Oppanna.com

ಸುಪ್ರಭಾತ – ಭಾಮಿನಿಲಿ

ಬರದೋರು :   ಮುಳಿಯ ಭಾವ    on   18/09/2013    21 ಒಪ್ಪಂಗೊ

ಮೂಡು ಬಾನಿಲಿ ಕಸ್ತಲೆಯ ಹೊಡಿ
ಮಾಡಿ ಮೂಡುತ ಬಪ್ಪ ಸೂರ್ಯನ
ನೋಡುಲೆನಗುತ್ಸಾಹವನುದಿನ ಹೊಸತಿದನುಭವವು ।
ಆಡುತಾಡುತ ಮೇಲೆ ಕೆ೦ಪ೦
ಗೋಡಿ ಬಾನಿನ ಬಣ್ಣ ಬದಲುಸಿ
ಕಾಡು ನಾಡಿನ ಮೇಲೆ ತನ್ನಯ ಶಕ್ತಿ ಪಸರುಸೊಗ ।।ಸುಪ್ರಭಾತ
ಇಬ್ಬನಿಯ ಹನಿ ತು೦ಬಿ ಹುಲ್ಲಿಲಿ
ಕಬ್ಬ ಬರದಾ೦ಗಿಕ್ಕು ಮನಸಿದು
ನಿಬ್ಬೆರಗು ನೋಡೊಗಳೆ ಪರಿಸರದಾಟ ರಸದೂಟ ।
ಅಬ್ಬರದ ಸೊರವಿಲ್ಲೆ ಮನಸಿ೦
ಗುಬ್ಬರದ ಚೈತನ್ಯ ಕೊಡುವಾ
ಹಬ್ಬವಲ್ಲದೊ ಸೂರ್ಯನುದಯದ ಹೊತ್ತು ದಿನದಿನವೂ ।।
ಜಾಲ ಸುತ್ತಣ ಹೂಗಿನಾ ಸೆಸಿ
ಸಾಲು ನೋಡುಲೆ ಎರಡು ಕಣ್ಣುಗೊ
ಸಾಲ ನಕ್ಷತ್ರ೦ಗೊ ಮುಗುಟುಗಳಾಗಿ ಮೂಡಿದವೋ? ।
ಮೇಲೆ ರವಿಯುದಯಕ್ಕೆ ಸಕ್ಕರೆ
ಹಾಲು ಚೆಲ್ಲಿದ ಹಾ೦ಗೆ ಮಲ್ಲಿಗೆ
ಮಾಲೆ ಎಲೆಗಳ ಎಡೆಲಿ ಮುಗುಳಿನ ನೆಗೆಲಿ ಹರಡಿದವೋ? ।।
ಹಟ್ಟಿಯೊಳ ಮನುಗಿಪ್ಪ ಕ೦ಜಿಗೆ
ಕೊಟ್ಟು ಅಬ್ಬೆಯ ಹಾಲು ಹುಲ್ಲಿನ
ಕಟ್ಟ ಬೈಪಣೆಯುದ್ದ ಹಾಕೊಗ ದನವು ತಲೆಯಾಡ್ಸಿ ।
ದಿಟ್ಟಿಸಿಯೆ ನೋಡೊಗಳೆ ಮನಸಣ
ಕಟ್ಟೆ ತು೦ಬುಗು ಮಧುರತೆಯ ಸುಧೆ
ಗಟ್ಟಿಯಾಗಿಯೆ ಕೊರಳು ಹಾಡುಗು ಸುಪ್ರಭಾತ ದಿನಾ ।।
ಮರದ ಗೆಲ್ಲುಗಳೆಡೆಲಿ ಚಿಲಿಪಿಲಿ
ಗರವ ಹಕ್ಕಿಗೊ ಮುಳಿಯ ಗೂಡಿನ
ಹೆರಪಯಣಕಡಿಮಡುಗುಲಟ್ಟಣೆ ಮಾಡುವಾ ಹೊತ್ತು ।
ಕರಗಿ ಮ೦ಜಿನ ಮುಸುಕು ಮೈಮನ
ವರಳಿ ನನಸಾಗುಸುಲೆ ಬೇಗನೆ
ಹೆರಡುಗುತ್ಸಾಹಲ್ಲಿ ಇರುಳಿಲಿ ಕ೦ಡ ಕನಸುಗಳ ।।
 
ಚಿತ್ರಕೃಪೆ ಃ ಪವನಜ ಮಾವ

ಮುಳಿಯ ಭಾವ

21 thoughts on “ಸುಪ್ರಭಾತ – ಭಾಮಿನಿಲಿ

  1. ಓದಿದ, ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.

