Oppanna.com

ಎಡನೀರು ವಿಷ್ಣುಮಂಗಲ ಜಾತ್ರೆಲಿ ತಿಡಂಬು ನೃತ್ಯ ಗೌಜಿ…

ಬರದೋರು :   ದೊಡ್ಡಭಾವ°    on   16/02/2011    14 ಒಪ್ಪಂಗೊ

ಎಡನೀರು ವಿಷ್ಣುಮಂಗಲ ದೇವಸ್ಥಾನದ ಜಾತ್ರೆ ಮೊನ್ನೆ ೧೩ಕ್ಕೆ ಸುರು ಆಯಿದು. ಅಲ್ಲಿ ಇಬ್ರು ದೇವರಕ್ಕಳ ಹೊರ್ಲೆ ಇದ್ದು. ಶಿವನನ್ನೂ ವಿಷ್ಣುವನ್ನೂ. ಅಲ್ಯಾಣ ದೇವರ ತಿಡಂಬು ನೃತ್ಯ ಭಾರೀ ವಿಶೇಷ. ಆ ದೇವರ ಬಲಿಲಿ ಐದು ಹಂತಂಗೊ ಇದ್ದಡ. ತಿಡಂಬು ಹೇಳಿರೆ ಎಂತರ ಹೇಳಿ ಅರ್ಥ ಅಪ್ಪಲೆ ಕೆಲವು ವೀಡಿಯೋಗಳ ಇಲ್ಲಿ ನೇಲುಸಿದ್ದೆ. ಒಂದಾರಿ ನೋಡಿಕ್ಕಿ. ಇದು ಕಳುದ ವರ್ಷದ ಜಾತ್ರೆಯ ವೀಡಿಯೋ. ಎಡನೀರು ಶಾಲೆಲೇ ಉದ್ಯೋಗ ಮಾಡ್ತಾ ಇಪ್ಪ ಪಯದ ವಿಶ್ವನಾಥಣ್ಣ ಕೊಟ್ಟದು ಇದರ. ಇಲ್ಲಿಗೆ ಹತ್ತುಸಿ ಕೊಟ್ಟದು ನಮ್ಮ ಹಳೆಮನೆ ಅಣ್ಣ. ಹೇಳಿದಾಂಗೆ ವಿಶ್ವನಾಥಣ್ಣಂಗೆ ದೇವರನ್ನೂ ಹೊತ್ತು ಗೊಂತಿದ್ದು. ಬಹುಶಃ ನಮ್ಮೋರಲ್ಲಿ ತಿಡಂಬು ನೃತ್ಯ ಮಾಡ್ಳೆ ಸರಿಯಾಗಿ ಗೊಂತಿಪ್ಪದು ಅವಕ್ಕೆ ಮಾಂತ್ರ.

ಶಿವಳ್ಳಿಗೊ ತಿಡಂಬು ನೃತ್ಯ ಮಾಡುದರಲ್ಲಿ ಹೆಸರು ಪಡದವು, ಅಡಿಗಳಕ್ಕಳದ್ದು ದರ್ಶನ ಬಲಿ ಹೇಳುದು ಬೈಲಿಂದ ಜಾತ್ರೆಗೊಕ್ಕೆ ಹೋಪವಕ್ಕೆಲ್ಲ ಗೊಂತಿಪ್ಪ ವಿಚಾರ. ಆದರೆ ಎಂಗಳ ಹಾಂಗೆ ಕೈಬಿಟ್ಟು ಹೊರ್ಲೆ ಅವರಿಂದ ಎಡಿಯ ಹೇಳುಗಡ ಅಡಿಗಳಕ್ಕೊ..!

ಈ ಸರ್ತಿಯಾಣ ಜಾತ್ರೆ ನಾಳಂಗೆ ಗೌಜಿಲಿ ಮುಗಿತ್ತು. ತೆಪ್ಪೋತ್ಸವವೂ ಇದ್ದು ನಾಳಂಗೆ ಅಲ್ಲಿ. ತಿಡಂಬು ನೋಡೆಕ್ಕಾರೆ ಒಂದಾರಿ ಹೋಪಲಕ್ಕು ಅಲ್ಲಿಗೆ.

ಕುಂಡಂಕುಳಿ ದೇವಸ್ಥಾನಲ್ಲಿ ಜಾತ್ರೆ ಯೇವಗ ಹೇಳಿ ಆರಿಂಗಾರೂ ಗೊಂತಿದ್ದರೆ ಎನಗೆ ಒಂದರಿ ತಿಳಿಶಿಕ್ಕಿ ಆತೋ… ಅಲ್ಲಿ ಮೂರು ಜೆನ ಒಟ್ಟಿಂಗೆ ದೇವರಕ್ಕಳ ಹೊರ್ತ ಕ್ರಮ ಇದ್ದಡ. ದುರ್ಗೆ, ಶಿವ, ವಿಷ್ಣು…

ಅದೊಂದು ಜಾತ್ರೆ ನೋಡ್ಲೆ ಬಾಕಿ ಆಯಿದು ನವಗೆ…!

