ಪ್ರಸನ್ನಾ ವಿ ಚೆಕ್ಕೆಮನೆ ಇವು ಕಳ್ಸಿದ ಒಂದು ಕವನ ಇಲ್ಲಿದ್ದು. ಇದರ ಓದಿ ನಿಂಗಳ ಅನಿಸಿಕೆಗಳ ತಿಳುಶಿ
ಚೆಂದದ ಆಕಾಶ
ಬೆಳಿ ಮುಗಿಲಿನ ಮುಟ್ಲೆ
ಆನು ಆಕಾಶಕ್ಕೆ ಹಾರೆಕೋ
ನೀಲಿ ರಂಗಿನನ್ನೂ ಒಂದರಿ
ಮೆಲ್ಲಂಗೆ ಮುಟ್ಟೇಕೋ
ಆಶೆಯೇಕೆ ಮನಸಿಲ್ಲಿ
ಕುಞ್ಞಿ ಮಕ್ಕಳ ಹಾಂಗೆ
ಸಣ್ಣ ಹಾತೆಯಾಗಿ ಆನು
ಮೇಲಂಗೋಪದು ಹೇಂಗೇ
ವಿಮಾನವ ನೋಡೆಕು
ಚಂದಮಾಮನತ್ರೆ ಕೂರೇಕು
ಕಣ್ಣು ಪಿಳಿ ಪಿಳಿ ಮಾಡಿ
ಚೆಂದಕೆ ನೆಗೆ ಮಾಡುವ ಪುಟ್ಟು
ನಕ್ಷತ್ರವ ಮೆಲ್ಲಂಗೆ ಎಣ್ಸೆಕು
ಸೂರ್ಯಚಾಮಿ ಬಂದರೆ
ದೂರ ಹೋಗು ಹೇಳುವೆ
ನಿನ್ನ ಬೆಶಿಯ ತಡವಲೆಡಿಯ
ಹಾಂಗೆ ಹೇಳಿ ಹುಗ್ಗುವೆ
ಕರಿಮುಗಿಲಿನ ಒಟ್ಟು ಸೇರ್ಸಿ
ಗಾಳಿಯೊಟ್ಟಿಂಗೆ ಕಳ್ಸುವೆ
ಭೂಮಿಲಿ ಮಳೆಯಾಗಿ
ಸೊರ್ಗು ಬೇಗ ಹೇಳುವೆ
ಆಕಾಶಕ್ಕೆ ಹಾರ್ಲೆಡಿಗೋ
ಚುಕ್ಕಿಗಳ ಎಣ್ಸಲೆಡಿಗೋ
ಇದೆಲ್ಲ ಎನ್ನ ಬರೀ ಕನಸುಗೊ
ಮಾತ್ರಲ್ಲದಾ….
~~~***~~~
-ಪ್ರಸನ್ನಾ ವಿ ಚೆಕ್ಕೆಮನೆ
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಕವನ ಚೆಂದ ಆಯಿದು.
ಧನ್ಯವಾದ
ಒಪ್ಪ ಪದ್ಯ
ಪದ್ಯ ಒಪ್ಪಾಯಿದು ಹೇಳಿದ್ಸಕ್ಕೊಂದೊಪ್ಪ..
ಚೆಂದದ ಆಗಸದ ಬಗ್ಗೆ ಚೆಂದದ ಕವನ. ವಿಮಾನಲ್ಲಿ ಹೋಪಗ ಕೈ ಹೆರ ಹಾಕಲೆಡಿತ್ತಿಲ್ಲೆ ಆಡ, ಇಲ್ಲದ್ರೆ ಬೆಳಿಮುಗಿಲ ಮುಟ್ಳಾವ್ತಿತು.
ಆದರೂ ಒಂದಾರಿಯಾದರೂ ಮುಟ್ಟುವ ಕೊದಿ..ಮನಸಿಲ್ಲಿ….ಕವನ ಮೆಚ್ಚಿದ್ದಕ್ಕೆ ಧನ್ಯವಾದ
ಚೆಂದದ ಆಕಾಶವ ಒಪ್ಪಣ್ಣ ಬೈಲಿಂಗೆ ಹಾಕಿದ ಶರ್ಮಣ್ಣಂಗೆ ಧನ್ಯವಾದ….. ಬೈಲಿನ ಎಲ್ಲಾ ಬಂಧುಗಳ ಪ್ರೋತ್ಸಾಹವೇ ಎನ್ನ ಬರವಣಿಗೆಗೆ ಸ್ಪೂರ್ತಿ..