Latest posts by ಗೋಪಾಲಣ್ಣ (see all)
- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಖರ ಹೇಳ್ವ ವತ್ಸರ
ಬಂತು ಬಂತು ನೋಡಿರಿ
ಬೆಶಿಲು ಖಾರ ಬೇಕು ಈಗ
ಬದುಕು ಖಾರ ಮಾತ್ರ ಆಗ!
ಕತ್ತೆ ,ಕೆಲಸ ,ಸಹನೆ ,ಕಷ್ಟ
ಆರಿಂಗಿಕ್ಕು ಅದರ ಇಷ್ಟ?
ಮರವಲಕ್ಕೊ ನಾವು ಕತ್ತೆ
ಕುದುರೆ ಕತೆಯ ನೀತಿ ಪಾಠ?
ಹಾಸ್ಯ ಮಾಡಲಕ್ಕೊ ನಾವು
ಬಾಯಿ ಸತ್ತ ಪ್ರಾಣಿ ಮುಖವ?
ಬೇವು ಇರಲಿ ಬೆಲ್ಲ ಇರಲಿ
ಎಷ್ಟೆ ಕಷ್ಟ,ಪೀಡೆ ಬರಲಿ
ಎದುರು ಬಂದರದರ ತಡೆವೊ
ಹಿಂದೆ ಹೋದರದರ ತುಳಿವೊ
ಮುಂದೆ ಹೋಪವಕ್ಕೆ ಒಂದು
ಸ್ಫೂರ್ತಿ ಅಲ್ಲೊ ಕತ್ತೆ ಇಂದು?
ಎಷ್ಟು ಹೀನ ಬೈಗಳನ್ನು
ಕೇಳಿ ಸಹಿಸಿದಂತ ಜೀವ!
ಬೆಳ್ಳಿ ವರ್ಷಕಿದರ ಹೆಸರು
ನೋಡಿ ಎಷ್ಟು ಮುಖ್ಯ ಭಾವ!
ಖಂಡಿತ ಪ್ರಳಯ ಆವುತ್ತಿಲ್ಲೆ ಈಗ. ಅದೆಲ್ಲಾ ಬುರುಡೆ.
ಆರೂ ಹೆದರೆಕ್ಕು ಹೇಳಿ ಇಲ್ಲೆ.
ಭೂಕಂಪ,ತ್ಸುನಾಮಿ ,ನೆರೆ ಎಲ್ಲಾ ಸಾಧಾರಣ ಪ್ರಾಕೃತಿಕ ವಿದ್ಯಮಾನಂಗೊ.ಮೊದಲೂ ಆದ್ದದು ಇದ್ದು.
ಖರ ಸಂವತ್ಸರ ಖಾರ ಆಗದ್ರೆ ಸಾಕು. ಅಲ್ಲದ್ದೇ ಜಪಾನಿಲ್ಲಿ ತ್ಸುನಾಮಿ ಬಂದು ಪೂರ ಹೋಯಿದಡ. ಬುರುಡೆ ಬ್ರಹ್ಮ ಜೋಯಿಶಂ ಟೀವಿಲಿ ಬಂದು ಎಂತೆಲ್ಲ ಹೇಳಿ ಮನುಷ್ಯರ ಹೆದರ್ಸುತ್ತಾ ಇದ್ದಂ.
ಧನ್ಯವಾದ. ಕತ್ತೆ ಎಲ್ಲರ ಹೀನಾಯಕ್ಕೆ,ಅಲಕ್ಷ್ಯಕ್ಕೆ ಈಡಾದ ಪ್ರಾಣಿ.ಆದರೆ ೨೫ನೇ ಸಂವತ್ಸರಕ್ಕೆ ಇದರ ಹೆಸರು ಇಪ್ಪದು ಮುಖ್ಯ ಅಲ್ಲದೊ ಭಾವ?
ಬೊಳುಂಬು ಮಾವನ ಪ್ರಶ್ನೆಗೆ ರಘು ಅಣ್ಣ ಉತ್ತರ ಬರದ್ದವು.ಆನು nODiddu ಈಗ.
ಗೋಪಾಲಣ್ಣ,
ಖರ ಹೇಳಿರೆ ಕತ್ತೆ ಹೇಳುವ ಅರ್ಥ ಇಪ್ಪದರ ಹಿನ್ನೆಲೆಲಿ ಬರದ ಈ ಕವನ ತು೦ಬಾ ಚೆ೦ದಕೆ ಸಕಾಲಲ್ಲಿ ಮೂಡಿದ್ದು.ಅರುವತ್ತು ಸ೦ವತ್ಸರ೦ಗಳಲ್ಲಿ ಇಪ್ಪತ್ತೈದನೆಯದು ಹೇಳುವದೂ ಸೂಕ್ಶ್ನಲ್ಲಿ ಬಯಿ೦ದು.
ಕಷ್ಟ೦ಗಳ ಧೈರ್ಯಲ್ಲಿ ಎದುರಿಸಿ ಇಷ್ತ೦ಗಳ ಪ್ರೀತಿಲಿ ಸ್ವೀಕರಿಸಿ ಜೀವನ ಮು೦ದುವರಿಯಲಿ.ಶುಭಾಶಯ೦ಗೊ.
ಹೊಸ ವರ್ಶದ ಸುರುವಿಂಗೆ ಸೊಗಸಾದ ಪದ್ಯ. ಲಾಯಕಾಯಿದು. ಕತ್ತೆಯನ್ನೇ ಹೊಗಳಿ,ಮಾದರಿಯಾಗಿ ತೆಕ್ಕೊಂಡು ಬರದ್ದರಲ್ಲಿ ಹೊಸತನ ಇದ್ದು. ಗೋಪಾಲಣ್ಣ , ಬೆಳ್ಳಿ ವರ್ಷಕಿದರ ಹೆಸರು ನೋಡಿ ಎಷ್ಟು ಮುಖ್ಯ ಭಾವ ಹೇಳ್ತ ಗೆರೆಯ ಬಗ್ಗೆ ರಜ್ಜ ವಿವರಣೆ ಕೊಟ್ರೆ ಒಳ್ಳೆದಿತ್ತು.
:):):)
ಒಪ್ಪ ಆಯಿದು… 🙂