  2. ಪದ್ಯ ತುಂಬಾ ಲಾಯಿಕಾಯಿದು… ಸೂರ್ಯೋದಯದ ಸುಂದರ ವರ್ಣನೆ… “ಹುಲ್ಲಿನ ಕಟ್ಟ ಬೈಪಣೆಯುದ್ದ ಹಾಕೊಗ ದನವು ತಲೆಯಾಡ್ಸಿ ।ದಿಟ್ಟಿಸಿಯೆ ನೋಡೊಗಳೆ “….ಕಂಜಿ, ದನದ ವರ್ಣನೆ ಮನಸ್ಸಿಂಗೆ ನಾಟಿತ್ತು. ಎನ್ನ ಅಪ್ಪನ ಮನೆಲಿ ಆನು ಸಣ್ಣಾದಿಪ್ಪಾಗ ಇದ್ದ ದನಗಳ ನೆಂಪಾತು.

  3. ಉದಿಯಪ್ಪಗಾಣ ವರ್ಣನೆ, ಉಪಮೆಗೊ ಎಲ್ಲವೂ ತುಂಬಾ ಲಾಯಿಕಕೆ ಮೂಡಿ ಬಯಿಂದು. ಕವನಕ್ಕೆ ಹೊಂದಿಗೊಂಬ ಚೆಂದದ ಪಟ. ಸೂಪರ್
    [ಹೆರಡುಗುತ್ಸಾಹಲ್ಲಿ ಇರುಳಿಲಿ ಕ೦ಡ ಕನಸುಗಳ]- ಒಳ್ಳೆ ಆಶಯ

  4. ಶ್ರೀ ಗುರುಗಳ ಭೇಟಿ ಬೈಲಿಲಿ ಲವಲವಿಕೆ ಮೂಡುಸಿದ್ದು ಸತ್ಯ !
    ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ. ಬತ್ತಿದೆದೆಯಲಿ…….. ಹೊನ್ನ ಮಳೆ ಸುರಿಸಿ —ಸಾಲುಗೊ ನೆನಪಾತು. “‘ಹೊನ್ನ ಮಳೆ ಸುರಿಸಿ” …. ಹೇಳುದು ಅಣ್ಣನತ್ತರೆ ಎಲ್ಲೋರ ಬೇಡಿಕೆ.

    1. ನಿರ೦ತರ ಪ್ರೋತ್ಸಾಹಕ್ಕೆ ಧನ್ಯವಾದ ಅಕ್ಕ.

  5. ರಘುರಾಮನ “ಕೌಸಲ್ಯಾ ಸುಪ್ರಜಾ ರಾಮ” ಲಾಯ್ಕಾಯಿದು. ಇದರ ಓದಿದವು ಭಾಮಿನಿ ಅಪ್ಪಲೆ ಸಾಧ್ಯವೇ ಇಲ್ಲೆ.
    [ಭಾಮಿನಿ= ಕೋಪಗೊಂಡಿರುವ ಹೆಂಗಸು]

  6. ಲಾಯಕ ಆಯಿದು.
    ತುಂಬ ಸಮಯದ ಮತ್ತೆ ಮುಳಿಯ ಭಾಮಿನಿ ಬೈಲಿಲಿ ಬಂದದು ಕೊಶಿ ಆತು.

  7. ಮುಳಿಯ ಭಾವನ ಭಾಮಿನಿ ನೋಡದ್ದೆ ತು೦ಬಾ ಸಮಯ ಆತು.ಬೈಲಿನ್ಗೆ ಬಾರದ್ದೆ ತು೦ಬಾ ಸಮಯ ಆತು.ನೋಡಿದ ಕೂಡ್ಲೆ ಭಾವ೦ ಆ ಹಳೇ ಭಾವನೇ ಆಗಿದ್ದ೦ ಹೇಳಿ ಕೊಶಿ ಆತು.ಭಾವ೦ಗೆ ಬೈಲಿನೋರು ಭಾಮಿನಿ ಭಾವ೦ ಹೇಳಿ ಹೊಸ ಹೆಸರು ಮಡಗಿದ್ದವೂ ಹೇಳಿ ಆರೋ ಹೇಳಿದ್ದವು;ಮಡಗದ್ದರೆ ಮಡಗುವೊ೦ ಆಗದೊ ಭಾವ.

