Latest posts by ಬಾಲಣ್ಣ (see all)
- " ಜೀವಸೆಲೆ " - June 10, 2014
- ಜಯನಮೋ - May 18, 2014
- ಓಟುಬಂತದಓಟು! - March 31, 2014
ಜೀವಸೆಲೆ
ಪಡುಹೊಡೆಲಿ ನೋಡಿದರೆ ರೆಂಕೆಯಾ
ಬಿಡುಸಿ ಹಾರುವ ಕರಿಯ ಗಿಡುಗನೊ
ಒಡದ ಮೊಸಳೆಯ ಬಾಯಿಯೋ ತುಂಬೆಕೈ ಮದದಾನೆಯೋ/
ಅಡರಿತ್ತು ಕರಿಮುಗಿಲು ನೋಡದ
ದಡಬಡನೆ ಕೇಳಿತ್ತು ಕೆಮಿಗದ
ಇಡಿಮನೆಯೆ ನೆಡುಗಿತ್ತು ಗಡಗಡ ‘ಸೋನೆ ‘ ಹಿಡುದತ್ತೋ / ೧/ (ಮೋಹನ )
ಬಾನದಜ್ಜಿಯೆ ಕಡವ ಶಬುದವೋ
ಆನೆ ಮುಗಿಲೆಡೆ ನೆಡವ ಗೌಜಿಯೋ
ಸೋನೆ ಮಳೆ ಸುರುದತ್ತು ರಟ ರಟಾಯಿಸಿ ಸೆಡ್ಲು ಬಡುದತ್ತು
ಬಾನವೇ ಬಿರುದತ್ತೊ ಎನಗನು –
ಮಾನ,ದೇವರ ಕರುಣೆಯಾ ವರ-
ದಾನವೋ! ಹೊಯಿದತ್ತು ರಪ ರಪ ಬಂತು ಮಳೆಗಾಲ /೨/ ( ಭೋಪಾಳ)
ಬಿರುಗಾಳಿ ಬಿರಬಿರನೆ ಬೀಸಿರೆ
ತಿರುತಿರುಗಿ ಬಜವೆಲ್ಲ ಹಾರಿರೆ
ಮರಗಿಡವೊ ಅಡಿಮೇಲಾತು ಮಾಡಿನ ಹಂಚು ಹಾರಿತ್ತು /
ಕೆರೆ ತೋಡು ತುಂಬಿತ್ತು, ಪಳ್ಳದ
ಕರೆ ಜೆರುದು ಕೂದತ್ತು , ಕಟ್ಟದ
ಬರೆ ಒಡದು ತೋಟದ ತುಂಬ ಬೆಳ್ಳದ ನೀರು ಮೊಗಚಿತ್ತು /೩/ ( ಕಾನಡ )
ಹಿಡುದ ಕೊಡೆ ಹಾರಿತ್ತು , ಜಾಲಿಲಿ
ನೆಡವಗಳೆ ಜಾರಿತ್ತು, ತೆಂಗಿನ
ಮಡಲುಗಳೆ ಗಾಳಿಗೆ ತೂಗಿ ತಟ ಪಟ ಕಾಯಿ ಉದುರಿತ್ತು /
ಪಡುಗಡಲು ಮೊರದತ್ತು ಭೋರನೆ
ಕಡಲಲೆಗೊ ಅಬ್ಬರಿಸಿ ಬೊಬ್ಬೆಲಿ
ಬಡುದತ್ತು ಬಂಡಗೆ ಹಾರಿ ಸೀರಣಿ ತೆಂಗಿನೆತ್ತರಕೆ /೪/ (ಕಲ್ಯಾಣಿ )
ಮರ ಮರದ ಕೊಡಿ ಚಿಗುರಿ ಗೆಲ್ಲಿನ
ಸಿರಿ ಮುಡಿಯ ಸಿಂಗಾರ ನೋಡಿರೆ
ಸಿರಿಯೆ ವನಸಿರಿ ಸ್ವರ್ಗದೈಸಿರಿ ಪ್ರಕೃತಿ ವನದೇವಿ /
ಇರಲಿರಲಿ ಊರಿಂಗೆ ದೇವರ
ವರ ಇದುವೆ ನೀರಿನ ‘ಸೊಯಿಬ’ ಕಡ –
ವರ , ಜೀವಜಲ ,ಇದು ಭಾಗ್ಯನಿಧಿ, ಜೀವ, ಜೀವಸೆಲೆ /೫/ ( ಮಧ್ಯಮಾವತಿ )
~~~***~~~
ಅಲ೦ಕಾರ೦ಗೊ ತು೦ಬಿದ ಸಮೃದ್ಧ ಪದ್ಯ.ಕೊಶಿಯಾತು ಮಾವ.
ಷಟ್ಪದಿಯಾದರೂ ಭಾಮಿನಿ ಅಲ್ಲ,ಕೆಲವು ಜಾಗೆಲಿ ,ಅಷ್ಟೆ.ಹಾಡಿರೆ ಹೇ೦ಗಕ್ಕು ಹೇಳ್ತ ಕುತೂಹಲ ಎನಗೆ.ಆರಾದರೂ ಹಾಡಿ ಕಳುಸುವಿರೋ?
ಜೀವ ಸೆಲೆ ಪದ್ಯಂಗ ತುಂಬಾ ಲಾಯ್ಕ್ಕ ಇದ್ದು
ಮಳೆಗಾಲದ ಸುಂದರ ವರ್ಣನೆ ಲಾಯಕಾಯಿದು ಬಾಲಣ್ಣಾ. ಹವ್ಯಕ ಶಬ್ದಂಗಳ ಸುರಿಮಳೆಯುದೆ ಇದ್ದು.
ಬಾಲಣ್ಣ, ಹೆರ ಮಳೆ ಬತ್ತಾ ಇಪ್ಪಗ ಈ ಕವನ ಓದುವಾಗ ಭಾರೀ ಕೊಶೀ ಆವುತ್ತು.
ತುಂಬಾ ಲಾಯ್ಕಾಯಿದು.
ಹಾಡಿನ ರೂಪಲ್ಲಿ ಬಂದರೆ ಚೆಂದವೇ ಅಕ್ಕು. ಬರಲಿ..
ಇದರ ಹಾಡಿಸಿ ಬೈಲಿಲಿ ಹಾಕುವಿರೋ?
ದೀಪಿ ಅಕ್ಕನೋ ,ಶ್ರೀಶಣ್ಣನೊ ಹಾಡಿದರೆ ಬೈಲಿನ ಎಲ್ಲೋರು ಕೆಮಿ ಕೊಡುಗು ಅಲ್ಲದೋ ಗೋಪಾಲಣ್ಣಾ ?
ಆನು ಹಾಡಿರೆ ಅಕ್ಕಾ?
ಸಭೆಲಿ ಹಾಡುತ್ತರೆ ಕಡೇಂಗೆ ಹಾಡಲಕ್ಕು ಶಾಮಣ್ಣ …..
ಹರೇ ರಾಮ ಬಾಲಣ್ಣ . ಜೀವಸೆಲೆ ಮುಂಗಾರ ಆರಂಭ ಲಾಯಕ ಆಯ್ದು.