Oppanna.com

ವಿಷು ವಿಶೇಷ ಸ್ಪರ್ಧೆಗೊ – 2012

ಬರದೋರು :      on   19/03/2012    19 ಒಪ್ಪಂಗೊ

ನಮ್ಮ ಬೈಲಿನ ಎಲ್ಲಾ ವ್ಯಕ್ತಿಗಳೂ ಪ್ರತಿಭಾ ಸಂಪನ್ನರೇ.
ಒಬ್ಬೊಬ್ಬನಲ್ಲೂ ಒಂದೊಂದು ವಿಶೇಷ ಶಕ್ತಿಗೊ ಇರ್ತು; ಕೆಲವರಿಂಗೆ ಅದು ವ್ಯಕ್ತವಾಗಿ ಹೆರ ಬಪ್ಪದು ತೀರಾ ಅಪರೂಪ.
ನಮ್ಮೊಳ ಅಡಕವಾಗಿಪ್ಪ ಪ್ರತಿಭೆಗಳ ಪ್ರತಿಷ್ಠಾನ ಗುರುತುಸಲೆ “ಸ್ಪರ್ಧಾ”ಕಾರ್ಯಕ್ರಮ ತುಂಬ ಸಹಕಾರಿ.

ಆಧುನಿಕ ಯುಗಲ್ಲಿ ಅಂತರ್ಜಾಲಮೂಲಕ ಪ್ರಕಟಗೊಂಡ ಒಪ್ಪಣ್ಣನ ಬೈಲಿನ ನೆರೆಕರೆ ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಯಿದು.
ಈಗಾಗಲೇ ಹವ್ಯಕಭಾಷಾ ಸಾಹಿತ್ಯ ದೃಷ್ಟಿಲಿ ಅಪಾರ ಕೊಡುಗೆ ಕೊಡ್ತಾ ಇಪ್ಪ ಪ್ರತಿಷ್ಠಾನ, ಮುಂದಾಣ ದಿನಂಗಳಲ್ಲಿ ಸಾಮಾಜಿಕ- ಸಾಂಸ್ಕೃತಿಕ- ಧಾರ್ಮಿಕ ಕಾರ್ಯಂಗಳ ಮೂಲಕ ವ್ಯಾಪ್ತಿವಿಸ್ತಾರವ ಹೆಚ್ಚುಸುವ ಯೋಜನೆಗಳ ಹಮ್ಮಿಗೊ೦ಡಿದು.

ಈ ಯುಗಾದಿಯ ಪರ್ವಕಾಲಲ್ಲಿ ಹೊಸ ಆಶಯಂಗಳ ಚಿಗುರುಗಳಲ್ಲಿ ಮೊದಲನೇ ಹೆಜ್ಜೆ “ವಿಷು ವಿಶೇಷ ಸ್ಪರ್ಧೆ – 2012
ಬನ್ನಿ, ಭಾಗವಹಿಸಿ, ನಿಂಗಳ ಮಿತ್ರರಿಂಗೂ ತಿಳುಶಿ…

ಸ್ಪರ್ಧೆಯ ವಿವರಂಗೊ:

  1. ಪ್ರಬಂಧ:
    ವಿಷಯ – “ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ”
    750 ಶಬ್ದಂಗೊಕ್ಕೆ ಸೀಮಿತಗೊಳುಸಿ
  2. ಕಥೆ :
    ವ್ಯಾಪ್ತಿ: ಸಾಮಾಜಿಕ ಸಾಮರಸ್ಯ
    750 ಶಬ್ದಂಗೊಕ್ಕೆ ಸೀಮಿತಗೊಳುಸಿ
  3. ಕವಿತೆ:
    ಪಟ: ಲಗತ್ತುಸಿದ್ದು. (ಅತವಾ, https://oppanna.com/?p=19646 ರಲ್ಲಿಯೂ ಕಾಂಬಲಕ್ಕು)
    30 ಸಾಲುಗೊಕ್ಕೆ ಮಿತಿಗೊಳುಸಿ. ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ ಇದ್ದು.
  4. ಪಟ ಸ್ಪರ್ಧೆ:
    ಪ್ರಕೃತಿ- ಮನುಷ್ಯನ ಬಾಂಧವ್ಯವ ಪ್ರತಿಬಿಂಬಿಸುತ್ತ ಚೆಂದದ ಪಟಕ್ಕೆ ಸೂಕ್ತ ಅಪ್ಪ ಶೀರ್ಷಿಕೆಯನ್ನೂ ಕೊಟ್ಟು ಕಳುಸೆಕ್ಕು.
    ಪಟದ ಗಾತ್ರ: ಅಂಚೆಲಿ ಕಳುಸುದಾದರೆ 5×7 ಅಳತೆಲಿ
    ಮಿಂಚಂಚೆಲಿ ಕಳುಸುದಾದರೆ – 1MBಗಿಂತ ಹೆಚ್ಚಪ್ಪದು ಬೇಡ.
  5. ಲಘುಬರಹ:
    ಸದಭಿರುಚಿಯ ನೆಗೆಬರಹ ಈ ವಿಭಾಗಕ್ಕೆ ಬರಲಿ
    500 ಶಬ್ದಂಗೊಕ್ಕೆ ಮಿತಿಗೊಳುಸಿ.

