ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು.
ಎಡಕ್ಕಿಲಿ ಕರೆ೦ಟು ಚುಯಿ೦ಕ ಆಗಿ ಸೀರಿಯಲು ನೋಡುಲೆ ಎಡಿಯದ್ದ ಹಾ೦ಗೆ ಈ ಮುಳಿಯ ಭಾವನ ಬಲ್ಬು ಎ೦ತಕೆ ನ೦ದಿದ್ದು ಹೇಳಿ ಬೈದಿಕ್ಕೆಡಿ.
ಇದುವರೆಗಾಣ ಕತೆ ಮರದು ಹೋಗಿದ್ದರೆ ಇದಾ ಸ೦ಕೊಲೆ ಇಲ್ಲಿದ್ದು.
ಇರ್ಲು ಶಾಲಗೆ ಬ೦ದು ನೋಡೊಗ
ಪೆರ್ಲ ಪೇಟೆಯ ತು೦ಬ ಸ೦ತೆಯೆ
ಕುರ್ಲರಿಯ ಮಾರುವವು ಗೋಣಿಯ ಹಾಸಿ ಕೂಯಿದವು |
ಪೊರ್ಲು ತೂಲಯ ಹೇಳಿ ಕಿಸಿಯುತ
ತರ್ಲೆ ಮಾಡುವ ಜವ್ವನಿಗರೂ
ಮರ್ಲು ಕೊ೦ಗಿಯ ಕಟ್ಟಿ ಮಾರ್ಗದ ಕರೆಲಿ ನಿ೦ದಿದವು ||
ಸಣ್ಣ ಕನ್ನಟಿ ಎದುರು ಮಡುಗಿಯೆ
ಹಣ್ಣು ಅಡಕೆಯ ಹೋಳು ಸೇರುಸಿ
ಸುಣ್ಣ ಉದ್ದಿದ ಎಲೆಯ ಅಗಿವಾ ವೇಷಧಾರಿಗಳೂ|
ಬಣ್ಣಬಣ್ಣವ ಕಲಸಿ ತೆ೦ಗಿನ
ಎಣ್ಣೆ ಸೇರುಸಿ ಮೋರೆಗುದ್ದೊಗ
ಕಣ್ಣು ತು೦ಬಾ ನೋಡುವಾಸೆಲಿ ನೆಡದೆ ಚೌಕಿಯೊಳ ||
ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.
ಭಾರಿ ಲಾಯ್ಕ ಆಯಿದು..ಯಕ್ಷಗಾನ ಕಣ್ಣಿಂಗೆ ಕಟ್ಟಿದ ಹಾಂಗೆ ಅವುತ್ತು…. ಆಟ ಅಪ್ಪಗ ಮಳೆ ಬಪ್ಪದು ಬೇಡಪ್ಪ….
ಪಷ್ಟಾಯಿದು ಭಾವಾ..
ಒಳ್ಳೇದಾಯಿದು, ಇನ್ನಾಣದ್ದರೆ ನಿರೀಕ್ಷೆಲಿ ಇದ್ದೆಯೊ°.
ಸಮಕ್ಕೆ ಹೇಳಿದ್ದವು ಚೆನ್ನೈಭಾವ!
ಓದಿದಷ್ಟೂ ಹೆಚ್ಚೆಚ್ಚು ರಸಾನುಭವ ಕೊಡ್ತ ಭಾಮಿನಿಯ ನಾವು ನಾಲ್ಕೈದು ಸರ್ತಿ ಓದಿತ್ತಯ್ಯಾ.. ಆಟದ ‘ಒಳ-ಹೆರ’ ಎರಡನ್ನೂ ಚೆಂದಕೆ ವರ್ಣನೆಮಾಡಿ ಬರದ್ದಿ ಮುಳಿಯಭಾವಾ. ಅಭಿನಂದನೆಗೊ.
‘ಅಶ್ವಮೇಧ ಮಾಡಿ ದಿಗ್ವಿಜಯ ಸಾಧುಸಿದ್ದೆ’ ಹೇಳಿ ರಂಗಸ್ಠಳಲ್ಲಿ ಕೊಚ್ಚಿಯೊಂಬ ರಾಜವೇಷದವ ಚೌಕಿಲಿ ಹರ್ಕಟೆ ಹಸೆಲಿ ಕೂದು ಬೀಡಿ ಬಲುಗಿಂಡು ತಣ್ಕಟೆ ಚಾಯ ಕುಡ್ಕಂಡು ಇರ್ತ..! ಈ ವೈರುಧ್ಯ ಸರಿಯಾಗಿ ಚಿತ್ರಣ ಮಾಡಿದ್ದಿ ನಿಂಗೊ.
ಭಾವಾ, ಅಕೇರಿಗೆ ಬಾನಲ್ಲಿ ಮಿಂಚು ಗುಡುಗು ಆರ್ಭಟ ಸುರುವಾತು ಹೇಳ್ತಲ್ಲಿಯಂಗೆ ತಂದು ಸಸ್ಪೆನ್ಸ್ ಲ್ಲಿ ನಿಲ್ಲುಸಿದ್ದಿ, ಮತ್ತಾಣ ಸಂಗತಿ ಎಂತಾತು ಹೇಳಿ ಅರಡಿವಲೆ ಎಂಗೊ ಕಾಯ್ತಾ ಇದ್ದೆಯೊ. ಇನ್ನಾಣದ್ದು ಬೇಗ ಬರಲಿ..
ರೈಸಿದ್ದಯ್ಯಾ ರೈಸಿದ್ದೂ..
