- " ಜೀವಸೆಲೆ " - June 10, 2014
- ಜಯನಮೋ - May 18, 2014
- ಓಟುಬಂತದಓಟು! - March 31, 2014
ಜಯ ನಮೋ
ಇಷ್ಟು ವರುಷದ ಕಾಲ
ಎಂತೆಂತೊ ಕಂಡತ್ತು
ಊರು ಕೇರಿಗೊ ಎಲ್ಲ ಸೂರೆ ಹೋತು /
ಎಷ್ಟೊ ಜೆನ ಬೆಳಿ ಅಂಗಿ
ಹಾಕಿದವು ದೇಶವಿಡಿ
ನಕ್ಕಿ ನಕ್ಕಿಯೆ ಹೊಟ್ಟೆ ದೊಡ್ಡದಾತು /೧/
ಹಾಳು ಮಾಡಿದ್ದೆಷ್ಟೋ !
ಕದ್ದು ಮಾರಿದ್ದೆಷ್ಟೊ!
ಕೂಸು ಹೆತ್ತೊರ ಗೋಳು ಗಾಳಿಲೋತು /
ಗೋವು ಗಳ ಕಡಿಕಡಿದು
ಹೊಟ್ಟೆಗಿಳುಶುವ ಜೆನರೋ!
ಸರಕಾರಕೇ ಬುದ್ದಿ ಇಲ್ಲದ್ದಾತು /೨/
ಹೆಜ್ಜೆ ಬೇಶಲೆ ನಿತ್ಯ
ಬೇಕಾದ ಗೇಸಂಡೆ ,
ಪೆಟ್ರೋಲು ಡೀಸೆಲ್ಲು ಬೆಲೆ ಏರಿತ್ತು /
ಗೇಸಂಡೆ ಬೇಕಾರೆ
‘ಆಧಾರ” ಬೇಕನ್ನೆ
ಕೈಗೆ ಎಕ್ಕದ್ದಷ್ಟು ಮೇಗೆ ಹಾರಿತ್ತು /೩/
ನೆರೆಕರೆಯ ಕರಕರೆಯ
ಎಷ್ಟು ಸಹಿಸಲೆ ಎಡಿಗು ?
ಬುದ್ದಿ ಕಲುಶಲೆ ಗಟ್ಟಿ ಎದೆಯೆ ಬೇಕು /
ನಮ್ಮ ಸೈನ್ಯದ ಮಕ್ಕೊ
ಕಮ್ಮಿ ಏನಲ್ಲ , ಅವು
ಹೇಳಿದರೆ ಕೈಲಾಸ ಹತ್ತಿ ಬಕ್ಕು /೪/
ಜಾತಿ ಜಾತಿಯ ಒಡದು
ವಿಷದ ಬೀಜವ ಬಿತ್ತಿ
ಬೆಳೆ ತೆಗವ ಕಟುಕರಾ ಸಾವಾಸ ಸಾಕು/
ಚಾಯ ಮಾರುವನಕ್ಕು
ಜೆನರ ಮನಸಿನ ತಿಳುದ
ದೇಶ ಒಳುಶಲೆ ನೀನೆ ಬೇಕೆ ಬೇಕು /೫/
ಜಯ ನಮೋ ನಮೋ ಹೇಳಿ
ನಿನ್ನ ಹಿಂದೆಯೆ ನಿಂದು
ದೇಶವಿಡಿ ಒಂದಾಗಿ ಕಾದೊಂಡಿದ್ದು /
ನಮ್ಮ ಹಿಂದೂ ದೇಶ
ಹಿಂದಲ್ಲ, ಎಂದಿಂಗು
ಸಾಧುಸಿಯೇ ತೋರುಸು ಬೇಡಿಂಡಿದ್ದು /೬/
~~~***~~~
ಸಕಾಲಿಕ.. ರೈಸಿತ್ತು ಬಾಲಣ್ಣ ಮಾವ.
ಹತ್ತು ವರುಷದ ಕಾಲ
ಹೊತ್ತವೀ ದೇಶ೦ದ
ಸೊತ್ತುಗಳ ಬಗೆಬಗೆಯ ತ೦ತ್ರ ಮಾಡಿ /
ಗತ್ತು ಅಧಿಕಾರ ಮದ
ಮತ್ತು ಬಿರುದತ್ತಿ೦ದು
ನೆತ್ತಿಗೆರದಾ ನೀರು ಪಾದಕಿಳುದು / /
ಲಾಯಕ ಆಯಿದು. ಮೋದಿ ಬಗ್ಗೆ ತುಂಬಾ ನಿರೀಕ್ಷೆ ಇದ್ದು. ಅದು ಹುಸಿ ಆಗದ್ದಿರಲಿ
ಪ್ರತಿಯೊಂದು ಸಾಲಿಂಗೂ ಒಪ್ಪ. ಹರೇ ರಾಮ. ಗುಜರಾತಿನ ಮಾದರಿ ದೇಶದಾದ್ಯಂತ ಕಾಣಲಿ.