Oppanna.com

ಎನ್ನ ಈ ಕೆಲಸಕ್ಕೆ ರಜೆಯೆ ಇಲ್ಲೆ

ಬರದೋರು :   ಬಾಲಣ್ಣ    on   15/10/2012    12 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಎನ್ನ ಈ ಕೆಲಸಕ್ಕೆ ರಜೆಯೆ  ಇಲ್ಲೆ

ಗಂಟೆ ಆತದ ಆರು
ತಡವಾತು ಏಳುವಾಗ
ಮನೆಗೆಲಸ ಒಂದುದೇ ಆಯಿದಿಲ್ಲೆ  /
ನೆಲ ಉಡುಗಿ ಉದ್ದೆಡದೋ
ಎರಡು ದಿನ ಆತನ್ನೆ
ಮೊನ್ನೆ ಬಂದಾ “ಅಕ್ಕು” ಮತ್ತೆ ಇಲ್ಲೆ/೧ /
ಕಾಪಿಗೆಂತರ ?ದೋಸೆ ,
ಹಿಟ್ಟು ನಿನ್ನೆಯೆ ಕಡದು
ಮಡುಗಿದ್ದೆ  ಹುಳಿಬಂತೋ ನೋಡೆಕಷ್ಟೇ/
“ಕರೆಂಟು “ಹೋದರೆ  ಇನ್ನು
ಕಾಯಿ ಕಡವದು  ಆರು ?
ಕಡವ  ಕಲ್ಲಿನ  ಕುಟ್ಟಿ ಸರಿ ಮಾಡೆಕಷ್ಟೇ/೨/
ಸೊಲುದ ತೆಂಗಿನ ಕಾಯಿ
ಮೂಲೇಲಿ  ಮಡುಗಿದ್ದೆ
ಎಡಿಗಾರೆ  ಒಂದಾರಿ ಕೆರದು ಕೊಡೆಕು/
ಹಾಲು ತಯಿಂದದ  “ಮರಿಯ”
ಇನ್ನು ಕಾಸೆಕು ಅದರ
“ಗೇಸೊಲೆ “ಲಿ ಮಡುಗಿದ್ದೆ ನೋಡಿಗೊಳೆಕು/೩/
ಹಸಿಮೆಣಸು ಬೇನ್ಸೋಪ್ಪು
ನೆಟ್ಟಿ  ಹಿತ್ತಿಲ್ಲಿಕ್ಕು
ಒಂದೆರಡು ತಂದುಕೊಡಿ  ಚಟ್ನಿ ಕಡೆಕು/
ಕಾಪಿ  ಹೊಡಿ ಮುಗುದತ್ತು
ಚೀಟಿಲ್ಲಿ  ಬರಕ್ಕೋಳಿ
ಮತ್ತೆ ಪೇಟೆಗೆ ಹೋಗಿ ತಂದು ಕೊಡೆಕು /೪/
ಶಾಲೆ ಮಕ್ಕಳ ಮೀಶಿ
ಕಾಪಿ ತಿಂಡಿಯ ಕೊಟ್ಟು
ಅವರನ್ನು “ಇವರನ್ನು “ಹೆರಡುಸೆಕ್ಕು /
ನೀರು  ವಾರಕ್ಕೆರಡು
-ದಿನ ಮಾಂತ್ರ  ಬಿಡು ದಾಡ
ಇಂದೆ  ಪಾತ್ರೆಗಳಲ್ಲಿ ತುಂಬುಸೆಕ್ಕು/೫/
ಅಬ್ಬಬ್ಬ  ! ಬೊಡುದತ್ತು
ಎಂತ ಕೆಲಸವೊ  ಏನೊ
ಎಷ್ಟು ಮಾಡಿರು ಕೂಡ  ಮುಗಿವಲಿಲ್ಲೆ/
ಕಾಂಬ ಕೆಲಸವೆ  ಅಲ್ಲ
ದಿನ ನಿತ್ಯದಾ “ತೆರಕ್ಕು “
ಎನ್ನ ಈ ಕೆಲಸಕ್ಕೆ ರಜೆಯೆ  ಇಲ್ಲೆ /೬/
~~~*~~~

12 thoughts on “ಎನ್ನ ಈ ಕೆಲಸಕ್ಕೆ ರಜೆಯೆ ಇಲ್ಲೆ

  1. ಮುಳಿಯದಣ್ಣ,ಒಪ್ಪಕ್ಕೆ ಧನ್ಯವಾದಂಗೊ.ಸೂರ್ಯದೇವರ ಸುತ್ತ …. ನಿಜಕ್ಕೂ ಹಾಂಗೆ ಅಲ್ಲದೊ .

