ಬರದೋರು :   ಬಾಲಣ್ಣ (ಬಾಲಮಧುರಕಾನನ)    on   27/10/2015    5 ಒಪ್ಪಂಗೊ

ಬಾಲಣ್ಣ (ಬಾಲಮಧುರಕಾನನ)
Latest posts by ಬಾಲಣ್ಣ (ಬಾಲಮಧುರಕಾನನ) (see all)
ಮಾಣಿ ಬೋಚನೋ  ?

ಒಂದು ಊರಿನ   ಮಾಣಿ
ಬೋಚ ಹೇಳುಗು ಅವನ
ಕೇಳಿದರೆ ಎಂತದು ಗೊಂತಿಲ್ಲೆಡ  /
ದಿನವು ಪೇಪರು ತೆಗದು
ಸುದ್ದಿ ಓದುಗು ಅದರ
ಊರಿಲಿಡಿ ಬಿಕ್ಕಿಂಡು ಬಪ್ಪದಾಡ  /೧//

ಚಾಮಿ ದೇವರ ಕತೆಗೋ
ಅವನಜ್ಜಿ ಹೇಳುಗಡ
ಶಾಲೆಲಿಯು ಅವ ಕೇಳಿ ಕಲ್ತಿದಾಡ  /
ಕಿಟ್ಟ ಚಾಮಿಯ ಕತೆಯ
ರಾಮ ದೇವರ ಕತೆಯ
ಊರ ಹರಿಕತೆಗಳಲೆ ಕೇಳಿದ್ದಾ ಡ  /೨/

ಭಗವಂತ ಹೇಳಿದರೆ
ಗೀತೆ  ಮನಸಿಲಿ ಬಕ್ಕು
ರಾಮ ದೇವರ ಮೇಗೆ ಭಕುತಿ ಇಕ್ಕು /
ಬಲಿಪಜ್ಜ ಹಾಡಿಲಿಯೊ
ಶೇಣಿ ಹರಿಕತೆಗಳಲೊ
ಕಲ್ತವೆಷ್ಟೋ ಜೆನ ಊರಿಲಿಕ್ಕು  /೩/

ಊರ ಹಸುಗಳ ಕದ್ದು
ಹಸಿ ಹಸಿಯೇ ತಿಂಬದರ
ಒಂದು ಪೇಪರಿಲಂದು ಬೋಚ ಓದಿದ್ದ  /
ಅವಕ್ಕೆಂತ  ಬೇರೆಂತ್ಸು
ಸಿಕ್ಕಿತ್ತಿಲ್ಲೆಯೋ ಹೇದು 
ಬೋಚ   ‘ಬೋಚ’ ನ ಹಾಂಗೆ ಎನ್ನ ಕೇಳಿದ್ದ  /೪/

ಗೀತೆಯನ್ನೇ ಸುಡುವೆ
ಹೇಳಿದ್ದ ಭಗವಾನ
ಮತ್ತೊಬ್ಬ ಹೇಳುತ್ಸು ಬೇರೆ ನೋಡಿ !/
ಮಹಿಷ ರಾಜನ ನಾವು
ಪೂಜೆ ಮಾಡೆಕು ನಿತ್ಯ
ಮಾಡ್ಲಪ್ಪ ಅದಕ್ಕೆಂತ?ಆರು ಅಡ್ಡಿ ! /೫/

ರಾಮ ಸೀತೆಯ ಅಂದು
ಕಾಡಿಂಗೆ ಕಳುಸಿದ್ದು
ಒಂದು ಬಗೆ ಜೆನಂಗೊಕ್ಕೆ ಭಾರಿ ತಪ್ಪು! /
ಇವು ಎಲ್ಲ ಎಲ್ಲಿಂದ
ಬಂದು ಸೇರಿದವಪ್ಪ!
ಸೊಯ ಪೂರ್ತಿ ಇಲ್ಲೇದು  ಕಾಣುತ್ತಪ್ಪೊ!/೬/

ಊರ ಆಳುವ ರಾಜ
ಅರೆ ಮರುಳ ಆದ ಕತೆ
ಹಿಂದೆ ಎಂದೋ ನವಗೆ ಕೇಳಿ ಗೊಂತಿದ್ದು /
ಹಿಂದಲ್ಲ ಮುಂದಲ್ಲ 
ನಮ್ಮ ಕಣ್ಮುಂದೆಯೇ
ನೆಡದತ್ತು ಇದು ಎಲ್ಲ ನಾವು ಕಂಡತ್ತು /೭\

ಅಲ್ಲೆಲ್ಲೋ  ದನ ಕಡುದು
ತಿಂದವನ ಬಡುದವಡ
ಅದಕ್ಕೆ ಎದುರಾಗೆಂತ ?  ಗೋಮಾಂಸ  ತಿಂದು/
ದನದ ಕಳ್ಳರ ಹಿಡುದು
ತಡದವರ ಕೊಂದವದ
ಅದಕ್ಕೆಂತ  ಮಾಡುದಡ  ? ಸಾಕೋ    “ಬಂದು”  ? / ೮/

ದೇವರ ಮೇಗುದೇ
ದೂರು ಕೊಡ್ಳೆಡಿಗಾರೆ
ಇವು ಕೊಡುಗು  ಖಂಡಿತಾ ನವಗರಡಿಯ /
ಬೋಚ ಮಾಣಿಯ ತಲೆಲಿ
ಯೋಚನೆಗೊ ಹೀಂಗೆಲ್ಲ
ಸತ್ಯದ ಮುಂದೆಂದು ಲೊಟ್ಟೆ  ನೆಡೆಯ  /  ೯/

~~~~~****~~~~

 

 

 

5 thoughts on “ಮಾಣಿ ಬೋಚನೋ ?

  1. ಮಾಣಿ ಬೋಚನೋ ಕೇಳಿದವು. ಅವ° ಖಂಡಿತಾ ಬೋಚ ಅಲ್ಲ. ಇಂದ್ರಾಣ ಪರಿಸ್ಥಿತಿಯ ಅರ್ಥ ಮಾಡಿ “ಸತ್ಯಕ್ಕೇ ಜಯ” ಹೇಳಿ ನಿರ್ಧಾರ ತೆಕ್ಕೊಂಬಷ್ಟು ಗಟ್ಟಿಗನೇ . ಬಾಲಣ್ಣನ ಕವನ ಲಾಯಿಕ ಆಯಿದು.

  2. ಕಲಿಯುಗದ ಶುದ್ದಿಗಳ ಕವನ ಸರಿಯಾಗಿದ್ದು. ಬೋಚನ ಆಲೋಚನೆಲಿ ಸಾಚಾತನ ಇದ್ದು. ಸತ್ಯದ ಮುಂದೆ ಲೊಟ್ಟೆ ಎಂದೆಂದಿಗೂ ನೆಡೆಯ. ಬಾಲಣ್ಣ, ತುಂಬಾ ಲಾಯಕಾಯಿದು ಪದ್ಯ.

  3. ಸದ್ಯದ ಪರಿಸ್ತಿತಿಗೆ ಬೋಚಭಾವನ ಆಲೋಚನೆಗೊ ಸರಿಯೇ ಇದ್ದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×