Latest posts by ವಾಣಿ ಚಿಕ್ಕಮ್ಮ (see all)
- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಪದ್ಯ ಓದಿರೆ ಚಕ್ಕುಲಿ ಮಾಡ್ಳೆ ಕಲ್ತ ಹಾಂಗೆ ಅಕ್ಕು!
ನೋಡಿದ್ದೇ ಒಂದರಿ ಈ ಟೀವಿ ವಾಹಿನಿಲಿ
ಚಕ್ಕುಲಿ ಮಾಡುವ ಕ್ರಮವ ಅದರಲ್ಲಿ
7-8 ಸರ್ತಿ ಅಕ್ಕಿ ತೊಳದು ನೀರು ಚೆಲ್ಲಿ
ಲಾಯಿಕ ಹೊಡಿ ಮಾಡಿ ಮಿಕ್ಸಿಲಿ |
ತರಿ ಇದ್ದರೆ ಗಾಳುಸಿ ಜೆರಡೆಲಿ
ಉದ್ದಿನ ಹೊಡಿ,ಉಪ್ಪು ಅಂದಾಜು ಅಳತೆಲಿ
ನಿಂಬೆ ಗಾತ್ರದ ಬೆಣ್ಣೆ ಹಾಕಿ ನೆಂಪಿಲಿ
ಪರಿಮ್ಮಳಕ್ಕೆ ರಜ ಎಳ್ಳುದೇ ಇರಲಿ |
ಉರುಟು ಉರುಟು ಒತ್ತಿ ಪ್ಲಾಸ್ಟಿಕಿಲಿ
ಹೊರಿಯೆಕ್ಕು ಮತ್ತೆ ತೆಂಗಿನ ಎಣ್ಣೇಲಿ
ತಿಂಬಲೆ ಕೊಟ್ಟರೆ ಖಾಲಿ ಕ್ಷಣಲ್ಲಿ
ಅಕ್ಕಿ ಕಡದರೂ ಆವ್ತು ಇದೇ ರೀತಿಲಿ|
padya layka aidu.
ಧನ್ಯವಾದ ತಮ್ಮಾ…..
Jayashree akkana padya bhaari laayku aaydanne …:-)
ವಾಹ್ ವಾಹ್!!!
ಅಕ್ಕಿಯ ಗರಿಗರಿ
ಚಕ್ಕುಲಿ ಪರಿಮಳ
ಹೊಕ್ಕಿತು ಮೂಗಿ೦ಗೆಲ್ಲಿಂದ?
ಪಕ್ಕನೆ ನೋಡಿರೆ
ಸಿಕ್ಕಿತು ಸುಳಿವದು
ಚಿಕ್ಕಮ್ಮನಡಿಗೆ ಕೋಣೆ೦ದ|
ಚಕ್ಕುಲಿಯ ಬಗ್ಗೆ ಒಪ್ಪದ ಪದ್ಯ ಲಾಯಿಕ ಆಯಿದು.ತುಂಬಾ ಸಂತೋಷ ಆತು….
ವಾಹ್ ವಾಹ್!!!
ಪದ್ಯವೂ ಚಕ್ಕುಲಿಯ ಹಾಂಗೇ ಇದ್ದು !
ಬಂದ ಒಪ್ಪಂಗಳೂ ಪದ್ಯದ ಹಾಂಗೇ ಇದ್ದು ! !
ಧನ್ಯವಾದ
ಚಕ್ಕುಲಿ ಪದ್ಯ ಲಾಯಿಕ್ಕು ಆಯ್ದು. ಚಕ್ಕುಲಿ ತಿನ್ನೊ ಅಂಬಂಗೆ ಆಗ್ತು. ಚಿಕ್ಕಮ್ಮ ಜೊತೆಗೆ ಚೌತಿ ಹಬ್ಬ ನೆನಪಾಗ್ತು.
ಹಾಂಗಾರೆ ಮಾಡಿ ತಿಂದು ಹೇಂಗೆ ಆಯಿದು ಹೇಳಿ ಹೇಳ್ತಿರಾ???
ಚಿಕ್ಕಮ್ಮಾ, ಈ ಪದ್ಯ ಓದುವಗ/ಫೋಟೋ ನೋಡುವಗ ಬಾಯಿಲಿ ನೀರು ಬತ್ತನ್ನೇ?
