ಗ್ರಹಣ
replica watches breitling
ಚಂದ್ರಂಗೂ ಸೂರ್ಯಂಗೂ
ಜಗಳಾಡ ಇಂದು
ಸೂರ್ಯಂಗೆ ಬಂತಡ
ಭಾರಿ ಕೋಪ
ಸೂರ್ಯಂಗೆ ಯಾವಾಗಲೂ
ಕೆಂಡದಾಂಗೆ ಕೋಪ
ಇಂದಂತೂ ಚಂದ್ರನತ್ರೆ
ಬೈಂದಡ ಜೋರು ಕೋಪ
ಹಾಂಗಾಗಿ ಚಂದ್ರಂಗೆ
ಅಡ್ಡ ಬತ್ತಡ
ಅಷ್ಟಪ್ಪಗ ನವಗೆಲ್ಲ
ಗ್ರಹಣಾಡ
ಚಂದ್ರಂಗೂ ಭೂಮಿಗೂ
ಸೂರ್ಯ ಅಡ್ಡ ಬಂದರೆ
ಚಂದ್ರ ಗ್ರಹಣ ಅಪ್ಪದೊಳಿ
ವಿಜ್ಞಾನ ಮಾಸ್ತ್ರ ಹೇಳ್ತ
ಅಮ್ಮ ಅಪ್ಪ ಹೇಳ್ತವು
ರಾಹು ಕೇತು ರಾಕ್ಷಸರು
ಚಂದ್ರನ ಹಿಡಿವಲೆ ಬಪ್ಪದಡ
ಅಷ್ಟಪ್ಪಗ ಚಂದ್ರ ಗ್ರಹಣಡ
ಗ್ರಹಣ ಇಪ್ಪಗ ಆರುದೇ
ಉಂಬಲಾಗಡ
ಮಾಡೆಕ್ಕಡ ದೇವರ
ಪೂಜೆ ಧ್ಯಾನ
ಇಂದಿನವಕ್ಕೆ ಇದಕ್ಕೆಲ್ಲ
ಪುರುಸೊತ್ತಿದ್ದಾ
ನಂಬಿಕೆದೆಇಲ್ಲೇ ಹೇಳಿ
ಹೇಳ್ತವಪ್ಪ
ಆಫೀಸಿಂದ ಬಪ್ಪಗಳೇ
ಕಸ್ತಲಾವುತ್ತು
ಕೆಲಸ ಮಾಡಿ ಬಚ್ಚುವಾಗ
ಹಸುವಾವುತ್ತು
ಉಂಬಲಾಗ ಹೇಳಿದರೆ
ಎಂತ ಮಾಡುದು
ಸೂರ್ಯಂಗೆ ಬಂದ
ಕೋಪಂದವು ಜಾಸ್ತಿ ಕೋಪ ಬತ್ತು
ಹಾಂಗಾಗಿ ಇಂದಿನವು ಈಎಲ್ಲ
ಆಚರಣೆಯ ಮಾಡ್ತವಿಲ್ಲೆ
ಲಾಯಿಕಕ್ಕೆ ಉಂಡು
ತಿಂದು ಒರಗುದಾತು
-ಪಂಕಜರಾಮ್
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಗ್ರಹಣ ಹಿಡ್ದದು ಲಾಯಿಕ ಆಯಿದು ಪಂಕಜಕ್ಕ..