- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಎಲ್ಲೋರಿಂಗೂ ಅವರವರ ಬಾಲ್ಯದ ನೆಂಪು ಮನಸಿಲಿ ಅಚ್ಚು ಒತ್ತಿದ ಹಾಂಗೆ ಇಕ್ಕು.ಬಾಲ್ಯ ಹೇಳಿರೆ ಹಾಂಗೆ ಅಲ್ದೋ?
ತುಂಬು ಸಂಸಾರಲ್ಲಿ ಅಕ್ಕ ತಂಗೆಕ್ಕೋ,ಅಣ್ಣ ತಮ್ಮಂದ್ರು ಸೇರಿದ ನೆಂಪು ನವಗೆ ಮಕ್ಕೊ ಅಪ್ಪಗ ಅಂಬಗ ಹಾಂಗೆ ಇತ್ತು ಹೀಂಗೆ ಇತ್ತು ಹೇಳಿ ನಮ್ಮ ಮಕ್ಕೊಗೆ ಅಂದ್ರಾಣ ಸ್ಥಿತಿಯ ವರ್ಣನೆ ಮಾಡುವಾಗ ನಾವೇ ಒಂದರಿ ಆ ಸಮಯಲ್ಲಿ ಇದ್ದೋ ಹೇಳುವ ಭಾವನೆ ಬತ್ತು.ಹೀಂಗೆ ಒಪ್ಪಣ್ಣ ನ ಬೈಲಿಲಿ ಶುದ್ಧಿ ಓದುವಾಗ ಎನ್ನ ಅಕ್ಕನ ನೆಂಪು ಆತು.
ಆ ಅಕ್ಕ ಈಗ ಇಲ್ಲೆ.
ತೀರಿ ಹೋಗಿ ಸುಮಾರು ೨೫ ವರ್ಷ ಅಕ್ಕು.ಇದ್ದಕ್ಕಿದ್ದ ಹಾಂಗೆ ನೆಂಪು ಆಗಿ ಆ ಅಕ್ಕನ ಬಗ್ಗೆ ಒಂದು ಕವನ ಬರದೆ.
ಅಕ್ಕಾ,ನೀನು ಎನ್ನ ಕಣ್ಣಿನ ಕನ್ನಟಿಲಿ
ಬಂದು ಹೋವ್ತೆ ಹಲವು ಸರ್ತಿ ದಿನಲ್ಲಿ
ನಿನ್ನ ನೆಗೆ ಮೋರೆ ನಿತ್ಯವೂ ಕಂಡು
ಮಿಂಚಿ ಮಾಯ ಆವ್ತು ಕ್ಷಣಲ್ಲಿ
ನೀನು ಇದ್ದೆ ಎಂಗಳ ಹೃದಯಲ್ಲಿ
ಮನಸ್ಸಿಲಿ ಆದರೆ ಏ ಅಕ್ಕಾ,,,
ನಿನ್ನ ನೋಡ್ಲೆ ಎಡಿತ್ತಿಲ್ಲೆ ವಾಸ್ತವಲ್ಲಿ
ಕಾರಣ.. ನೀನು ಲೀನವಾಯಿದೆ ಪ್ರಕೃತಿಲಿ
~*~
akkana nempathu.
ಅಬ್ಬೆ…ದೊದ್ದಬ್ಬೆ ಇರೆಕಾತು ಅಲ್ದಾ?….
ಅಪ್ಪು, ಅಖಿಲಾ.
ಪದ್ಯ ಓದಿಯಪ್ಪಗ ಬೇಜಾರ ಆತು.
ಅಬ್ಬೆ,ಪದ್ಯ ಲಾಯಿಕ ಆಯಿದು, ಆನು ಸಣ್ಣಾದಿಪ್ಪಗ ನಿಂಗೊ ಅಕ್ಕನ ಕಥೆ ಹೇಳಿಯೊಂಡು ಇದ್ದದು, ನಿಂಗೊ ನೆಂಪು ಮಾಡಿಗೊಂಡು ಇದ್ದದು ಮರವಲೆ ಎಡಿಯ. ಏಲ್ಲಾ ತಂಗೆಯಕ್ಕಳು ಅಕ್ಕಂದ್ರ ಹೀಂಗೆ ಪ್ರೀತಿಸಲಿ.
ಅಪ್ಪು ಭಾಗ್ಯ.
ಹಿರಿಯೋರು , ಮಾರ್ಗದರ್ಶನ ಮಾಡಿದವರ ನೆನಪಿಸುವದೇ, ನಾವು ಅವಕ್ಕೆ ಕೊಡುವ ಗೌರವ.
ನಿಂಗೊ ಹೇಳಿದ್ದು ಸರಿ.
ಚಿಕ್ಕಮ್ಮಾ, ಪದ್ಯ ಯಾವತ್ತಿನಂತೆ ತುಂಬಾ ಲಾಯಿಕಾಯಿದು ಬರದ್ದು.
ಅದರೆ ಪದ್ಯಲ್ಲಿಪ್ಪ ವಿಷಯ, ನಿಂಗಳ ಅಕ್ಕ ನಮ್ಮ ಕಣ್ಣಿಂಗೆ ಕಾಂಬ ಹಾಂಗೆ ಈಗ ಇಲ್ಲೆ ಹೇಳಿ ಬೇಜಾರ ಅವ್ತು.
ಆತು.ಅಪ್ಪು ಸುಮನ.
ಮೊನ್ನೆ ಅಷ್ಟೇ ತೀರಿಕೊಂಡ ನನ್ನ ಅಕ್ಕನ ನೆನಪಾತು. ನಮ್ಮ ಕುಟುಂಬದ ಏಳು ಜನ ಅಕ್ಕಂದಿರಲ್ಲಿ ಹಿರೀಯಳಾದ ಆಕೆಯ ತ್ಯಾಗ ಮನೋಭಾವನೆ, ಸ್ನೇಹಪರತೆ ಮತ್ತು ಕಿರಿಯರಲ್ಲಿ ಆಕೆ ಇಟ್ಟ ಪ್ರೀತಿ ವರ್ಣಿಸಲಾಗದು. ತನ್ನದೇ ಸಂತಾನವಿಲ್ಲದೇ, ಪ್ರತಿ ಮನೆಯ ಮಕ್ಕಳಲ್ಲಿ ತಂನ ಬದುಕಿನ ಸಂತಸವನ್ನು ಕಂಡ ಆಕೆ ಕರುಣಾಮಯಿ.
ದುರ್ದೈವಿ, ಕೊನೆಗಾಲದ ತನಕ ಕಷ್ಟವನ್ನುಂಡು ಪ್ರೀತಿಯನ್ನು ಹಂಚಿ, ಸಾವಿಗೆ ಶರಣಾದಳು!?
ಹರೇ ರಾಮ
ನಿಂಗಳ ಕಥೆ ಕೇಳಿ ಎನಗೂ ಬೇಜಾರ ಆತು.
🙁
ಅಪ್ಪೋ.
ಅಕ್ಕನ ನೆಂಪು ಮನಸ್ಸಿನ ಪ್ರತಿಬಿಂಬವಾಗಿ ಅಕ್ಷರ ರೂಪಲ್ಲಿ ಸಹಜ ಚಿತ್ರಣವಾಗಿ ಮೂಡಿಬೈಂದು ಹೇಳಿ ಅಭಿಪ್ರಾಯಪಟ್ಟತ್ತು ಹೇಳಿ- ‘ಚೆನ್ನೈ ವಾಣಿ’
ನಿಂಗಳ ಅಭಿಪ್ರಾಯ ಕೇಳಿ ಖುಶಿ ಆತು.