“ಏಕಾದಶಿ ಉಪವಾಸ”
೧೫ ದಿನಕ್ಕೆ ಒಂದರಿ ಮಾಡಿ, ಉಪವಾಸ
ಏಕಾದಶಿಯಂದು, ದೇಹಮನಸ್ಸು ಶುದ್ಧ
ಆವುತ್ತು, ತೊಲಗುತ್ತು ದೇಹದ ಬೇಡದ್ದಕಸ
ಇದರಿ೦ದ ಆರೋಗ್ಯ ಉತ್ತಮ ಇದು ಶತಃಸ್ಸಿದ್ಧ.
“ಹವಿಭಾಷೆ”
ನಮ್ಮ ಹವಿಭಾಷೆ ಕನ್ನಡದ ಉಪಭಾಷೆ
ಇದರ ಮೂಲಕ ತಿಳುಶಲಾವುತ್ತು ಆಸೆ ಆಕಾಂಕ್ಷೆ
ಮಾತೃ ಭಾಷೆ ನಮ್ಮವರ ಸವ೯ಸ್ವ ಉಸಿರು
ಹವಿ, ಸಾಹಿತ್ಯ, ಬದುಕಾಗಲಿ ನಿತ್ಯ ಹಸುರು.
“ಸಂಸ್ಕೃತ”
ದೇವ ಭಾಷೆ ಗೀವಾ೯ಣ ಭಾಷೆ ಸಂಸ್ಕೃತ
ಲೋಕದ ಅನೇಕ ಭಾಷೆಗೊ ಇದರಿಂದ ಪುಷ್ಟ
ಹಳೆಯ ಭಾಷೆ ಸಂಸ್ಕೃತದ ತವರು ಭಾರತ
ಈ ಭಾಷೆಯ ಕಲಿವಲೆ, ಹೆಚ್ಚಿಲ್ಲೆ ಕಷ್ಟ
ಸಂಸ್ಕೃತ ಭಾಷೆಯ ಕಲಿಯದ್ದರೆ ನವಗೆ ನಷ್ಟ.
“ಕವಿ ಸಾಹಿತಿ”
ಒಳ್ಳೆಯ ಕವಿ, ಸಾಹಿತಿ ಆಯೆಕ್ಕಾದರೆ
ಉತ್ತಮ ಭಾಷಾ ಜ್ಞಾನ ಶಬ್ದ ಸಂಪತ್ತು
ಇರೆಕ್ಕು, ಶಬ್ದಗಳ ಗದ್ಯವ ಕೆಳಕೆಳ ಬರದರೆ
ಅದು ಕವನ ಅಲ್ಲ, ಇರೆಕ್ಕದರಲ್ಲಿ ಧ್ವನಿ ಹತ್ತು.
“ಬೆ (ಪೆ )ರಟಿ ಪಾಚ “
ಒಳ್ಳೆ ಸಕ್ಕರೆ ಬಕ್ಕೆ ಹಲಸಿನ ಹಣ್ಣಿನ ಬೆರಟಿ
ಪಾಯಸಕ್ಕೆ ರಜ ಕಾಯಿ ಹೋಳು ಹುರಿದಾಕಿ
ಬೆರಟಿ ಪಾಯಸದ ರುಚಿ ಅಕ್ಕು, ಎರಟಿ
ಅದರ ಉಣ್ಣಿ, ಕೊಡಿಬೆರಳಿಂದ ಬಾಯಿಗಾಕಿ.
“ಸೂರ್ಯ”
ಮೂಡ್ಲಾಗಿಂದ ಬಂದ ಸೂಯ೯° ಎ೦ದಿನ೦ತೆ
ಲೋಕಕ್ಕೆ ಬೆಣಚ್ಚಿ ತ೦ದ, ಅವ ಜಗದ ಕಣ್ಣು
ಪಡುದಿಕ್ಕೆ ಕಂತುವಗ ಆಕಾಶಲ್ಲಿ ಬಣ್ಣಗಳ ಸ೦ತೆ
ಅವನ ಸತ್ವoದ ಕಾ೦ಗು ಹೂ ಕಾಯಿ ಹಣ್ಣು.