ಸ್ಪರ್ಧೆಯ ಸಾಮಾನ್ಯ ನಿಯಮಂಗೊ:

  1. ಎಲ್ಲಾ ಬರಹಂಗಳೂ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಲಿ ಇರೆಕು.
    ಹವ್ಯಕ ಭಾಷೆಯ ಯೇವದೇ ಪ್ರಾದೇಶಿಕ ಸ್ವರೂಪಕ್ಕೆ ಇಲ್ಲಿ ಮಾನ್ಯತೆ ಇದ್ದು. (ಕುಂಬ್ಳೆ, ವಿಟ್ಳ, ಪಂಜ, ಚೊಕ್ಕಾಡಿ, ಶಿರಸಿ, ಸಾಗರ ಇತ್ಯಾದಿ)
  2. ಹವ್ಯಕ ಪರಂಪರೆ ಸಂಸ್ಕೃತಿಯ ಹಿರಿಮೆಗಳ ಬಿಂಬಿಸುತ್ತ ಬರಹಂಗಳಿಗೆ ಆದ್ಯತೆ.
  3. ಪ್ರತಿ ಸ್ಪರ್ಧಾಳುವಿಂಗೆ ಒಂದು ವಿಭಾಗಲ್ಲಿ ಒಂದೇ ಅವಕಾಶ.
  4. ಸ್ಪರ್ಧೆಗೆ ಬಪ್ಪ ಯೇವದೇ ಬರಹ / ಪಟಂಗೊ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
  5. ಸ್ಪರ್ಧೆಗೆ ಬಂದ ಎಲ್ಲಾ ಬರಹ / ಪಟಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರ್ತು.
  6. ಭಾಗವಹಿಸಲೆ ಅಕೇರಿಯಾಣ ತಾರೀಕು ಎಪ್ರಿಲ್ ಏಳನೇ ತಾರೀಕು (07.04.2012)
  7. ಪ್ರತಿ ವಿಭಾಗಲ್ಲಿಯು ಪ್ರಥಮ ಮತ್ತೆ ದ್ವಿತೀಯ ಹೇಳಿ ಎರಡು ಬಹುಮಾನಂಗೊ ಇರ್ತು
  8. ಸ್ಪರ್ಧೆಯ ವಿಚಾರಲ್ಲಿ ಸಂಘಟಕರ ತೀರ್ಮಾನವೇ ಅಂತಿಮ
  9. ನಿಂಗಳ ಬರಹ/ಪಟವ ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ ಸಹಿತ, ಈ ವಿಳಾಸಕ್ಕೆ ಕಳುಸಿಕೊಡಿ
    ಅಂಚೆ ವಿಳಾಸ:
    ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
    “ಅನುಗ್ರಹ”, ಶಿವಗಿರಿ ನಗರ, ಕುಳಾಯಿ,
    ಹೊಸಬೆಟ್ಟು, ಮಂಗಳೂರು.
    575019
    ಮಿಂಚಂಚೆ ವಿಳಾಸ:
    editor@oppanna.com
  10. ಈ ವಿಚಾರಲ್ಲಿ ಯೇವದೇ ಸಂಶಯ ಇದ್ದರೆ ಈ ನಂಬ್ರಂಗೊಕ್ಕೆ ಪೋನಿಲಿ ಮಾತಾಡುಲಕ್ಕು:
    ಮಂಗಳೂರು – 09449806563
    ಕಾಸರಗೋಡು – 08547245304
    ಬೆಂಗಳೂರು – 09448472292