ಈಗಲೇ ‘ಹರಿಯೊಲ್ಮೆ’ ಗೆ ಬಪ್ಪದೇ ಎಂಗೋ…
ಎ೦ಗ ಆಗಲೆ ಮೇಲಾಣ ತಡಮ್ಮೆ ದಾ೦ಟಿ ಆತು. ನಿ೦ಗ ಎಲ್ಲಾ ಹೆರಟಪ್ಪಗ ಹೊತ್ತಾತು,?
ಹೆರಟು ಬನ್ನಿ ಕೂಡಲೇ..ನಿಂಗ ಅಲ್ಲಿಂದ ಹೆರಟು ಬಪ್ಪಗ ಚಕ್ಕುಲಿ ತಯಾರು ಆಗಿರ್ತು
ನೂಲೋಲ್ಯೋ .ಕೋ ಚೆನ್ನಿ…………………… ಚೆನ್ನಿ…..
ಎ೦ತಕೋ ಈ ಸಾಲು ನೆ೦ಪಾತನ್ನೆ,ಕೊನೆಗೆ ಕಡವಲೆ ಕಲ್ಲು ಇಲ್ಲೆ ಹೇಳಿ,,ಕಡವಕಲ್ಲು ತ೦ದು ಕೊಟ್ಟು ,ಸಿಕ್ಕಲಿ ಹೇಳಿ ಗ್ರೇಶಿದ್ದಕ್ಕೆ ಎನೊ?
ಆ ಪದ್ಯ ಬತ್ತು ಆದರೆ ಚಕ್ಕುಲಿ ಮಾಡ್ಲೆ ಕಡವಕಲ್ಲು ಎಂತಕೆ??
ಅಕ್ಕಿ ಕಡದರೂ ಆವ್ತು ಇದೇ ರೀತಿಲಿ|,………. ನಿ೦ಗಳೆ ಹಾಡಿದ್ದು ,ನೋಡಿ ಬರದ್ದು.
ಕಡವದು ಈಗಾಣ ಮಿಕ್ಸಿಲಿ ಟಿಲ್ಟಿಂಗ್ ಗ್ರೈಂಡರ್ ಲಿ ಆವ್ತಲ್ಲದ?ಒಟ್ಟು ಕಡದರೆ ಆತನ್ನೇ????
ಅಯ್ಯೊ ಅಬ್ಬೆ ಚಕ್ಕುಲಿ ಕಾಂಬಗ ಬಾಯಿಲಿ ನೀರು ಬತ್ತು…..ಪದ್ಯವೂ ಲಾಯಿಕ ಆಯಿದು….
ಹರಿಯೊಲ್ಮೆಗೆ ಬಂದಿಪ್ಪಗ ನಿನಗೆ ಬೇಕಾದ ಹಾಂಗೆ ಮಾಡುವ!!!!!
chakkuli bhaari laykaayduu!!!!
hallu gatti bekalladaaa
ಇದು ಹಲ್ಲು ಗಟ್ಟಿ ಇಲ್ಲದ್ರೂ ತಿಂಬಲೆ ಎಡಿತ್ತು.ಅಷ್ಟು ಮೃದು ಆಗಿರ್ತು…
ಅದು ೭-೮ ಸರ್ತಿ ಅಕ್ಕಿ ಎಂತಕೆ ತೊಳೆಯೆಕು ವಾಣಿ ಚಿಕ್ಕಮ್ಮ ?
ಚಕ್ಕುಲಿ ಬಣ್ಣ ಕೆಂಪಾಗದ್ದೆ ಬೆಳಿಯಾಗಿ ಮತ್ತೆ ತುಂಬಾ ಮೃದು ಆಗಿ ಇಪ್ಪಲೆ
ಎಡೆ ಹೊತ್ತಿಲ್ಲಿ ಸಿಕ್ಕೆಕಿದು
ಕರುಕುರುನೆ ಅಗಿಯಲಿದು ಬಲುರುಚಿಯು.
ಬೇಗ ಬೇಗ ಅಕ್ಕಿ ತೊಳದು
ಪುರುಸೋತ್ತಿಲಿ ಮಾಡಿರಿದು
ಎಲ್ಲೋರೂ ಜತೇಲಿ ಕೂದು
ತಿನ್ನಿ ಎಲ್ಲೋರೂ ಇಂದು