” ಸಂಸ್ಕೃತ ಸಾಹಿತ್ಯ “
ವಾಲ್ಮೀಕಿ, ವ್ಯಾಸ, ಭಾಸ, ಕಾಳಿದಾಸ
ಪತಂಜಲಿ, ಶoಕರ, ಮಧ್ವ ಮು೦ತಾದವರಿಂದ
ಸಂಸ್ಕೃತ ಸಾಹಿತ್ಯ ಶ್ರೀಮ೦ತ, ಸಂತೋಷ
ಈ ಭಾಷೆ ಲೋಕಕ್ಕೆ ಹಬ್ಬಿದ್ದು ಭಾರತಂದ !
“ಹೆಸರು ಪ್ರಚಾರ”
ಪಂಡಿತ ಕವಿ ಸೇಡಿಯಾಪು, ಬಾಳಿಲದ ಅಣ್ಣ
ಹೆಸರು, ಪ್ರಚಾರದ ಬಗ್ಗೆ ಯೋಚನೆ ಮಾಡಿದವು ಅಲ್ಲ
ಅವರ ಕೃತಿಗೊ ಕಮ್ಮಿ ಆದರೂ ಅಲ್ಲ ಗುಣಲ್ಲಿ ಸಣ್ಣ
ಪ್ರತಿಯೊ೦ದೂ ಅಣಿಮುತ್ತು, ಚೀಪೆಯ ಬೆಲ್ಲ.
”ಸಣ್ಣ ಗ್ರಂಥಾಲಯ”
ಎಲ್ಲೋರ ಮನೆಲ್ಲಿರುಕ್ಕು ಸಣ್ಣ ಗ್ರಂಥಾಲಯ
ಪುಸ್ತಕ ತೆಗವಲೆ ರಜ ಉಪಯೋಗ್ಸಿ ಆದಾಯ
ಟಿ.ವಿ.ನೋಡುದಕ್ಕಿ೦ತ ಒಳ್ಳೆದು, ಓದುದು
ಒಳ್ಳೆಯ ಕೃತಿಗೊ ಉತ್ತಮ ಮಿತ್ರ° ಹೇಳಿ ತಿಳಿವದು.
“ಸುಧರಿಕೆ “
ನಾವು ಅನ್ಪತ್ಯಕ್ಕೆ ಹೋಗಿ ಸುಧರಿಕೆ ಮಾಡಿರೆ
ನಮ್ಮಲ್ಲಿ ಸುಧರಿಕೆಗೆoತ ಕಷ್ಟ ಆವುತ್ತಿಲ್ಲೆ
ನಾವು ಎಂತದೂ ಸುಧರಿಕೆಯ ಮಾಡದ್ದರೆ
ನಮ್ಮಲ್ಲಿ ಅಪ್ಪ ಜೆoಬ್ರಲ್ಲಿ ಬಡ್ಸುತ್ತವಿಲ್ಲೆ .
“ಮಳೆ ಮುನ್ಸೂಚನೆ “
ಒoದರಿ ಪತ್ರಿಕೆಲ್ಲಿ ಮಳೆ ಈ ಒರಿಶ ಕಡಮೆ
ಹೇಳಿಸುದ್ದಿ ಬಂತು, ಇನ್ನೊಂದು ಸುದ್ದಿಲ್ಲಿ
ವಾಡಿಕೆಯ ಹಾoಗೆ ಮಳೆ ಆಗ ಕಡಮೆ
ಏವ ಸುದ್ದಿಯ ನOಬುದು? ಒಟ್ಟಾರೆ ನೆಲೆ ಇಲ್ಲೆ.
“ಬಪ್ಪ ಒರಿಶ ಬೆಳೆ ಕಮ್ಮಿ”
ಬಪ್ಪ ಒರಿಶ ಹಲಫಲ ಅಡಕ್ಕೆ , ಕಾಯಿ ಬತ್ತ
ಎಲ್ಲ ಬೆಳೆ ಭಾರೀ ಕಮ್ಮಿ ಅಕ್ಕು, ಜೀವ ಒಳಿತ್ತ
ನಮ್ಮದು? ಜಾನುವಾರು ತೋಟದ್ದು
ಹೇಳುದರ ನಾವು ಕಾದು, ಕಾದು ನೋಡ್ಲಿದ್ದು!
” ಸ೦ಪರ್ಕ “
ಪೂಜೆ, ಹವನ ಇತ್ಯಾದಿ ಸಮಾರಂಭಲ್ಲಿ
ನೆoಟ್ರು, ಇಷ್ಟ್ರು ನೆರೆಕರೆ ಮನೆಯವು
ಹೇಳಿ , ಚೆಂದಲ್ಲಿ ಎಲ್ಲೋರು ಒಟ್ಟಾವುತ್ತವು
ಇoತಹ ಅನ್ಪತ್ಯಂಗೊ ಅವಶ್ಯ ಇರಲಿ.
