ಬೈಲಿಂಗೆ ನಮಸ್ಕಾರ!
ವೆಗ್ತಿ ಆಂತರ್ಯಕ್ಕೆ ಇಳುದು ಚಿಂತನೆ, ಅಧ್ಯಯನಲ್ಲಿ ತೊಡಗುಸಿಗೊಂಬ ಮಹಾಪುಣ್ಯಕಾಲ – ಚಾತುರ್ಮಾಸ್ಯ.
ನಮ್ಮ ಆಧ್ಯಾತ್ಮ ಗುರುಗೊ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ ಪ್ರತಿಒರಿಶ ಆಚರುಸಿ ಇದೀಗ “ಹದ್ನೆಂಟನೇ ಚಾತುರ್ಮಾಸ್ಯ” ಆಚರಣೆ ಮಾಡ್ತಾ ಇದ್ದವು.
ಆ ಪುಣ್ಯಕಾಲಲ್ಲಿ ಶಿಷ್ಯವರ್ಗ ಎಲ್ಲೋರುದೇ ಒಡಗೂಡಿಂಡು, ಬೇಕಾದಾಂಗೆ ಸೇರಿಗೊಂಡು, ಚಾತುರ್ಮಾಸ್ಯಕಾಲವ ಯಶಸ್ವೀಗೊಳಿಸೇಕು. ಗುರುಸೇವೆ ಮಾಡಿ ಪುಣ್ಯಭಾಜನರಾಯೇಕು ಹೇಳ್ತದು ಸಮಸ್ತರ ಪರವಾಗಿ ಕೋರಿಕೆ.
ವಿವರ:
ಕಾಲ: ಖರ ಸಂವತ್ಸರದ ಆಷಾಡ ಮಾಸ ಹುಣ್ಣಮೆಂದ, ಭಾದ್ರಪದ ಮಾಸ ಹುಣ್ಣಮೆ ಮುಟ್ಟ (15-ಜುಲೈ-2011 ರಿಂದ 12-ಸೆಪ್ಟಂಬರ್-2011)
ದೇಶ: ಅಶೋಕಾವನ, ಶ್ರೀಗೋಕರ್ಣ
ಉದ್ದೇಶ : ಶ್ರೀಶ್ರೀಗಳ ಹದಿನೆಂಟನೇ ಚಾತುರ್ಮಾಸ್ಯ
ಚಾತುರ್ಮಾಸ್ಯದ ಸಮಗ್ರ ವಿವರ ಇಪ್ಪ ಹೇಳಿಕೆಕಾಗತವ ಎಡಪ್ಪಾಡಿಬಾವ ಕಳುಸಿಕೊಟ್ಟದು ಇಲ್ಲಿದ್ದು:
- ಏಪ್ರಿಲ್ 27: ಪುತ್ತೂರಿಲಿ “ಕಾವ್ಯ-ಗಾನ-ಯಾನ” – ಹೇಳಿಕೆ - April 11, 2014
- ಮಾರ್ಚ್ 13: ಪುತ್ತೂರಿಲಿ ‘ರಾಮಕಥಾ ಕಿರಣ’ - March 10, 2012
- ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)! - January 26, 2012
ಹರೇ ರಾಮ
ಕೊಡಕ್ಕಲ್ಲು ಶಿವಪ್ರಸಾದಣ್ಣೋ,ಗುರುಗಳ ಆಶೀರ್ವಾದ ಇದ್ದು ಅಮ್ಮನ ಆರೋಗ್ಯ ಗುರುಗಳ ಭೇಟಿಗೆ ಅಡ್ಡಿ ಆಗ ಹೋಗಿ ಬನ್ನಿ ಎಲ್ಲವೂ ಮ೦ಗಳಕರ ಆವುತ್ತು.ಮಹಾಬಲೇಶ್ವರನನ್ನು ಗುರುಗಳನ್ನು ನ೦ಬಿ ಹೊರಡಿ. ಚಿ೦ತಗೋಕ್ಕೆ ಹತ್ತರೆ ಬಪ್ಪಲೆ ಕೂಡಾ ಎಡಿಯ.ಒಪ್ಪ೦ಗಳೊಟ್ಟಿ೦ಗೆ.
ಹರೇರಾಮ..ಖಂಡಿತಾ ಭಾಗವಹಿಸಿ ಗುರುಗ ಮಹಾಬಲೇಶ್ವರನ ಕೃಪೆಗೆ ಪಾತ್ರರಪ್ಪೋ!!!