  2. ಭಾರೀ ಚೆ೦ದದ ನುಡಿನಮನ.ಗೃಹಿಣಿಯ ಜೀವನ ಹೇಳಿರೆ

    ಗಾಣದೆತ್ತಿನ ದುಡಿತ
    ಜೀವನದ ಉದ್ದಕ್ಕು
    ಬೀಳದಜ್ಜಿಯ ಆಟ ಚೆನ್ನೆಮಣೆಲಿ
    ಸೂರ್ಯದೇವರ ಸುತ್ತ
    ನಿತ್ಯ ತಿರುಗುವ ಭೂಮಿ
    ಯಷ್ಟೆ ನಿಯಮದ ಬದುಕು ತನ್ನ ಮನೆಲಿ.

    ಬಾಲಣ್ಣನ ಪ್ರಬುದ್ಧ ಪದ್ಯ ಅರ್ಥಪೂರ್ಣ.ಕೊಶೀ ಆತು.

  3. ಉದಿಯಪ್ಪಂದ ಇರುಳು ವರಗೆ ಮೆನಕ್ಕೆಡದ್ದೆ ಕೆಲಸ ಮಾಡ್ಯೊಂಡು, ಒಂದು ಮನೆಯ ಬೆಳಶಿ ಒಳುಶುವ ಗೃಹಿಣಿಗೆ ಎಷ್ಟು ವಂದಿಸಿದರೂ ಸಾಲ. ಬಾಲಣ್ಣನ ಸರಳ ಸುಂದರ ಕವನ ಮನಸ್ಸಿಂಗೆ ಒಳ್ಳೆತ ಕೊಶಿ ಕೊಟ್ಟತ್ತು. ಆ ಪದಗಳ ಜೋಡಣೆ, ಅರ್ಥ, ಪ್ರಾಸ ಎಲ್ಲವುದೆ ತುಂಬಾ ಲಾಯಕಿದ್ದು. ಬೈಲಿಲ್ಲಿ ಬಾಲಣ್ಣ, ಭಲೆ, ಭಲೆ, ಭಲೆ !

  4. ಮದಲಿಂಗೆ ಹೆಮ್ಮಕ್ಕೋಗೆ ಮನೆಂದ ಹೆರ ಹೋಪಲೆ ಕಷ್ತ ಹೇಳ್ತ ಸ್ತಿತಿ ಇತ್ತು .ಈಗ ರೆಜಾ ಸುಧಾರಣೆ ಆಯಿದು ಮನೆಯ ಸುದರಿಕೆ ಮಾಡಿಯೊಂಡು ಬಪ್ಪದು ಹೇದರೆ ಸಣ್ಣ ಕೆಲಸವೋ ? ಎಷ್ತೋ ಪ್ರತಿಭಾವಂತ ಹೆಮ್ಮಕ್ಕಳ ಪ್ರತಿಭೆ ಆರಿಂಗೂ ಗೊಂತಾಗದ್ದೆ ಹೋದ್ದದಿದ್ದು ನಮ್ಮ ಅಜ್ಜಿಯಕ್ಕಳ ಹಾಡುಗೊ ಸಾಮಾನ್ಯವೋ ?