“ಮೂಲಿಕಾ ವನ”
ಎಲ್ಲೋರ ಮನೆ ಹಿತ್ಲಿಲ್ಲಿ ಗೆಡು ಮೂಲಿಕೆನೆಡಿ
ಹಿತ್ತಿಲ ಗೆಡು ಮದ್ದಲ್ಲ ಹೇಳುವ ಮಾತಿದ್ದು
ಆದರೂ, ಗಾಯ ಆದರೆ ಗಡಿಬಿಡಿ ಮಾಡೆಡಿ
ನೆತ್ತರು ಕಟ್ಲೆ, ದಡಬಡಕ ಸೊಪ್ಪು ಒಳ್ಳೆ ಮದ್ದು.
“ಇಂಗು ಗುಂಡಿ”
ಖಾಲಿ ಜಾಗೆಲ್ಲಿ ಅಲ್ಲಲ್ಲಿ ಇoಗು ಗುಂಡಿ ಮಾಡಿ
ಈ ಮಳೆಗಾಲಲ್ಲಿ ಎಲ್ಲೋರು ನೀರಿo ಗಿಸಿ ನೋಡಿ
ನಮ್ಮ ಕೆರೆ, ಬಾವಿ, ಬೋರಿಲ್ಲಿ ಹೆಚ್ಚು ಗು ಒಸರು
ಸದಾ ನೀರಿನ ಸಂಪತ್ತಿಂದ ತುಂಬಿ ಒಳಿಗು ಹಸುರು.
~~***~~
- ಚುಟುಕಂಗೊ - May 8, 2017
- ಊರ ಹಸುಗಳ ಒಳುಶೆಕ್ಕು - January 17, 2012
ಒಳ್ಳೆ ಚುಟುಕಂಗೊ.ಖುಷಿ ಕೊಟ್ಟತ್ತು.ಮನ ತಟ್ಟಿತ್ತು.
ಸಂದೇಶ ಕೊಡುವ ಚುಟುಕಂಗಳನ್ನೂ ಒದಗಿಸಿದ ರಾಮಚಂದ್ರಂಗೆ ಧನ್ಯವಾದಂಗೊ. ಇನ್ನೂ ಹೀಂಗಿಪ್ಪದು ಬತ್ತಾ ಇರಳಿ
ಚೊಕ್ಕ ಚುಟುಕಕ್ಕೊಂದೊಪ್ಪ
ಒಪ್ಪ ಚುಟುಕುಗೊಕ್ಕೊಂದು ಒಪ್ಪ
ಚುಟುಕುಗೊ ಲಾಯಿಕ ಇದ್ದು
ಚಂದ್ರಮಾವನ ಚುಟುಕುಗೊ ಚೆಂದಕೆ ಬಯಿಂದು. ಎಡೆ ಎಡೆಲಿ ಒಳ್ಳೆಯ ಸಂದೇಶಂಗಳುದೆ ಇದ್ದು. ಮಾವ, ನಿಂಗಳ ಚುಟುಕಂಗೊ, ಹವ್ಯಕ ಶುದ್ದಿಗೊ ಬೈಲಿಂಗೆ ಬತ್ತಾ ಇರಳಿ.
ಹರೇರಾಮ, ಚಂದ್ರಮಾವ.ಬಯಲಿಂಗೆ ಬಂದು ಒಳ್ಳೆಯ ಚುಟುಕ ಕೊಟ್ಟಿದಿ ಧನ್ಯವಾದಂಗೊ.
ಚಂದ್ರಮಾವನ ವಿವರ ಗೊಂತಾಯಿದಿಲ್ಲೆನ್ನೆ!
ಗುಣಾಜೆ ರಾಮಚಂದ್ರ ಭಟ್ರು ,ತುಂಬಾ ಚುಟುಕುಗಳ ಬರೆದ ಸಾಹಿತಿ,ಅಧ್ಯಾಪಕ,ಕಂಚಿನ ಕಂಠದ ಇವು ಚುಟುಕ ಓದಿದ್ದರ ರೆಕಾರ್ಡು ಮಾಡಿ ಹಾಕಿರೆ ಭಾರೀ ಒಳ್ಳೇದು.