- ಮಾಣಿ ಬೋಚನೋ? - October 27, 2015
- ಫಾಲನೇತ್ರನಮುನಿಸೊ - May 13, 2015
- ಜೀವ ನೆಲೆ - April 22, 2015
ಕುಂಬಳ ಬಳ್ಳಿ -ಹಪ್ಪಳ ಹೆಡಗೆ
ಕಿಟ್ಟಣ್ಣನಾ ಮಗಳು
ಒಪ್ಪಕ್ಕ ಗೊಂತಿದ್ದೊ
ಇಪ್ಪತ್ತು ಕಳುದತ್ತು ಕೂಸು ಕೊಡ್ಲಾತು |
ಓ ಮೊನ್ನೆ ಕಿಟ್ಟಣ್ಣ
ಬಂದು ಹೇಳಿಕೆ ಕೊಟ್ಟ
ಚೆಂದಕ್ಕೆ ಗೌಜೀಲಿ ಮದುವೆ ಕಳುದತ್ತು |೧|
ಅಳಿಯ ಮಗಳು ಬಂದು
ಸಮ್ಮಾನ ಆಗೆಡದೋ
ಅಡಿಗೆಗೆ ಸತ್ಯಣ್ಣ ಖುದ್ದು ಬೈಂದ|
ಕಾಯಿ ಹೋಳಿಗೆ ತುಪ್ಪ
ಹಸರ ಪಾಯಸ ಇತ್ತು
ಖಾರಕ್ಕೆ ಮಿಕ್ಸ್ಚರು ಮಾಡಿ ತೈಂದ |೨|
ಕಳಿಯ ಬಾರದ್ದೆಲ್ಲ
ನೆಂಟ್ರುಗೊ ಬೈಂದವು
ಸತ್ಯನಾರಾಯಣ ಪೂಜೆ ಇತ್ತಾಡ |
ಪ್ರಸಾದ ಕೊಟ್ಟತ್ತು
ಗಂಟೆ ಒಂದಾತಾಡ
ಹಂತೀಲಿ ಕೊಡಿಬಾಳೆ ಮಡುಗಿತ್ತಾಡ |೩|
ಅಲಸಂಡೆ ಪಲ್ಯಾಡ
ಅವಿಲು ಉಪ್ಪಿನ ಕಾಯಿ
ಟೈಗರಕ್ಕಿಯ ಅನ್ನ ಬಡುಸಿ ಆತು |
ಘಮ ಘಮ ತುಪ್ಪವುದೆ
ಬೆಶಿ ಸಾರು ಬಂತಾಡ
ಹಪ್ಪಳ ಬಡುಸಲೆ ಮರದು ಹೋತು |೪|
ಹಪ್ಪಳ ಹೇಳೀರೆ
ಭಾರಿ ಕೊಶಿ ಅಳಿಯಂಗೆ
ಕೇಳೂದು ಹೇಂಗದರ ಮಾವನತ್ರೆ ?|
ಹೇಳಿದ ‘ಮಾವಯ್ಯಾ ..
ಎಂಗಳ ಮನೆಲೊಂದು
ಕುಂಬಳ ಬಳ್ಳಿಯೋ.. ಹಟ್ಟಿ ಹತ್ರೆ -|೫|
ಹಬ್ಬಿತ್ತು ಉದ್ದಾಕೆ
ಎಷ್ಟುದ್ದ ಕೇಳ್ತೀರೊ
ಓ!.. ಅಲ್ಲಿ ಕಾಣ್ತಾದ ಹಪ್ಪಳದ ಹೆಡಗೆ |
ಅಷ್ಟುದ್ದ ಬಳ್ಳಿಲಿ
ಒಂದೇ ಕುಂಬಳ ಕಾಯಿ’ …
“ಗೊಂತಾತು, ಅಳಿಯ ,ಮರದತ್ತು ಗಡಿಬಿಡಿಗೆ” |೬|
ತೆಗೆಯಿ ಹಪ್ಪಳ ಹೆಡಗೆ
ಎಂತ ಮರವೋ ಕರ್ಮ
ಸುದರಿಕೆಗು ಸತ್ಯಣ್ಣನೇ ನಿಲ್ಲೇಕೋ ?|
ಶಾಕ ಪಾಕಂಗಳ
ಬಡುಸಿ ಕ್ರಮ ತಪ್ಪದ್ದೆ
ಕೂದೋರು ದೆನಿಗೇದು ಅದ ಹೇಳೇಕೋ ? |೭|
~~**~~
ಒಳ್ಲೆ ಅಭಿಪ್ರಾಯ ಬರತ್ತಾ ಇಪ್ಪ ಎಲ್ಲೋರಿಂಗುದೆ ಧನ್ಯವಾದಂಗೊ.
ಪದ್ಯ ತು೦ಬಾ ಲಾಯಿಕ ಆಯಿದು ಬಾಲಣ್ಣ. ಪದ್ಯದ ಕಲ್ಪನೆಯೂ ರಚಿಸಿದ ರೀತಿಯೂ ಸೂಪೆರ್ ಆಗಿ ಬಯಿ೦ದು .
