Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ನಮ್ಮ ಸ೦ಸ್ಕೃತಿ ಸಮೃದ್ಧ ಆಯೆಕ್ಕಾರೆ ಮಕ್ಕೊಗೆ ಒಳ್ಳೆ ಸ೦ಸ್ಕಾರ ಸಿಕ್ಕೆಕ್ಕು. ವೇದಪಾಠಶಾಲೆ ಸಮಾಜದ ಭವಿಷ್ಯವ ಭದ್ರ ಮಾಡುತ್ತು ಹೇಳೊದಕ್ಕೆ ಸ೦ಶಯ ಇಲ್ಲೆ.
ನಮ್ಮ ನೆರೆಕರೆಲಿ ಈ ಕಾರ್ಯ೦ಗೊ ಹೆಚ್ಚು ಹೆಚ್ಚಾಗಿ ನೆಡೆಯೆಕ್ಕು,ಉಪನಯನ ಆದ ಎಲ್ಲಾ ವಟುಗೊಕ್ಕೂ ವೇದಮ೦ತ್ರ೦ಗಳ ಕಲಿವಲೆ ಅವಕಾಶ ಅಪ್ಪ ಹಾ೦ಗೆ ರಜೆ ಸಮಯಲ್ಲಿ ಅಲ್ಲಲ್ಲಿ ವೇದಪಾಠಶಾಲೆಗೊ ನಡೆಯೆಕ್ಕು ಹೇಳ್ತ ಆಶಯ ಒಪ್ಪಣ್ಣನ ಬೈಲಿ೦ದೂ ಅಪ್ಪು.
ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಲಿ ಕಳುದ ಐದು ದಶಕ೦ಗಳಿ೦ದ ನೆಡೆತ್ತಾ ಇಪ್ಪ ವಸ೦ತ ವೇದಪಾಠಶಾಲೆ ನಮ್ಮ ಸಮಾಜದ ಹೆಮ್ಮೆಯ ಆಸ್ತಿ. ಈ ವೇದಪಾಠಶಾಲೆಗೆ ನಮ್ಮ ಬೈಲು ಕಳುದ ವರ್ಷ ಆರ್ಥಿಕ ಸಹಕಾರ ನೀಡಿ ಗೌರವಿಸಿದ್ದು. ಹಾ೦ಗೆಯೇ ಈ ವರ್ಷವೂ ದಾನಿಗಳಿ೦ದ ಸ೦ಗ್ರಹ ಆದ ಒ೦ದು ಸಣ್ಣ ಗೌರವಧನವ ನಾಳೆ,ತಾರೀಕು 10.5.2015 ಭಾನುವಾರ ಮಧ್ಯಾಹ್ನ ಮೂರು ಗ೦ಟೆಗೆ ಶ್ರೀ ಪೆರಡಾಲ ಕ್ಷೇತ್ರಲ್ಲಿ ಹಸ್ತಾ೦ತರ ಮಾಡುವ ಕಾರ್ಯಕ್ರಮವ ಆಯೋಜಿಸಿದ್ದು. ಈ ಕಾರ್ಯಕ್ರಮಲ್ಲಿ ಖ್ಯಾತ ಪಾಕತಜ್ಞರೂ,ಬೈಲಿನ ಹಿತೈಷಿಗಳೂ ಆದ ಶ್ರೀ ಕು೦ಜಾರು ಶ೦ಕರನಾರಾಯಣ ಭಟ್,ಗೇ೦ದೋಡು ಇವು ಬೈಲಿನ ಪರವಾಗಿ ಈ ನಿಧಿಯ ವೇದಪಾಠಶಾಲೆಗೆ ಸಮರ್ಪಣೆ ಮಾಡುತ್ತವು.ನೀರ್ಚಾಲು ಶಾಲಾ ವ್ಯವಸ್ಥಾಪಕರೂ ನಮ್ಮ ಬೈಲಿನ ಹಿತೈಷಿಗಳೂ ಆದ ಶ್ರೀ ಜಯದೇವ ಖ೦ಡಿಗೆ,ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವೇದವಿದ್ಯಾ ವಿಭಾಗದ ಸ೦ಚಾಲಕರಾದ ಶ್ರೀ ಮಾಡಾವು ಗಣೇಶ ಮಾವ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತವು. ನಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣ ಭಟ್ ಹಳೆಮನೆ ಇವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತವು.
ನಿ೦ಗೊ ಎಲ್ಲೋರೂ ಬ೦ದು ಈ ಕಾರ್ಯಕ್ರಮಲ್ಲಿ ಭಾಗಿಗಳಾಗಿ ಚೆ೦ದಗಾಣಿಸಿಕೊಡೇಕು ಹೇಳಿ ಬೈಲಿನ ಪರವಾಗಿ ಹೇಳಿಕೆ.
ಈ ವರ್ಷದ ವೇದ ಪಾಠ ಶಿಬಿರಲ್ಲಿ 110 ಕ್ಕೂ ಅಧಿಕ ವಿದ್ಯಾರ್ಥಿಗೊ ಭಾಗವಹಿಸುತ್ತಾ ಇದ್ದವು. ಉದ್ಘಾಟನಾ ಕಾರ್ಯಕ್ರಮದ ಪಟ೦ಗೊ ಇಲ್ಲಿದ್ದು.
ಒಳ್ಳೆ ಕಾರ್ಯಮಾಡ್ತಾ ಇದ್ದಿ.ಸ೦ತೋಷಾತು. ಶುಭವಾಗಲಿ.
ಸಂತೋಷ