ಪ್ರತಿ ವರ್ಷ ಚಾತುರ್ಮಾಸ್ಯ ಆಮಂತ್ರಣ ಕೊಡುಲೆ ಶಿವಮೊಗ್ಗದ ಹವ್ಯಕರು ನಮ್ಮ ಮನೆಗೆ ಬರುತ್ತಿದ್ದರು,ಆಗ ಮನೆ ದೀಪ ಕಾಣಿಕೆ,ಚಾತುರ್ಮಾಸ್ಯ ಕಾಣಿಕೆ ಕೊಟ್ಟು ಕಳುಹಿಸುತ್ತಾ ಇರುತ್ತಿದ್ದೆ, ಹೀಂಗೆ ತುಂಬಾ ವರ್ಷದಿಂದ ನಡೆಸುತ್ತಾ ಇದ್ದೆ, ಈಗ ಗೋಕರ್ಣಕ್ಕೆ ಹೋಯೆಕ್ಕು ಹೇಳಿ ಕಾಣುತ್ತು, ಎಂತಾಳಿದರೆ 40 ವರ್ಷದ ಹಿಂದೆ ಎನ್ನ ಉಪನಯನ ಗೋಕರ್ಣ ಶ್ರೀ ಮಹಾಬಲೇಶ್ವರ ಸನ್ನಿದಿಲಿ ಆಗಿತ್ತು, ಅದಕ್ಕೆ ಈ ವರ್ಷ ಆದರೂ ಚಾತುರ್ಮಾಸ್ಯ ನೋಡೆಕ್ಕು ಹೇಳಿ ಇದ್ದು, ಆದರೆ ಅಬ್ಬೆಗೆ ಉಷಾರಿಲ್ಲದ್ದೆ ಕಾರಣ ಮನಸ್ಸು ಸಮಾದಾನ ಇಲ್ಲೆ.
ಗುರಿಕ್ಕಾರ್ರಿಂಗೆ ನಮಸ್ಕಾರ,
ಆಮಂತ್ರಣ ಕ್ಕೆ ಧನ್ಯವಾದ .
ಹರೇರಾಮ.
ಈ ಸರ್ತಿಯೂ ಖಂಡಿತಾ ಹೋವುತ್ತೆ.
೧ ವರ್ಷ ಎಷ್ಟು ಬೇಗ ಮುಗುತ್ತಲ್ಲದಾ???
ಆಮ೦ತ್ರಣ ಮಾಡಿದ್ದಕ್ಕೆ ಖುಶಿ ಆತು…ನಿಜ್ವಾಗ್ಲೂ ಈ ವರ್ಷ ಚಾತುರ್ಮಾಸ ಒಳ್ಳೆ ರೀತಿಲಿ ಆಗ್ತು …ಚಾತುರ್ಮಾಸದ ಸಮಯದಲ್ಲಿ ಹೋಗಿ ಅನುಭವಿಸಿ , ನ೦ಗ್ಳ ದಿನಚರಿಯಲ್ಲೂ ಹಾಗೆ ಮಾಡುಲೆ ಪ್ರಯತ್ನಪಡ್ವ…..
ಹೇಳಿಕೆ ಮುಟ್ಟಿದ್ದೋ ತಮ್ಮಾ, ಖಂಡಿತಾ ಬರವು. ಶ್ರೀ ಅಕ್ಕಂ ಹೆಳ್ದಾಂಗೆಯಾ, ಈ ಚಾತುರ್ಮಾಸ್ಯ ಮುಗಿದ್ ಮೇಲಾರೂ ಯಂಗಳ ಜೆನ ..ಜೆಲ್ ಪೇಸ್ಟು, ಲಕ್ಸಸೋಪು, ಗೋಬಿಮಂಚೂರಿ ಬಿಟ್ಟು ಶುದ್ಧ ಬ್ರಾಹ್ಮಣರಪ್ಪಲೆ ನೋಡ್ತ್ವ ಹೇಳಿ ಕಾದು ನೋಡ್ವ.
ಗುರಿಕ್ಕಾರ್ರಿ೦ಗೆ ಹರೇ ರಾಮ.ಅ೦ಬಗ ಬಯಲಿ೦ಗೆ ಈ ನಮುನೇಲಿ ಹೇಳಿಕೆ ಬ೦ದದು ಒಳ್ಳೆದಾತದ.ಹೆದರಿಕೆ ಎ೦ತ ಹೇಳೀರೆ ಬಾಕಿ ಗುರಿಕ್ಕಾರಕ್ಕೊ ಇದರ ನೋಡಿ ಮನೆ ಮನೆ ಹೇಳಿಕೆ ಬಾಕಿ ಮಾಡುಗೋ ಹೇಳಿ. ಇರಳಿ ಶ್ರೀ ಅಕ್ಕ೦ ಹೇಳಿದ ಮಾತನ್ನೇ ಆನು ಹೇಳುತ್ತೆ.ಒಪ್ಪ೦ಗಳೊಟ್ಟಿ೦ಗೆ.
ಹರೇರಾಮ ಗುರಿಕ್ಕಾರ್ರೆ!
ಬೈಲಿಲಿ ಹೇಳಿಕೆ ಕಾಗತ ಕಂಡು ಕೊಶೀ ಆತು. ಈ ವರ್ಷದ ಚಾತುರ್ಮಾಸ್ಯಲ್ಲಿ ಸುರುಮಾಡುವ ‘ಅಮೃತಾಹಾರ’ ಪದ್ಧತಿ ಎಲ್ಲಾ ಮನೆಗಳಿಂಗೆ ಮುಟ್ಟಲಿ. ಎಲ್ಲೊರೂ ಸಾವಯವ ಬೆಳದು, ಸಾವಯವ ಆಹಾರ ತೆಕ್ಕೊಂಡು ಆಯುರಾರೋಗ್ಯ ಪಡೆಯಲಿ..
ಚಾತುರ್ಮಾಸ್ಯದ ಸಂಕಲ್ಪ ಎಲ್ಲ ದಿಕ್ಕಂಗೆ ಹರಡಲಿ..
ಧನ್ಯವಾದ.
ಹರೇರಾಮ.