Oppanna.com

ಮಳೆ ಬಪ್ಪಗ ನೆಂಪಾದ್ದದು

ಬರದೋರು :   ಶರ್ಮಪ್ಪಚ್ಚಿ    on   01/08/2016    5 ಒಪ್ಪಂಗೊ

ಮಳೆ ಬಪ್ಪಗ ನೆಂಪಾದ್ದದುಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

ಮಳೆಗಾಲದ ಒಂದು ದಿನ
ಪಿರಿಪಿರಿ ಮಳೆ ಬಪ್ಪಗ
ಸಾಂತಾಣಿ ತಿನ್ನೆಕೂಳಿ ಕೊದಿಯಾತು |
ಇಲ್ಲದ್ದ ಸಾಂತಾಣಿಯ
ಮನಸಿಲ್ಲಿಯೇ ತಿಂಬಗ
ಮದ್ಲಾಣ ಮಳೆಕಾಲ ನೆಂಪಾತು || ೧||

ಸಣ್ಣಾದಿಪ್ಪಗ ಮಳೆ ಹೇದ್ಸರೆ
ಎನಗೆಷ್ಟು ಹೆದರಿಕೆ
ಗ್ರೇಶುಗ ಈಗಳೂ ನಡುಗುತ್ತನ್ನೇ |
ಗುಡುಗು ಸೆಡ್ಲಿನ ದೆನಿ ಕೇಳಿ
ಹೆದರಿಂಡು ಒಳಹುಗ್ಗಿ
ಕೂಗಿಂಡು ಕೂದ್ದೆಲ್ಲ ನೆಂಪಾವ್ತನ್ನೇ ||೨||

ಕೊಡೆಹಿಡುದು ಶಾಲಗೆ
ನೆಡಕ್ಕೊಂಡು ಹೋಪಗ
ಕುಂಟಾಂಗಿಲ ಹಣ್ಣು ತಿಂದದೆಷ್ಟೋ ? |
ಶೀತಾಗಿ ಜ್ವರ ಬಪ್ಪಗ
ಕಿರಾತಕಡ್ಡಿ ಕಶಾಯವ
ಕುಡಿವಲೆ ಹಠವ ಮಾಡಿದ್ದೆಷ್ಟೋ ? ||೩||

ಆಟಿ ತಿಂಗಳ ಮಳೆಲಿ
ಅಜ್ಜಿ ಹತ್ತರೆ ಕೂದಂಡು
ಉಂಡ್ಲಕಾಳು ತಿಂದದರ ಮರವಲೆಡಿಗೋ ? |
ಉಪ್ಪುಸೊಳೆ ರೊಟ್ಟಿದೆ
ಬೇಳೆಯ ಹೋಳಿಗೆದೆ
ಈಗಲೂ ಹಾಂಗೆ ಮಾಡಿ ತಿಂಬಲೆಡಿಗೋ ? ||೪||

ಈಗೆಲ್ಲಿದ್ದು ಆ ದಿನಂಗೊ
ಮರೆಯಾಗಿ ಹೋತನ್ನೇ
ಅಂಬಗಾಣ ದಿಳಿದಿಳಿ ಮಳೆಯ ಹಾಂಗೇ |
ಈಗಂತೂ ಸರಿಯಾಗಿ
ಮಳೆಯಿಲ್ಲೆ ಬೆಳೆಯಿಲ್ಲೆ
ಈಗಾಣ ಮನುಷ್ಯರ ಮನಸಿನಾಂಗೇ ||೫||

ಮರಂಗಳೆಲ್ಲ ಕಡುದಿಕ್ಕಿ
ಗುಡ್ಡೆ ಗರ್ಪಿ ತೆಗದಿಕ್ಕಿ
ರಬ್ಬರು ಸೆಸಿಗಳ ನೆಟ್ಟಾತನ್ನೇ |
ಭತ್ತದ  ಗೆದ್ದೆಯು
ಬಾಳೆಯ ತೋಟವು
ನಮ್ಮವರ ಆಶೆಗೆ ಹೊಡಿಯಾತನ್ನೇ ||೬||

ಹೀಂಗೆಲ್ಲ ಮಾಡಿರೆ
ಸರಿಯಾಗಿ ಮಳೆ ಬಕ್ಕೋ
ಮುಂದಂಗೆ ನಮ್ಮ ಗತಿ ಹೇಂಗಕ್ಕೋ ? |
ನಾವೆಲ್ಲ ಸೇರಿಂಡು
ಪ್ರಕೃತಿಯ ಒಳುಶದ್ರೆ
ಇನ್ನಿಪ್ಪ ಮಳೆಕಾಲ ಹೇಂಗಿಕ್ಕೋ ? ||೭||

ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ ಅಂಚೆ
ಮಂಗಲ್ಪಾಡಿ

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

5 thoughts on “ಮಳೆ ಬಪ್ಪಗ ನೆಂಪಾದ್ದದು

  1. ಪ್ರಸನ್ನ, ಕವನ ತುಂಬಾ ಲಾಯಿಕಾಯಿದು..

  2. ಪ್ರಸನ್ನ, ಕವನ ಒಳ್ಳೀದಾಯಿದು ಮಿನಿಯಾ…

  3. ಪ್ರಸನ್ನನ ಕವನ ಚೊಕ್ಕ ಆಯಿದು. ಪ್ರಸನ್ನಂಗೆ ಅಭಿನಂದನೆ ಹೇಳ್ತಾ ಶರ್ಮಭಾವಂಗೆ ಧನ್ಯವಾದಂಗೊ. ಎನ್ನ ನುಡಿಗಟ್ಟು. ಟೈಪ್ ಮಾಡಿ ಮಡಗಿದ್ದರ ಬೇಗ ಹಾಕೆಕ್ಕು.ಮುಕ್ಕಾಲು ಗಂಟೆಂದ ಕೂಯಿದೆ. ಬಯಲು ಓಪನ್ ಆಯೆಕ್ಕಾರೆ. ಅಂಬಗಂಬಗ ಕರೆಂಟು ಹೋವುತ್ತು. ಹೇಳೆಂಡು ಇದರ ಹಾಕಿದ ಮತ್ತೆ ಬಯಲಿನ ಸರಿಯಾಗಿ ನೋಡಿದೆಯಿದ. ಅಂಬಗ ಕಂಡತ್ತು, ಈ ಕವನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×