ಬರದೋರು :   ಬಾಲಣ್ಣ (ಬಾಲಮಧುರಕಾನನ)    on   22/04/2015    4 ಒಪ್ಪಂಗೊ

ಬಾಲಣ್ಣ (ಬಾಲಮಧುರಕಾನನ)
Latest posts by ಬಾಲಣ್ಣ (ಬಾಲಮಧುರಕಾನನ) (see all)

ಜೀವ ನೆಲೆ  ಜೀವ ನೆಲೆ

ಕಡಲಿಂದೆದ್ದೆದ್ದೋಡಿದ್ದೆಲ್ಲಿಗೆ  /
ದೂರದ ಪರ್ವತದಾ ಕೊಡಿಗೆ /
ಒಡಲಿನ ಭಾರವ ತಡವಲೆ  ಎಡಿಯದೊ /
ಸೊರಿಯದರೀಗಲೆ  ನೆಲದೆಡೆಗೆ //೧//

 ಬೀಸಿದ ಗಾಳಿಗೆ ಅಲ್ಲಿಂದಿಲ್ಲಿಗೆ
ಮುಗಿಲಿನ ಬಿರು ಬೀಸೋಡಾಟ
ಹಾಸಿದ ಬಾನದ ಬಣ್ಣವೆ ಬದಲೋ !
ಜಿಗಿಯುವ ಕುದುರೆಯೊ ಜೋಡಾಟ !//೨//


ಕಲ್ಲಿನ ಕೊರದೋ ಮಣ್ಣಿನ ತೊಳದೋ
ಗಿಡ ಮರದೆಡೆಯಲಿ ಕೊಣಿಕೊಣಿದು
ಎಲ್ಲಿಗೆ ಹೋಪದೊ ಆರಿಂಗರಡಿಗು ?
ತಡಸಲೊ ಅಬ್ಬಿಯೊ ಮೊರೆ ಮೊರೆದು //೩//

 

ತುಂಬಲಿ ಕೆರೆ ಕೊಳ  ಹರಿಯಲಿ ಜಳ ಜಳ
ಮೇಗಂದಿಳಿ ಇಳಿ ಹಾ ಚೆಂದ  !
ಅಂಬರಕೇರಿದರಾರಾದರು ಸರಿ
ಬೇಗನೆ ಇಳಿಗದ  ತಿಳಿ ಕಂದ //೪//

 

ಜೀವನ  ಚಕ್ರವೊ! ಎಂತ  ವಿಚಿತ್ರ !
ಆದಿಯೊ ಅಂತ್ಯವೊ  ಗೊಂತಿಲ್ಲೆ
‘ಜೀವನ’ ದಾಂಗೆಯೆ  ನಿರ್ಮಲವಾಗಲಿ
ಹಾದಿಯೊ  ಅದುವೇ ಜೀವನೆಲೆ //೫//

~~~***~~~

ಒಪ್ಪಣ್ಣಲ್ಲಿ ಬಂದ   ದ ಸಮಸ್ಯಾ ಪೂರಣ (93) ದ  ಪ್ರೇರಣೆ

4 thoughts on “ಜೀವ ನೆಲೆ

  1. ಆಹಾ .. ಆಹಾ .. ಬಾಲಣ್ಣ ಮಾವಾ ..
    ಸುಳಿಸುಳಿಯಾಗಿ ಸಾಗುವ ” ಜೀವನ ” ಚಕ್ರ ಕೊಣಿಕೊಣಿದು ,ಮೊರೆಮೊರೆದು ಬಂಡ ಚೆಂದವೇ .. ಕೊಶಿಯಾತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×