Oppanna.com

“ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ.

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   01/06/2013    8 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 

ಎನ್ನಣ್ಣ ಉಡುಪುಮೂಲೆ ಗೋಪಾಲಣ್ಣ ೭೦ನೇ ಒರ್ಶದ ಹೊಸ್ತಿಲ ಹತ್ತರ೦ಗೆ ಬತ್ತಾ ಇದ್ದ°.
ಎಪ್ಪತ್ತು ಒರ್ಶದ ಬದುಕಿನ ೭೦ನೇ ಒರ್ಶಲ್ಲಿ ನೆ೦ಪು ಮಾಡ್ಯೊ೦ಬದಕ್ಕೆ ಒ೦ದು ಅವಕಾಶ ಮನೆಯವಕ್ಕೆ ಸಿಕ್ಕಿದ್ದು. ಈ ಸ೦ದರ್ಭಲ್ಲಿ “ಭೀಮರಥ ಶಾ೦ತಿ” ಮಾಡೇಕು ಹೇದು ಎ೦ಗೊ ಮನೆಯವು ಬ೦ಧು – ಬಾ೦ಧವರು ಸೇರಿಗೊ೦ಡು ಕುಲಪುರೋಹಿತರಾದ ಪಳ್ಳತ್ತಡ್ಕ ವೇ। ಮೂ। ಶ್ರೀ ಪರಮೇಶ್ವರ ಭಟ್ಟರ ನಿರ್ದೇಶನಲ್ಲಿ ಸಪ್ತತಿ ಸ೦ಭ್ರಮ” ಆಚರಣೆಯ ಹಮ್ಮಿಗೊ೦ಡಿದಯೋ° .
ಇದೇ ಜೂನ್ ೫ನೇ ತಾರೀಕಿ೦ಗೆ ಈ ಕಾರ್ಯಕ್ರಮ ಎ೦ಗಳ ಉಡುಪುಮೂಲೆ ಮನೆಲಿ ನೆಡವಲಿದ್ದು.

ತುಂಬು ಕುಟುಂಬದ ಭಾಗವಾಗಿಪ್ಪ ಎಂಗಳ ಅಣ್ಣನದು ಬಹುಮುಖ ವ್ಯಕ್ತಿತ್ವ. ಮ೦ತ್ರವಾದ ಅವನ ವೃತ್ತಿಯಾದರೆ, ಯಕ್ಷಗಾನ ಅವನ ಪ್ರವೃತ್ತಿ. ಸಾಹಿತ್ಯಲ್ಲಿಯೂ ಅವನದು ಎತ್ತಿದ ಕಯಿ! ಅವನ ಹತ್ತು ಹಲವು ಹವ್ಯಾಸ೦ಗಳ ದಾಖಲೆ ಮಾಡೆಕು ಹೇಳುವ ಉದ್ದೇಶಲ್ಲಿ ದ್ರಷ್ಟಾರ “ ಹೇಳುವ ಒ೦ದು ಅಭಿನ೦ದನಾ ಗ್ರ೦ಥ ಅದೇ ದಿನ ಮಧ್ಯಾಹ್ನ ತಿರಿಗಿ ಶ್ರೀಮದೆಡನೀರು ಮಠಾಧೀಶರ ಅಮೃತ ಹಸ್ತಲ್ಲಿ ಬಿಡುಗಡೆ ಆವುತ್ತು.
ಈ ಸಮಾರ೦ಭಕ್ಕೆ  ನಮ್ಮ ಒಪ್ಪಣ್ಣನ ನೆರೆಕರೆಯ ಪ್ರತಿಷ್ಠಾನದ ಎಲ್ಲಾ ಬ೦ಧು ಬಾ೦ಧವರ ಆತ್ಮೀಯವಾಗಿ ಸ್ವಾಗತಿಸುತ್ತಿಯೊ°. ನಿ೦ಗೊ ಎಲ್ಲರುದೆ ದಿನ ಮು೦ದಾಗಿ ಬ೦ದು ಈ ಕಾರ್ಯಕ್ರಮವ ಸ೦ಪನ್ನಗೊಳ್ಸೆಕು ಹೇದು ತು೦ಬು ಹೃದಯ೦ದ ವಿನ೦ತಿ.
ಪ್ರತ್ಯೇಕವಾಗಿ  ” ಆಮ೦ತ್ರಣ ಪತ್ರಿಕೆಯ” ಮಾಡದ್ದ ಕಾರಣ ” ಇದನ್ನೇ “ಹೇಳಿಕೆ ” ಹೇದು ತಿಳುಕ್ಕೊಳೆಕು ಹೇದು ಅಪೇಕ್ಷೆ.

