ಓಷಧೀಶನು ಮೂಡೊ ಹೊತ್ತಿಲಿ
ಕಾಸುಲೇಳಿಯೆ ನೀರ ತುಂಬ್ಸುಗು
ಪೂಷ ಮುಳುಗಿದ ಮೇಲೆ, ಶರದದ ಹತ್ತು ಮೂರರೊಳ |
ಮಾಸವಾಶ್ವಿಜ ಬಹುಳ ಪಕ್ಷದೆ
ಭೂಸುತಾರಿಯ ನೆಂಪು ಮಾಡುವ
ದೇಸಿಹಬ್ಬವು ಮನೆಯ ಮಕ್ಕೊಗೆ ಭಾರಿ ಗೌಜಿಯದಾ ||
ಬಳ್ಳಿ ಬರೆಗದ ಸೇಡಿಹೊಡಿಲಿಯೆ
ಮುಳ್ಳುಸೌತೆಯ ಹಂಬು ಕಟ್ಟುಗು
ಕೊಳ್ಳಿತುಂಡಿಲಿ ಕಿಚ್ಚು ಹೊತ್ತುಸಿಯೊಲೆಗೆ ಹಾಕುಗದಾ |
ಎಳ್ಳಿನೆಣ್ಣೆಯ ತಲೆಗೆ ಕಿಟ್ಟುಲೆ
ಮಿಳ್ಳೆಸೌಟಿನ ಹಿಡುದು ಬಪ್ಪಗ
ಕಳ್ಳನಾಂಗೆಯೆ ಜಾರಲಬ್ಬೆಯು ಕೆಮಿಯ ಹಿಂಡುಗದಾ ||
ಸಿರಿಯ ದೇವರ ಜಾನ್ಸಿ ಮನಸಿಲಿ
ಗರಿಕೆ ಸಕ್ಕಣ ಸೇರ್ಸಿಯಬ್ಬೆಯು
ಮರದ ಮಣೆಯೊಳ ಕೂರ್ಸಿಯೆಣ್ಣೆಲಿ ಮೈಪಳಂಚುಗದಾ |
ಚೆರಿಗೆ ತುಂಬಿದ ನೀರ ತೋಡಿಯೆ
ಕಿರಿಯ ಮಕ್ಕಳ ತಲೆಗೆಯೆರದಿಕಿ
ನೆರಿಗೆ ಸಿಕ್ಕಿಸಿ ಹಬ್ಬದಡಿಗೆಯ ಮಾಡಿ ಬಡುಸುಗದಾ ||
ಜಾಲನೆಡುಕಿನ ತೊಳಶಿಕಟ್ಟೆಲಿ
ಹಾಲೆಮರದಾ ಬಲಿಯ ಕೂರುಸಿ
ಸೀಳಿಸಲಕೆಯ ಕಟ್ಟಿ ಹೂಗಿನ ಮಾಲೆ ನೇಲುಸುಗು |
ಮೂಲೆಮೂಲೆಲಿ ಸೊಡಲು ನಿಲ್ಲಿಸಿ
ಸಾಲು ಹಣತೆಯ ಬೆಣಚು ತುಂಬುಸಿ
ಕೋಲ ಕಬರಿನ ವಿಷ್ಣುಪಾದದೆ ದೀಪ ಹೊತ್ತುಸುಗು ||
ಕರವ ದನಗೊಕೆ ಪುಟ್ಟು ಕಂಜಿಗೆ
ಸುರಗಿ, ತೊಳಶಿಯ ಮಾಲೆ ಹಾಕುಗು
ಎರದ ತೆಳ್ಳವು ಬಾಳೆಹಣ್ಣಿನ ಕೊಶಿಲಿ ತಿನ್ನುಸುಗು |
ದುರುಸು ಕುಂಡಕೆ ನೆಲದ ಚಕ್ರಕೆ
ಬಿರುಸು ಕಡ್ಡಿಗೆ ಕಿಚ್ಚು ಕೊಟ್ಟರೆ
ಕರಗಿಹೋಕದ ಕಪ್ಪುಕಸ್ತಲೆ ದೀಪಹಬ್ಬಕ್ಕೆ ||
(ಚಿತ್ರಕೃಪೆ : ಅ೦ತರ್ಜಾಲ)
- ದೀಪ ಹಬ್ಬ - October 23, 2014
- ಬಾ ನೆಳವೆ – ಪ೦ಜೆ ಮ೦ಗೇಶರಾಯರ ಕವಿತೆಯ ಅನುವಾದ - September 28, 2013
- ಕೃಷ್ಣ ಕಾಡಿದನು.. - August 28, 2013
ಶಾಲಗೆ ಹೋಪಗ ಕುಮಾರವ್ಯಾಸ ಭಾರತ ಕಾವ್ಯ ವಾಚನ ಮಾಡಿದ ಹಾ೦ಗೆ ವಾಚನ ಮಾಡಿ ಖುಷಿ ಪಟ್ಟೆಇಂದಿರೆ .ಲಾಯಿಕ ಆಯಿದು..