    ಅಥವಾ
    editor@oppanna.com
    ಗೆ ಮಿಂಚಂಚೆ ಮಾಡುಲಕ್ಕು

ವಿಷು ವಿಶೇಷ ಸ್ಪರ್ಧೆ 2012 – ಸಂಚಾಲಕರು:
ದೊಡ್ಡಭಾವ (ರವಿಶಂಕರ ದೊಡ್ಡಮಾಣಿ / doddamani79@gmail.com)

ಕವನ ಸ್ಪರ್ಧೆಯ ಪಟ:

ಕವನ ಸ್ಪರ್ಧೆಯ ಪಟ

19 thoughts on “ವಿಷು ವಿಶೇಷ ಸ್ಪರ್ಧೆಗೊ – 2012

  1. ಶ್ರೀಮತಿ ವಿಜಯಕ್ಕನ ಪ್ರಬಂಧವ ಓದಿದೆ. ಜೇನದ ರುಚಿಯಿಪ್ಪ ಹಲಸಿನ ಹಣ್ಣಿನ ಸೊಳೆಯ ಕೈಗೆ ರೆಚ್ಚೆಂದ ಎಲ್ಲಟೂ ಮೇಣ ಮೆತ್ತದ್ದೆ ಬಿಡಿಸಿ ಲಾಯಕಾಗಿ ಮಡಗಿದ ಹಾಂಗೆ ಬಯಿಂದು! ಮನಸ್ಸಿಂಗೆ ತುಂಬಾ ಕೊಶಿಯಾತು;ಪ್ರಕಟಣಗೆ ಯೋಗ್ಯವಾದ್ದು ಹೇಳ್ಲೆ ಹೆಮ್ಮೆ ಪಡ್ತೆ. ಅಕ್ಕಂಗೆ ದಯಮಾಡಿ ಧನ್ಯವಾದವ ತಿಳಿಶಿ.ಈ ಸ್ಪರ್ಧೆಯ ಒಪ್ಪಕೆ ನೆಡೆಶಿ ಬಹುಮಾನ ವಿತರಣಾದಿ ಕಾರ್ಯಕ್ರಮ ಸಾಂಗವಾಗಿ ಚೆಂದಕೆ ಸಂಪನ್ನಮಾಡಿ ಸದಾ ನೆಂಪು ಒಳಿವಾಂಗೆ ಮಾಡಿದ ಒಪ್ಪಣ್ಣನ ಬಯಲಿನವಕ್ಕೆಲ್ಲರಿಂಗೂ ಅಭಿನಂದನಗೊ.

  2. ಲೇಖನ ಕಳ್ಸಿದ್ದಕ್ಕೆ ತಲಪಿದ್ದ ಹೇಳಿ ಉತ್ತರವೇ ಬೈಂದಿಲ್ಲೆನ್ನೆ.

  3. ಫಲಿತಾಂಶ ಯಾವಾಗ?

    1. ತುಂಬಾ ಹುರುಪಿಂದ ಬಹಳ ಜನ ಭಾಗವಹಿಸದ್ದವಡ. ಬೈಲಿನ್ಗೊಂದು ಹೆಮ್ಮೆ. ಎಲ್ಲೋರು ಜೆಂಬಾರದ ತುರ್ತಿಲ್ಲಿ ಇಪ್ಪ ಕಾರಣ ಪಲಿತಾಂಶ ಈ ತಿಂಗಳು ೨೦ನೇ ತಾರೀಕು ಕಳುದು ಹೇಳಿ ಶುದ್ದಿ.

  4. ಕೊನೆ ದಿನ ಮುಂದೂಡಿದ್ದಕ್ಕೆ ಧನ್ಯವಾದ.

  5. ಅಭಿನ೦ದನೆಗೊ.. ಸ್ಪರ್ಧೆಗೊಕ್ಕುದೆ, ಫಲಿತಾ೦ಶ೦ಗೊಕ್ಕುದೆ ಕಾದುಕೂದ೦ಡಿದ್ದೆ..