ಹರೇ ರಾಮ.

ಇತಿ ವ೦ದನಾಪೂರ್ವಕ ಸ್ವಾಗತ ಬಯಸುವ,

ಉಡೂಪುಮೂಲೆ ಮನೆಯವು ಹಾ೦ಗೂ ನೆ೦ಟರಿಷ್ಟರು.

ದಿನಾ೦ಕ ೧.೬.೨೦೧೩.

 

8 thoughts on ““ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ.

  1. ಹರೇರಾಮ. ಕಾರ್ಯಕ್ರಮಕ್ಕೆ ಶುಭಮಸ್ತು. ಹಾಂಗೇ ಗೋಪಾಲಣ್ಣ ಆಯುರಾರೋಗ್ಯಲ್ಲಿ ಶತಮಾನಕಾಣಲಿ ಹೇಳಿ ಪ್ರಾರ್ಥನೆ

  2. ಉಡುಪುಮೂಲೆ ದೊಡ್ಡಪ್ಪಚ್ಚಿಯ ೭೦ನೇ ವರ್ಶದ ಸಡಗರದ ಕಾರ್ಯಕ್ರಮ ಸಪ್ಥತಿ ಸಂಭ್ರಮ ಸಾಂಗವಾಗಿ ಸುಂದರವಾಗಿ ನೆಡೆಯಲಿ.
    ಈ ಸಂದರ್ಭಲ್ಲಿ ಮಹೇಶಣ್ಣ ಅವಕ್ಕೆ ಮಾಡಿದ ಅಭಿನಂದನೆಯುದೆ ಸೊಗಸಾಗಿ ಬಯಿಂದು.

  3. ಉಡುಪುಮೂಲೆ ಕುಟು೦ಬ ಏರ್ಪಾಡು ಮಾಡಿದ ಈ ಕಾರ್ಯಕ್ರಮ ಸಾ೦ಗವಾಗಿ ನೆಡೆಯಲಿ. ದೊಡ್ಡಪ್ಪ೦ಗೆ ಗುರುದೇವರ ಕೃಪೆ ಸದಾ ಇರಳಿ.

  4. ಸಪ್ತತಿ ಸಂಭ್ರಮದ ಸಂದರ್ಭಲ್ಲಿ ನಾವು ಅಭಿನಂದನೆಯ, ಗೌರವವ ಹೀಂಗೆ ತಿಳಿಶುವ —

    ಉಡುಪಕಿರಣಸೌಖ್ಯಂ ದೀಪ್ಯತಾಂ ದೀರ್ಘಕಾಲಂ
    ಸಕಲಮುಡುಪಮೌಲೇಃ ಆಶಿಷಾ ಮಂತ್ರವೇತ್ತಾ ।
    ಇಹ ಶತಮತಿಶೇತಾಂ ವತ್ಸರಾಣಾಂ ಸಧನ್ಯಂ
    ಸಮಭಿಲಷತಿ ಚ ದ್ರಷ್ಟಾರಮೊಪ್ಪಣ್ಣವೃಂದಮ್ ॥

    ಶಬ್ದಾರ್ಥ –
    (ಉಡು = ನಕ್ಷತ್ರ
    ಉಡುಪಃ = ನಕ್ಷತ್ರ ಪತಿ = ಚಂದ್ರ.)
    (ಉಡುಪಮೌಲಿಃ = ಚಂದ್ರಮೌಳಿ)

    ಉಡುಪಕಿರಣಸೌಖ್ಯಂ = (ಉಡುಪನ) ಚಂದ್ರನ ಕಿರಣಂದ ಸಿಕ್ಕುವ (ಆಹ್ಲಾದ) ಸೌಖ್ಯವು
    ಸಕಲಂ = ಎಲ್ಲವುದೆ / ಎಲ್ಲೋರನ್ನುದೆ
    ದೀರ್ಘಕಾಲಂ = ಬಹಳ ಕಾಲದ ವರೆಗೆ
    ದೀಪ್ಯತಾಂ = ಬೆಳಗುತ್ತಿರಲಿ/ನಳನಳಿಸುತ್ತಿರಲಿ

