Oppanna.com

ಪೆಬ್ರವರಿ 17: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ “ಕರಸೇವೆ”

ಬರದೋರು :      on   31/01/2013    3 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನಮಸ್ಕಾರ.

ಪುತ್ತೂರ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಂಗೆ ಇದೀಗ ಬ್ರಹ್ಮಕಲಶ ಆವುತ್ತಾ ಇಪ್ಪದು ನವಗೆಲ್ಲೋರಿಂಗೂ ಗೊಂತಿಪ್ಪದೇ.

ಪ್ರತಿಷ್ಠಾನದ ಹೇಳಿಕೆ
ಪ್ರತಿಷ್ಠಾನದ ಹೇಳಿಕೆ

ಊರು ಊರಿಂದ, ಬೈಲು ಬೈಲಿಂದ ಭಕ್ತರು ಎಲ್ಲೋರುದೇ ಸೇರಿ ಕರಸೇವೆ ಮಾಡಿ ಆ ದೇವರ ಅನುಗ್ರಹ ಪಡಕ್ಕೊಂಡಿದವು, ಪಡಕ್ಕೊಳ್ತಾ ಇದ್ದವು.

ಹಾಂಗೆಯೇ, ಇದೇ ಬಪ್ಪ ತಿಂಗಳು ಹದ್ನೇಳನೇ ತಾರೀಕಿಂಗೆ ಬೈಲಿನವು ಸೇರಿಗೊಂಡು ಮಹಾ ಒಡೆಯಂಗೆ ಕರಸೇವೆ ಮಾಡ್ತದು ಹೇದು ನಂಬಿಗೊಂಡಿದು.
ಬೈಲಿನ ಎಲ್ಲೋರುದೇ ಆ ದಿನ ಪುರುಸೊತ್ತು ಮಾಡಿಗೊಂಡು ಬಂದು ಕರಸೇವೆಲಿ ಸೇರಿಗೊಳೇಕು – ಹೇದು ಕೋರಿಕೆ.

ತಾರೀಕು: 17-ಪೆಬ್ರವರಿ-2013, ಉದಿಯಪ್ಪಗ 8:30 ಗಂಟೆಗೆ
ಜಾಗೆ: ಮಹಾಲಿಂಗೇಶ್ವರನ ಸನ್ನಿಧಿ, ಪುತ್ತೂರು
ಸಮವಸ್ತ್ರ ಕಡ್ಡಾಯ: ಭಾರತೀಯ ಉಡುಪು (ಪಂಚೆ, ವೇಷ್ಟಿ, ಸೀರೆ, ಚೂಡಿದಾರ – ಇತ್ಯಾದಿಗೊ)
ಹೆಚ್ಚಿನ ವಿವರಕ್ಕೆ ಸಂಪರ್ಕ: 9449663764 / 9448472292

ಎಷ್ಟೋ ಶತಮಾನಕ್ಕೊಂದರಿ ಬಪ್ಪ ಅಮೂಲ್ಯ ಸನ್ನಿವೇಶ ಇದು!
ಬನ್ನಿ, ಮಹಾಲಿಂಗೇಶ್ವರನ ಸೇವೆ ಮಾಡಿ ಅವನ ಅನುಗ್ರಹ ಪಡವ°.

ನಿಂಗಳೂ ಬನ್ನಿ, ಚೆಂಙಾಯಿಗಳನ್ನೂ ಕರಕ್ಕೊಂಡು ಬನ್ನಿ.
ಹರೇರಾಮ

~
ಬೈಲಿನ ಪರವಾಗಿ

ಗುರಿಕ್ಕಾರ°

3 thoughts on “ಪೆಬ್ರವರಿ 17: ಪುತ್ತೂರು ಮಹಾಲಿಂಗೇಶ್ವರ ದೇವರಿಂಗೆ “ಕರಸೇವೆ”

  1. ಬೈಲಿನೋರೆಲ್ಲಾ ಸೇರಿ ದೇವರ ಸೇವೆ ಮಾಡುವ°.ಒಳ್ಳೆದಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×