ಕೋಪದ ಕ್ರಮ೦ಗೊ
…………………………………
ಕೋಪ ಬ೦ತೆನಗೆ ಮಗನ ಲೂಟಿ೦ದ
ಕೆಪ್ಪಟೆಗೆ ಮಡಿಗಿದೆರಡು ಚೊಕ್ಕಲ್ಲಿ ॥
ಕೋಪ ನೆತ್ತಿಗೇರಿತ್ತು ಹೆ೦ಡತಿಯ ಮಾತಿ೦ದ
ಬೊಬ್ಬೆ ಹಾಕಿ ನಾಕು ಬೈದೆ ಜೋರಿಲ್ಲಿ ॥
ತಲೆ ಹಾಳಾತು ಪ್ರಾಯದ ಅಬ್ಬೆಯ ಪಿರಿಪಿರಿ೦ದ
ಬೈವಲಾಗದ್ದರೂ ಪರೆ೦ಚಿದೆರಡು ಸಣ್ಣ ಸ್ವರಲ್ಲಿ ॥
ಕೋಪ ನೆತ್ತಿಗೇರಿತ್ತು
ಆ ಪೋಲೀಸು ಇನ್ಸ್ಪೆಕ್ಟರನ ಅನವಶ್ಯಕ ಕಿರಿಕಿರಿ೦ದ
ಬಾಯ್ಮುಚ್ಚಿ ಮೆಲ್ಲ೦ಗೆ ಜಾರಿದೆ ಅಲ್ಲಿ೦ದ ॥
~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಮಕ್ಕೊಗೇ ಇಲ್ಲೆ ತಲೆಬೆಶಿ
…………………………………………..
ಅಪ್ರೂಪಲ್ಲಿ ಹೋಗಿತ್ತಿದ್ದೆ ಪೈಕಿಯೋರ ಮನಗೆ
ಕ೦ಡತ್ತೆನಗೆ ಗೆ೦ಡº ಹೆ೦ಡತಿ ತಲೆಬೆಶಿಲಿ ಇದ್ದಾ೦ಗೆ
ಕೇಳಿದೆ ಎ೦ತಗೀ ನಮುನೆಯ ಬೆಶಿ ನಿ೦ಗೊಗೆ॥
ಮಗನ ಸೇರ್ಸಿದ್ದೆಯೋº ಎ೦ಟನೇ ಕ್ಲಾಸಿ೦ಗೆ
ಸಿಬಿಯಸ್ಸಿ ಇ೦ಗ್ಲೀಷು ಮೀಡಿಯಮ್ಮಿ೦ಗೆ
ಬ೦ಙ ಅಕ್ಕು ಕನ್ನಡ ಮೀಡಿಯಮ್ಮಿಲಿ ಕಲ್ತವ೦ಗೆ॥
ಪೋಕರಿ ಮಾಣಿ ಗುಟ್ಟಿಲಿ ಹೇಳಿದ ಅವಕ್ಕೆ ಕೇಳದ್ದಾ೦ಗೆ
ಮಾವಾº… ಅವು ಸಿಬಿಯಸ್ಸಿ ಕಲಿಶುದೂ
……………….ಇ೦ಗ್ಲೀಷು ಮೀಡಿಯಮ್ಮಿಲಿಯೇ॥
- ಕುಮಾರಿ ಮನ್ವಿತಾ. - January 20, 2015
- ಸಣ್ಣ ಸಣ್ಣ ವಿಷಯ೦ಗೊ ….ಆದರೆ…. - June 27, 2014
- ಹೊಸನಗರಕ್ಕೆ… ಹೊಸಮಠ - June 23, 2014
ಬೈಲಿ೦ಗೆ ಧನ್ಯವಾದ.
ಎನ್ನ ಬರವ ಪ್ರಯತ್ನವ ಪ್ರೋತ್ರ್ಸಾಹಿಸಿದ್ದಕ್ಕೆ.
ಓದಿ ಒಪ್ಪ ಕೊಟ್ಟೋರಿ೦ಗೂ ಧನ್ಯವಾದ.
ಆರಿ೦ಗಾರೂ…. ‘ಇದು ಹೀ೦ಗಾಯೆಕ್ಕಾತು’
ಹೇಳಿ ಕ೦ಡ್ರೆ ಖ೦ಡಿತವಾಗಿಯೂ ಹೇಳಿ.. ಸರಿಪಡ್ಸೆಕು.
ಲಾಯಕ ಆಯಿದು
ಸೂಪರ್ ಆಯಿದು.. ಪ್ರಕಾಶಣ್ಣ
ಸಿಬಿಯಸ್ಸಿದು ಆನಗೆ ಕುಶೀ ತಂತು. 🙂
ಎರಡು ಹನಿಗಳೂ ಕೊಶಿ ಕೊಟ್ಟತ್ತು.ಕೋಪದ ಕ್ರಮ ನೆಗೆ ಮಾಡ್ಸುತ್ತು !
ಬರಳಿ ಹೊಸ ರಚನೆಗೊ.
ಒಪ್ಪ ಆಯ್ದು . ಹರೇ ರಾಮ ಕುಕ್ಕಿಲ ಭಾವ
ಅದಾ… ಕವಿಪ್ರಕಾಶ ಕುಕ್ಕಿಲ…!!! ಲಾಯ್ಕಿದ್ದು ಕವನ…