ಓಂ ಸ್ವಸ್ತಿ (ಕ)…ಇಂದಿರತ್ತೆಯ ಸುಂದರ ಪದ್ಯವ ಓದಿ ಕುಶಿಯಾತು…
ಮಳೆಯ ನೆಡುಕೆಯೆ ಬ೦ದ ದೀಪಾ
ವಳಿಯ ಹಬ್ಬದ ಗೌಜಿ ಮನಸಿ೦
ಗಿಳುದು ಕೊಶಿ ಹೆಚ್ಚಾತು ಪದ್ಯದ ಸಾಲುಗಳ ಓದಿ !
ಕಳುದು ಕಸ್ತಲೆ ಜೀವಜಾಲ
ಲ್ಲೆಳಕ ಮೂಡಲಿ ಅಬ್ಬೆ ಭಾಷೆಯು
ಬೆಳದು ಹೊಸ ಎತ್ತರಕೆ ಹಬ್ಬಲಿ ದಿಕ್ಕುಗಳ ದಾ೦ಟಿ !!
ಎಕ್ಸಲೆಂಟ್ !!. ವೆರಿ ನೈಸ್. ಒಳ್ಳೆ ಪದ್ಯ. ಲಾಯಿಕ್ಕಯಿದು .ಸಾಹಿತ್ಯ, ಶಬ್ಧನ್ಗೋ ಒಳ್ಳೆದಿದ್ದು.
ವ್ಹಾ ! ಎಂಥ ಸೊಬಗಿನ ಪದ್ಯ!
ಶಬ್ದ ಸಂಪದ್ಭರಿತ! ವರ್ಣರಂಜಿತ ಪರ್ವ ವರ್ಣನೆ!!
ಮೆರವ ಹಬ್ಬದ ಭಾರಿ ಗೌಜಿಯು
ಮರದು ಹೋಪದರಿಂದ ಮೊದಲೇ
ಸೊರುಗಿ ನೀರಿನ ತಲೆಗೆರದ ರೀತಿಲೆ ಹರುದು ಬಂತು I
ತೊರೆಶಿ ಹಾಲಿನ ಬೆಳೆಶಿ ಕಂಜಿಯ
ಮರದು ಮೇವಿನ ನಕ್ಕುಗಬ್ಬೆಯು
ಇರುಳು ಪೂಜೆಲಿ ಕೊರಳ ಮಾಲೆಯ ಕೆರಳಿ ಮೊದಲೆಳಗು II
ಲಾಯಿಕಾಯಿದತ್ತೆ . ಗೋಪೂಜಗೆ , ದನಗೊಕ್ಕೆ ನೈವೇದ್ಯಕ್ಕೆ ಎಂಗಳಲ್ಲಿ ಚೆಕ್ಕರ್ಪೆ ಕೊಟ್ಟಿಗೆ ಮಾಡುದು .
ಸಡಗರದ ಹಬ್ಬವ ಬಾರೀ ಲಾಯಕಕೆ ಬರದ್ದಿ ಇ೦ದಿರತ್ತೆ.ಮೇಲಾಗಿ ಸಾಲು ಸಾಲು ದೀಪ೦ಗಳ ಪಟವ ಕಣ್ಣಿ೦ಗೆ ಕಟ್ಟುವಾ೦ಗೆ ಕೊಟ್ಟ ನಿ೦ಗಗೆ ಮನಸಾ ಅಭಿನ೦ದನಗೊ.