Oppanna.com

ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

ಬರದೋರು :   ಮುಳಿಯ ಭಾವ    on   07/01/2013    12 ಒಪ್ಪಂಗೊ

ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ।
ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°
ತಲೆ ತಿರ್ಗಿರೆ ಹೊಗೆಸೊಪ್ಪಿನ ಘಾಟೊ೦ದರಿಯೆಡ್ಪೀ।
ಬಲಗೈಲಿಯೆ ಹಿಡಿಯೊ೦ದರಿ ಹೋಳೊ೦ದರ ಕುಡ್ಪೀ॥

ಹಸಿ ತಿ೦ಡಿಗೊ ಕುರೆಯಾದರು ಭಾರೀ ರುಚಿಯಯ್ಯಾ।
ಕಿಸೆಲಿದ್ದರೆ ಹೊಸ ನೂರರ ನೋಟಕ್ಕದು ಮಾಯಾ।
ಮೊಸರಿದ್ದರೆ ಅವಲಕ್ಕಿಗೆ ಸಾಕಲ್ಲದೊ ಬಾರೋ°
ಹಸಿಮಾವಿನ ಮೆಡಿಯುಪ್ಪಿನ ಕಾಯೊ೦ದರಿ ತಾರೋ°

ಹಳೆತೋಟದ ನೆಡು ಬಾಳೆಯ ಸಾಲೊ೦ದರಿ ನೋಡೂ।
ಮಳೆ ಬ೦ದರೆ ಬುಡಗೊಬ್ಬರ ಹಾಕದ್ದರೆ ಕೇಡೂ।
ಕೊಳೆರೋಗವು ಬಿಡ ಹಬ್ಬಿದರಾ ಮದ್ದು ಲಗಾಡೀ।
ಚಳಿಯಾದರು ಮರ ಹತ್ತುಗು ಚಾದೊತ್ತಕೆ ಪೋಡೀ॥

ಒಣಡಕ್ಕೆಯ ಹೊಗೆಯಟ್ಟದ ಮೇಲೇರುಸು ಶ೦ಭೂ।
ಮೆಣಸಿದ್ದರೆ ಹೊಸ ಗೋಣಿಲಿ ಕಟ್ಟದ್ದರೆ ಕು೦ಬೂ।
ತಣುಸಿದ್ದರೆ ಮನೆ ಜಾಲಿನ ಗುದ್ದದ್ದರೆ ಕಷ್ಟಾ।
ಮಣವಾದರು ಒಳಿಗಲ್ಸೊ ಪ-ಟೋರಾದರೆ ನಷ್ಟಾ॥

