Latest posts by ಬಾಲಣ್ಣ (see all)
- " ಜೀವಸೆಲೆ " - June 10, 2014
- ಜಯನಮೋ - May 18, 2014
- ಓಟುಬಂತದಓಟು! - March 31, 2014
ನೋಟು ಹಾರುತ್ತರ ನೋಡಿದಿರಾ?
ಇರುಳಿನ ಬಣ್ಣವ ಮೈಲಿಯೆ ಹೊತ್ತು
ಅತ್ಲಾಗಿ ಇತ್ಲಾಗಿ ಹಾಕಿಂಡು ಸುತ್ತು
ಕಣ್ಣಿನ ಮುಂದೆಯೆ ಥೈತಕ ಕೊಣುದು
ಅಂಕೆಯ ಸಂಖ್ಯೆಯ ಲೆಕ್ಕವೆ ಮರದು
ನೋಟು ಹಾರುತ್ತರ ನೋಡಿದ್ದಿರಾ ?|೧|
ಕರಿಗೆರೆ ಬಣ್ಣದ ಚಿತ್ರವೂ ಇದ್ದು
ಫಳ ಫಳನೆ ಮೈ ಹೊಳಕ್ಕಂಡಿದ್ದು
ಮೆಟ್ಟು ಮೆಟ್ಟಿ೦ಗೆ ಸಾವಿರ ಹಂಚಿರೆ
ಕುರ್ಚಿಯ ನಂಟು ಬಿಡಲೆಡಿಯದ್ದು
ನೋಟು ಹಾರುತ್ತರ ನೋಡಿದ್ದಿರಾ?|೨|
ಭೂಮಿಯ ಹೊಟ್ಟೆಯ ಬಗದೂ ಬಗದೂ
ಲೊಟ್ಟೆಯೋ ಸಾವಿರ ರೆಂಕೆಯ ಪಡದು
ಎಲ್ಲೊರ ಮನಸ್ಸಿನ ಕೊರದು ಒರದು
ಮಾನದ ಮಾನವ ಗುಂಡಿಲಿ ಹುಗುದು
ನೋಟು ಹಾರುತ್ತರ ನೋಡಿದ್ದಿರಾ?|೩|
ರಾಜ್ಯದ ಕುರ್ಶಿಯ ಕಾಲಿನ ಮುರುದು
ನ್ಯಾಯಾಧೀಶರ ಕೊರಳನೆ ಬಿಗುದು
ತೇಲುಸಿ ಮುಂಗುಸಿ ಜೈಲಿ೦ಗೆ ಹಾಕುಸಿ
ಸೂಟುಕೇಸಿನ ಮುಚ್ಚಲು ತೆಗದು
ನೋಟು ಹಾರುತ್ತರ ನೋಡಿದ್ದಿರಾ?|೪|
ಹಳ್ಳಿಯೋ! ದಿಲ್ಲಿಯೋ !ಗಡಿಯನೆ ಮೀರಿ
ಕಳ್ಳರ ಕೂಟಕ್ಕೆ ಸುಳ್ಳರು ಸೇರಿ
ಓಟಿನ ಬೇಟಗೆ ಹೆರಟೋರೆಲ್ಲರ
ಮಾನವೋ ಪೇಟೆ ಗಟಾರವ ಸೇರಿ
ನೋಟು ಹಾರುತ್ತರ ನೋಡಿದ್ದಿರಾ ?|೫|
(ಅಂಬಿಕಾ ತನಯದತ್ತರ ಕ್ಷಮೆ ಕೋರಿ )
ಕುರುಡು ಕಾಂಚಾಣದ ಕಾರ್ಬಾರಿನ ‘ಹಕ್ಕಿ ಹಾರುತಿದೆ ನೋಡಿದಿರಾ?’ ಪದ್ಯದ ಧಾಟಿಲಿ ಬರದ್ದು ಲಾಯ್ಕಾಯ್ದು ಬಾಲಣ್ಣಾ. ವಿಡಂಬನೆಲಿ ಒಳ್ಳೆತ ಖಡ್ಪ ಇದ್ದು.
ನ್ಯಾಯವೂ ಅಧಿಕಾರವೂ ಈ ಕರಿನೋಟಿನ ಕೃಪಾಕಟಾಕ್ಷಲ್ಲೇ ನಡೆತ್ತಾ ಇಪ್ಪದು ನಮ್ಮ ದೌರ್ಭಾಗ್ಯ.
ನೋಟು ಹಾರುತ್ತರ ನೋಡಿದ್ದೆ. ಕೇಳಿದ್ದೆ. ಕೇಳಿ ಕೇಳಿ ನೊ೦ದಿದೆ.