  5. ಬಾಲಣ್ಣ ತುಂಬಾ ಒಪ್ಪ ಪದ್ಯ. ನ್ಯಾಚುರಲ್ ಆಗಿಪ್ಪ, ಸಹಜವಾಗಿಪ್ಪ ದಿನಚರಿ. ಮನೆಮನೆಗಳಲ್ಲಿ ಸಹಜವಾಗಿ ಕಾಂಬ ಚಿತ್ರಣ ಇಪ್ಪ ಒಪ್ಪ ಪದ್ಯ. ದಿನ ನಿತ್ಯದಾ “ತೆರಕ್ಕು “ ಇದ್ದರೂ ಇದರ ಹೊರತಾಗಿ ಒಂದಲ್ಲ ಒಂದು ವಿಶಯಲ್ಲಿ ಸಾಧನೆ ಮಾಡಿ ಪ್ರತಿಭೆಯ ತೋರುಸುತ್ತವು ನಮ್ಮ ಬೈಲಿನ ಒಪ್ಪಕ್ಕಂದ್ರು(ನಮ್ಮ” ಮನೆ ದೇವರು”ಗೊ ). ಹಿಂದಾಣೋರು ಹೇಳುದು ಕೇಳಿರೆ ಈಗಾಣ ಸಂಸ್ಕಾರವಂತ ಒಪ್ಪಣ್ಣಂದ್ರಲ್ಲಿ ಹೆಮ್ಮಕ್ಕಳ ಅರ್ಥ ಮಾಡಿಗೊಂಬ ವಿಶಾಲ ಮನೋಭಾವ ಅವಗಂದ ಹೆಚ್ಚು ಕಾಣ್ತು.

  6. ಬಾಲಣ್ಣ ಪಸ್ಟಾಯ್ದು. ತುಂಬ ಸರಳವಾಗಿ ವಿಶಾಲ ಅರ್ಥ ಕೊಡುತ್ತು.
    ಹೆಮ್ಮಕ್ಕಳ ಎಲ್ಲರೂ ಅರ್ಥ ಮಾಡ್ಯೊಂಡ್ರೆ ಎಲ್ಲ ಸಂಸಾರವೂ ಚೆಂದಕೆ ನಡಗು. ಅವಕ್ಕೆ ಬೇಕಪ್ಪದು ಗೆಂಡನ ಸಕಾಯ ಅಲ್ಲ.ಅವು ಬಯಸುದು ಒಂದು ಒಳ್ಳೆ ಪ್ರೀತಿಯ ಮಾತು. ಒಲ್ಲದ ಗೆಂಡಂಗೆ ಮೊಸರಿಲಿ ಕಲ್ಲು ಹೇಳ್ತ ಹಾಂಗೆ ಇಷ್ಟು ಮಾಡಿರೂ ಅದರಲ್ಲಿ ತಪ್ಪು ಕಂಡು ಹುಡ್ಕಿದರೆ ಆರಿಂಗಾದರೂ ಬೇಜಾರಕ್ಕು ಅಲ್ಲದಾ…ಇಷ್ಟಾದರೂ ಮಾಡಿತ್ತನ್ನೆ ಹೇಳ್ತ ಪ್ರೀತಿ ತೋರ್ಸಿದರೆ ಹೆಮ್ಮಕ್ಕ ಇನ್ನೂ ಹೆಚ್ಚಿನ ಸಾಧನೆ ಮಾಡಿ ತೋರ್ಸುಗು….

  7. ಬಹಳ ಒಳ್ಳೆಯ ಕವನ. ಭಾರೀ ಲಾಯಿಕಾಯಿದು. ಮನೆ ಕೆಲಸ ಸುಸೂತ್ರವಾಗಿ ನಿಭಾಯಿಸುತ್ತ ಎಲ್ಲಾ ಅಮ್ಮ೦ದ್ರಿ೦ಗೂ, ಅಕ್ಕ ತ೦ಗಿಯ೦ಗೊಕ್ಕೂ ಗೌರವಪೂರಿತ ನಮಸ್ಕಾರ೦ಗೊ.