ಅಭಿನ೦ದನೆ.
ಒಂದು ಕಡೆಲಿ,ಒಬ್ಬರ ಮನೆಗೆ ನಿತ್ಯಕ್ಕೆ ಆರೋ ನೆಂಟ್ರುಗೊ ಬಂದವಡ. ಮನೆಹೆಮ್ಮಕ್ಕೊ ಭಾರೀ ಕೊಶಿಲಿ ಅದೂಇದೂ ಹೇಳಿ ನಮುನೆವಾರು ಅಡಿಗೆ ಮಾಡಿತ್ತಿದ್ದಡ. ಹಶುವಪ್ಪಲೆ ಸುರುವಾತು- ಇನ್ನು ಉಂಬಲೆ ಕೂಪ°ಹೇಳಿ ಬಟ್ಲು ಮಡುಗಿ ಒಂದೊಂದೇ ಐಟಂ ತಂದು ಮಡುಗಿದವು. ಅಶನ ಎಲ್ಲಿದ್ದತ್ತಿಗೆ ಹೇಳಿ ಕೇಳಿಯಪ್ಪಗ ಮನೆಹೆಮ್ಮಕ್ಕೊ ತಲೆಗೆ ಕೈಕೊಟ್ಟು ಕೂದತ್ತು. ಕುಕ್ಕರಿಲಿಯನ್ನೆ , ಅಶನ ಅಕೇರಿಗೆ ಮಾಡುವ°- ಬೆಶಿಬೆಶಿಯಾಗಿರ್ತು ಹೇಳಿ ಗ್ರೇಶಿದ್ದದು ನೆಂಟ್ರು ಬಂದ ಗೌಜಿಲಿ ಕುಕ್ಕರು ಕೂಗುಸುಲೆ ಮರದೇ ಹೋತು.
ಇಂಥಾ ಮರೆಗುಳಿತನವೇ ನೈಜವಾಗಿ ಕವನವಾಗಿ ಬಂದದು ಲಾಯ್ಕ ಆಯ್ದು ಬಾಲಣ್ಣ.
ಒಳ್ಳೆ ಕೆಣಿ…. 🙂
ಕಿಟ್ಟಣ್ಣನ ಮಗಳೋ ಶಾನುಭೋಗನ ಮಗಳೋ!?
INDIRECT ಆಗಿ ಅಳಿಯ ಕೇಳಿದ್ದು ಲಾಯ್ಕಾಯ್ದು!
ಅಳಿಯ ಉಶಾರಿದ್ದ.ಪದ್ಯ ಬರೆದ್ದು ಲಾಯ್ಕ ಆಯಿದು.
layakaidu.ondu kadeli oota ada matte ashtadravya kottidavu.ootakke badusale marathe hoyidu.
ಪದ್ಯ ತುಂಬ ಚಂದ ಇದ್ದು ಓದಿ ಎನಗೆ ನೆಗೆ ಬಂತು!
ವ್ಹಾ! ವ್ಹಾ! ಮಾಷ್ಟ್ರ ಪದ್ಯ ಲಾಯಕಾಯಿದು!
ರೈಸಿದ್ದೋ ರೈಸಿದ್ದು. ಭಾರೀ ಪಷ್ಟು ಆಯ್ದು. ಕೊಶಿ ಆತಪ್ಪ ಸತ್ಯಣ್ಣಂದೇ ಅಡಿಗೆ ಹೇಳುದರ ಕೇಳಿ.
ಅಳಿಯನ ಸಮಯೋಚಿತ ಉಪಾಯ ಸೂಪರ್ ಆಯಿದು. ಬಾಲಣ್ಣನ ಸರಳ ಸುಂದರ ಪದ್ಯ ನರಸಿಂಹಸ್ವಾಮಿಯ ಪದ್ಯದ ಹಾಂಗಿತ್ತು. ಮನಸ್ಸಿಲ್ಲೇ ಮೆಲುಕು ಹಾಕುವ ಹಾಂಗೆ ಮಾಡಿತ್ತು.
ಅದ್ಭುತ ನಿರೂಪಣೆ ಬಾಲಣ್ಣ.
ತುಪ್ಪದಶನಕೆ ಎರಡು
ಹಪ್ಪಳವ ಹೊಡಿಮಾಡಿ
ಸೊಪ್ಪುಸಾರಿನ ಕೂಡಿ ತಿ೦ದರಳಿಯಾ°|
ಕೊಪ್ಪುಬುಗುಡಿಯ ಆಯ್ತ
ದೊಪ್ಪ ಕೂಸಿನ ಮರದು
ಬೆಪ್ಪುತಕ್ಕಡಿಯಾಗಿ ನಿ೦ಗೊ? ಬಾಲಣ್ಣ||
ಹಃ ಹಃ ಹಾ..ಆಹಾ.
ಅರ್ರೇ… ವಾಹ್ ವಾಹ್!!!! ಸೂಪರ್!!!!