ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಮೊಬೈಲಿಲ್ಲಿ ಕಳುಸಿದ ಎರಡು ಕವನ ಇಲ್ಲಿದ್ದು. ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ
-ಶರ್ಮಪ್ಪಚ್ಚಿ
ಸೇಮಗೆ ರಸಾಯನ
ಸೇಮಗೆ ರಸಾಯನ
ಮಾಡಿದ್ದೆ ಕಾಫಿಗೆ
ಎಲ್ಲೋರೂ ಬನ್ನೀ
ಮಿಂದಿಕ್ಕಿ ಇಲ್ಲಿಗೆ
ಬೆಣ್ತಕ್ಕಿ ಸೇಮಗೆಯೆ
ಹೆಚ್ಚು ರುಚಿ ಅಲ್ದಾ
ರಸಾಯನ ಸೇರ್ಸಿರೆ
ಇನ್ನೂ ಹೆಚ್ಚು
ಮಾಡಿದೆ ಆನಿಂದು
ಬೇಗನೆ ಎದ್ದಿಕ್ಕಿ
ರುಚಿ ರುಚಿ
ಇರೇಕು ಹೇಳಿಕ್ಕಿ
ಬಾಳೆಹಣ್ಣು ಚೋಲಿಯ
ಮೆಲ್ಲಂಗೆ ತೆಗದು
ಸಣ್ಣ ಸಣ್ಣಕೆ
ಕೊಚ್ಚಿದೇ
ಕಾಯಿಯ ಕೆರದು
ಗಡ ಗಡ ಕಡದು
ಹಾಲು ಹಿಂಡೀ
ಮಡುಗೀದೇ
ಬೆಲ್ಲ ಕೆರಸಿ
ಕಾಯಾಲಿಂಗಾಕಿ
ಬಾಳೆಹಣ್ಣು ಬಾಗವ
ಬೆರ್ಸೀದೇ
ಸೌಟು ತಂದು
ತೊಳಸಿ ನೋಡುಗ
ರುಚಿಯಾ ರಸಾಯನ
ಆತಲ್ಲಿಗೇ
ಎಳ್ಳಿನ ಕಾಳಿನ
ಹೊಟ್ಟುಸಿ ಹಾಕಿಕ್ಕಿ
ರಸಾಯನ ಹೇಂಗಾತು
ನೋಡಿದೇ
ಈಗಲೇ ಬಂದರೆ
ಬೇಗನೆ ಬಳ್ಸುವೆ
ರುಚಿ ರುಚಿ
ಸೇಮಗೆ ರಸಾಯನ..
~~~***~~ ~~~***~~~ ~~~***~~~ ~~~***~~~ ~~~***~~~ ~~~***~~~
ಬಸಳೆ
ಮನೆ ಬುಡಲ್ಲಿ ಬೇಕೊಂದು ಬಸಳೆ ಚಪ್ಪರ
ಬಸಳೆ ಎಂದಿಂಗೂ ಜೀವ ಸತ್ವದ ಆಗರ
ಬಸಳೆ ಬೆಳಶುಲೆ ಬಂಙ ಎಂತ ಇಲ್ಲೆ
ಸಾಂಕಾಣ ಕೂಡಾ ಕಷ್ಟ ಇಲ್ಲೆ
ಸಣ್ಣ ಬಳ್ಳಿಯ ಮಣ್ಣಿಲ್ಲಿ ನೆಟ್ಟು
ಗೊಬ್ಬರ ಬೂದಿ ಹಾಕಿರಾತು
ಬಳ್ಳಿ ಚಿಗುರಿ ಮೇಲಂಗೆ ಬಪ್ಪಗ
ಗೊಬ್ಬರ ಒಂದಿಷ್ಟು ಹಾಕಿರಾತು
ದಿನದಿನವೂ ನೀರು ಹಾಕುತ್ತ ಬಂದರೆ
ಬಸಳೆ ಬುಡ ಲಾಯ್ಕ ಮೇಲೆ ಬತ್ತು
ಚಿಗುರಿದ ಕೊಡಿಗಳ ಮೊಳದುದ್ದ
ಕೊಯ್ದಿಕ್ಕಿ ಬಸಳೆ ಬೆಂದಿಯ ಮಾಡ್ಲಾವ್ತು
ರುಚಿ ರುಚಿ ಬಸಳೆ ಆರೋಗ್ಯಕ್ಕೊಳ್ಳೆದು
ಸೊಪ್ಪಿನ ದೋಸೆಗೂ ಹಾಕ್ಲಾವ್ತು
ಶುದ್ದಕ್ಕೆ ಒಪ್ಪೊತ್ತಿಂಗೆ ಬಸಳೆ ಆಗದ್ರೂ
ಬಾಕಿದ್ದ ದಿನಂಗಳಲ್ಲಿ ತಿಂಬಲಕ್ಕು..
*ಪ್ರಸನ್ನಾ ವಿ ಚೆಕ್ಕೆಮನೆ*
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಒಳ್ಳೆ ಕವನ
ಸೇಮಗೆ ರಸಾಯನ ಲಾಯಿಕಾಯಿದು.
ಬಸಳೆ ಚಪ್ಪರ ಒಂದು ಮನೆಲಿದ್ದರೆ ಬೆಂದಿಗೆಂತರ ಹೇಳಿ ಹುಡ್ಕುವ ಕೆಲಸ ಇಲ್ಲೆ ಅಲ್ಲದಾ…
ಸೇಮಗೆ ರಸಾಯನವೂ ಲಾಯಕ ಆಯಿದು , ಬಸಲೆ ಚಪ್ಪರವೂ ಕಂಡತ್ತು. ಒಪ್ಪ
ಕವನವ ಬೈಲಿಂಗೆ ಹಾಕಿ ಪ್ರೋತ್ಸಾಹ ಕೊಡುವ ಶರ್ಮಣ್ಣಂಗೂ ಧನ್ಯವಾದ..
ಓಹ್, ಸೇಮಗೆ ರಸಾಯನ ಒಳ್ಳೆ ಕಾಂಬಿನೇಶನ್. ಎರಡು ಪದ್ಯಂಗಳೂ ರೈಸಿದ್ದು.
ಎನ್ನ ಕವನಂಗೊಕ್ಕೆ ಮದಾಲು ಒಪ್ಪ ಕೊಟ್ಟ ಗೋಪಾಲಣ್ಣಂಗೆ ಧನ್ಯವಾದ.. ಕೊಶಿಯಾತು.