  8. ಲಾಯಕ ಲಾಯಕ ಆಯ್ದು. ಬಾಲಣ್ಣಂಗೆ ಅಭಿನಂದನೆಗೊ. ಇದಾ.. ಬೋಸಬಾವ ಏವಗ ಬಕ್ಕು ಹೇಳ್ಳೆ ಎಡಿಯಾ. ಡೈರಿಂದ ಹಾಲು ತಂದು ಮಡಿಕ್ಕೊಳ್ಳಿ ಃ))))

  9. ಲಾಯಿಕ ಆಯಿದು.
    ಯಾವದೇ ಸ್ವಾರ್ಥ ಇಲ್ಲದ್ದೆ, ಪ್ರತಿಫಲ ನಿರೀಕ್ಷಿಸದ್ದೆ, ಮನೆಯವರ ಶ್ರೇಯಸ್ಸೇ ಮುಖ್ಯ ಹೇಳಿ, ಶ್ರದ್ಧೆಂದ ಮಾಡ್ತ ಕೆಲಸ.

  10. ತು೦ಬಾ ಸರಳವಾಗಿಪ್ಪ ಕವನ ಮನಸ್ಸಿ೦ಗೆ ಕುಶಿ ಕೊಟ್ಟತ್ತು.
    ವಾರಾ೦ತ್ಯಲ್ಲಿ ಒ೦ದೊ೦ದರಿ ಈ ಕೆಲಸ೦ಗಳಲ್ಲಿ ಗೆ೦ಡ ಪಾಲು ತೆಕ್ಕೊ೦ಡರೆ ‘ಎನ್ನ ಕೆಲಸಕ್ಕೆ ರಜೆಯೆ ಇಲ್ಲೆ’ ಹೇಳುವ ಯೋಚನೆ ‘ಮನೆ ದೇವರಿ೦ಗೆ’ ಬಾರ

  11. ಬಹುಶಃ ಈ ಪ್ರಪಂಚಲ್ಲಿ ರಜೆ ತೆಕ್ಕೊಳ್ಳದ್ದೆ,ಸಂಬಳ ಕೇಳದ್ದೆ ಕೆಲಸ ಮಾಡುವವು ನಮ್ಮ ನಮ್ಮ” ಮನೆ ದೇವರು”ಗೊ ಮಾಂತ್ರವೆ. ಅವು ಮಾಡಿದ ಕೆಲಸ ಆರಿಂಗೂ ಕಾಂಬಲಿಲ್ಲೆ. ನಿತ್ಯ ಕೆಲಸದ ತೆರಕ್ಕಿನ ಚೆಂದಕ್ಕೆ ವಿವರ್ಸಿದ್ದಿ.

    1. ಈಗ ನಮ್ಮ ಗೋರ್ಮೆಂಟು ಹೆಂಡತಿಗೂ ಸಂಬಳ ಕೊಡೆಕ್ಕು ಹೇಳ್ತನ್ನೆ ಭಾವ, ಸಂಬಳದ ಒಟ್ಟಿಂಗೇ ಡಿಎ ,ಎರಿಯರೂ ಕೊಡೆಕ್ಕು ,ಪೆನ್ಶನ್ನ್ ಇತ್ಯಾದಿ..ಕೊಡೆಕ್ಕು. ಅಲ್ಲದೋ. ಗ್ರೇಡು ನೋಡೆಕಕ್ಕು .

      ” ಮನೆಯೋರು’ ಮಾಡುತ್ತ ಕೆಲಸಂಗೊ ನಮ್ಮಂದ ಗೆಂಡು ಮಕ್ಕಳಿಂದ ಆಗ, ದಿನಲ್ಲಿ ಎಷ್ತು ಮೈಲಕ್ಕು
      ನೆಡತ್ತದು ,ಲೆಕ್ಕ ಹಾಕಲೇ ಎಡಿಯ .. ಹೀಂಗೇ ತುಂಬಾ…ಇದ್ದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×