ಮನೆ ಜಾಲಿಲಿ ಮುದಿ ತಿಮ್ಮಯ° ಮುಟ್ಟಾಳೆಯ ಹಾಕೀ।
ಗೆನ ತೆ೦ಗಿನ ಹೊರೆ ತಪ್ಪದು ಇನ್ನೆಷ್ಟದು ಬಾಕೀ।
ಸೊನೆ ಮಾವಿನ ಮೆಡಿ ಕೊಯ್ವಲೆ ಆರಿದ್ದವು ಮೇಲೇ।
ದಿನ ಚಾಕರಿ ಜೆನ ಮಾಯವೆ ಹೀ೦ಗಾದರೆ ಸೋಲೇ॥
~~~**~~~

ಶತಮಾನದ ಶತಾವಧಾನ ಕಳುದು ಕೆಲವು ದಿನ ಕಳುದರೂ ಅದರ ಗು೦ಗಿ೦ದ ಹೆರ ಬಪ್ಪಲೆ ಸಾಧ್ಯ ಆಗದ್ದೇ ಇಪ್ಪ ಸುಖ ಎನ್ನ ಹಾ೦ಗೆ ಕೆಲವು ಜೆನರದ್ದು.ತಲೆಯೊಳ ಅವು ಕಟ್ಟಿದ ಕವಿತೆಯ ಕೆಲವು ಶಬ್ದ೦ಗೊ ಹಾ೦ಗೇ ತಿರುಗಿಗೊ೦ಡಿತ್ತು.
“ಪ್ರಶಮೇರಣವಿದು ಸಜ್ಜನ ಸ೦ಕಷ್ಟದ ಕಾಲಾ”
ಹೇಳಿ ಮನಸ್ಸು ತನ್ನಷ್ಟಕ್ಕೆ ಪದ ಹೇಳಿಗೊ೦ಡಿತ್ತು,ಚೆಲ.. ಈ ಧಾಟಿ ಲಾಯ್ಕ ಇದ್ದು ಹೇಳಿ ರಜಾ ವಿಮರ್ಶೆ ಮಾಡಿಯಪ್ಪಗ ಇದು “ಧವಳ ಛ೦ದಸ್ಸು ಹೇಳಿ ಅವಧಾನಿಗೊ ಹೇಳಿದ ಮಾತು ನೆ೦ಪಾತು.

ಹವಳದ ಹಾ೦ಗಿಪ್ಪ ಈ ಧವಳ ಛ೦ದಸ್ಸಿನ ಮಾತ್ರೆ ಲೆಕ್ಕಾಚಾರ ಹೀ೦ಗಿದ್ದು.

೧೧_/೧೧೧/೧_೧/೧_ _/೧೧_/_

ನನನಾನನ/ನನನಾನನ/ನಾನಾ/ನನನಾನಾ

( ಒಟ್ಟು ೧೬ ಅಕ್ಷರ೦ಗೊ ಇಪ್ಪ ನಾಲ್ಕು ಸಾಲುಗಳ ಜೋಡಣೆ).
ಓದಿ, ನಿ೦ಗಳೂ ಮು೦ದುವರಿಸಿ.

ಕವಳ ಹಾಕಿಗೊ೦ಡು ಧವಳ ಹಾಡುವ° ,ಸ್ವರ ಸೇರುಸಿ,ಬನ್ನಿ.

ಶ್ರೀಶಣ್ಣನ ಸ್ವರಲ್ಲಿ ಇಲ್ಲಿ ಕೇಳಿಃ

ಮುಳಿಯ ಭಾವ

12 thoughts on “ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

  1. ಮುಳಿಯಣ್ಣನ “ಎಲೆ ಪೆಟ್ಟಿಗೆ”ಹೆರ ಬಂತದ ಈಗ

    ಕಳೆ ಬಂತದ ಒಪ್ಪಣ್ಣನ ಬೈಲಿಂಗದ ಬೇಗ !

    ಹೊಳೆ ಹರಿಯಲಿ ಹವಿಗನ್ನಡ ಕವಿಗಳ ಕೃತಿ ಸಾಲು

    ಬೆಳೆಯುತ್ತಿರಲೀ ರೀತಿಲಿ ನಮ್ಮೆಲ್ಲರ ಬಯಲು /

    ಲಾಯಕ್ಕಾಯಿದು ಶ್ರೀಶಣ್ಣನ ಸೊರವೂ ಮುಳಿಯದಣ್ನನ ಪದ್ಯವೂ.

  2. ಲಾಯಕ ಅಯಿದು. ಸಾನ್ದರ್ಬಿಕ ವಿಶಯನ್ಗಲ ಸೆರ್ಸಿ ಬರದು ಲಾಯಕ ಆಯಿದು.

  3. ಒಳ್ಳೆ ರಸಕವಳ ಕೊಟ್ಟ ರಘುವಿಂಗೆ ಧನ್ಯವಾದಂಗೊ.
    ಛಂದಸ್ಸಿನ ಲೆಕ್ಕದ ಮಾತ್ರೆ, ದ್ವಿತೀಯಾಕ್ಷರ ಪ್ರಾಸ, ಅಂತ್ಯ ಪ್ರಾಸ.., ಹವ್ಯಕ ಮನೆಯ ವಾತಾವರಣದ ಚಿತ್ರಣ … ವಾಹ್!!!
    ಈ ರಚನೆಯ ರಘುವಿಂಗೆ ಮತ್ತೊಂದರಿ ನಮೋ ನಮಃ

  4. ಆಹಾ..! ರಘುಭಾವ ಕವಳ ಹಾಕಿ ಧವಳ ಬರದ್ದದೂ, ಶ್ರೀಷಣ್ಣ ತಾಳ ಹೆಟ್ಟಿ ಹಾದಿದ್ದೂ ಪಷ್ಟಾಯಿದು.

    1. ಶ್ರೀಶಣ್ಣ ಹಾಡಿದ್ದರ ಇಂದು ಕೇಳಿದೆ.ಉಲ್ಲಾಸಕರವಾದ ಧಾಟಿ.ಜರಾ ಹಟ್ಕೆ…ಜರಾ ಬಚ್ ಕೆ ಯಹೀ ಬೋಂಬೇ ಮೇರೀ ಜಾನ್…ಪದ್ಯವ ಕೇಳಿದ ಹಾಂಗೆ ಆವುತ್ತು.

  5. ಈ ರಾಗವ ಮದಲೇ ಕೇಳಿದ್ದೆ. ಇದು “ಧವಳ” ಹೇಳಿ ಮುಳಿಯ ಭಾವನಿಂದ ಗೊಂತಾತು. ಪದ್ಯಲ್ಲಿ ಹವ್ಯಕರ ಜೀವನಕ್ರಮ ಚೆಂದಕೆ ಬಯಿಂದು. ಶ್ರೀಷಣ್ಣನ ಸ್ವರವ ಮನೆಲಿ ಹೋಗಿ ಕೇಳೆಕಷ್ಳ್ಟೆ.

  6. ಧನ್ಯವಾದ೦ಗೊ ರಘು ಮಾವಾ.. ಹೊಸ ಹೊಸ ವಿಷಯ೦ಗೊ ಕಲಿವಲೆ ಒಪ್ಪಣ್ಣನ ಬೈಲು ಒ೦ದೊಳ್ಳೇ ಅವಕಾಶ..

  7. ‘ಶತಾವಧಾನ’ದ ಗುಂಗು ಬೈಲಿಲಿ ಛಾಪೊತ್ತಿದ್ದದು ಕೊಶಿಯೆ ಆತು. ಅದು ಅನೇಕರಿಂಗೆ ಹೊಸ ಚಿಗುರ ನೀಡಿದ್ದು ಹೇಳ್ವದು ನಿಸ್ಸಂದೇಹ.

    ಮುಳಿಯ ಭಾವನ ಧವಳ ಛಂದಸ್ಸು ಕವಳಂದ ಸುರುವಾಗಿ ದಿನಚಾಕರಿ ಕೆಲಸದವರೇಂಗೆ ಲಾಯಕ ಆಯ್ದು ಭಾವಯ್ಯ. ಅಭಿನಂದನೆಗೊ.

    ಶ್ರೀಶಣ್ಣ ಹಾಡಿದ್ದೂ ಸೊಗಸಾಗಿದ್ದು. ಅಭಿನಂದನೆಗೊ.

  8. ಚೊಕ್ಕ ಆಯಿದು.ಶ್ರೀಶಣ್ಣ ಹಾಡಿರೆ ಇನ್ನೂ ಚೊಕ್ಕ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×