- ಮಾಣಿ ಬೋಚನೋ? - October 27, 2015
- ಫಾಲನೇತ್ರನಮುನಿಸೊ - May 13, 2015
- ಜೀವ ನೆಲೆ - April 22, 2015
ಫಾಲ ನೇತ್ರನ ಮುನಿಸೊ
ಫಾಲ ನೇತ್ರನ ಮುನಿಸೊ ಇದು ನೇ
ಪಾಲಕೊದಗಿದ ಕಠಿಣ ದುರಿತವೊ
ಕೋಲ ಕೊಣುದತ್ತನ್ನೆ ತಕಧಿಮಿ ಮಾರಿ ಭೂತಗಣ /
ಜಾಲು ಮನೆ ಒಂದಾತು ಭೂಮಿಯೆ
ನಾಲಗೆಲಿ ನಕ್ಕಿತ್ತು ಊರಿನ
ಕಾಲಡಿಯೆ ಬಿರುದತ್ತು ಅಯ್ಯೋ ಶಿವನೆ ನೀನೆ ಗತಿ //೧//
ನೀಲಕಂಠನೆ ಜಿಡೆಯ ಬಿಡುಸಿರೆ
ಕಾಲ ರುದ್ರನೆ ನಾಟ್ಯ ವಾಡಿರೆ
ಹಾಲು ಕುಡುಶುವ ಅಬ್ಬೆ ಮಕ್ಕೊಗೆ ವಿಷವ ಕುಡುಶಿದರೆ /
ಬೇಲಿ ಎದ್ದೇ ಹೊಲವ ಮೇದರೆ
ಪಾಲಕನೆ ಬಾಲಕನ ಕೊಂದರೆ
ಲೀಲೆ ದೇವರದಾರು ಕಂಡವು ?ಮಾನುಷರು ನಾವು //೨//
ಜೀವನವ ನಾವೆಷ್ಟು ಕಂಡಿದು ?
ನೋವುಗಳ ನಾವೆಷ್ಟು ಉಂಡಿದು
ಭಾವಗಳ ಊರಿಡಿಯೆ ಹಂಚಿಯೆ ಮನಸು ಸುಖ ಪಡುಗು/
ದೇವ ದೇವರ ಪದಕೆ ಮಂಡೆಯ
ನಾವು ಮಡುಗಿಯೆ ಕೆಲಸ ಮಾಡುಗು
ಕಾವುದವನೇ ಕೈಯ ಹಿಡಿವವ ಸಕಲ ಜೀವಿಗಳ //೩//
‘ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು
ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು /
ನಾಳೆ ದಿನ ಚೆಂದಾಗಿ ಬಕ್ಕು ಸ –
ಕಾಲವದೆ ಬಿಡಲಾಗ ಧೈರ್ಯವ
ಕಾಲಿನಡಿ ನೆಡುಗಿದರೆ ಪಶುಪತಿನಾಥ ಕೈ ಬಿಡುಗೋ //೪//
(ಸಮಸ್ಯಾ ಪೂರಣದ ಸ್ಪೂರ್ತಿ ಲಿ ಬರದ ಕವನ )
~~~***~~~
ಬಾಲಣ್ಣನ ಭಾಮಿನಿ ಭಾರೀ ಲಾಯಕಾತು. ದೇವರ ದಯೆ ಇಲ್ಲದ್ರೆ ಮನುಷ್ಯಂಗೆ ಬದುಕ್ಕಲೇ ಎಡಿಯ.
ಬಾಲಣ್ಣ ಮಾವಾ,
ಪಶುಪತಿನಾಥನ ತಾ೦ಡವನೃತ್ಯವ ಕ೦ಡ ಅನುಭವ ಕೊಟ್ಟತ್ತು ಕವಿತೆ.ಬೈಲಿಲಿ ಬ೦ದ ಸಣ್ಣ ಸಮಸ್ಯೆಯ ಒ೦ದು ಪೂರ್ಣ ಕವಿತೆಯಾಗಿ ಇಷ್ಟು ಚೆ೦ದಕೆ ಬೆಳೆಶಿದ್ದು ನೋಡಿ ಕೊಶಿಯಾತು. ಎರಡನೆಯ ಚರಣಲ್ಲಿಪ್ಪ ಉಪಮೆ,ರೂಪಕ೦ಗೊ ಅದ್ಭುತ.
ಬಾಲಮಾವಾ,
ತುಂಬಾ ಚೆಂದದ ಭಾಮಿನಿ. ಶಬ್ದಜೋಡಣೆ ಸಲೀಸಾಗಿ ಬಯಿಂದು, ಭಾವನೆಯೂ ಚೆಂದ ಆಯಿದು.
’ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು
ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು – ಈ ಗೆರೆ ತುಂಬಾ ಹಿಡುಸಿತ್ತು.
ಹರೇರಾಮ
ನಾಳೆ ದಿನ ಚೆಂದಾಗಿ ಬಕ್ಕು ಸಕಾಲವದೆ ಬಿಡಲಾಗ ಧೈರ್ಯವ- ಒಳ್ಳೆ ಆಶಾದಾಯಕ ಮುನ್ನೋಟ. ಇದುವೇ ಜೀವನಲ್ಲಿ ಬಪ್ಪ ಬಂಙಂಗಳ ಎದುರುಸಲೆ ಕೊಡುವ ಧೈರ್ಯ.
ಶಿವನೆ ನೀನೆ ಗತಿ….. ಮಾನುಷರು ನಾವು – ತುಂಬ ಒಪ್ಪ ಆಯಿದು. ಹರೇ ರಾಮ.
ಫಾಲನೇತ್ರನ ರುದ್ರ ನಾಟ್ಯ ಇನ್ನೂ ನಿಂದಿದಿಲ್ಲೆನ್ನೇ… ಅಬ್ಬಬ್ಬಾ.. !