    1. ಮೊದಲು ಒಂದು ಬರದು ಕಳ್ಸಿಕ್ಕಿ ಬಾವಾ..
      ಕಥೆ ಅಕ್ಕು…

  6. ಬಹಳ ಸಂತೋಷ.ಕೆಲವು ಪತ್ರಿಕೆಗಳಲ್ಲೂ ಈ ಬಗ್ಗೆ ಹಾಕಿ.ವಾಚಕರ ವಾಣಿಲಿ ಹಾಕುತ್ತರೆ ಪೈಸೆಯೂ ಕೊಡುದು ಬೇಡ.

    1. ಪತ್ರಿಕೆಗಳಲ್ಲಿ ಬಂತು.ಸಂತೋಷ.

  7. ಯುಗಾದಿ ಸಂದರ್ಭಲ್ಲಿ ವಿವಿಧ ಸ್ಪರ್ಧೆ ಗಳ ಏರ್ಪಡಿಸಿದ್ದು ತುಂಬಾ ಸಂತೋಷದ ವಿಷಯ.
    ಒಪ್ಪಣ್ಣ ನೆರೆ ಕರೆ ಪ್ರತಿಷ್ಠಾನ ಉತ್ತರೋತ್ತರ ಅಭಿವೃಧ್ಧಿ ಹೊಂದಲಿ….

  8. ಗುರಿಕ್ಕಾರ‍್ರೆ… ಪ್ರತಿಷ್ಠಾನ ಸ್ಥಾಪನೆ ಆದ ವಿಷಯ ತಿಳುದು ಖುಷಿ ಆತು….
    ಸ್ಪರ್ಧೆ ಏರ್ಪಾಡು ಒಳ್ಳೆ ಕೆಲಸ
    ಶುಭವಾಗಲಿ…

  9. ಪುರುಸೊತ್ತು ಆದರೆ ಎಂತಾರೂ ಬರದು ಕಳುಸುತ್ತೆ…:)

    1. ಪುರುಸೋತ್ತು ಆದರೆ ಅಲ್ಲ, ಮಾಡಿ ಬರದು ಕಳ್ಸೆಕ್ಕು..

  10. ಈ ಸರ್ತಿ ಎನಗುದೆ ಒಂದು ಕೈ ನೋಡೆಕ್ಕು.. ಕಾಂಗ್ರೆಸ್ಸಿನ ಕೈ ಅಲ್ಲ ಮತ್ತೆ 🙂 ಧನ್ಯವಾದಂಗೊ ಮತ್ತೆ ಶುಭಾಶಯ 🙂

  11. ಯುಗಾದಿಂದ ಆದಿಯಾಗಿ ಆನಂದದ ಬೆಳಕು ಜಗದಗಲಕ್ಕೆ ವಿಸ್ತರಿಸಲಿ… ವಿಷುವಿನ ಹರುಷ ಎಂದೆಂದೂ ಬೆಳೆಯುತ್ತಲೇ ಇರಲಿ… ಶುದ್ದಿ ಓದಿ ತುಂಬಾ ಖುಷಿ ಆವುತ್ತಾ ಇದ್ದು… ‘ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ’ ಕ್ಕೆ ಶುಭವಾಗಲಿ…

  12. ಓಹ್ ! ಬೈಲಿಲ್ಲಿ ಸ್ಪರ್ಧೆಗಳ ಮೇಳ. ಒಪ್ಪಣ್ಣ ಪ್ರತಿಷ್ಠಾನದ ಈ ಕೆಲಸ ಸ್ತುತ್ಯರ್ಹ. ಬನ್ನಿ, ನಮ್ಮ ಹವ್ಯಕ ಸ್ನೇಹಿತರಿಂಗೆ ಈ ವಿಷಯ ತಿಳುಸಿ, ಈ ಕಾರ್ಯ ಬಹು ಯಶಸ್ವಿಯಾಗಿ ಮಾಡುವೊ. ಬೈಲಿಂಗೆ ದೇಶ ವಿದೇಶಂಗಳಿಂದ, ಕಥೆ, ಕವನ, ನೆಗೆಬರಹಂಗೊ ಹರುದು ಬರಲಿ.

  13. ಒಪ್ಪಣ್ಣ ಪ್ರತಿಷ್ಟಾನಕ್ಕೆ ಜೈ ಹೋ……… ಸ್ಪರ್ಧಗೊಕ್ಕೆ ಇನ್ನೊಂದು ಜೈ ಹೋ……

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×