ನಾವು ಮಾಡ್ತ ಪ್ರತಿಯೊಂದು ಕೆಲಸಕ್ಕೂ ದೈವಸಹಾಯ ಬೇಕು. ಅದರ್ಲಿಯೂ ಮುಖ್ಯವಾಗಿ ಗೆಣಪ್ಪಣ್ಣನ ಅನುಗ್ರಹ ಇಪ್ಪಲೇ ಬೇಕು.
ಹಾಂಗಾಗಿ, ಎಂತದೇ ಕೆಲಸ ಕಾರ್ಯ ಮಾಡ್ತರೂ ಗೆಣಪ್ಪಣ್ಣನ ಗ್ರೇಶಿ, ಆಶೀರ್ವಾದ ಬೇಡ್ತದು ಬೈಲಿಲಿ ಇಪ್ಪ ಕ್ರಮವೇ.
ವಿಶೇಷವಾಗಿ ಇಂದು ಚವುತಿ.
ಗೆಣವತಿ ದೇವರನ್ನೇ ವಿಶೇಷವಾಗಿ ಆರಾಧನೆ ಮಾಡ್ತ ದಿನ.
ಇಂದ್ರಾಣ ಈ ವಿಶೇಷ ದಿನ, ನಿಂಗಳ ಜೀವನಲ್ಲಿ ಹೊಸತ್ತೊಂದರ ಆರಂಭ ಮಾಡ್ಳೆ ಅವಕಾಶ ಆಗಲಿ.
ಗೆಣವತಿ ದೇವರು ನಿಂಗೊಗೆ ಅನುಗ್ರಹ ಕೊಡ್ಳಿ ಹೇಳ್ತದು ನಮ್ಮ ಮನದಾಳದ ಹಾರಯಿಕೆ.
ಬೈಲಿನ ಎಲ್ಲೋರಿಂಗೂ ಗೆಣವತಿ ಚೌತಿಯ ಒಪ್ಪಂಗೊ.
ಸೂ: ಇಂದು ಚಂದ್ರನ ನೋಡಿದೋರಿಂಗೆ ಅಪವಾದ ಬತ್ತಾಡ. ಪರೀಕ್ಷೆ ಮಾಡಿ ನೋಡಿಕ್ಕೆಡಿ, ಆತೋ? 🙂
~
ಗುರಿಕ್ಕಾರ°
ಬೈಲಿನ ಪರವಾಗಿ
Latest posts by Admin (see all)
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಧನ್ಯವಾದಂಗೊ, ಎಲ್ಲೊರಿಂಗೂ ಚೌತಿ ಯ ಹಾರ್ದಿಕ ಶುಭಾಶಯಂಗೊ.
ಇಂದು ಗಣೇಶ ಚತುರ್ಥಿ
ಗೌಜಿ ಹೆಚ್ಚಿದ್ದು ಈಸರ್ತಿ
ಕಷ್ಟಗಳ ಕಳೆಯಲಿ ವಿನಾಯಕ
ಗಣಂಗೊಕ್ಕೆಲ್ಲಾ ನಾಯಕ
ವಿಘ್ನ ನಿವಾರಕ ಗೆಣಪ್ಪಣ್ಣ
ಒಂದೊಪ್ಪ ಎನ್ನದೂ ಇದ್ದು ಒಪ್ಪಣ್ಣ…………….
ಃ)
ಹರೇರಾಮ ಗುರಿಕ್ಕಾರ್ರೇ!!!…
ಒಂದು ಅಬ್ಬೆಯ ಇಚ್ಚಾಶಕ್ತಿಲಿ ರೂಪುಗೊಂಡ ಗೆಣಪತಿ ಚಾಮಿಯ ಆಶೀರ್ವಾದ ಬೈಲಿನ ಎಲ್ಲೋರ ಮೇಲೆ ಇರಲಿ..
ನಿಂಗೋ ಹೇಳಿದ ಹಾಂಗೆ ಹೊಸತ್ತರ ಶ್ರೀಗಣೇಶ ಆಗಲಿ ಎಲ್ಲೋರಿಂಗೂ….
ಮಾಡುವ ಎಲ್ಲಾ ಕೆಲಸಲ್ಲಿಯೂ ಯಶಸ್ಸು ಸಿಕ್ಕಲಿ…
ಗೆಣಪ್ಪಣ್ಣನ ಅಲಂಕಾರ ಮಾಡಿ ಕಣ್ಣಿಂಗೂ, ಮಂಗಳಾರತಿ ನೋಡಿ ಮನಸ್ಸೂ, ನೇವೇದ್ಯವ ಉಂಡು ಹೊಟ್ಟೆಯೂ, ತುಂಬಿ ಅವನ ಅನುಗ್ರಹ ಆವರಣ ಆಗಿ ಎಲ್ಲೋರ ರಕ್ಷಿಸಲಿ..
ಚೆಂದದ ಗೆಣಪ್ಪಣ್ಣನ ಪಟ ಬೈಲಿಲಿ ಕೊಟ್ಟದಕ್ಕೂ ಧನ್ಯವಾದಂಗೋ.
ಹೋ…! 🙂
ಇ೦ದು ಚೌತಿಗೆ- ಗೆಣಪ್ಪಣ್ಣನ ಲೆಕ್ಕಲ್ಲಿ ಬಗೆ ಬಗೆಯ ತಿ೦ಡಿ ಮಾಡ್ತವಡ ಶ್ರೀ ಅಕ್ಕನಲ್ಲಿ, ಪೆ೦ಗಣ್ಣ ಹೇಳಿದ.. 😛
ಆನು ಅಲ್ಲಿಗೆ ಹೆರಟ್ಟೆ.. 😉
ಮತ್ತೆ ಆನು ಚ೦ದ್ರನ ನೋಡ್ತಿಲ್ಲೆಪ್ಪಾ.. ತಲೆ ತಗ್ಗುಸೆ೦ಡೇ ಹೋವುತ್ತೆ ಅಕ್ಕನಲ್ಲಿಗೆ ಆತಾ.. 😉
|ಓ೦ ಗಣಪತಿಯೇ ನಮೋ ನಮ:|
ಗುರಿಕ್ಕಾರಿಂಗೂ ಬೈಲಿನ ಹತ್ತು ಸಮಸ್ತರಿಂಗೂ ಶ್ರೀ ಗಣೇಶ ಶುಭವನ್ನೀಯಲಿ ಹೇಳಿ ಇತ್ಲಾಗಿಂದಲೂ ಬೇಡಿಗೊಂಡತ್ತು.