    ಉಡುಪಮೌಲೇಃ = ಚಂದ್ರಮೌಳಿಯ
    ಆಶಿಷಾ = ಅನುಗ್ರಹಂದ
    ಮಂತ್ರವೇತ್ತಾ = ಮಂತ್ರವ ತಿಳುದ (ಈ ಮಹಾ ವ್ಯಕ್ತಿತ್ವ)
    ಸಧನ್ಯಂ = ಧನ್ಯತೆಯೊಟ್ಟಿಂಗೆ
    ಇಹ = ಇಲ್ಲಿ
    ವತ್ಸರಾಣಾಂ ಶತಂ = ನೂರು ವರ್ಷಂಗಳ
    ಅತಿಶೇತಾಮ್ = ಮೀರಿ ನಿಲ್ಲಲಿ
    [ಇತಿ = ಹೇಳಿ]
    ದ್ರಷ್ಟಾರಮ್ = ಈ ತಿಳುದ ವ್ಯಕ್ತಿಯ ಬಗ್ಗೆ (ದ್ರಷ್ಟಾರಂಗೆ)
    ಒಪ್ಪಣ್ಣವೃಂದಂ = ಒಪ್ಪಣ್ಣಂದಿರ ವೃಂದ
    ಅಭಿಲಷತಿ = ಬಯಸುತ್ತು.

    ವಾಕ್ಯಲ್ಲಿ ಅರ್ಥ –

    ಮಂತ್ರಶಕ್ತಿಯ ಮೂಲಕವಾಗಿ ಉಡುಪಮೂಲೆಂದ ಎಲ್ಲೋರಿಂಗುದೆ ಆಹ್ಲಾದಕತೆ, ಸೌಖ್ಯ ಇನ್ನೂ ಬಹಳ ಕಾಲದವರೆಗೆ ಸಿಕ್ಕುತ್ತಿರಲಿ, ಹಾಂಗೆಯೇ ಉಡುಪ(ಮೂಲೆಲ್ಲಿ) ಆಹ್ಲಾದಕತೆ, ಸೌಖ್ಯ ಎಲ್ಲವುದೆ ನಿರಂತರವಾಗಿರಲಿ, ಬೆಳಗುತ್ತಿರಲಿ.

    ಮಂತ್ರಂಗಳ ತಿಳಿದ ಈ ದ್ರಷ್ಟಾರರು ಚಂದ್ರಮೌಳಿಯ ಶಂಕರನ/ಭಗವಂತನ ಅನುಗ್ರಹಂದ ಧನ್ಯತೆಯೊಂದಿಗೆ ಇಲ್ಲಿ ನೂರರಿಂದಲೂ ಹೆಚ್ಚು ವರ್ಷಂಗಳ ದಾಂಟುವ ಹಾಂಗಾಗಲಿ ಹೇಳಿ ಒಪ್ಪಣ್ಣಂದಿರ ಈ ಸಮೂಹ ಬಯಸುತ್ತಾ ಇದ್ದು.

  5. ಅಪ್ಪಚ್ಚೀ,

    ಕಾರ್ಯಕ್ರಮ ತುಂಬಾ ಚೆಂದಕೆ ಕಳಿಯಲಿ. ದ್ರಷ್ಟಾರರ ಜೀವನ ಮುಂದೆಯೂ ನೆಮ್ಮದಿಲಿ ಮುಂದುವರಿಯಲಿ.
    ಹೇಳಿದಾಂಗೆ, ದೊಡ್ಡಪ್ಪನ ಬಗ್ಗೆ ಸಂಕ್ಷಿಪ್ತವಾಗಿ ಬೈಲಿಂಗೆ ತಿಳಿಶಿಕೊಡುವಿರೋ?

  6. ಕಾರ್ಯಕ್ರಮ ಸಾಂಗವಾಗಿ ನೆರವೇರಲಿ.

  7. ತಥಾಸ್ತು., ಧನ್ಯವಾದಂಗೊ.
    ಅಭಿನಂದನೆಗೊ.
    ‘ಸಪ್ತತಿ ಸಂಭ್ರಮ’ ಸಾಂಗವಾಗಿ ಯಶಸ್ವಿಯಾಗಲಿ ಹೇದು ಶುಭಹಾರೈಕೆಗೊ. ಉಡುಪುಮೂಲೆ ಗೋಪಾಲಣ್ಣಂಗೆ ಇನ್ನುದೆ ನೆಮ್ಮದಿಯ ಜೀವನ ಲಭಿಸಲಿ, ಶ್ರೀ ಗುರುದೇವತಾನುಗ್ರಹ ಸದಾ ಇರಲಿ ಹೇಳಿ ಸಂಪ್ರಾರ್ಥನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×