೆ ಓದ್ಸಿಗೊಂಡು ಹೋತು.
ಇನ್ನೂ ತುಂಬಾ ಹೀಂಗಿಪ್ಪದು ಕತೆಗೊ ಬರ್ತಾ ಇರಳಿ.
ಧನ್ಯವಾದ೦ಗೋ ನಿಮ್ಮ ಪ್ರೋತ್ಸಾಹಕ್ಕೆ ಸುಮನಕ್ಕಾ. 🙂
ಧನ್ಯವಾದ೦ಗೋ ಕಡುಮನೆ ಭಾವಾ… ಮ೦ಗ್ಳೂರ ಮಾಣಿಯಣ್ಣಾ.. ಸಹನಕ್ಕಾ…. 🙂
oyi..ಮಾಣಿ..ಕಥೆ sooooper..keep writing..
ಸ್ವಾಗತ 🙂
ತುಂಬಾ ಖುಷಿ ಆತು..ಇದು ಘಟ್ಟದ ಮೇಲಾಣವು-ಕೆಳಾಣವು ಹೇಳ್ತ ಭೇದ ಹೋಪಲೆ ಹೊಸ ಹೆಜ್ಜೆ ಆಗಲಿ.ನಾವು ಪರಸ್ಪರ ಭಾಷೆ ಕಲ್ತ ಹಾಂಗೂ ಆತು..ಲಾಯ್ಕಾಯಿದು…:)
ರಘು ಅಣ್ಣಾ.. ಶರ್ಮಣ್ಣಾ.. ಕಿಣ್ಣಣ್ಣಾ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದ೦ಗೋ… 🙂
ಅರೆ, ಮಾನೀರು ಮಾಣಿ… 🙂 ಲಾಯ್ಕಿದ್ದು ಭಾವ.
ಮಾಣಿಯ ಭಾಶೆ ಭಾರಿ ಲಾಯಕ್ಕಿದ್ದು.ಕಥೆ ಓದಿಸಿಕೊ೦ಡು ಹೋವ್ತು. ದಕ್ಶಿಣ ಕನ್ನಡದ ಹವ್ಯಕರಿ೦ಗೆ ಉತ್ತರ ಕನ್ನದದ ಹವ್ಯಕ ಭಾಶೆಯ ಚೆ೦ದ ತಿಳಿವಲೆ ಅನುಕೂಲ
ಮಾನೀರು ಮಾಣಿ ಭಾವ೦ಗೆ ಸ್ವಾಗತ.
ಅಜ್ಜಿ-ಪುಳ್ಳಿ ಸ೦ವಾದ ರಸವತ್ತಾಗಿದ್ದು.ಅಜ್ಜಿ ದೋಸೆಯ ಸುದ್ದಿ ತೆಗದ್ದೇ ತಡ, ”ದೊಡ್ಡ ಬಟ್ಟಲಜ್ಜಿ ನನಿಗೆ ದೊಡ್ಡ ಬಟ್ಟಲು” ಹೇಳಿ ಓಡಿದ್ದದೋ?
ಚೆನ್ನೈ ಭಾವಾ, ಗೋಪಾಲಣ್ಣಾ ಸ್ವಾಗತಕ್ಕೆ ಪ್ರೋತ್ಸಾಹಕ್ಕೆ ತು೦ಬು ಹೃದಯದ ಧನ್ಯವಾದ೦ಗೋ .. 🙂
ಮಾಣಿ ಎದ್ದಿದ;ಕೆಲವರು ಏವ ಅಜ್ಜಿ ಹೇಳಿದರೂ ಏಳದ್ದವೂ ಇಕ್ಕು.
ಮಾನೀರ್ ಮಾಣಿಗೆ ಸ್ವಾಗತ.
ಮಾನೀರ್ ಮಾಣಿ ಭಾವಂಗೆ ಬೈಲಿಂಗೆ ಸ್ವಾಗತ
ಈ ಮಾಣಿ ಎದ್ದ್ ಮಿಂದ್ ದೋಸೆತಿಂದ್ ಅಪ್ಪಗ ಅಜ್ಜಿಗೆ ಸಾಕೋ ಸಾಕಾತಪ್ಪ.
ಈ ಮಾಣಿ ಶಾಲೆಗೆ ಹೋವ್ತಿಲ್ಯ ಇನ್ನೂ. ಅಲ್ಲಾ ಇನ್ನೂ ರಜಾ ಟೈಮಾ? ಭಾವ.. ಅಜ್ಜಿಗೆ ಹೇಳ್ಕೊಡಿ – ಬೆಳಗ್ಗೆದ್ದು ಸುಪ್ರಭಾತ ದೊಡ್ಡ ವಾಲ್ಯೂಮ್ ಗೆ ಹಾಕಕೆ. ಮಾಣಿಗೂ ರಜಾ ರಗಳೆ ಆಗ್ಲಿ, ಅಜ್ಜಿಗೂ ರಗಳೆ ಕಮ್ಮಿ ಆಗ್ತೆ.
ಚಲೋ ಆಯ್ದು ಭಾವ, ಬರೀತಾ ಇರಿ.