ಪಂಚ ಪಾಂಡವರೋತ್ತಿಂಗೆ ಕೃಷ್ಣ ಇಪ್ಪ ಕಾರಣ ಆಟ ನೀರಪ್ಪಲೆ ಸಾಧ್ಯವೇ ಇಲ್ಲೆ…
ಮಿ೦ಚು ಸೆಡಿಲಿನ ಆರ್ಭಟ ಅಭಿಮನ್ಯು/ಬಣ್ಣದ ವೇಷದ್ದೋ ?
ನಿನಗೆ ಯೆವ ವೇಷ ಬೇಕು….
ಪೊರ್ಲು ತೂಲಯ ಹೇಳಿ ಮರ್ಲು ಕಟ್ಟುವ ಜವ್ವನಿಗರ ವಿಷಯ, ವಾಲಗ ಊದುವ ನಾಯಿಗೊ ಪೆಟ್ಟಿಂಗೆ ಹೆದರಿ ಬೀಲ ಮಡುಸಿದ್ದದು, ಚೌಕಿಲಿ ಚಾಣೆ ಮಂಡೆಯವ ವೇಷ ಹಾಕಿ ರೈಸಿದ್ದದು, ಎಲೆ ಅಡಕೆ ತಿಂದೊಂಡು ಚುಟ್ಟಿ ಬರದ್ದದು, ಹರುದ ಗೋಣಿ ಕಟ್ಟಿದ್ದದು ಎಲ್ಲವುದೆ ನೈಜವಾಗಿ ಬಯಿಂದು ಮುಳಿಯ ಭಾವ. ಮಳೆ ಬಂದು ಆಟ ಚೆಂಡಿ ಆಗದ್ದೆ ಇರಳಿ ಹೇಳಿ ಪ್ರಾರ್ಥನೆ. ಮುಂದಾಣ ಚೆಂಡೆ ಪೆಟ್ಟಿಂಗೆ ಕಾಯ್ತಾ ಇದ್ದೆ.
ಪೆರ್ಲ ಶಾಲೆಗೆ ಆಟಕ್ಕೆ ನಾವೇ ಹೋವ್ತ ಹಾಂಗಿಪ್ಪ ಅನುಭವ ಆತು.
ಭಾಮಿನಿ ರೈಸಿತ್ತು. ಆಟ ರೈಸಿದ ಸುದ್ದಿಗೆ ಕಾಯ್ತಾ ಇದ್ದೆ
{ಪ೦ಚಪಾ೦ಡವರ ಪ್ರವೇಶಕೆ}…
ಛೆ.. ಆರಾದಿಕ್ಕು ಇವು.
ಯೇನೇ ಅಗಲಿ ಆಟ ರೈಸುತ್ತಾ ಇದ್ದು.
ಮಾತೇ ಇಲ್ಲೆ. ರೈಸಿದ್ದಯ್ಯಾ ರೈಸಿದ್ದು ಇದು.
[ತರ್ಲೆ ಮಾಡುವ ಜವ್ವನಿಗರೂ] – ಬ್ಯಾರಿ ಚಕ್ಕಂಗಳೂ ಸೇರಿದ್ದನ್ನೆ ಇದರ್ಲಿ!
[ಬೀಲ ಮಡುಸುತಲ೦ದು ಕೋಲಿನ ಪೆಟ್ಟ ಹೆದರಿಕೆಲಿ ] – ಚೆ! ಅದ್ಭುತ !!
[ಕಣ್ಣು ತು೦ಬಾ ನೋಡುವಾಸೆಲಿ ನೆಡದೆ ಚೌಕಿಯೊಳ ] – ವಾಸ್ತವಿಕತೆ ಮತ್ತು ನೈಜತೆ ಚೊಕ್ಕಕ್ಕೆ ಮೂಡಿಬೈಂದು ಭಾವಯ್ಯ.
[ಬಾಣ ಬಿಲ್ಲಿನ ಎತ್ತಿ ನೋಡೊಗ ಮಾಣಿ ಹೋಗಿಲ್ಲಿ೦ದ ಬೇಗನೆ ] – ಎಳೆ ಎಳೆಯಾಗಿ ಚಿತ್ರಣ ಆಯ್ದಪ್ಪ ಇದು.
[ಮಿ೦ಚು ಸೆಡಿಲಿನ ಆರ್ಭಟವು ಶುರುವಾತು ಒ೦ದರಿಯೆ] – ಭಾವಯ್ಯ ನೀರು ಮಾಡಿಕ್ಕೇಡಿ. ಹೇಂಗಾರು ಸುಧಾರ್ಸಿ ಉದಿವರೇಗೆ.
ಸುಭಗಣ್ಣ ಇದರ ನಾಲ್ಕೈದು ಸರ್ತಿಯಾರು ಓದದ್ದೆ ಬಿಡವು ಹೇಳಿ – ‘ಚೆನ್ನೈವಾಣಿ’
ಮಳೆಬಂದರೆ ಚರುಂಬುರಿ ಏಪಾರ ಹಾಳಕ್ಕನ್ನೇ….. ? ಎಂತಾತೂಳಿ ಬೇಗ ಹೇಳಿಕ್ಕಿ ಆತೋ…… ಪರಿಹಾರಕ್ಕೆ ಅರ್ಜಿ ಹಾಕೆಕ್ಕನ್ನೇ..
ಭಾಮಿನಿ ಲಾಯಿಕಾಯಿದು ಹೇಳಿ ಒಂದೊಪ್ಪ.

ಮಳೆ ಬಂತೊ?
ಅಲ್ಲಿ ವರೆಗೆ ನೋಡಿದ ಆಟದ ಬಗ್ಗೆ ಬರೆಯಿ..