ಅಪ್ಪು ಪುಟ್ಟಕ್ಕಾ ಹೊತ್ತೇರೋ ಮದಲೇ
ಹೊದಕ್ಕೆ ಹಿಡುದೆಳೆದು ಏಳೆಕ್ಕು।
ಎದ್ದ ಕೂಡ್ಲೆಯೆ ರಭಸಲ್ಲಿ ಓಡೆಕ್ಕು
ಕೈಕಾಲು ಮೋರೆಯ ತೊಳೆಯೆಕ್ಕು।।
ಅಪ್ಪು ಪುಟ್ಟಕ್ಕಾ ಒಪ್ಪಲ್ಲಿ ಮಿಂದಿಕ್ಕಿ
ಚಾಮಿಗೆ ಕೈಯ್ಯಾ ಮುಗಿಯೆಕ್ಕು।
ಚಾಮಿಗೆ ಕೈಮುಗಿದು ಓದುಲೆ ಕೂದರೆ
ಉದಾಸೀನವೇ ಹೆದರಿ ಓಡೆಕ್ಕು।।
ಅಪ್ಪು ಪುಟ್ಟಕ್ಕಾ ವ್ಯಾಯಾಮ ಮಾಡುದು
ದೇಹದ ಶಕ್ತಿಗೆ ಒಳ್ಳೆದಡ।
ರೋಗ ಬಾರದ್ದಾಂಗೆ ಇಪ್ಪಲೂ ಯೋಗವೆ
ಬೇಕಾದ್ದು ಹೇಳುಗು ನಮ್ಮವಡ।।
ಅಪ್ಪು ಪುಟ್ಟಕ್ಕಾ ಸರಿಯಾದ ಹೊತ್ತಿಂಗೆ
ತಿಂಡಿದೆ ಕಾಫಿದೆ ಮಾಡೆಕ್ಕು।
ಹೊತ್ತಾಗದ್ದಾಂಗೆ ಶಾಲೆಗೆ ಹೋಯೆಕ್ಕು
ಗೊಂತಿಲ್ಲದ್ದಿಪ್ಪದರ ಕಲಿಯೆಕ್ಕು।।
ಅಪ್ಪು ಪುಟ್ಟಕ್ಕಾ ಗುರುಗಳು ಹೇಳಿದ್ದು
ಎಲ್ಲದೂ ಒಳ್ಳೆದೆ ತಿಳಿಯೆಕ್ಕು।
ವಿಮರ್ಶೆ ಮಾಡ್ಯಂಡು ಓದ್ಯೊಂಡು ಇದ್ದರೆ
ನಮ್ಮಾ ಬುದ್ಧಿಗುದೆ ಬಲಬಕ್ಕು।।
ಅಪ್ಪು ಪುಟ್ಟಕ್ಕಾ ಆಟದೆ ಪಾಠದೆ
ಓದುಲು ಬೆಳವಲು ಬೇಕಾವ್ತು।
ಸಂಗೀತ, ಚಿತ್ರಕಲೆ ಭಾಷಣ ಎಲ್ಲದುದೆ
ಇದ್ದರೆ ಬಾಳಿಂಗೆ ಸಾಕಾವ್ತು ।।
ಅಪ್ಪು ಪುಟ್ಟಕ್ಕಾ ಅಮ್ಮಂಗು ಅಪ್ಪಂಗು
ಬೇಕಾಗಿ ಬಾಳೆಕ್ಕು ಒಟ್ಟೊಟ್ಟಿಂಗೇ ।
ಎಲ್ಲರಿಗು ಬೇಕಾಗಿ ನಮ್ಮ ಸ್ವಂತಿಕೆ ಉಳುಶಿ
ಇರೆಕ್ಕು ನೆಮ್ಮದಿಯ ಖುಷಿಯ ಗಂಗೆ।।
- ಪುಟ್ಟಕ್ಕನ ಪದ್ಯ - July 30, 2013
- ನೆಂಪಿದ್ದಾ ಕೂಸೆ.. - February 6, 2013
- ಕೋಳ್ಯೂರು ಶಂಕರನಾರಾಯಣ ದೇವಸ್ಥಾನ. - March 14, 2012
ಧನ್ಯವಾದ..
ಕೋಳ್ಯೂರು ಭಾವ ದಿನಚರಿ೦ದ ಸುರುಮಾಡಿ ಪುಟ್ಟಕ್ಕ೦ಗೆ ಹೇಳಿದ ಕೆಮಿಮಾತುಗೊ ಲಯಬದ್ಧವಾಗಿ ಕೊಶಿ ಕೊಟ್ಟತ್ತು.ಲಾಯ್ಕ ಆಯಿದು ಭಾವ,ಅಭಿನ೦ದನೆ.
ಪಷ್ಟು ಕ್ಲಾಸು ಆಯ್ದು ಭಾವ. ಈ ನಮೂನೆದು ನಿಂಗೊ ಬರದ್ದದು ಇದು ಸುರುವೆಯೋದು. ಒಪ್ಪ ಒಪ್ಪ