ಈಗ ಕಳ್ಲ (counterfeit) ನೋಟು ಯಾವದು, ಒಳ್ಲೆ ನೋಟು ಯಾವದು ಹೇಳಿ ಗುರುತು ಹಿಡಿವದು ತು೦ಬ ಕಷ್ಟ. ಒ೦ದೇ ರೀತಿ ಕಾಣುತ್ತು. RBI ಹೇಳಿ ಪ್ರಿ೦ಟ್ ಮಾಡಿದ ಬೇಗಡೆಯ strip ನ ಅ೦ಟಿಸಿದ್ದರ ಬಿಟ್ಟರೆ ಬೇರೆ ಎಲ್ಲ ಅಸಲಿ ನೋಟಿನ ಹಾ೦ಗೆ ಇರ್ತು. ಈಗ ತು೦ಬ ಜಾಗ್ರತೆ ಆಗಿರೆಕು. ಮೊನ್ನೆಯಷ್ಟೇ ಕೇಬ್ಲ್ ಮಾಣಿ ಐನ್ನೂರರ ಕರಿ ನೋಟು ತ೦ದು ಚಿಲ್ಲರೆ ಕೇಳಿದ. ಎನಗೆ ಗೊ೦ತಾಯಿದಿಲ್ಲೆ. ಬೇ೦ಕಿಲ್ಲಿ ಕೆಲಸ ಮಾಡುವ ಎನ್ನ ಹೆ೦ಡತಿ ಹೇಳಿತ್ತು, ಅದು ಕಳ್ಲ ನೋಟು ಹೇಳಿ. ಈ ಸ೦ದಭ೯ಲ್ಲಿ ಒ೦ದು ಜೋಕು ನೆ೦ಪಾವುತ್ತು. ಒಬ್ಬ ಬೇ೦ಕಿಲ್ಲಿ ಪೈಸೆ ಜಮಾ ಮಾಡ್ಲೆ ಹೋವುತ್ತ. ಕೇಶಿಯರ್ ಅವ ಕೊಟ್ಟದು ಖೋಟ ನೋಟು ಹೇಳಿ ಹೇಳುತ್ತ. ಅ೦ಬಗ ಆ ವ್ಯಕ್ತಿ ” तुम्हे क्या फरक पडता है ? मै अपने अकोट मे जमा कर रहा हू ” ಹೇಳಿ ಹೇಳುತ್ತ.
ಇ೦ದ್ರಾಣ ಪರಿಸ್ಥಿತಿಯ ವಣ೯ನೆ ಅಣಕು ಕವಿತೆಯ ಮಾಧ್ಯಮಲ್ಲಿ ಲಾಯಕಿಲ್ಲಿ ಮೂಡಿ ಬಯಿ೦ದು. ಅಭಿನ೦ದನೆಗೊ.
ನೋಟು ಹಾರುತ್ತ ವಿಡಂಬನೆ ಲಾಯಿಕ ಆಯಿದು.
ಕುರುಡು ಕಾಂಚಾಣಾವೂ ಅಪ್ಪು, ಕಪ್ಪು ಕಾಂಚಾಣವೂ ಅಪ್ಪು.
ಭಾರಿ ಲಾಯ್ಕ ಆಯಿದು.
ಬಾಲಣ್ಣನ ಕವಿತ್ವ ರೈಸಿದ್ದು.
ಗೀತೆ ಲಾಯಕ ಆಯ್ದು ಬಾಲಣ್ಣ. ಸ್ವಾರಸ್ಯವಾಗಿದ್ದು.
ಕರಿ ಕುರುಡು ಕಾಂಚಾಣದ ಹಾರಾಟದ ಮಧುರ ಚಿತ್ರಣ, ಲಾಯಕಾಯಿದು.
ಪಷ್ಟಾಯಿದು ಬಾಲಣ್ಣ. “ಕರಿ ನೋಟು ಕೊಣಿವದು” -> ನೋಟು ಹಾರುತ್ತ ನಮುನೆಲಿ ಬರದ್ದು ಒಳ್ಳೆ ವಿಡಂಬನೆ.
(ಎಂಗಳ ಈ ಕಾಸರಗೋಡಿಲಿ ಕರಿನೋಟಿನ ಕೊಣಿತ ಜೋರಿದ್ದು, ಹೊಸಾ ಕಾರುಗೊ ಹೊಸಾ ಬೈಕುಗೊ ಮಾರ್ಗಲ್ಲಿ ಕಾಣುತ್ತು ) ಮುಳಿಯದಣ್ನ ಹೇಳಿದ ಹಾಂಗೆಯೇ ದುರ್ವಿಧಿಯೇ ಇದು.ರಾಜ್ಯದ್ದು,ದೇಶದ್ದು.
ಧನ್ಯವಾದಂಗೊ
ಒಳ್ಳೆ ಅಣಕುಗೀತೆ ಬಾಲಣ್ಣ.
ರಾಜ್ಯದ ಮಾರ್ಗವ ಗರ್ಪುತ ಮುಚ್ಚುತ
ವ್ಯಾಜ್ಯವೆ ಜೀವನಮಾರ್ಗಣವೋ? ಸ್ವ
-ರಾಜ್ಯದ ದುರ್ವಿಧಿಯೋ ಬಾಲಣ್ಣ ?
ತ್ಯಾಜ್ಯದ ಸಾಗಣೆಕಾರರ ಕಿಸೆ೦ದ
ನೋಟು ಹಾರುತ್ತರ ನೋಡಿದ್ದಿರಾ ?