    1. ಅಪ್ರೂಪಕ್ಕೆ ಬ೦ದ ಮಾವ೦ಗೆ ಸ್ವಾಗತ.ಯೇವಗಳೂ ಬತ್ತಾ ಇರೇಕು ಹೇಳಿ ಕೋರಿಕೆ.
      ಧನ್ಯವಾದ.

  8. ಭಾಮಿನಿಗೆ ಮುಳಿಯದವರೆಂದು ಕೇಳಿದ್ದೇವೆ……………ದಕ್ಕಿತ್ತೋ ದಕ್ಕಿತ್ತು.

  9. ‘ಅಬ್ಬರದ ಸೊರವಿಲ್ಲೆ…….’
    ಇಳೆಯಿಂದ ಮೊಳಕೆಯೊಗೆವಂದುತಮಟೆಗಳಿಲ್ಲ
    ಫಲ ಮಾಗುವಂದು ತುತ್ತೂರಿ ದನಿಯಿಲ್ಲ
    …………… ……
    ಹೊಲಿ ನಿನ್ನ ತುಟಿಗಳನು ಮಂಕು ತಿಮ್ಮ-.ಡಿ. ವಿ.ಜಿ
    ಇದೇ ಭಾವವ ಕೆಲವೇ ಶಬ್ದಲ್ಲಿ ಹೇಳಿದ್ದು ಲಾಯಕಕೆ ಬೈಂದು
    ನಿತ್ಯ ನೂತನವಾದ ಪ್ರಕೃತಿಯ,ಪರಿಸರದ ವರ್ಣನೆ ಅನುಪಮ !
    (ಬಲ್ಲಿರೇನಯ್ಯಾ,…. ಭಾಮಿನಿಗೆ ಯಾರೆಂದು ಕೇಳಿಬಲ್ಲಿರಿ… ?)

  10. ವಾವ್…
    ಭಾವ ನಿಂಗಳ ಭಾಮಿನಿಯ ರಸ
    ಭಾವ ಸಮಲುವ ಧಾರೆ ಹರಿವಗ
    ಜಾವ ಬಣ್ಣನೆ ಕಾವ್ಯ ಕಲ್ಪನೆ ಭೂರಿ ಭೋಜನವು
    ಕಾವಲೆಡಿಯನ್ನೆನಗೆ ಮುಂದೆಲಿ
    ಯಾವ ಪದ್ಯವೊ ಬೇಗ ಬರಲಿದ
    ರಾವು ಸವಿವಲೆ ಎಲ್ಲರಿಂಗುದೆ ಮುಳಿಯ ಭಾಮಿನಿಯ ॥ 🙂

  11. ಅಣ್ಣಾ, ತುಂಬ ಲಾಯಕ ಆಯಿದು. ಮುದ ನೀಡುವ ಪದ್ಯ!
    ಅಬ್ಬರವಿಲ್ಲದ್ದ ದಿನನಿತ್ಯದ ಹಬ್ಬದ ಸೊಗಸಾದ ವರ್ಣನೆ!
    ಮೂರನೇ ಪದ್ಯಲ್ಲಿ ಬಂದ ಉಪಮೆಗೋ ಅನುಪಮ!
    {ನಕ್ಷತ್ರ೦ಗೊ ಮುಗುಟುಗಳಾಗಿ ಮೂಡಿದವೋ?
    ಸಕ್ಕರೆ ಹಾಲು ಚೆಲ್ಲಿದ ಹಾ೦ಗೆ ಮಲ್ಲಿಗೆ ಮಾಲೆ…}

  12. ಸುಪ್ರಭಾತ ಸೊಗಸಾಗಿ ಬಯಿಂದು ,ಅಭಿನಂದನೆಗಳು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×