ತಿಡಂಬು ನೃತ್ಯ ಭಾಗ – 1:

http://www.youtube.com/watch?v=eq-ybyLv12w

ತಿಡಂಬು ನೃತ್ಯ ಭಾಗ – 2:
http://www.youtube.com/watch?v=dfbLKGp2kSU

ತಿಡಂಬು ನೃತ್ಯ ಭಾಗ – 3:
http://www.youtube.com/watch?v=vOYF67NJZY4

14 thoughts on “ಎಡನೀರು ವಿಷ್ಣುಮಂಗಲ ಜಾತ್ರೆಲಿ ತಿಡಂಬು ನೃತ್ಯ ಗೌಜಿ…

  1. ಸೋಮೇಶ್ವರ ಸಮುದ್ರ ಕರೆಲಿ ಇಪ್ಪ ಸೋಮನಾಥೇಶ್ವರ ದೇವರ ಮತ್ತೆ ಅಡ್ಕ ಭಗವತಿ ದೈವ್ವಂಗಳ ಭೇಟಿಯ ಚಲನಚಿತ್ರಂಗೋ
    ಸೋಮೇಶ್ವರ ಜಾತ್ರೆಯ ಅಕೇರಿಯಾಣ ದಿನ (೫ ನೆ ದಿನ) ಇರುಳು ಭಗವತಿಗೋ ಬಂದು ದೇವರ ಪ್ರಸಾದ ತೆಕ್ಕೊಂಡು ಹೋಗಿ ಜಾತ್ರೆ ಸುರು ಮಾಡುದು.

    http://video.google.com/videoplay?docid=3618509593427888200#

    http://video.google.com/videoplay?docid=-3952918901778549114#

  2. ದೊಡ್ಡಬಾವಾ..
    ಸುಮಾರು ಸಮೆಯಂದ ಕಾದ ಅಪುರೂಪದ ದೃಶ್ಯ ತೋರುಸಿದಿ. ತುಂಬಾ ಒಳ್ಳೆದಾತು.
    ಬೈಲಿನ ದೇವಸ್ಥಾನಂಗಳಲ್ಲಿ ನೃತ್ಯಬಲಿ ಇಪ್ಪದಪ್ಪು, ಆದರೆ ಹೋಪಲೆ ಎಡೆ ಆವುತ್ತೋ – ಇಲ್ಲೆ.
    ಈಗ ಇಲ್ಲಿಯೇ ಕಾಂಬಲಕ್ಕಿದಾ.. 🙂

    ತುಂಬಾ ಒಳ್ಳೆ ಕೆಲಸ ದೊಡ್ಡಬಾವ..
    ಬೇರೆ ಯೇವದಾರು ವೀಡ್ಯ ಇದ್ದೋ? ಇದ್ದರೆ ತೋರುಸಿಕ್ಕಿ.. 🙂

      1. ಒಂದು ಕಣ್ಣು ಒಡದು ನೋಡ್ತ ಹಾಂಗಿರ್ತದಲ್ಲ, ಎರಡೂ ಕಣ್ಣು ಒಡದು ನೋಡ್ತ ಹಾಂಗಿರ್ತದು! 🙂

        1. ಎರಡೂ ಕಣ್ಣು ಮುಚ್ಚಿ ನೋಡುವಾ೦ಗಿತ್ತರೆ ಎನಗೆ ಬೇಕು..

          1. ಅದು ಭಾರೀ ಸುಲಾಭ ಇದ್ದು ಡಾಕ್ಟ್ರೇ.. ಅದಕ್ಕೆ ಜಾಸ್ತಿ ಕೆಲಸ ಎ೦ತು ಇಲ್ಲೆ, ಸುಮ್ಮನೆ ಕಣ್ಣು ಮುಚ್ಚಿ ಮನಸ್ಸಿಲ್ಲಿ ಎ೦ತ ಬೇಕೋ ಹಾ೦ಗಿರ್ತದರ ಮನಸ್ಸಿಲ್ಲಿ ಜಾನ್ಸಿಯೊ೦ಡರೆ ಸಾಕು.. ಅವರವರ ಭಾವಕ್ಕೆ ತಕ್ಕ ಹಾ೦ಗೆ ಹೇ೦ಗಿಪ್ಪದು ಬೇಕಾರು ನೋಡ್ಳಕ್ಕು.. ಎ೦ತ ಹೇಳ್ತಿ?..

  3. e dodda bhava heengippalligella hopaga ondu thilsire aanude ottinge seryombe aagado….. urle appadara completerli nodtha ippadu heli alochane madvaga bejaravthu….

  4. ಧನ್ಯವಾದಂಗೊ ದೊದ್ದಬ ಭಾವ……..

  5. ವೀಡಿಯೊ ಲಾಯಕ ಇದ್ದತ್ತು. ನೋಡಿ ಖುಷೀ ಆತು. ಮಾಹಿತಿ ಕೊಟ್ಟದಕ್ಕೆ ಧನ್ಯವಾದಗಳು

  6. ‘ನರ್ತನ ಬಲಿ’ಯ ಮಾಹಿತಿ ಕೊಟ್ಟದಕ್ಕೆ, ವೀಡ್ಯಂಗಳ ತೋರ್ಸಿದ್ದಕ್ಕೆ ಧನ್ಯವಾದಂಗೊ ದೊಡ್ಡ ಭಾವಾ.. ನಮ್ಮ ದೊಡ್ಡಜ್ಜನ ಮನೆ ಹತ್ರಾಣ ಪನ್ನಿಪ್ಪಳ್ಳಿ ಪಾರ್ಥಸಾರಥಿ ಕ್ಷೇತ್ರಲ್ಲಿಯೂ ಇದೇ ನಮೂನೆ ನೃತ್ಯಬಲಿ ಮಾಡುದರ ಆನು ನೋಡಿದ್ದೆ.

    ‘ತಿಡಂಬು’ ಹೇಳಿರೆ ಉತ್ಸವ ಮೂರ್ತಿಯ ಕೂರ್ಸುವ ಪೀಠ (ಅಟ್ಟೆ).

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×